Gruha lakshmi balance money deposit : ಲೋಕಸಭೆ ಚುನಾವಣೆಯ (Lok Sabha Elections) ನಂತರ ರಾಜ್ಯದ ಕೋಟ್ಯಾಂತರ ಮಹಿಳೆಯರ ಆತಂಕಕ್ಕೆ ಕಾರಣವಾಗಿದ್ದ ಗೃಹಲಕ್ಷ್ಮೀ ಯೋಜನೆಯ (Karnataka Gruha Lakshmi Scheme) ಪ್ರೋತ್ಸಾಹಧನ ಕುರಿತ ಗೊಂದಲಕ್ಕೆ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಮಾತ್ರವಲ್ಲ ಲೋಕಸಭೆ ಚುನಾವಣೆ ನಂತರ ಬಾಕಿ ಉಳಿದಿದ್ದ ಎರಡು ಕಂತುಗಳ ಹಣ ಬಿಡುಗಡೆಗೂ ಚಾಲನೆ ನೀಡಿದೆ.
ಹೌದು, ಆಗಸ್ಟ್ 6ರಂದು ಮಂಡ್ಯದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಂದಿನಿ೦ದಲೇ ಬಾಕಿ ಉಳಿದ ಹಣ ಜಮಾ ಪ್ರಾರಂಭ ಎಂಬ ಭರವಸೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಕಡೆಗೂ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಹಣ ಬಿಡುಗಡೆ | ಈ ಜಿಲ್ಲೆಯ ಮಹಿಳೆಯರಿಗೆ ಮೊದಲು ಹಣ ಜಮಾ Gruha Lakshmi money release
ಆಗಸ್ಟ್ 10ರೊಳಗೆ ಎಲ್ಲರಿಗೂ ಹಣ ಜಮಾ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಕಂತಿನ ಹಣವನ್ನು ಒಟ್ಟಿಗೇ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಗೆ ಬಾಕಿ ಉಳಿದಿದ್ದು, ಬಾಕಿ ಕಂತುಗಳ ಹಣ ಜಮಾ ಇದೀಗ ಪ್ರಾರಂಭವಾಗಿದೆ. ಆಗಸ್ಟ್ 10ರೊಳಗೆ ಬಾಕಿ ಕಂತುಗಳ ಹಣ ನೇರವಾಗಿ ಖಾತೆಗೆ ಸಂದಾಯವಾಗಲಿದೆ.
ಗೃಹಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಆಗಸ್ಟ್ 5ರ ಸೋಮವಾರದಿಂದ ಆರಂಭವಾಗಿದ್ದು, ಮೊದಲ ಹಂತದಲ್ಲಿ 26.65 ಲಕ್ಷ ಫಲಾನುಭವಿಗಳಿಗೆ ತಲಾ 2,000 ರೂಪಾಯಿಯಂತೆ ಒಟ್ಟು 533 ಕೋಟಿ ರೂಪಾಯಿ ಹಣಪಾವತಿಯಾಗಲಿದೆ. ನಾಗರ ಪಂಚಮಿ ಹಬ್ಬದ ಕೊನೆ ವೇಳೆಗೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ.
ತಾಂತ್ರಿಕ ದೋಷ ಪರಿಹಾರ
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ 2023ರ ಆಗಸ್ಟ್ ತಿಂಗಳಿನಿAದ ಅನುಷ್ಠಾನದಲ್ಲಿದೆ. ಸುಮಾರು 1.18 ಕೋಟಿ ಮಹಿಳೆಯರು ಈ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಹತ್ತು ತಿಂಗಳಿನಿ೦ದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಸಂದಾಯವಾಗುತ್ತಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗುವುದರಲ್ಲಿ ತಡವಾಗಿದ್ದು; ಜೂನ್ ಮತ್ತು ಜುಲೈ ತಿಂಗಳಲ್ಲಿ ಬರಬೇಕಿದ್ದ 11 ಮತ್ತು 12ನೇ ಕಂತಿನ ಹಣ ಪಾವತಿಗೆ ತಡೆಯುಂಟಾಗಿದೆ. ಇದೀಗ ತಾಂತ್ರಿಕ ದೋಷ ಪರಿಹಾರವಾಗಿದ್ದು; ಎರಡೂ ಕಂತಿನ ಹಣ ಎಲ್ಲಾ ಅರ್ಹ ಮಹಿಳೆಯರಿಗೂ ತಲುಪಲಿದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಬಾಕಿ ಹಣ ಎಲ್ಲಾ ಸಂದಾಯ
ಇದೇ ಆಗಸ್ಟ್ 16ಕ್ಕೆ ವರಮಹಾಲಕ್ಷ್ಮೀ ಹಬ್ಬವಿದೆ. ಈ ಹಬ್ಬದ ವೇಳೆಗೆ ಬಹುತೇಕ ಬಾಕಿ ಉಳಿದಿರುವ ಜೂನ್-ಜುಲೈ ತಿಂಗಳ ಎರಡೂ ಕಂತಿನ 4,000 ರೂಪಾಯಿ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ತಾಂತ್ರಿಕ ಕಾರಣದಿಂದ ಎರಡು ತಿಂಗಳ ಹಣ ಜಮೆ ಆಗಿರಲಿಲ್ಲ. ಕೂಡಲೇ ಜೂನ್, ಜುಲೈ ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಂಡ್ಯದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ 10 ದಿನ ಅವಕಾಶ | ತಪ್ಪದೇ ಈ ಅವಕಾಶ ಬಳಸಿಕೊಳ್ಳಿ Ration Card Correction Karnataka