Govt Employees Revised Pay Scale List : ಇದೇ ಆಗಸ್ಟ್ 1, 2024ರಿಂದ ರಾಜ್ಯ ಸರಕಾರಿ ನೌಕರರಿಗೆ ಸಂಬಳ ಸೇರಿ ಭರ್ಜರಿ ಸವಲತ್ತುಗಳು ಲಭ್ಯವಾಗಲಿದ್ದು; 7ನೇ ವೇತನ ಆಯೋಗ (7th Pay Commission) ವರದಿ ಶಿಫಾರಸು ಜಾರಿ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ (Karnataka State Govt Official Order) ಹೊರಡಿಸಿದೆ. ಹಾಗಾದರೆ ಯಾವೆಲ್ಲ ನೌಕರರಿಗೆ ಏನೇನು ಸವಲತ್ತುಗಳು ಸಿಗಲಿವೆ? ಎಷ್ಟು ಪ್ರಮಾಣದಲ್ಲಿ ಸಂಬಳ ಏರಿಕೆಯಾಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಪರಿಷ್ಕೃತ ಸವಲತ್ತುಗಳು ಯಾರಿಗೆಲ್ಲ ಅನ್ವಯಿಸುತ್ತದೆ?
ರಾಜ್ಯ ಸರಕಾರದ ಎಲ್ಲ ವೃಂದದ ನೌಕರರಿಗೂ 7ನೇ ವೇತನ ಆಯೋಗ ವರದಿಯ ಶಿಫಾರಸು ಜಾರಿ ನಿಯಮ ಅನ್ವಯಿಸುತ್ತದೆ. ಜೊತೆಗೆ ಈ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ಸರ್ಕಾರ ವಿಸ್ತರಿಸಿರುವುದು ವಿಶೇಷವಾಗಿದೆ.
ನಿಯಮದ ಪ್ರಕಾರ ಸರ್ಕಾರಿ ನೌಕರರ ವೇತನವನ್ನು ಪ್ರತೀ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಅದರಂತೆ 2022ರ ಜುಲೈ 1ರಿಂದಲೇ ವೇತನ ಪರಿಷ್ಕರಣೆ ಆಗಬೇಕು. ಹೀಗಾಗಿ 7ನೇ ರಾಜ್ಯ ವೇತನ ಆಯೋಗವು ಶಿಫಾರಸು ಮಾಡಿರುವಂತೆ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನವನ್ನು 2022ರ ಜುಲೈ 1ರಿಂದ ಅನುಷ್ಠಾನಗೊಳಿಸಲು ನಿರ್ದೇಶಿಸಲಾಗಿದೆ. ಇದರಿಂದಾಗಿ ಮುಂದಿನ 5 ವರ್ಷಕ್ಕೆ ಅಂದರೆ 2027ರಲ್ಲಿ 8ನೇ ರಾಜ್ಯ ವೇತನ ಆಯೋಗ ಸ್ಥಾಪಿಸಲು ಕಾನೂನಾತ್ಮಕವಾಗಿ ಅವಕಾಶವಾಗಿದೆ.
ಆಗಸ್ಟ್’ನಿಂದ ಪರಿಷ್ಕೃತ ವೇತನ
ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ 2022ರ ನವೆಂಬರ್ 19ರಂದು ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿನ ಶಿಫಾರಸುಗಳನ್ನು ಸರ್ಕಾರವು ಪರಿಗಣಿಸಿದ್ದು; ಆಗಸ್ಟ್ ತಿಂಗಳಿನಿ೦ದ ಸರ್ಕಾರಿ ನೌಕರರ ವೇತನ ಶೇ.27.5 ರಷ್ಟು ಹೆಚ್ಚಳವಾಗಲಿದೆ. ನಿವೃತ್ತ ನೌಕರರ ಪಿಂಚಣಿ ಕೂಡ ಹೆಚ್ಚಳವಾಗಿದೆ.
ಪರಿಷ್ಕೃತ ವೇತನವನ್ನು 2024ರ ಆಗಸ್ಟ್ 1ರಿಂದ ಜಾರಿಗೊಳಿಸಲು ಸರ್ಕಾರ ನಿನ್ನೆ ಜುಲೈ 23ರಂದು ಅಧಿಕೃತ ಆದೇಶ ಮಾಡಿದ್ದು; ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಯಾರಿಗೆ ಎಷ್ಟು ವೇತನ ಹೆಚ್ಚಾಗಲಿದೆ ಎಂಬ ಕುರಿತ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳ ಪ್ರಕಟಣೆ ಹೊರಡಿಸಿದ್ದಾರೆ.
ಪರಿಷ್ಕೃತ ಮುಖ್ಯ ವೇತನ ಶ್ರೇಣಿಯ ವಿವರ
ಜುಲೈ 01, 2022ರಲ್ಲಿ ಇದ್ದಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನೌಕರರ ಮೂಲ ವೇತನ, ತುಟ್ಟಿ ಭತ್ಯೆ ಮತ್ತು ಫಿಟ್‌ಮೆಂಟ್ ಸೌಲಭ್ಯಗಳನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ನಿಗದಿಪಡಿಸಲಾಗಿದೆ. ಪರಿಷ್ಕೃತ ಮುಖ್ಯ ವೇತನ ಶ್ರೇಣಿಯ ವಿವರ ಈ ಕೆಳಗಿನಂತಿದೆ:
1. ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳು : ಮಾಸಿಕ ₹8,500 ಮತ್ತು ₹75,300 ರಿಂದ ₹13,500 ಮತ್ತು ₹1,20,600 ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ ಮಾಸಿಕ ₹8,500 ಮತ್ತು ₹45,180 ರಿಂದ ₹13,500 ಮತ್ತು ₹80,400 ಪರಿಷ್ಕೃಸಲಾಗಿದೆ. ಮರಣ ಮತ್ತು ನಿವೃತ್ತಿ ಉಪದಾನದ ಪ್ರಸ್ತುತ ಗರಿಷ್ಠ ಮಿತಿ ₹20 ಲಕ್ಷಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
2. ನಿವೃತ್ತ ಮತ್ತು ಸೇವೆಯಲ್ಲಿ ಮೃತರಾದವರ ಪಿಂಚಣಿ ಮತ್ತು ಕುಟುಂಬ ಪಿಂಚಣಿ : ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ, 31% ರಷ್ಟು ತುಟ್ಟಿ ಭತ್ಯೆ, 27.50% ರಷ್ಟು ಫಿಟ್‌ಮೆಂಟ್ ಸೌಲಭ್ಯ ಸೇರಿ ಒಟ್ಟಾರೆ ಮೊತ್ತ ಮಾಸಿಕ ₹13,500 ಕನಿಷ್ಠ ಪಿಂಚಣಿಗೆ ಕಡಿಮೆ ಇಲ್ಲದಂತೆ ಮತ್ತು ನಿವೃತ್ತಿ ವೇತನವು ಗರಿಷ್ಠ ಮಾಸಿಕ ₹1,20,600 ಮಿತಿಗೆ ಹಾಗೂ ಕುಟುಂಬ ನಿವೃತ್ತಿ ವೇತನದ ಗರಿಷ್ಠ ಮೊತ್ತವು ಮಾಸಿಕ ₹80,400 ಮಿತಿಗೆ ಒಳಪಟ್ಟಿದೆ.
3. ಮನೆ ಬಾಡಿಗೆ, ನಗರ ಪರಿಹಾರ ಹಾಗೂ ವೈದ್ಯಕೀಯ ಭತ್ಯೆ : ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬ೦ಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ. ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ.
ಇದನ್ನೂ ಓದಿ: ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಜಾರಿ? ಯಾರಿಗೆಲ್ಲ ಸಿಗಲಿದೆ ಇದರ ಲಾಭ? Old pension scheme for govt employees
4. ನೌಕರರ ಸಾಮೂಹಿಕ ವಿಮಾ ಯೋಜನೆ : ನೌಕರರ ಸಾಮೂಹಿಕ ವಿಮಾ ಯೋಜನೆಯು ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.
ದಿನಾ೦ಕ: 01-07-2022 ರಿಂದ 31-07-2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
8ne vetana ayoga saha c.m.siddaramayyanavare madali noukarara problems avrige channagi gothu adke avru yara mathigu bele kodade 7ne vetana ayogavu hege jari madi antha helidaro hage madidare thankyou sir 8th pay saha neeve madi siddaramayya sir please