Jaggery Poison for Diabetes Patients : ‘ನೈಸರ್ಗಿಕ ಸಿಹಿ’ (Natural sweetness) ಎಂದು ನಂಬಲಾಗಿರುವ ಬೆಲ್ಲ ಸೇವೆನೆ ಮಧುಮೇಹಿ ರೋಗಿಗಳಿಗೆ ಉತ್ತಮವೇ? ಬಹಳಷ್ಟು ಮಧುಮೇಹಿಗಳು ಬೆಲ್ಲ ಆರೋಗ್ಯಕಾರಿ, ಬೆಲ್ಲ ಔಷಧಿಯುಕ್ತ, ಬೆಲ್ಲ ನೈಸರ್ಗಿಕ ಸಿಹಿ ಎಂದೆಲ್ಲ ನಂಬಿದ್ದಾರೆ. ಹಲವು ಖನಿಜಾಂಶಗಳನ್ನು ಹೊಂದಿರುವ ಬೆಲ್ಲ ಮಧುಮೇಹಿ ಅಲ್ಲದವರಿಗೆ ಸಕ್ಕರೆಗಿಂತ ಉತ್ತಮ. ಜೀರ್ಣಕ್ರಿಯೆಗೆ ಪರಿಣಾಮಕಾರಿ. ಆದರೆ, ಮಧುಮೇಹಿಗಳಿಗೆ ಸಕ್ಕರೆ ಮತ್ತು ಬೆಲ್ಲ ಎರಡೂ ವಿಷವೇ ಅನ್ನುತ್ತದೆ ಇತ್ತೀಚಿನ ಸಂಶೋಧನೆ.
ಹೌದು, ಬೆಲ್ಲದ ವಿಚಾರವಾಗಿ ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನವು ಆಘಾತಕಾರಿ ಸತ್ಯವನ್ನು ಹೊರಹಾಕಿದೆ.ಗ್ಲೈಸೆಮಿಕ್ ಸೂಚ್ಯಂದ 84.4 ಹೊಂದಿರುವ ಬೆಲ್ಲಕ್ಕೂ ಶುದ್ಧ ಸಕ್ಕರೆಗೂ ಅಂತಹ ವ್ಯತ್ಯಾಸವೇನಿಲ್ಲ. ಇದು ಮಧುಮೇಹಿಗಳಿಗೆ ಮಾರಣಾಂತಿಕವೆ೦ದೇ ಹೇಳಲಾಗುತ್ತಿದೆ.
ಈನಡುವೆ ಹೈದರಾಬಾದ್‌ನ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸಂಶೋಧನೆಯೊ೦ದು ಮಧುಮೇಹಿಗಳಿಗೆ ಬೆಲ್ಲ ಮತ್ತು ಸಕ್ಕರೆ ಎರಡೂ ವಿಷವೇ ಎಂದಿದೆ. ನಮ್ಮ ಸಾಂಪ್ರದಾಯಿಕ ನಂಬಿಕೆಗಳು ಬೆಲ್ಲಕ್ಕೆ ಔಷಧೀಯ ಮಹತ್ವ ನೀಡಿವೆ. ಪುರಾತನ ಆಯುರ್ವೇದ ಕಾಲದಿಂದಲೂ ಬೆಲ್ಲವನ್ನು ವೈದ್ಯಕೀಯವಾಗಿ ಬಳಸಲಾಗಿದೆ. ಆದರೆ ಬೆಲ್ಲವನ್ನು ಸಂಸ್ಕರಿಸಿದ ಕಾರಣ ಇಂದು ಬೆಲ್ಲ ತನ್ನ ಔಷಧೀಯ ಗುಣ ಕಳೆದುಕೊಂಡಿದೆ.
ಮಧುಮೇಹಿಗಳು ಬೆಲ್ಲದ ಸಿಹಿ ಮಾತುಗಳಿಗೆ ಮರುಳಾಗಿ ನಾಲಿಗೆ ಚಪಲಕ್ಕೆ ಅದನ್ನು ಬಳಸುತ್ತ ಹೋದರೆ ಅದೇ ಉರುಳಾಗುವ ಅಪಾಯವಿದೆ ಎನ್ನುತ್ತಾರೆ ವೈದ್ಯರು. ಬೆಲ್ಲದ ಗ್ಲೈಸೆಮಿಕ್ ಸೂಚ್ಯಂಕ 84.4 ಇದ್ದು; ಮಧುಮೇಹಿಗಳ ರಕ್ತದ HbA1c 7ಕ್ಕಿಂತ ಕಡಿಮೆ ಇರಬೇಕು. ಈ ಎರಡೂ ಸಂಖ್ಯೆಗಳ ಆಧಾರದ ಮೇಲೆ ಬೆಲ್ಲ ಸೇವನೆ ಉತ್ತಮ.
ಮಧುಮೇಹಿಗಳಿಗೆ ಕೊಬ್ಬಿಲ್ಲದ ಪ್ರೋಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿರುವ ಆಹಾರವೇ ಮದ್ದು. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಔಷಧಿ ಸೇವನೆ ಅತ್ಯಗತ್ಯ. ಅತ್ಯುತ್ತಮ ಜೀವನಶೈಲಿ ರೂಢಿಸಿಕೊಂಡರೆ ಮಧುಮೇಹದ ತೊಡಕುಗಳನ್ನು ಶೇ.40 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ಹೇಳುತ್ತವೆ.