ಗೃಹಲಕ್ಷ್ಮೀ ಯೋಜನೆಯ (GruhaLakshmi Scheme) ಬಾಕಿ ಮೂರು ಕಂತಿನ ಹಣವನ್ನು ಒಟ್ಟಿಗೇ ಜಮಾ ಮಾಡುವುದಾಗಿ ಸರ್ಕಾರ (Government of Karnataka) ಸ್ಪಷ್ಟನೆ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ವಿಳಂಬದ ಬಗ್ಗೆ ಇದೀಗ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿದೆ. ಕೆಲ ತಿಂಗಳಿAದ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗದ ಕಾರಣ ಫಲಾನುಭವಿಗಳು ಹಾಗೂ ಪ್ರತಿಪಕ್ಷಗಳಲ್ಲಿ ಅಸಮಾಧಾನ, ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ಈ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ, ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಘೋಷಿಸಿದ ಐದು ಮಹತ್ವದ ಭರವಸೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯು ಅತಿದೊಡ್ಡ ಯೋಜನೆಯಾಗಿದೆ. ಪ್ರತಿ ತಿಂಗಳು ₹2,000 ನಗದು ಸಹಾಯಧನವನ್ನು ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.
ATM Transaction Fee Hike- ಮೇ 1ರಿಂದ ಬ್ಯಾಂಕ್ ಎಟಿಎಂ ಶುಲ್ಕ ಹೆಚ್ಚಳ: ಆರ್‌ಬಿಐ ಪರಿಷ್ಕೃತ ನಿಯಮ ಜಾರಿ
ಮೂರು ತಿಂಗಳ ಬಾಕಿ ಹಣ ಒಂದೇ ತಿಂಗಳಲ್ಲಿ
ಈಗಾಗಲೇ ಎರಡು ವರ್ಷಗಳನ್ನು ಪೂರೈಸುತ್ತಿರುವ ರಾಜ್ಯ ಸರ್ಕಾರ, ತನ್ನ ಆಡಳಿತದ ಸಾಧನೆಗಳು ಹಾಗೂ ಭರವಸೆಗಳ ಅನುಷ್ಠಾನ ಕುರಿತು ರಾಜ್ಯಾದ್ಯಂತ ಸಮಾರಂಭಗಳನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಬಾಕಿ ಇರುವ ಮೂರು ತಿಂಗಳ ಹಣವನ್ನು ಮೇ ತಿಂಗಳಲ್ಲಿಯೇ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿದ ಮಾಹಿತಿಯ ಪ್ರಕಾರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಮೂರು ಕಂತಿನ ಹಣವನ್ನು ಒಂದೇ ತಿಂಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು.
ಹಣಕಾಸು ಇಲಾಖೆಯಿಂದ ಈಗಾಗಲೇ ಅನುಮೋದನೆ ಸಿಕ್ಕಿದೆ. ಫಲಾನುಭವಿಗಳಿಗೆ ಈ ಬಾರಿ ಒಟ್ಟಿಗೆ ಮೂರು ತಿಂಗಳ ಹಣ ದೊರೆಯಲಿದೆ. ಮೊದಲ ವಾರದಲ್ಲಿ ಒಂದು ತಿಂಗಳ ಹಣ, ಎರಡನೇ ವಾರದಲ್ಲಿ ಮತ್ತೊಂದು ತಿಂಗಳ ಹಣ ಹೀಗೆ, ಮೇ ತಿಂಗಳಲ್ಲಿ ಪೂರ್ಣ ಹಣ ಜಮೆಯಾಗುವುದು ಖಚಿತ ಎಂದು ಸಚಿವರು ಭರವಸೆ ನೀಡಿದ್ದಾರೆ.

ಹಣ ಬಿಡುಗಡೆಗೆ ಸಿಎಂ ಸ್ಪಷ್ಟ ಭರವಸೆ
ನಿಗದಿತ ಸಮಯಕ್ಕೆ ಹಣ ಜಮೆಯಾಗದ ಕಾರಣಕ್ಕೆ ಹಲವೆಡೆ ಮಹಿಳಾ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷಗಳಿಂದ ‘ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್’ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣ ಬಿಡುಗಡೆಗೆ ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯು ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ, ಕುಟುಂಬದ ಹಣಕಾಸಿನ ನಿರ್ವಹಣೆಗೂ ಬಲ ನೀಡಿದೆ. ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಮಕ್ಕಳ ಶಿಕ್ಷಣ ವೆಚ್ಚ, ವೈದ್ಯಕೀಯ ವೆಚ್ಚಗಳಿಗೆ ಈ ಹಣ ಉಪಯೋಗವಾಗುತ್ತಿದೆ ಎಂಬುದು ಹಲವಾರು ಸಮೀಕ್ಷೆಗಳಲ್ಲಿ ಬೆಳಕಿಗೆ ಬಂದಿದೆ.
ಈ ಯೋಜನೆಯು ಸಾಮಾಜಿಕ ಭದ್ರತೆ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ನೆರವಾಗುತ್ತಿದೆ. ಹೀಗಾಗಿ ಇದರ ನಿರಂತರತೆಯು ಬಹುಮುಖ್ಯವಾಗಿದೆ ಎಂಬ ಒತ್ತಾಯ ಫಲಾನುಭವಿಗಳಿಂದ ಬಂದಿತ್ತು.
Ration Card eKYC- ರೇಷನ್ ಕಾರ್ಡ್ ಹೊಂದಿರುವರರಿಗೆ ಸರ್ಕಾರದ ಪ್ರಮುಖ ಎಚ್ಚರಿಕೆ | ಸಂಪೂರ್ಣ ಮಾಹಿತಿ ಇಲ್ಲಿದೆ…
ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ಫಲಾನುಭವಿಗಳು
ಗೃಹಲಕ್ಷ್ಮೀ ಯೋಜನೆಯ ಮುಂದಿನ ಹಂತಗಳಲ್ಲಿ ತಾಂತ್ರಿಕ ದೋಷಗಳ ತ್ವರಿತ ಪರಿಹಾರ, ಫಲಾನುಭವಿಗಳ ಸ್ವಯಂ ಪರಿಶೀಲನೆಗಾಗಿ ಆಪ್/ಪೋರ್ಟಲ್ ವ್ಯವಸ್ಥೆ, ಗ್ರಾಮ ಪಂಚಾಯತಿ ಮಟ್ಟದ ಸಹಾಯ ಕೇಂದ್ರಗಳ ಸ್ಥಾಪನೆ ಮುಂತಾದವುಗಳು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿದೆ.
ಸರ್ಕಾರವು ಹಣ ಬಿಡುಗಡೆಗೆ ತಕ್ಷಣ ಸ್ಪಂದಿಸಿರುವುದು ಮಹಿಳಾ ಫಲಾನುಭವಿಗಳಿಗೆ ಆಶಾವಾದ ಮೂಡಿಸಿದೆ. ಮೇ ತಿಂಗಳೊಳಗೆ ಎಲ್ಲಾ ಬಾಕಿ ಹಣ ಲಭ್ಯವಾಗುವುದರಿಂದ ಫಲಾನುಭವಿಗಳು ನಿರಾಳರಾಗಬಹುದು. ಮುಂದೆ ನಿರಂತರ ಹಣ ಬಿಡುಗಡೆಗೆ ಸರ್ಕಾರ ಒತ್ತು ನೀಡಲಿ ಎಂಬುವುದು ಮಹಿಳೆಯರ ಆಗ್ರಹವಾಗಿದೆ.
Women Loan Subsidy- ಮಹಿಳೆಯರಿಗಾಗಿಯೇ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು