karnataka 7th Vetana Ayoga : ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿರುವ 7ನೇ ವೇತನ ಆಯೋಗ (Karnataka 7th Pay Commission) ಜಾರಿಗೆ ದಿನಗಣನೆ ಆರಂಭವಾಗಿದ್ದು; ಇದೇ ಜುಲೈ 4ರಂದು ಬಹುತೇಕ ಆಯೋಗದ ಶಿಫಾರಸುಗಳು ಜಾರಿಯಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಭರವಸೆ
ಕಳೆದ ಜೂನ್ 20ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ಜಾರಿ ಕುರಿತು ಕೆಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಆಗ ನೌಕರರ ವೇತನ ಹೆಚ್ಚಳಕ್ಕೆ ಕೆಲವು ಶಾಸಕರಿಂದ ಅಪಸ್ವರ ಕೇಳಿ ಬಂದಿತ್ತು ಎನ್ನಲಾಗಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ (Karnataka State Govt Employees Association) ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ (Karnataka State Government Pensioner’s Association) ಅಧ್ಯಕ್ಷ ಎಲ್. ಬೈರಪ್ಪ ನೇತೃತ್ವದ ನಿಯೋಗವು ಸಿಎಂ ಅವರನ್ನು ಭೇಟಿಯಾಗಿ ಜಾರಿ ಮಾಡುವಂತೆ ಮನವಿ ಮಾಡಿತ್ತು. ಈ ಸಂದರ್ಭದಲ್ಲಿ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು.
ಸರಕಾರಿ ನೌಕರರಿಗೆ ಜೂನ್ 24ರಿಂದ ಹೊಸ ರೂಲ್ಸ್ | ಕೇಂದ್ರ ಸರಕಾರದ ಖಡಕ್ ಎಚ್ಚರಿಕೆ Govt employees new rules

ಜುಲೈ 4ಕ್ಕೆ ಸರಕಾರಿ ನೌಕರರಿಗೆ ಸಿಹಿಸುದ್ದಿ
ಕಳೆದ ಮೂರು ವರ್ಷಗಳಿಂದ ಸರಕಾರಿ ನೌಕರರ ಬೇಡಿಕೆಗಳನ್ನು ಪ್ರತಿನಿಧಿಸುವ 7ನೇ ವೇತನ ಆಯೋಗ ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರು ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಈ ಬಗ್ಗೆ ಸರಕಾರ ಮೀನಮೇಷ ಎಣೆಸುತ್ತ ಬಂದಿದ್ದು ಇದೀಗ ಒತ್ತಡ ತೀವ್ರವಾಗಿದೆ.
ನೌಕರರ ಹೆಚ್ಚಾದ ಒತ್ತಡದ ಹಿನ್ನಲೆಯಲ್ಲಿ ರಾಜ್ಯ ಸರಕಾರ 7ನೇ ವೇತನ ಆಯೋಗ ಜಾರಿ ಕುರಿತು ಗಂಭೀರ ಪ್ರಯತ್ನಕ್ಕೆ ಮುಂದಾಗಿದ್ದು; ಈ ಸಂಬ೦ಧ ಕಳೆದ ಜೂನ್ 20ರಂದು ನಡೆದ ಸಚಿವ ಸಂಪುಟದಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದೀಗ ಜುಲೈ 4ಕ್ಕೆ ನಡೆಯಲಿರುವ ಸಂಪುಟ ಸಭೆಯಲ್ಲಿ ಸರಕಾರಿ ನೌಕರರಿಗೆ ಸಿಹಿಸುದ್ದಿ ಖಚಿತ ಎನ್ನಲಾಗಿದೆ.
ನೌಕರರ ಮೂಲವೇತನದಲ್ಲಿ ಏರಿಕೆ
7ನೇ ವೇತನ ಆಯೋಗ ವರದಿ ಶಿಫಾರಸ್ಸುಗಳು ಯಥಾವತ್ ಜಾರಿಯಾದಲ್ಲಿ ರಾಜ್ಯ ಸರಕಾರಿ ನೌಕರರ ಮೂಲವೇತನದಲ್ಲಿ (Basic Salary) 27.5% ಹೆಚ್ಚಳವಾಗಲಿದೆ ಎಂದು ಹೇಳವಾಗಲಿದೆ. ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರಿಂದ 27,000 ರೂಪಾಯಿ ವರೆಗೆ ಏರಿಕೆಯಾಗುವ ಸಂಭವವಿದೆ.
ರಾಜ್ಯಾದ್ಯ೦ತ ಸುಮಾರು 1.2 ಮಿಲಿಯನ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಇದರ ಪ್ರಯೋಜನ ಸಿಗಲಿದೆ. ವರದಿಯ ಬಹುತೇಕ ಶಿಫಾರಸುಗಳ ಜಾರಿಗೆ ಇದೀಗ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು; ಇದೇ ಜುಲೈ 4ಕ್ಕೆ ಅಂತಿಮ ತೀರ್ಮಾನ ಹೊರಬೀಳಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.