ಕೆಲವು ತಿಂಗಳಿಂದ ‘ಗೃಹಲಕ್ಷ್ಮೀ’ ಯೋಜನೆ (Gruhalakshmi Scheme 2025) ಬಾಕಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ನಿನ್ನೆ ಮೇ 19ರಂದು ಸರ್ಕಾರ 2000 ರೂಪಾಯಿ ಜಮೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಇದೇ ಮೇ 20ಕ್ಕೆ ರಾಜ್ಯ ಸರ್ಕಾರಕ್ಕೆ ಭರ್ತಿ ಎರಡು ವರ್ಷ ಸಂದಿದೆ. 2ನೇ ವರ್ಷದ ಸಾಧನಾ ಸಮಾವೇಶವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಜರಗುತ್ತಿದೆ. ಈ ಹಿನ್ನಲೆಯಲ್ಲಿ ಒಂದೆಡೆ ಪಂಚ ಗ್ಯಾರಂಟಿ ಯೋಜನೆಗಳ ಜಾಹೀರಾತುಗಳು ಕಂಗೊಳಿಸುತ್ತಿದ್ದರೆ, ಮತ್ತೊಂದು ಕಡೆಗೆ ಪ್ರತಿಪಕ್ಷ ಬಿಜೆಪಿ ಬೆಲೆ ಏರಿಕೆ ಕುರಿತು ಜಾಹಿರಾತು ಸಮರ ನಡೆಸುತ್ತಿದೆ.
ಇದೆಲ್ಲದರ ನಡುವೆ ನಿನ್ನೆ ಮೇ 19 ರಂದು ‘ಗೃಹಲಕ್ಷ್ಮೀ’ ಯೋಜನೆಯ ಒಂದು ಕಂತಿನ 2000 ರೂಪಾಯಿ ಹಣ ಜಮಾ ಮಾಡಲಾಗಿದೆ. ಸರ್ಕಾರ ಮೂರು ತಿಂಗಳು ಗೃಹಲಕ್ಷ್ಮೀ ಹಣ ಬಾಕಿ ಉಳಿಸಿಕೊಂಡಿದ್ದು; ಇದೀಗ ಒಂದು ಕಂತಿನ ಹಣ ಮಾತ್ರ ಬಿಡುಗಡೆ ಮಾಡಲಾಗಿದೆ. ಇದು ರಾಜ್ಯದ ಎಷ್ಟು ಮಹಿಳೆಯರ ಖಾತೆಗೆ ಜಮಾ ಆಗಿದೆ ಎನ್ನುವುದು ಇನ್ನು ಮೇಲಷ್ಟೇ ಗೊತ್ತಾಗಬೇಕು.
KCET 2025 Result- ಕೆಸಿಇಟಿ ಫಲಿತಾಂಶ ಮೇ 21ಕ್ಕೆ ನಿರ್ಧಾರ | ಈ ವಾರದಲ್ಲೇ ರಿಸಲ್ಟ್ ಪ್ರಕಟ
50,000 ಕೋಟಿ ರೂಪಾಯಿ ಧನಸಹಾಯ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ‘ಮುಖ್ಯಮಂತ್ರಿಗಳ ಸಮ್ಮತಿ ದೊರೆತಿದೆ. ಮೂರು ತಿಂಗಳ ಹಣ ಒಂದೇ ತಿಂಗಳಲ್ಲಿ ಜಮಾ ಮಾಡಲಾಗುವುದು’ ಎಂದು ಈ ಹಿಂದೆ ಮಾಹಿತಿ ನೀಡಿದ್ದರು. ಬಳಿಕ ‘ಮೇ ತಿಂಗಳಲ್ಲಿ ಮೂರು ಕಂತುಗಳ ಹಣ ಜಮಾ ಮಾಡಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ಇದೀಗ ಒಂದು ಕಂತಿನ ಹಣ ಮಾತ್ರ ಜಮಾ ಆಗಿದೆ ಎನ್ನಲಾಗುತ್ತಿದೆ.
ಕಳೆದ ಆಗಸ್ಟ್ 2025ರಿಂದ ರಾಜ್ಯ ಸರ್ಕಾರ ಕರ್ನಾಟಕದಾದ್ಯಂತ ಒಟ್ಟು 1.25 ಕೋಟಿ ಮಹಿಳಾ ಫಲಾನುಭವಿಗಳಿಗೆ ಮಾಸಿಕ 2000 ರೂಪಾಯಿ ಹಣ ವಿತರಿಸುತ್ತಿದೆ. ಈ ವರೆಗೆ ಒಟ್ಟು 50,000 ಕೋಟಿ ರೂಪಾಯಿ ಧನಸಹಾಯ ನೀಡಲಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳುತ್ತಿವೆ. ಆದರೆ, ಈ ಹಣ ನಿರಂತರವಾಗಿ ಜಮೆ ಆಗದಿರುವುದೇ ದೊಡ್ಡ ಸಮಸ್ಯೆಯಾಗಿದೆ.
ಮಹಿಳೆಯರಲ್ಲಿ ಹೆಚ್ಚಿದ ಗೊಂದಲ
ಡಿಸಿಎಂ ಡಿಕೆ ಶಿವಕುಮಾರ್ ಈಚೆಗೆ ‘ಗೃಹಲಕ್ಷ್ಮೀ’ ಯೋಜನೆ ಬಗ್ಗೆ ಸ್ಪಷ್ಟನೆ ನೀಡುತ್ತಾ, ‘ನಾವು ತಿಂಗಳು ತಿಂಗಳು ಹಣ ಕೊಡುತ್ತೇವೆಂದು ಹೇಳಿಲ್ಲ. ಹಣ ಬಂದಾಗ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಫಲಾನುಭವಿ ಮಹಿಳೆಯರಲ್ಲಿ ಗೊಂದಲ ಮತ್ತಷ್ಟು ಹೆಚ್ಚಾಗಿದೆ.
ಬಹುತೇಕ ಮಹಿಳೆಯರು ಬಾಕಿ ಉಳಿದಿರುವ ಮೂರು ಕಂತುಗಳ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ಪೈಕಿ ಸರ್ಕಾರದ 2 ವರ್ಷದ ಸಾಧನಾ ಸಮಾವೇಶದ ಹಿನ್ನಲೆಯಲ್ಲಿ ಕೇವಲ ಒಂದೇ ಕಂತಿನ ಹಣ ಜಮೆಯಾಗಿದೆ ಎನ್ನಲಾಗುತ್ತಿದೆ. ಇನ್ನೂ ಎರಡು ಕಂತು ಬಾಕಿ ಇದೆ. ಜೊತೆಗೆ ಇಷ್ಟರಲ್ಲೇ ಮೇ ತಿಂಗಳು ಕಂತು ಕೂಡ ಬಾಕಿಯಾಗುತ್ತದೆ.
ಉಳಿದ ಕಂತುಗಳ ಜಮೆ ಯಾವಾಗ?
‘ಗೃಹಲಕ್ಷ್ಮೀ’ ಯೋಜನೆ ಜಾರಿಯಾದ ನಂತರ ಕಾಲಕಾಲಕ್ಕೆ ಹಣ ಜಮೆ ಕುರಿತು ಹಲವು ತೊಂದರೆ-ತೊಡಕುಗಳು ಉದ್ಭವಿಸುತ್ತಲೇ ಬಂದಿವೆ. ತಾಂತ್ರಿಕ ದೋಷ, ಬ್ಯಾಂಕ್ ಖಾತೆಯ ಏಙಅ ಸಮಸ್ಯೆ, ಹಣ ಬಿಡುಗಡೆಗೆ ಆರ್ಥಿಕ ಸ್ಥಿತಿ ಅಸಮತೋಲನ ಇತ್ಯಾದಿ ಕಾರಣಗಳಿಂದ ಹಣ ಬಿಡುಗಡೆ ವಿಳಂಬವಾಗುತ್ತ ಬಂದಿದೆ.
ಮೊದಲಿನಿಂದಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಾಕಿ ಹಣವನ್ನು ಒಂದೇ ಬಾರಿಗೆ ಜಮೆ ಮಾಡಲಾಗುತ್ತದೆ ಎಂದು ಹೇಳುತ್ತ ಬಂದಿದ್ದಾರೆ. ಆದರೆ, ಹೇಳಿದಂತೆ ಒಟ್ಟಿಗೇ ಹಣ ಜಮೆಯಾಗುತ್ತಿಲ್ಲ. ಈ ಬಾರಿ ಸಾಧನಾ ಸಮಾವೇಶದ ನಂತರ ಉಳಿದ ಹಣ ಜಮೆ ಆಗುವ ನಿರೀಕ್ಷೆ ಇದೆ.
Atal Pension Yojana- ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ…