ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯ (Karnataka Shakti Scheme) ಸ್ಮಾರ್ಟ್ ಕಾರ್ಡ್’ಗಳನ್ನು (Smart Card) ನೀಡುವ ಪ್ರಕ್ರಿಯೆಗೆ ಸರ್ಕಾರ ಸಜ್ಜಾಗಿದೆ. ಅರ್ಜಿ ಸಲ್ಲಿಕೆಯ ವಿಧಾನ, ಅರ್ಹತೆಗಳು, ಕಾರ್ಡ್ ವಿತರಣೆ ಸಮಯ ಕುರಿತ ಎಲ್ಲ ವಿವರಗಳು ಇಲ್ಲಿವೆ…
ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಗೆ ರಾಜ್ಯ ಸರ್ಕಾರ ಮತ್ತಷ್ಟು ಶಕ್ತಿ ನೀಡಲು ಮುಂದಾಗಿದೆ. ಸದರಿ ಯೋಜನೆ ಘೋಷಣೆಯಾದ ದಿನದಿಂದಲೇ ಸ್ಮಾರ್ಟ್ ಕಾರ್ಡ್ ವಿತರಣೆಯ ಬಗ್ಗೆ ಸರ್ಕಾರ ಹೇಳಿಕೊಂಡಿತ್ತು. ಆದರೆ ವಿವಿಧ ತಾಂತ್ರಿಕ ಕಾರಣಗಳಿಂದ ಕಾರ್ಡ್ ವಿತರಣೆ ಸಾಧ್ಯವಾಗಿರಲಿಲ್ಲ.
ಇದೀಗ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸರ್ಕಾರ ಮುಂದಾಗಿದೆ. ಸ್ಮಾರ್ಟ್ ಕಾರ್ಡ್ ವಿತರಣೆ ಕುರಿತು ಈಗಾಗಲೇ ಹಣಕಾಸು ಇಲಾಖೆಗೆ ಕಡತ ಹೋಗಿದ್ದು ಅನುಮತಿ ಒಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಟೆಂಡರ್ ಕೂಡ ಕರೆಯಲು ಸಾರಿಗೆ ಇಲಾಖೆ ಮುಂದಾಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee scheme) ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ನಡೆದುಕೊಂಡು ಬರುತ್ತಿರುವ ‘ಶಕ್ತಿ ಯೋಜನೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದರಿ ಯೋಜನೆ ಅಡಿಯಲ್ಲಿ ನಿತ್ಯವೂ ಲಕ್ಷಾಂತರ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…
ಸ್ಮಾರ್ಟ್ ಕಾರ್ಡ್ ಏಕೆ?
ಇಷ್ಟು ದಿನ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಆದರೆ ಕಂಡಕ್ಟರ್‌ಗಳ ಅವ್ಯವಹಾರ, ಮಹಿಳೆಯರ ರಂಪ ರಗಳೆಗಳು ತೀವ್ರವಾಗುತ್ತಿದ್ದು; ಸಾರಿಗೆ ಸಂಸ್ಥೆಗೆ ಕೂಡ ಇದರಿಂದ ನಷ್ಟ ಉಂಟಾಗುತ್ತಿದೆ. ಹೀಗಾಗಿ ಸ್ಮಾಟ್ ಕಾರ್ಡ್ ನೀಡುವುದು ಅನಿವಾರ್ಯವಾಗಿದೆ.

ಇತ್ತೀಚೆಗೆ ಶಕ್ತಿ ಯೋಜನೆ ಹೆಸರಿನಲ್ಲಿ ಕೆಲವು ನಿರ್ವಾಹಕರು ಗೋಲ್‌ಮಾಲ್ ಮಾಡುತ್ತಿದ್ದಾರೆ ಎಂಬ ಗಂಭೀರ ದೂರುಗಳು ಕೇಳಿ ಬರುತ್ತಿವೆ. ಅದರ ಜತೆಗೆ ಕೆಲ ಮಹಿಳೆಯರು ಉಚಿತ ಟಿಕೆಟ್ ಪಡೆಯಲು ಸಂಬಂಧಪಟ್ಟ ದಾಖಲೆ ತೋರಿಸದೆ, ನಿರ್ವಾಹಕರೊಂದಿಗೆ ಜಗಳಕ್ಕಿಳಿಯುವ ಪ್ರಕರಣಗಳು ಕೂಡ ನಡೆಯುತ್ತಿವೆ.
ಶಕ್ತಿ ಯೋಜನೆಯಿಂದಾಗುವ ಆದಾಯ ಸೋರಿಕೆ ತಡೆ ಹಾಗೂ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವಿನ ವಾಗ್ವಾದ, ಗದ್ದಲಗಳಿಗೆ ಕಡಿವಾಣ ಹಾಕಲು ಸ್ಮಾರ್ಟ್ ಕಾರ್ಡ್’ಗಳನ್ನು ಪ್ರಯಾಣಿಕರಿಗೆ ವಿತರಿಸುವ ಕುರಿತು ಸರ್ಕಾರದ ತಯಾರಿ ನಡೆಸಿದೆ.
Govt Loan Schemes- ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು
ಸ್ಮಾರ್ಟ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಹೇಗೆ?
ಈಗ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅದೇ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಿ ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹೀಗಾಗಿ ಸ್ಮಾರ್ಟ್ ಕಾರ್ಡ್ ಪಡೆಯುವ ವೇಳೆ ನಕಲಿ ಆಧಾರ್ ಕಾರ್ಡ್ ನೀಡಿ ಸಿಕ್ಕಿ ಬಿದ್ದರೆ ಅರ್ಜಿಯನ್ನೇ ರದ್ದುಗೊಳಿಸುವ ಸಾಧ್ಯತೆ ಇರಲಿದೆ.
ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಗ್ರಾಮಒನ್, ಕರ್ನಾಟಕಒನ್ ಅಥವಾ ಬೆಂಗಳೂರುಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಿದ ನಂತರ ಸ್ಮಾರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಹತೆಗಳೇನು?
ಸ್ಮಾರ್ಟ್ ಕಾರ್ಡ್ ವಿತರಣೆಯಿಂದ ಮಹಿಳೆಯರಿಗೆ ಆಧಾರ್ ಕಾರ್ಡ್ ಇಟ್ಟುಕೊಂಡು ಪ್ರಯಾಣ ಮಾಡುವ ಕಿರಿಕಿರಿ ತಪ್ಪಲಿದೆ. ಸಾರಿಗೆ ಬಸ್‍ನಲ್ಲಿ ಪ್ರಯಾಣಿಸುವ ರಾಜ್ಯದ ಮಹಿಳೆಯರು ಇನ್ಮುಂದೆ ಸ್ಮಾರ್ಟ್ ಕಾರ್ಡ್ ತೋರಿಸಿದರೆ ಸಾಕು, ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.
ಪ್ರಮುಖವಾಗಿ ಸ್ಮಾರ್ಟ್ ಕಾರ್ಡ್ ಪಡೆಯುವ ಮಹಿಳೆಯರು ಕರ್ನಾಟಕದ ನಿವಾಸಿಯಾಗಿರಬೇಕು. ಅಂದರೆ ಆಕೆಯ ಆಧಾರ್ ಕಾರ್ಡ್’ನಲ್ಲಿ ಕರ್ನಾಟಕದ ವಿಳಾಸ ಇರಬೇಕು. ಇನ್ನೆರಡು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಮಹಿಳೆಯರ ಕೈ ಸೇರಲಿದೆ. ಇದಕ್ಕಾಗಿ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ ಎನ್ನಲಾಗುತ್ತಿದೆ.
Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…