ನಿರಂತರ ಗಗನಮುಖಿಯಾಗಿರುವ ಚಿನ್ನವು ಮತ್ತೆ ಏರುಗತಿ ಹಿಡಿದಿದೆ. ಇದೀಗ ಬಂಗಾರದ ಬೆಲೆ ಬರೋಬ್ಬರಿ 1 ಲಕ್ಷ ರೂ. ಸನಿಹಕ್ಕೆ ತಲುಪಿದೆ. ಈ ಕುರಿತ ನಿಖರವಾದ ವಿಶ್ಲೇಷಣೆ ಇಲ್ಲಿದೆ…
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಎತ್ತರಕ್ಕೆ ಏರುತ್ತಿದೆ. ಈ ವರ್ಷದ ಜನವರಿಯಿಂದ ನಿನ್ನೆ ಏಪ್ರಿಲ್ 16ರ ವರೆಗೆ ಕೇವಲ ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆ ₹18,710 ಏರಿಕೆಯಾಗಿದೆ. ಶೀಘ್ರದಲ್ಲಿಯೇ ಚಿನ್ನದ ಬೆಲೆ ₹1 ಲಕ್ಷದ ಗಡಿ ದಾಟಬಹುದು ಎಂಬ ನಿರೀಕ್ಷೆ ಇದೆ.
ನಿರಂತರ ಏರುಮುಖಿ ಆಗುತ್ತಿರುವ ಚಿನ್ನ
ನಿನ್ನೆ ಏಪ್ರಿಲ್ 16ರಂದು 24 ಕ್ಯಾರೆಟ್ ಚಿನ್ನದ ಬೆಲೆ ಒಂದೇ ದಿನ ₹1,650 ಏರಿಕೆಯಾಗಿ ₹98,100ಕ್ಕೆ ತಲುಪಿದ್ದು, ಹಿಂದಿನ ದಿನದ ದರ ₹96,450ಕ್ಕಿಂತ ಲಾಭದಾಯಕವಾಗಿದೆ. ಚಿನ್ನದ ದರದಲ್ಲಿ ಇಂಥ ತೀವ್ರ ಏರಿಕೆ ಅಪರೂಪ.
ಕಳೆದ ಏಪ್ರಿಲ್ 11ರಂದು ಕೂಡ ಚಿನ್ನದ ದರ ದಾಖಲೆಮಟ್ಟದಲ್ಲಿ ಅಂದರೆ ₹6,250 ಏರಿಕೆಯಾಗಿತ್ತು. 99.5% ಶುದ್ಧತೆಯ ಚಿನ್ನದ ಬೆಲೆಯೂ ₹1,650 ಏರಿಕೆಯಾಗಿ ₹97,650ಗೆ ತಲುಪಿದ್ದು, ಹಿಂದಿನ ₹96,000ಕ್ಕೆ ಹೋಲಿಸಿದರೆ ಇದು ಹೊಸ ಗರಿಷ್ಠ ಮಟ್ಟ.
Gold Loan- ಗೋಲ್ಡ್ ಲೋನ್ ಆರ್‌ಬಿಐ ಹೊಸ ನಿಯಮ | ಹೆಚ್ಚಲಿದೆ ಚಿನ್ನ ಸಾಲದ ಬೇಡಿಕೆ
ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹990 ಏರಿಕೆಯಾಗಿದ್ದು, ಇದೀಗ ₹96,170ಕ್ಕೆ ಮಾರಾಟವಾಗುತ್ತಿದೆ. ಇದೇ ತೂಕದ 22 ಕ್ಯಾರೆಟ್ ಚಿನ್ನ ₹950 ಏರಿಕೆಯಾಗಿದ್ದು ₹88,150ಗೆ ವ್ಯಾಪಾರವಾಗುತ್ತಿದೆ. ಮಾತ್ರವಲ್ಲದೆ ಬೆಳ್ಳಿ ಕೂಡ ಹತ್ತಿರದ ಪೈಪೋಟಿಯಲ್ಲಿ ಇದೆ. 1 ಕೆ.ಜಿ ಬೆಳ್ಳಿ ₹200 ಏರಿಕೆಯಿಂದ ₹1,00,000ಕ್ಕೆ ತಲುಪಿದೆ.
ಚಿನ್ನದ ದರ ಏರಿಕೆಗೆ ಪ್ರಮುಖ ಕಾರಣಗಳು
ಚಿನ್ನದ ದರ ಏರಿಕೆಯು ಅನೇಕ ಆಂತರಿಕ ಹಾಗೂ ಜಾಗತಿಕ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗೆ ಬಂಗಾರದ ಬೆಲೆಯನ್ನು ನಿಖರವಾಗಿ, ನಿರ್ಧಷ್ಟವಾಗಿ ಅಂದಾಜಿಸಲಾಗದಷ್ಟು ಬದಾವಣೆ ಕಾಣುತ್ತಿದೆ. ಚಿನ್ನದ ಬೆಲೆ ಏರಿಕೆಯ ಪ್ರಮುಖ ಕಾರಣಗಳನ್ನು ಈ ಕೆಳಗಿನಂತೆ ವಿವರಿಸಬಹುದು:
- ಅಮೆರಿಕ-ಚೀನಾ ತೆರಿಗೆ ಸಮರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಚೀನಾದೊಂದಿಗೆ ತೆರಿಗೆಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ಸಂಘರ್ಷ ಉಂಟಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭೀತಿಯ ವಾತಾವರಣ ಎದುರಾಗಿದೆ.
- ಡಾಲರ್ ಮೌಲ್ಯದ ಕುಸಿತ: ಡಾಲರ್ ಮೌಲ್ಯದಲ್ಲಿ ಇಳಿಕೆ ಕಂಡಾಗ, ಹೂಡಿಕೆದಾರರು ಚಿನ್ನದತ್ತ ತಿರುಗುತ್ತಾರೆ. ಏಕೆಂದರೆ ಚಿನ್ನದ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ನಲ್ಲಿ ನಿರ್ಧಾರವಾಗುತ್ತದೆ. ಡಾಲರ್ ಬಲವಾಗಿ ಇರದಿದ್ದರೆ, ಚಿನ್ನದ ಬೆಲೆ ರೂಪಾಯಿಯಲ್ಲಿ ಹೆಚ್ಚಾಗುತ್ತದೆ.
- ಬಾಂಡ್ ಮಾರುಕಟ್ಟೆ ಕುಸಿತ: ಅಮೆರಿಕದ ಬಾಂಡ್’ಗಳ ಲಾಭಾಂಶ ಇಳಿದಿರುವುದರಿಂದ, ನಿಕ್ಷೇಪದಾರರು ಹೆಚ್ಚು ಲಾಭದ ಆಶಯದಿಂದ ಚಿನ್ನದಲ್ಲಿ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಇದು ಚಿನ್ನದ ಮೇಲಿನ ಬೇಡಿಕೆಯನ್ನು ಹೆಚ್ಚಿಸಿದೆ.
- ಅಸ್ಥಿರ ಜಾಗತಿಕ ಆರ್ಥಿಕತೆ: ಇನ್ನು ಯುಕ್ರೇನ್-ರಷ್ಯಾ ಸಂಘರ್ಷ, ಮಿಡಿಲ್ ಈಸ್ಟ್ನ ರಾಜಕೀಯ ತೊಂದರೆಗಳು ಹಾಗೂ ಇಂಧನ ಬೆಲೆ ಏರಿಕೆ… ಇವೆಲ್ಲದರ ಪರಿಣಾಮವಾಗಿ ಹೂಡಿಕೆದಾರರು ಚಿನ್ನದಂತಹ ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿ ಹಳದಿ ಲೋಕದ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಅಕ್ಷಯ ತದಿಗೆಗೆ ಖರೀದಿ ಚುರುಕು
ಭಾರತದಲ್ಲಿ ಚಿನ್ನಕ್ಕೆ ಭೌತಿಕ ಮೌಲ್ಯದಷ್ಟೇ ಭಾವನಾತ್ಮಕ ಮೌಲ್ಯವೂ ಇದೆ. ತಾಯ್ನೆಲೆಯಿಂದ ಆರಂಭಿಸಿ, ವಿವಾಹ, ಉತ್ಸವ, ಹಬ್ಬಗಳ ವರೆಗೆ ಚಿನ್ನವು ಪ್ರಮುಖ ಭಾಗವಾಗಿದ್ದು, ಇದು ಭಾರತದ ಹೂಡಿಕೆ ಸಂಸ್ಕೃತಿಯ ಪ್ರಮುಖ ಅಂಗವಾಗಿದೆ.
ಸದ್ಯಕ್ಕೆ ಚಿನ್ನದ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತಾತ್ಕಾಲಿಕವಾಗಿ ಖರೀದಿಯಿಂದ ಹಿಂದೆ ಸರಿಯಬಹುದು. ಆದರೆ ಮದುವೆ ಮತ್ತು ಅಕ್ಷಯ ತೃತೀಯದಂತಹ ದಿನಗಳಲ್ಲಿ ಖರೀದಿ ಮತ್ತೆ ಚುರುಕುಗೊಳ್ಳುವುದು ನಿಶ್ಚಿತವಾಗಿದೆ.
ಮುಂದಿನ ದಿನಗಳಲ್ಲಿ ಏನಾಗಬಹುದು?
ಹೂಡಿಕೆ ತಜ್ಞರ ಪ್ರಕಾರ, ಚಿನ್ನದ ಬೆಲೆ ₹1 ಲಕ್ಷದ ಗಡಿಯನ್ನು ಶೀಘ್ರದಲ್ಲಿಯೇ ದಾಟಲಿದೆ. ವಿಶೇಷವಾಗಿ ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಮುಂದುವರೆದರೆ, ಚಿನ್ನದ ಮೇಲೆ ಇನ್ನಷ್ಟು ಗಗನಮುಖಿ ಆಗಬಹುದು.
ಹೂಡಿಕೆದಾರರಿಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವಂತೆ ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಚಿನ್ನವನ್ನು ಹೂಡಿಕೆಗಾಗಿ ಖರೀದಿಸುವ ಮೊದಲು, ಅದರ ದೀರ್ಘಕಾಲೀನ ದೃಷ್ಟಿಕೋನ ಹಾಗೂ ಮಾರುಕಟ್ಟೆಯ ಸ್ಥಿತಿಗೆ ಹೊಂದುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.
Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.