ಹಸು, ಕುರಿ, ಕೋಳಿ ಸಾಕಾಣಿಕೆ ಕುರಿತ ಊಟ, ವಸತಿ ಸಹಿತ ಸಂಪೂರ್ಣ ಉಚಿತ ತರಬೇತಿಗಾಗಿ (Free Training) ಅರ್ಜಿ ಆಹ್ವಾನಿಸಲಾಗಿದೆ. ಅಲ್ಲಿ ಸಲ್ಲಿಕೆಯ ಕುರಿತ ಮಾಹಿತಿ ಇಲ್ಲಿದೆ…
ಗ್ರಾಮೀಣ ಯುವಕರಿಗೆ ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ರುಡ್‌ಸೆಟ್ (RUDSETI) ಸಂಸ್ಥೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಡಿ ಹಸು, ಕುರಿ ಮತ್ತು ಕೋಳಿ ಸಾಕಾಣಿಕೆ ಕುರಿತ ಸಂಪೂರ್ಣ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Gruhalakshmi money released- ಗಣೇಶ ಚತುರ್ಥಿಗೆ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಿಡುಗಡೆ | ಜುಲೈ ತಿಂಗಳ ಹಣ ಜಮಾ
ತರಬೇತಿ ಆರಂಭದ ದಿನಾಂಕ
ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪಶುಸಂಗೋಪನೆ ಪ್ರಮುಖ ಆದಾಯದ ಮೂಲವಾಗಿದೆ. ಹಸು ಸಾಕಾಣಿಕೆ ಮೂಲಕ ಹಾಲು ಉತ್ಪಾದನೆ, ಕುರಿ ಸಾಕಾಣಿಕೆ ಮೂಲಕ ಮಾಂಸ ಮತ್ತು ಉಣ್ಣೆ ಉತ್ಪಾದನೆ ಹಾಗೂ ಕೋಳಿ ಸಾಕಾಣಿಕೆ ಮೂಲಕ ಮೊಟ್ಟೆ ಮತ್ತು ಮಾಂಸ ಉತ್ಪಾದನೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತಿದೆ.
ಈ ತರಬೇತಿಯಿಂದ ಯುವಕರು ಸ್ವಯಂ ಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಅವಕಾಶ ದೊರೆಯುತ್ತದೆ. ಸದರಿ ತರಬೇತಿ ಕಾರ್ಯಾಗಾರವು ಸೆಪ್ಟೆಂಬರ್ 8ರಿಂದ ಆರಂಭವಾಗಲಿದ್ದು, ಭಾಗವಹಿಸಲು ಇಚ್ಛಿಸುವವರು ತಮ್ಮ ಅರ್ಜಿಯನ್ನು ಕಡ್ಡಾಯವಾಗಿ ಆಗಸ್ಟ್ 30ರೊಳಗೆ ಸಲ್ಲಿಸಬೇಕಾಗಿದೆ.

ಯಾರಿಗೆ ಅವಕಾಶ?
ಈ ತರಬೇತಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷಗಳ ವರೆಗೆ ಇರಬೇಕು.
ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ತರಬೇತಿಯ ವೈಶಿಷ್ಟ್ಯಗಳು
ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ. ಹಸು, ಕುರಿ ಹಾಗೂ ಕೋಳಿ ಸಾಕಾಣಿಕೆಗೆ ಸಂಬAಧಿಸಿದ ತಾಂತ್ರಿಕ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುತ್ತದೆ.
ಸಾಕಾಣಿಕೆಯಲ್ಲಿ ವೆಚ್ಚ, ನಿರ್ವಹಣೆ, ಆರೋಗ್ಯ ಕಾಳಜಿ ಮತ್ತು ಮಾರುಕಟ್ಟೆ ಮಾಹಿತಿ ಕುರಿತು ಸಮಗ್ರ ಪಾಠ ಹೇಳಿ ಕೊಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಪಡೆದ ಪ್ರಮಾಣಪತ್ರ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್: 97409 82585 / 92414 82541 / 91138 80324
ರುಡ್‌ಸೆಟ್ ಸಂಸ್ಥೆಯ ಶಾಖಾ ನಿರ್ದೇಶಕರಾದ ರವಿಕುಮಾರ ಅವರು ಈ ಮಾಹಿತಿಯನ್ನು ನೀಡಿದ್ದು, ‘ಗ್ರಾಮೀಣ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಪಶುಸಂಗೋಪನೆ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಿ’ ಎಂದು ಕರೆ ನೀಡಿದ್ದಾರೆ.