India Post GDS Recruitment 2024 : ಭಾರತೀಯ ಅಂಚೆ ಇಲಾಖೆ (India Post Office) ಮತ್ತೊಂದು ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬರೋಬ್ಬರಿ 44,228 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು; 10ನೇ ತರಗತಿ ಪಾಸಾದವರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಹುದ್ದೆಗಳ ವಿವರ
- ಗ್ರಾಮೀಣ ಡಾಕ್ ಸೇವಕ್
- ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್
- ಅಸಿಸ್ಟಂಟ್ ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್
- ಒಟ್ಟು ಖಾಲಿ ಹುದ್ದೆಗಳು : 44,228
ಯಾವೆಲ್ಲ ರಾಜ್ಯಗಳಲ್ಲಿ ನೇಮಕಾತಿ?
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಕರ್ನಾಟಕ ಸರ್ಕಲ್’ನಲ್ಲಿ 1,940 ಹುದ್ದೆಗಳು
ಕರ್ನಾಟಕ ಸರ್ಕಲ್’ನಲ್ಲಿ ಒಟ್ಟು 37 ಅಂಚೆ ವಿಭಾಗಗಳಿದ್ದು; 1,940 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ವಿಭಾಗವಾರು ವಿವರ ಈ ಕೆಳಗಿನಂತಿದೆ:
- ಬಾಗಲಕೋಟೆ : 23
- ಬಳ್ಳಾರಿ : 50
- ಬೆಂಗಳೂರು ಜಿಪಿಒ : 03
- ಬೆಳಗಾವಿ : 33
- ಬೆಂಗಳೂರು ಪೂರ್ವ : 66
- ಬೆಂಗಳೂರು ದಕ್ಷಿಣ : 51
- ಬೆಂಗಳೂರು ಪಶ್ಚಿಮ : 31
- ಬೀದರ್ : 58
- ಚನ್ನಪಟ್ಟಣ : 87
- ಚಿಕ್ಕಮಗಳೂರು : 60
- ಚಿಕ್ಕೋಡಿ : 19
- ಚಿತ್ರದುರ್ಗ : 27
- ದಾವಣಗೆರೆ : 40
- ಧಾರವಾಡ : 22
- ಗದಗ: 18
- ಗೋಕಾಕ : 07
- ಹಾಸನ : 78
- ಹಾವೇರಿ : 44
- ಕಲಬುರಗಿ : 83
- ಕಾರವಾರ : 43
- ಕೊಡಗು : 76
- ಕೋಲಾರ : 104
- ಕೊಪ್ಪಳ : 36
- ಮಂಡ್ಯ : 65
- ಮಂಗಳೂರು : 60
- ಮೈಸೂರು : 41
- ನಂಜನಗೂಡು: 65
- ಪುತ್ತೂರು : 88
- ರಾಯಚೂರು : 63
- ಆರ್‌ಎಂಎಸ್ ಎಚ್‌ಬಿ : 03
- ಆರ್‌ಎಂಎಸ್ ಕ್ಯೂ : 06
- ಶಿವಮೊಗ್ಗ : 88
- ಶಿರಸಿ : 66
- ತುಮಕೂರು : 106
- ಉಡುಪಿ : 89
- ವಿಜಯಪುರ : 40
- ಯಾದಗಿರಿ : 49
ಕರ್ನಾಟಕ ಸರ್ಕಲ್’ನ ವಿಭಾಗವಾರು ಯಾವ್ಯಾವ ಗ್ರಾಮಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬ ವಿವರವನ್ನು ನೋಡಲು ಲೇಖನದ ಕೊನೆಯಲ್ಲಿ ಲಿಂಕ್ ನೀಡಲಾಗಿದೆ ಗಮನಿಸಿ…

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ
ಭಾರತದ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಇಂಗ್ಲಿಷ್ ಮತ್ತು ಗಣಿತ ವಿಷಯವನ್ನು ಒಳಗೊಂಡಿರುವುದು ಕಡ್ಡಾಯ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ ವಿವರ
ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ ವಿಭಾಗದ ಅಭ್ಯರ್ಥಿಗಳು 100 ರೂಪಾಯ ನಿಗದಿಪಡಿಸಲಾಗಿದೆ. ಎಸ್‌ಸಿ / ಎಸ್‌ಟಿ / ಅಂಗವಿಕಲ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ. ಇವರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಮಾಸಿಕ ವೇತನದ ವಿವರ
ಭಾರತೀಯ ಅಂಚೆ ಇಲಾಖೆಯ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್ : ₹12,000 – ₹29,380
- ಅಸಿಸ್ಟಂಟ್ ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್ : ₹10,000 – ₹24,470
- ಗ್ರಾಮೀಣ ಡಾಕ್ ಸೇವಕ್ : ₹10,000 – ₹24,470
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 15-07-2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05-08-2024
ಅರ್ಜಿ ಸಲ್ಲಿಸುವ ವಿಧಾನ
ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್ https://indiapostgdsonline.gov.in/ ಬಳಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- India Post GDS Recruitment 2024 ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಒತ್ತಿ…
- ಕರ್ನಾಟಕ ಸರ್ಕಲ್’ನಲ್ಲಿ ವಿಭಾಗವಾರು ಖಾಲಿ ಹುದ್ದೆಗಳ ವಿವರ ತಿಳಿಯಲು ಇಲ್ಲಿ ಇಲ್ಲಿ ಒತ್ತಿ…