ರೈತರು ಜಮೀನಿಗೆ ಹೋಗುವ ಕಾಲುದಾರಿ (Farm Path ways), ಬಂಡಿದಾರಿಯನ್ನು (Bandidari) ಮೊಬೈಲ್‌ನಲ್ಲೇ ನಿಖರವಾಗಿ ವೀಕ್ಷಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಮೊದಲೆಲ್ಲ ತಮ್ಮ ಜಮೀನಿಗೆ ಹೋಗುವ ದಾರಿ ಸಮಸ್ಯೆ ಎದುರಾದಾಗ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಆದರೆ ಇದೀಗ, ಮೊಬೈಲ್‌ನಲ್ಲೇ ನಕ್ಷೆ ನೋಡಿ ದಾರಿ ಮಾಹಿತಿ ಪಡೆಯಬಹುದು. ಆ ಮೂಲಕ ರೈತರ ದುಡ್ಡು, ಸಮಯ ಉಳಿತಾಯವಾಗಲಿದೆ.
ಹೌದು, ಈಗ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಇದೆ ಎಂಬುದನ್ನು ಸರಳವಾಗಿ ಮೊಬೈಲ್‌ನಲ್ಲೇ ಪರಿಶೀಲಿಸಬಹುದು. ಮನೆಯಲ್ಲಿ ಕುಳಿತು ನಿಮ್ಮ ಜಮೀನಿಗೆ ಸಂಬಂಧಿಸಿದ ದಾರಿ ಮಾಹಿತಿ ಪಡೆಯುವ ಸುಲಭ ವಿಧಾನ ಇದಾಗಿದೆ.
ಜಮೀನು ದಾರಿ ಕುರಿತು ಸರಕಾರದ ಹೊಸ ಆದೇಶವೇನು?
ಜಮೀನು ದಾರಿ ಕುರಿತು ಕರ್ನಾಟಕ ರಾಜ್ಯ ಸರಕಾರ ಈಚೆಗೆ ಮಹತ್ವದ ಆದೇಶ ಹೊರಡಿಸಿದೆ. ಸದರಿ ಆದೇಶದ ಅನ್ವಯ ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ ಅಥವಾ ಬಂಡಿದಾರಿ ಈಗಾಗಲೇ ಗ್ರಾಮ ನಕ್ಷೆಯಲ್ಲಿ ಅಸ್ತಿತ್ವದಲ್ಲಿದ್ದರೆ, ಅದನ್ನು ಬಲವಂತದಿಂದ ಮುಚ್ಚಿದರೆ ಅಥವಾ ಬಂದ್ ಮಾಡಿದರೆ, ತಹಸೀಲ್ದಾರ್ ಅಥವಾ ಸ್ಥಳೀಯ ಅಧಿಕಾರಿಗಳು ಅದನ್ನು ತೆರೆಯಬೇಕೆಂದು ಸೂಚಿಸಲಾಗಿದೆ.
ಸರ್ಕಾರದ ಆದೇಶದ ಪ್ರಕಾರ, ಹೊಸ ಕಾಲುದಾರಿ ಸೃಷ್ಟಿಸುವುದಿಲ್ಲ. ಗ್ರಾಮ ನಕ್ಷೆಯಲ್ಲಿ ಈಗಾಗಲೇ ಇರುವ ದಾರಿಗೇ ಮಾನ್ಯತೆ ಸಿಗಲಿದೆ. ಅಸ್ಥಿತ್ವದಲ್ಲಿದ್ದ ದಾರಿಯನ್ನು ಮುಚ್ಚಿದ್ದರೆ, ಅದನ್ನು ಕಾನೂನು ಪ್ರಕಾರ ಚಾಲ್ತಿ ದಾರಿಯನ್ನಾಗಿ ಮಾಡಿಕೊಳ್ಳಬಹುದು. ಹೀಗಾಗಿ, ರೈತರು ತಮ್ಮ ಹೊಲ ಅಥವಾ ತೋಟಕ್ಕೆ ಹೋಗಲು ಗ್ರಾಮ ನಕ್ಷೆಯಲ್ಲಿ ದಾರಿ ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
SSLC Result 2025- ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊಸ ಅಪ್ಡೇಟ್ | 10th ಪಾಸಾಗಲು ಶೇ.35ರಷ್ಟು ಅಂಕ ಕಡ್ಡಾಯ
ಮೊಬೈಲ್‌ನಲ್ಲೇ ಗ್ರಾಮ ನಕ್ಷೆ ನೋಡುವುದು ಹೇಗೆ?
ನೀವು ಕಂದಾಯ ಇಲಾಖೆಯ ಜಾಲತಾಣದ Revenue Maps Online ಪುಟಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ತೋಟ ಅಥವಾ ಜಮೀನಿನ ಸುತ್ತಲಿನ ಕಾಲುದಾರಿ, ಬಂಡಿದಾರಿ ಹೇಗಿದೆ ಎಂದು ತಿಳಿಯಬಹುದಾಗಿದೆ.
ಇದಕ್ಕಾಗಿ ನಾವು ಕೆಳಗೆ ನೀಡಿರುವ ಕಂದಾಯ ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್ ಬಳಸಿಕೊಂಡು ಅಲ್ಲಿ ನಿಮ್ಮ ಮಾಹಿತಿಯನ್ನು ಈ ಕೆಳಗಿನಂತೆ ಆಯ್ಕೆಮಾಡಿ ಸರ್ಚ್ ಮಾಡಿ:
- ಜಿಲ್ಲೆ (District)
- ತಾಲೂಕು (Taluk)
- ಹೋಬಳಿ (Hobli)
- ಗ್ರಾಮ (Village)
- ನಕ್ಷೆ ವಿಧ (Map Types)
ಆಗ ನಿಮ್ಮ ಗ್ರಾಮದ ಪಟ್ಟಿ ಬರುವ ಮೂಲಕ, ನಿಮ್ಮೂರಿನ ಪಿಡಿಎಫ್ ನಕ್ಷೆ ಲಭ್ಯವಾಗುತ್ತದೆ. ಪಿಡಿಎಫ್ (Pdf File) ಮೇಲೆ ಕ್ಲಿಕ್ ಮಾಡಿದರೆ, ನಕ್ಷೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಆಗುತ್ತದೆ.

Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…
ಗ್ರಾಮ ನಕ್ಷೆಯಲ್ಲಿ ಏನೆಲ್ಲ ಮಾಹಿತಿ ದೊರೆಯುತ್ತದೆ?
ಡೌನ್‌ಲೋಡ್ ಆದ ಪಿಡಿಎಫ್ ಫೈಲ್ ಅನ್ನು ಓಪನ್ ಮಾಡಿ ಗ್ರಾಮ ನಕ್ಷೆಯನ್ನು ವೀಕ್ಷಿಸಿದರೆ ಈ ಕೆಳಗಿನ ಮಾಹಿತಿಗಳನ್ನು ಸ್ಪಷ್ಟವಾಗಿ ಕಾಣಬಹುದು:
- ಗ್ರಾಮದ ಗಡಿ ರೇಖೆ
- ಸರ್ವೆ ನಂಬರು ಗಡಿ
- ಹಿಸ್ಸ ನಂಬರುಗಳು
- ಕಾಲು ದಾರಿ
- ಬಂಡಿ ದಾರಿ
- ಹಳ್ಳ (ಕೊರಕಲು ಹಳ್ಳ)
- ಸರ್ವೆ ನಂಬರುಗಳು
- ಕಲ್ಲುಗಳು
- ದುರ್ಬಿಣಿ ಸ್ಟೇಷನ್
- ಗ್ರಾಮದ ಗಡಿ ಕಲ್ಲುಗಳು
- ಮನೆ
- ನೀರು ಹರಿಯುವ ದಿಕ್ಕು
ಗ್ರಾಮ ನಕ್ಷೆಯಲ್ಲಿ ಇರುವ ಮಾಹಿತಿಗೂ ಸ್ಪಷ್ಟ ಗುರುತು ಚಿಹ್ನೆಗಳು ಇರುತ್ತವೆ. ಉದಾಹರಣೆಗೆ, ಕಾಲುದಾರಿ ರೇಖೆ, ಬಂಡಿದಾರಿ ಗುರುತು, ನದಿ ಹರಿವು ಬಣ್ಣದಿಂದ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಿರುತ್ತದೆ.
ರೈತರಿಗೆ ಇದರಿಂದೇನು ಉಪಯೋಗ?
- ನಿಮ್ಮ ಜಮೀನಿಗೆ ಹಕ್ಕುಪೂರ್ವಕವಾಗಿ ಹೋಗುವ ದಾರಿ ಇರುವುದು ಅಥವಾ ಇಲ್ಲದಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
- ನಿಮ್ಮ ಹಕ್ಕಿನ ದಾರಿಯನ್ನು ಬಲವಂತವಾಗಿ ಮುಚ್ಚಿದರೆ ತಹಸೀಲ್ದಾರರಿಗೆ ದೂರು ನೀಡಬಹುದು.
- ಕಚೇರಿಗಳ ಅಲೆದಾಟವಿಲ್ಲದೇ ಮನೆಬಾಗಿಲಲ್ಲಿ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು.
- ಸರ್ವೆ ನಂಬರ್ ಆಧಾರಿತವಾಗಿ ನಿಮ್ಮ ಜಮೀನಿನ ನಿಖರ ಸ್ಥಳ, ಸುತ್ತಲಿನ ಪರಿಸರದ ವಿವರಗಳು ಸ್ಪಷ್ಟವಾಗಿ ಸಿಗುತ್ತದೆ.
ನಿಮ್ಮೂರ ಗ್ರಾಮನಕ್ಷೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್: Click Here
ಜಮೀನು ದಾರಿ ಕುರಿತು ಸರಕಾರ ಹೊಸ ಸುತ್ತೋಲೆ: Download