Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ | ಎಷ್ಟು ಹೆಚ್ಚಳವಾಗಲಿದೆ ಸಂಬಳ? ಇಲ್ಲಿದೆ ಸಂಪೂರ್ಣ ಮಾಹಿತಿ…

Spread the love

ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಇದರಿಂದ ನೌಕರರು ಸಂಬಳ ಮತ್ತು ನಿವೃತ್ತರ ಪಿಂಚಣಿ ಹೆಚ್ಚಳವಾಗಲಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಹೊಸ ಆರ್ಥಿಕ ವರ್ಷದಲ್ಲಿ ಶುಭಸುದ್ದಿ ನೀಡಿದ್ದು, ತುಟ್ಟಿಭತ್ಯೆ (Dearness Allowance – DA) ಶೇ.1.50ರಷ್ಟು ಹೆಚ್ಚಿಸುವಂತೆ ಆದೇಶ ಹೊರಡಿಸಿದೆ. ಈ ತಿದ್ದುಪಡಿ 2025ರ ಜನವರಿ 1ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.

ಸರ್ಕಾರಿ ನೌಕರರ ತುಟ್ಟಿಭತ್ಯೆ 10.75% ರಿಂದ 12.25%ಕ್ಕೆ ಏರಿಕೆಯಾಗಿದೆ. ಈ ಭತ್ಯೆಯ ಹೆಚ್ಚಳ ನೌಕರರ ಮಾಸಿಕ ಸಂಬಳದ ಭಾಗವಾಗಿದ್ದು, ಇದರಿಂದ ಲಕ್ಷಾಂತರ ಸರ್ಕಾರಿ ನೌಕರರ ಸಂಬಳ ಮತ್ತು ನಿವೃತ್ತರ ಪಿಂಚಣಿಯಲ್ಲಿ ಏರಿಕೆಯಾಗಲಿದೆ.

ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹರ್ಷದಿಂದ ಶ್ಲಾಘಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸಂಘದಿಂದ ಧನ್ಯವಾದ ಸಲ್ಲಿಸಿದ್ದಾರೆ.

New Leave Policy 2025- ಜುಲೈನಿಂದ ಸರ್ಕಾರಿ ನೌಕರರಿಗೆ 42 ಹೆಚ್ಚುವರಿ ರಜೆ | ಹೊಸ ರಜೆ ನೀತಿಯ ಸಂಪೂರ್ಣ ವಿವರ ಇಲ್ಲಿದೆ…

ಏನಿದು ತುಟ್ಟಿಭತ್ಯೆ?

ತುಟ್ಟಿಭತ್ಯೆ (DA/DR) ಎಂಬುದು ನೌಕರರಿಗೆ ಹಾಗೂ ನಿವೃತ್ತರಿಗೆ, ದಿನನಿತ್ಯದ ಉಪಯೋಗದ ವಸ್ತುಗಳ ಬೆಲೆ ಏರಿಕೆಯಿಂದ ಆಗುವ ದುಡಿಮೆಯ ವ್ಯತ್ಯಾಸವನ್ನು ಸಮಪಾಲು ಮಾಡಲು ನೀಡಲಾಗುವ ಒಂದು ಆರ್ಥಿಕ ನೆರವು.

  • ಸೇವೆಯಲ್ಲಿರುವ ನೌಕರರಿಗೆ ನೀಡುವ ಈ ಭತ್ಯೆಯನ್ನು Dearness Allowance (DA) ಎಂದು ಕರೆಯಲಾಗುತ್ತದೆ.
  • ನಿವೃತ್ತ ನೌಕರರಿಗೆ ಇದನ್ನು Dearness Relief (DR) ಎಂದು ಕರೆಯಲಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಪ್ರತಿ ಆರು ತಿಂಗಳಿಗೊಮ್ಮೆ – ಜನವರಿ ಹಾಗೂ ಜುಲೈ ತಿಂಗಳಲ್ಲಿ ಈ ಭತ್ಯೆಯನ್ನು ಪರಿಷ್ಕರಿಸುತ್ತವೆ.

ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಇದರಿಂದ ನೌಕರರು ಸಂಬಳ ಮತ್ತು ನಿವೃತ್ತರ ಪಿಂಚಣಿ ಹೆಚ್ಚಳವಾಗಲಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Karnataka Govt Employees DA Hike

Additional Pension Hike- ಸರ್ಕಾರಿ ನೌಕರರಿಗೆ 100% ವರೆಗೆ ಹೆಚ್ಚುವರಿ ಪಿಂಚಣಿ | ಸರ್ಕಾರದ ಮಹತ್ವದ ಅಧಿಸೂಚನೆ

ಕೇಂದ್ರದ ನಂತರ ರಾಜ್ಯ ಸರ್ಕಾರದ ಡಿಎ ಹೆಚ್ಚಳ

2025ರ ಮಾರ್ಚ್ 28ರಂದು ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ಆಂ ಹಾಗೂ ಆಖ ಶೇಕಡಾವಾರು ಹೆಚ್ಚಳಕ್ಕೆ ಅನುಮೋದನೆ ನೀಡಿದ ಬಳಿಕ, ರಾಜ್ಯ ಸರ್ಕಾರಗಳ ಮೇಲೂ ಒತ್ತಡವು ಹೆಚ್ಚಾಯಿತು.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಗೆ ಪತ್ರ ಬರೆದು, ಕೂಡಲೇ ರಾಜ್ಯದಲ್ಲೂ ಡಿಎ ಹೆಚ್ಚಳ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. ಇದೀಗ ರಾಜ್ಯ ಸರಕಾರ ಈ ಸಲಹೆಯನ್ನು ಪರಿಗಣಿಸಿ ತಕ್ಷಣದ ಕ್ರಮ ಕೈಗೊಂಡಿದೆ.

7ನೇ ವೇತನ ಆಯೋಗದ ಶಿಫಾರಸು ಅನುಸರಣೆ

ರಾಜ್ಯ ಸರ್ಕಾರವು ರಚಿಸಿದ್ದ 7ನೇ ವೇತನ ಆಯೋಗದ ಅಧ್ಯಕ್ಷ ಕೆ. ಸುಧಾಕರ್ ರಾವ್ ಅವರ ನೇತೃತ್ವದ ಸಮಿತಿ ಕೂಡ, ಡಿಎ ಪರಿಷ್ಕರಣೆ ವಿಚಾರದಲ್ಲಿ ಕೇಂದ್ರ ಮಾದರಿಯನ್ನೇ ಅನುಸರಿಸುವಂತೆ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವು ಇದೀಗ ಈ ಶಿಫಾರಸು ಅನುಸರಿಸುತ್ತಿರುವುದು ನೌಕರರ ಹರ್ಷ ತಂದಿದೆ.

Best Low Interest Home Loans- ಅತೀ ಕಡಿಮೆ ಬಡ್ಡಿದರದ ಗೃಹ ಸಾಲ | SBI, HDFC, ICICI ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ…

ಈ ಹೆಚ್ಚಳದಿಂದ ನೌಕರರಿಗೆ ಎಷ್ಟು ಲಾಭ?

ಶೇ.1.50 ಹೆಚ್ಚಳವು ನೌಕರರ ಮಾಸಿಕ ಸಂಬಳದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಉದಾಹರಣೆಗೆ: ₹30,000 ಮೂಲ ವೇತನ ಹೊಂದಿರುವ ನೌಕರನಿಗೆ ಡಿಎ ₹3,225 ಆಗಿದ್ದು, ಈ ಹೆಚ್ಚಳದ ಬಳಿಕ ₹3,675 ಆಗುತ್ತದೆ. ನಿವೃತ್ತರು ಪಿಂಚಣಿಯ ಪ್ರಕಾರ ಡಿಆರ್ ಪಡೆಯಲಿದ್ದು, ಅವರಿಗೂ ಲಾಭವಾಗಲಿದೆ.

2025ರ ಜುಲೈ ತಿಂಗಳಲ್ಲಿ ಮುಂದಿನ ಡಿಎ ಪರಿಷ್ಕರಣೆ ನಿರೀಕ್ಷೆಯಲ್ಲಿದ್ದು, ದೇಶದ ಮೌಲ್ಯ ಸೂಚ್ಯಂಕದ ಇತ್ತೀಚಿನ ಸ್ಥಿತಿಗತಿಯ ಪ್ರಕಾರ ಮತ್ತಷ್ಟು ಶೇಕಡಾವಾರು ಹೆಚ್ಚಳ ಸಾಧ್ಯತೆ ಇದೆ. ಈ ವೇಳೆ ನೌಕರರಿಗೆ ಇನ್ನೊಂದು ಭತ್ಯೆ ಗಿಫ್ಟ್ ಸಿಗಬಹುದು ಎಂಬ ನಿರೀಕ್ಷೆಯಿದೆ.

ಈ ತುಟ್ಟಿಭತ್ಯೆ ಪರಿಷ್ಕರಣೆ ನಿರ್ಧಾರವು ನೌಕರರ ಜೀವನಮಟ್ಟವನ್ನು ಸುಧಾರಿಸಲು ಹಾಗೂ ಅವರ ಆತ್ಮಸ್ಥೈರ್ಯ ಹೆಚ್ಚಿಸಲು ಸಹಾಯ ಮಾಡಲಿದೆ. ಹೀಗಾಗಿ ಸರ್ಕಾರದ ಈ ಹೆಜ್ಜೆಯು ಎಲ್ಲ ವಲಯದ ನೌಕರರಲ್ಲಿ ತೃಪ್ತಿಯನ್ನು ಮೂಡಿಸಿದೆ.

New Leave Policy 2025- ಜುಲೈನಿಂದ ಸರ್ಕಾರಿ ನೌಕರರಿಗೆ 42 ಹೆಚ್ಚುವರಿ ರಜೆ | ಹೊಸ ರಜೆ ನೀತಿಯ ಸಂಪೂರ್ಣ ವಿವರ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!