Grama Panchayat New Rules- ಗ್ರಾಮ ಪಂಚಾಯತಿ ಅಧಿಕಾರಿಗಳು, ನೌಕರರಿಗೆ ಗುಡ್ ನ್ಯೂಸ್ | ವರ್ಗಾವಣೆ ಮತ್ತು ಇ-ಹಾಜರಾತಿಗೆ ಹೊಸ ನಿಯಮ ಜಾರಿ

Spread the love

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (Department of Rural Development and Panchayat Raj) ಗ್ರಾಮ ಪಂಚಾಯತಿ (Grama Panchayat) ಅಧಿಕಾರಿಗಳ ವರ್ಗಾವಣೆ ನಿಯಮದಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ.

WhatsApp Group Join Now
Telegram Group Join Now

ಈ ಹೊಸ ತಿದ್ದುಪಡಿ ಅನ್ವಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು (Secretary), ಸಹಾಯಕರು, ಲೆಕ್ಕ ಸಹಾಯಕರು ಮತ್ತು ಇತರ ಸಂಬ೦ಧಿತ ಅಧಿಕಾರಿಗಳ ವರ್ಗಾವಣೆ ವಿಧಾನದಲ್ಲಿ ಹೊಸ ಮಾರ್ಗದರ್ಶನ ಒದಗಿಸಲಾಗಿದೆ. ಜೊತೆಗೆ ಗ್ರಾಪಂ ಸಿಬ್ಬಂದಿಗಳ ಇ-ಹಾಜರಾತಿ (E-Attendance) ಹೊರೆ ಕೂಡ ಕಡಿಮೆ ಮಾಡಲಾಗಿದೆ.

ಏನಿದು ಹೊಸ ವರ್ಗಾವಣೆ ತಿದ್ದುಪಡಿ?

ಹಳೆಯ ನಿಯಮ: ಒಂದೇ ತಾಲೂಕಿನಲ್ಲಿ ನಿರಂತರವಾಗಿ ಏಳು ವರ್ಷ ಸೇವೆ ಸಲ್ಲಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಸ್ಥಳಾಂತರಿಸುವಾಗ, ಅವರಿಗೆ ಹೊಸ ತಾಲೂಕು ಅಥವಾ ಜಿಲ್ಲೆ ನೀಡಬೇಕಿತ್ತು. ಇದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಹೊಸ ತಿದ್ದುಪಡಿ: ಪ್ರಸ್ತುತ, ಒಂದೇ ಗ್ರಾಮ ಪಂಚಾಯಿತಿಯಲ್ಲಿ 5 ವರ್ಷ ಸೇವೆ ಸಲ್ಲಿಸಿದ ವೃಂದ-1ರ ನೌಕರರನ್ನು, ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗೆ ಮತ್ತೆ ನಿಯುಕ್ತಿಗೊಳಿಸಲು ಅವಕಾಶವಿಲ್ಲ. ಆದರೆ, ಅದೇ ತಾಲೂಕಿನಲ್ಲಿ ಇರುವ ಇತರ ಗ್ರಾಮ ಪಂಚಾಯಿತಿಗಳಿಗೆ ಸ್ಥಳಾಂತರ ಮಾಡಬಹುದು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತಿ ಅಧಿಕಾರಿಗಳ ವರ್ಗಾವಣೆ ನಿಯಮದಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ...
Grama Panchayat New Rules

Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್‌?

ಈ ತಿದ್ದುಪಡಿಯಿಂದೇನು ಪ್ರಯೋಜನ?

ಈ ತಿದ್ದುಪಡಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಸ್ಥಳೀಯ ಆಡಳಿತ ವ್ಯವಸ್ಥೆಯು ಅನುಭವ ಹೊಂದಿದ ಅಧಿಕಾರಿಗಳ ಮೂಲಕ ಸುಗಮವಾಗಿ ಸಾಗುವ ಸಾಧ್ಯತೆ ಇದೆ.

ಅಧಿಕಾರಿಗಳು ಒಂದು ಪ್ರದೇಶದಲ್ಲಿ ಹೆಚ್ಚು ಸಮಯ ಉಳಿದರೆ, ಭ್ರಷ್ಟಾಚಾರಕ್ಕೆ ಪ್ರೇರಣೆಯಾಗುವ ಅಪಾಯವಿತ್ತು. ಈ ತಿದ್ದುಪಡಿ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸ್ಥಳೀಯವಾಗಿ ಹಳೆಯ ಅನುಭವ ಹೊಂದಿದ ಸಿಬ್ಬಂದಿ ಉಳಿಯುವುದರಿಂದ, ಗ್ರಾಮ ಪಂಚಾಯಿತಿಗಳ ನಿರ್ವಹಣೆ ಉತ್ತಮಗೊಳ್ಳುವ ನಿರೀಕ್ಷೆಯಿದೆ.

BPL Ration Card Update- ಹೊಸ ರೇಷನ್ ಕಾರ್ಡ್ ಅರ್ಜಿ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…

ಗ್ರಾಪಂ ಸಿಬ್ಬಂದಿಗಳಿಗೆ ಮೊಬೈಲ್‌ನಲ್ಲೇ ಹಾಜರಾತಿಗೆ ಅವಕಾಶ

ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮ ಪಂಚಾಯಿತಿ ನೌಕರರಿಗೆ ಇ-ಹಾಜರಾತಿ ಪದ್ಧತಿಯನ್ನು ಅನುಷ್ಠಾನಗೊಳಿಸಲು Panchatantra 2.0 ಮೊಬೈಲ್ ಆಪ್ ಬಳಕೆಗೆ ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಿದೆ.

ಈ ಮೊದಲು ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ಸ್ವಚ್ಛತಾಗಾರರು, ನೀರಗಂಟಿಗಳು ಪ್ರತಿದಿನ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಲು ಸೂಚನೆ ನೀಡಲಾಗಿತ್ತು. ಅವರ ಹಾಜರಾತಿಯ ಆಧಾರದ ಮೇಲೆ ಅವರ ಮಾಸಿಕ ವೇತನ ಪಾವತಿ ಮಾಡುವ ಕ್ರಮ ಹೇರಲಾಗಿತ್ತು.

ಆದರೆ, ಈ ನೌಕರರು ತಮ್ಮ ಕೆಲಸದ ನಿಮಿತ್ತ ಪಂಚಾಯತಿ ವ್ಯಾಪ್ತಿಯ ಬೇರೆ ಬೇರೆ ಕಡೆಗೆ ಕೆಲಸ ಮಾಡುತ್ತಿದ್ದರಿಂದ ನಿಗದಿತ ಸಮಯಕ್ಕೆ ಕಚೇರಿಗೆ ಬಂದು ಹಾಜರಾತಿ ಹಾಕಲು ಕಷ್ಟವಾಗುತ್ತಿತ್ತು. ಇದೀಗ ಬಯೋಮೆಟ್ರಿಕ್ ಹಾಜರಾತಿಯ ನಿಯಮದಿಂದ ಅವರಿಗೆ ವಿನಾಯಿತಿ ನೀಡಲಾಗಿದೆ.

Panchatantra 2.0 ಆಪ್ ಬಳಸಿ ನೌಕರರು ತಾವಿದ್ದ ಸ್ಥಳದಿಂದಲೇ ಹಾಜರಾತಿಯನ್ನು ದಾಖಲಿಸಬಹುದಾಗಿದೆ. ಈ ಹೊಸ ವ್ಯವಸ್ಥೆಯಿಂದ ಗ್ರಾಮ ಪಂಚಾಯಿತಿ ನೌಕರರ ಕೆಲಸ ಸುಗಮವಾಗುವುದರ ಜೊತೆಗೆ ಆಡಳಿತ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಸಹಾಯ ಮಾಡಲಿದೆ.

Karnataka 2nd PUC Result 2025- ದ್ವಿತೀಯ ಪಿಯುಸಿ ಫಲಿತಾಂಶ 2025 | ಮಹತ್ವದ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!