Karnataka Bharat Gaurav Kashi Darshana 2024 : ರಾಜ್ಯ ಸರಕಾರವು ಕಾಶಿ-ಗಯಾ ದರ್ಶನಕ್ಕೆ ₹7,500 ಸಹಾಯಧನ ಸಹಾಯದ ಜೊತೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ. ಈ ಸಹಾಯಧನ ಪಡೆಯುವುದು ಹೇಗೆ? ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ…
ಜೀವಮಾನದಲ್ಲಿ ಒಮ್ಮೆಯಾದರೂ ಕಾಶಿ, ಗಯಾ, ಅಯೋದ್ಯೆ ಯಾತ್ರೆ ಮಾಡಬೇಕೆನ್ನುವುದು ಅನೇಕ ಹಿಂದೂ ಆಸ್ತಿಕರ ಅಭಿಲಾಷೆಯಾಗಿದೆ. ಇಂತಹ ಆಭಿಲಾಷೆಯುಳ್ಳರಿಗೆ ರಾಜ್ಯ ಸರಕಾರ ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್’ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ವಿಶೇಷ ಪ್ಯಾಕೇಜ್’ಗೆ ಆರ್ಥಿಕ ನೆರವು ನೀಡುತ್ತದೆ.
2022-23ನೇ ಸಾಲಿನಿಂದ ರಾಜ್ಯ ಸರಕಾರವು ಧಾರ್ಮಿಕ ದತ್ತಿ ಇಲಾಖೆ ಮೂಲಕ ಭಾರತೀಯ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ (Karnataka Bharat Gaurav Kashi Darshana) ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿ 2024-25ನೇ ಸಾಲಿನಲ್ಲಿ ಮೂರು ಹಂತದ ಯಾತ್ರಾ ಪ್ಯಾಕೇಜ್ ದಿನಾಂಕ ನಿಗದಿಪಡಿಸಿದ್ದು; ಆಸಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಬಹುದು.
7,500 ರೂಪಾಯಿ ಸಹಾಯಧನ
ಕಾಶಿ, ಗಯಾ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ಯಾತ್ರೆ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಈ ವಿಶೇಷ ಯಾತ್ರೆಯನ್ನು ಗಯಾ ಕ್ಷೇತ್ರದ ವರೆಗೆ ವಿಸ್ತರಿಸಿ ಪ್ರತಿ ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನವನ್ನು 5,000 ರೂಪಾಯಿಯಿಂದ 7,500 ರೂಪಾಯಿಗೆ ಹೆಚ್ಚಿಸಲಾಗಿದೆ.
ಈ ಪ್ಯಾಕೇಜ್‌ಗೆ ಒಟ್ಟು 22,500 ರೂಪಾಯಿಗಳಾಗಿದ್ದು; ಇದಕ್ಕೆ 7,500 ರೂಪಾಯಿ ಸಹಾಯಧನವನ್ನು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಯಾತ್ರಾರ್ಥಿಗಳು 15,000 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಯಾತ್ರೆಯ ವಿಶೇಷತೆಗಳೇನು?
- ಈ ಯಾತ್ರೆಯಲ್ಲಿ 3 ಟೈರ್ ಎ.ಸಿ ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಹಾಗೂ ದರ್ಶನದ ವ್ಯವಸ್ಥೆ ಇರುತ್ತದೆ.
- ಯಾತ್ರಾರ್ಥಿಗಳ ಆರೋಗ್ಯದೃಷ್ಟಿ ವೈದ್ಯಕೀಯ ಸಹಾಯ ವ್ಯವಸ್ಥೆ ಕೂಡ ಇರುತ್ತದೆ.
- ಪ್ರಯಾಣದ ಸಮಯದಲ್ಲಿ ಯಾತ್ರಾತ್ರಿಗಳಿಗೆ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.
ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು
- ಯಶವಂತಪುರ
- ತುಮಕೂರು
- ಬೀರೂರು
- ದಾವಣಗೆರೆ
- ಹಾವೇರಿ
- ಹುಬ್ಬಳ್ಳಿ
- ಬೆಳಗಾವಿ
ವಿಶೇಷ ರೈಲು ಹೊರಡಲಿರುವ ದಿನಾಂಕಗಳು
1ನೇ ಹಂತದ ಯಾತ್ರೆ
ನಿರ್ಗಮನ : 27-07-2024
ಆಗಮನ : 04-08-2024
2ನೇ ಹಂತದ ಯಾತ್ರೆ
ನಿರ್ಗಮನ : 10-08-2024
ಆಗಮನ : 18-08-2024
3ನೇ ಹಂತದ ಯಾತ್ರೆ
ನಿರ್ಗಮನ : 24-08-2024
ಆಗಮನ : 01-09-2024
ಹೆಚ್ಚಿನ ಮಾಹಿತಿಗೆ ಸಹಾಯವಾಣಿ:
8595931291, 8595931292, 8595931294
ಯಾತ್ರಾರ್ಥಿಗಳು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲು ಇಲ್ಲಿ ಒತ್ತಿ…