ಸರ್ಕಾರಿ ಆರೋಗ್ಯ ಸಂಜೀವಿನಿ ಯೋಜನೆಗೆ (Karnataka Arogya Sanjeevini) ಅಧಿಕೃತ ಚಾಲನೆ ನೀಡಿ, ಮಹತ್ವದ ಸುತ್ತೋಲೆ ಹೊರಡಿಸಿದೆ. ಈ ಯೋಜನೆಯ ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕಳೆದ ಏಪ್ರಿಲ್ 21ರಂದು ಮುಖ್ಯಮಂತ್ರಿ ಸಿದ್ದರಾಮಯಯ ಅವರು ಸರ್ಕಾರಿ ನೌಕರರ ಬಹುದಿನದ ಬೇಡಕೆಯಾಗಿದ್ದ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆಗೆ (Karnataka Arogya Sanjeevini Scheme -KASS) ಅಧಿಕೃತ ಚಾಲನೆ ನೀಡಿದ್ದಾರೆ. ನಗದು ರಹಿತ ಚಿಕಿತ್ಸೆ ಪಡೆಯುವ ಅವಕಾಶವನ್ನು ನೌಕರರಿಗೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ.
ಎಲ್ಲ ವರ್ಗದ ನೌಕರರಿಗೂ ನಗದು ರಹಿತ ಚಿಕಿತ್ಸೆ
ಕರ್ನಾಟಕ ಸರ್ಕಾರದ ಗ್ರೂಪ್ ಎ, ಬಿ, ಸಿ, ಡಿ ಸೇರಿ ಎಲ್ಲ ವರ್ಗದ ನೌಕರರು ಇದರ ಲಾಭವನ್ನು ಪಡೆಯಬಹುದಾಗಿದೆ. ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಯನ್ನು ಕಾಪಾಡುವುದು ಹಾಗೂ ಆರ್ಥಿಕ ಭಾರವನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ. ನೌಕರರ ನೋಂದಣಿಯಿಂದ ಆರಂಭಿಸಿ, ಆಸ್ಪತ್ರೆಗಳ ಆಯ್ಕೆ, ಚಿಕಿತ್ಸೆ ಅನುಮೋದನೆ, ಎಲ್ಲಾ ಕ್ರಮಗಳು ಡಿಜಿಟಲ್ ಪ್ಲಾಟ್‌ಫಾರ್ಮ್ HRMS (Human Resource Management System) ಮೂಲಕ ಕೈಗೊಳ್ಳಲಾಗುತ್ತದೆ.
SSLC Result 2025- ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊಸ ಅಪ್ಡೇಟ್ | 10th ಪಾಸಾಗಲು ಶೇ.35ರಷ್ಟು ಅಂಕ ಕಡ್ಡಾಯ
ಯೋಜನೆಯ ಮುಖ್ಯ ವೈಶಿಷ್ಟ್ಯಗಳು
ಯೋಜನೆ ನೌಕರರಿಗೆ ಕಡ್ಡಾಯವಲ್ಲ. ನೌಕರರು ತಮ್ಮ ಇಚ್ಛೆಯಂತೆ ಸೇರಬಹುದು ಅಥವಾ ಹೊರಗುಳಿಯಬಹುದು. ಎಲ್ಲರೂ ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಘೋಷಿಸಬೇಕಾಗಿರುತ್ತದೆ. ಸರ್ಕಾರದಿಂದ ಅನುಮೋದಿತಗೊಂಡಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಲಿದೆ. ಈ ಪಟ್ಟಿಯ ಪ್ರಕಾರ ಮಾತ್ರ ಚಿಕಿತ್ಸೆ ಲಭ್ಯವಿರುತ್ತದೆ.
ಈ ಯೋಜನೆಯಡಿ ಸುಮಾರು 6 ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸೇರಿ 25 ಲಕ್ಷ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ. ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 2,000ಕ್ಕೂ ಹೆಚ್ಚು ಒಳರೋಗಿ ಚಿಕಿತ್ಸೆಗಳನ್ನು ಸಂಪೂರ್ಣ ನಗದು ರಹಿತವಾಗಿ ಪಡೆಯಬಹುದಾಗಿದೆ.
ನೋಂದಣಿಯ ವಿಧಾನ ಮತ್ತು ಅಂತಿಮ ದಿನಾಂಕ
- ಯೋಜನೆಗೆ ಸೇರಲು ಇಚ್ಛಿಸುವವರು ಅನುಬಂಧ 2 – ನಮೂನೆ 1ರಲ್ಲಿ ತಮ್ಮ ಘೋಷಣೆಯನ್ನು ಡಿಡಿಓಗೆ (DDO) ಸಲ್ಲಿಸಬೇಕು.
- ಯೋಜನೆಗೆ ಸೇರಲು ಇಚ್ಛಿಸದವರು ಅನುಬಂಧ 2 – ನಮೂನೆ 2ನ್ನು ಬಳಸಿ ತಮ್ಮ ನಿರ್ಧಾರವನ್ನು ದಾಖಲಿಸಬೇಕು.
- 2025 ಮೇ 20ರೊಳಗೆ ಸಂಬಂಧಿತ ಅಧಿಕಾರಿ ಮೂಲಕ ಅರ್ಜಿಯನ್ನು ಡಿಡಿಓಗೆ ಸಲ್ಲಿಸಬೇಕು.
- ನೌಕರರು ತಮ್ಮ ಇಚ್ಛೆಯನ್ನು ಘೋಷಿಸದಿದ್ದರೆ, ಅವರು ಯೋಜನೆಯ ಹೊರಗೆ ಉಳಿದಿದ್ದಾರೆಂದು ಪರಿಗಣಿಸಲಾಗುವುದು.
ಮಾಸಿಕ ವಂತಿಗೆ ಹಣದ ವಿವರ
ಸರ್ಕಾರಿ ನೌಕರರ ವರ್ಗವಾರು (ಗ್ರೂಪ್) ಮಾಸಿಕ ವಂತಿಗೆ ಮೊತ್ತವನ್ನು ನಿಗದಿಪಡಿಸಲಾಗಿದ್ದು; ಈ ಮಾಸಿಕ ವಂತಿಗೆಗಳು 2025ರ ಮೇ ತಿಂಗಳ ವೇತನದಿಂದಲೇ ಕಡಿತಗೊಳ್ಳಲಿದೆ. ವಂತಿಗೆ ವಿವರ ಈ ಕೆಳಗಿನಂತಿದೆ:
- ಗ್ರೂಪ್ ಎ: ₹1000
- ಗ್ರೂಪ್ ಬಿ: ₹500
- ಗ್ರೂಪ್ ಸಿ: ₹350
- ಗ್ರೂಪ್ ಡಿ: ₹250
ಕರ್ನಾಟಕ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆ, ನೌಕರರ ಆರೋಗ್ಯಕ್ಕೆ ಹೊಸ ಆಶಾಕಿರಣವಾಗಿದ್ದು; ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯುವುದು ಈಗ ಸುಲಭವಾಗಲಿದೆ. ಈ ಯೋಜನೆ ನೌಕರರ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಗೆ ಸಹಾಯ ಮಾಡುವ ಮಾದರಿ ಯೋಜನೆಯಾಗಲಿದೆ.
ಆರೋಗ್ಯ ಸಂಜೀವಿನಿ ಸಂಬಂಧಿತ ಸರ್ಕಾರದ ಸುತ್ತೋಲೆ : Download
Govt Employees Asset Disclosure Rule- ಆಸ್ತಿ ವಿವರ ಸಲ್ಲಿಕೆ | ನೌಕರರಿಗೆ ರಾಜ್ಯ ಸರ್ಕಾರದ ಖಡಕ್ ಆದೇಶ