Financial Rule Changes- ಜೂನ್ 1ರಿಂದ ಎಲ್‌ಪಿಜಿ ಸಿಲಿಂಡರ್, ಎಟಿಎಂ, ಕ್ರೆಡಿಟ್ ಕಾರ್ಡ್ ನಿಯಮಗಳು ಬದಲು | ಎಲ್ಲರೂ ತಿಳಿದಿರಬೇಕಾದ ಮಾಹಿತಿ

Spread the love

ಇದೇ ಜೂನ್ 1ರಿಂದ ಪ್ರಮುಖ ಹಣಕಾಸು ನಿಯಮಗಳಲ್ಲಿ (Financial Rule Changes) ಬದಲಾವಣೆಯಾಗಲಿದ್ದು; ಯಾವೆಲ್ಲ ನಿಯಮ ಬದಲಾಗಲಿವೆ? ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಪ್ರತಿ ತಿಂಗಳ ಮೊದಲ ದಿನಾಂಕದಲ್ಲಿ ಹಲವಾರು ಹಣಕಾಸು ಹಾಗೂ ಸೇವಾ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಅದರಂತೆ ಈ ಜೂನ್ 1, 2025 ರಿಂದಲೂ ಕೆಲವು ಹಣಕಾಸು ನಿಯಮಗಳು ಬದಲಾವಣೆ ಆಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದಿನನಿತ್ಯದ ಜೀವನ ಹಾಗೂ ಹಣಕಾಸು ಯೋಜನೆಗಳ ಮೇಲೆ ನೇರ ಪರಿಣಾಮ ಬೀರುವ ಸಂಭವವಿದ್ದು; ಜೂನ್ 1ರಿಂದ ಏನೆಲ್ಲಾ ಬದಲಾಗಲಿದೆ ಎಂಬುದನ್ನು ಇಲ್ಲಿ ನೋಡೋಣ…

1. ಇಪಿಎಫ್‌ಒ (EPFO) ಸೇವೆಗಳ ಸುಧಾರಣೆ

ಸರ್ಕಾರ EPFO Version 3.0 ಅನ್ನು ಜೂನ್ 1 ರಿಂದ ಆರಂಭಿಸುವ ಸಾಧ್ಯತೆಯಿದೆ. ಈ ಹೊಸ ವ್ಯವಸ್ಥೆಯಿಂದ ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆ ಹೆಚ್ಚು ವೇಗವಾಗುತ್ತದೆ. ಹೆಚ್ಚು ಡಿಜಿಟಲ್ ಆಗುವುದರಿಂದ ಪಿಎಫ್ ಕ್ಲೈಮ್ ಮಾಡಲು ದಾಖಲೆ ಸಲ್ಲಿಕೆ, ವಿವರಗಳನ್ನು ನವೀಕರಿಸುವ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ.

ಭವಿಷ್ಯದಲ್ಲಿ ATM ಕಾರ್ಡ್ ಮಾದರಿಯ EPFO ಕಾರ್ಡ್ ಮೂಲಕ ನೇರವಾಗಿ ಹಣ ಎತ್ತುವ ವ್ಯವಸ್ಥೆ ಜಾರಿಗೆ ಬರಲಿದೆ. ಉದ್ಯೋಗಿಗಳ ಜೀವಿತ ಬದಲಾವಣೆಯ ಸಂದರ್ಭದಲ್ಲಿ ತ್ವರಿತ ಹಣ ಹಿಂಪಡೆಯುವ ಸೌಲಭ್ಯ ಲಭ್ಯವಾಗಲಿದೆ.

Guarantee Scheme Verification- ಜುಲೈ 2025ರಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಬಂದ್ | ಗೃಹಲಕ್ಷ್ಮಿ, ಗೃಹಜ್ಯೋತಿ ನೆರವಿಗೆ ಕುತ್ತು

2. ಕ್ರೆಡಿಟ್ ಕಾರ್ಡ್ ಬಳಕೆಗೆ ಹೊಸ ನಿಯಮಗಳು

ಜೂನ್ 1ರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ನೇರವಾಗಿ ಬಾಧಕವಾಗುವ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಆಟೋ-ಡೆಬಿಟ್ ವಿಫಲವಾದರೆ, ಕಾರ್ಡ್ ಕಂಪನಿಗಳು 2% ವರೆಗೆ ದಂಡ ವಿಧಿಸಬಹುದು.

ಯುಟಿಲಿಟಿ ಬಿಲ್ (ವಿದ್ಯುತ್, ನೀರು) ಅಥವಾ ಇಂಧನ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆ. ಅಂತರರಾಷ್ಟ್ರೀಯ ವಹಿವಾಟುಗಳಿಗೆ ಹೆಚ್ಚುವರಿ foreign transaction fees ವಿಧಿಸಬಹುದು.

ನಿಮ್ಮ ಕ್ರೆಡಿಟ್ ಕಾರ್ಡ್ ನಿಯಮಗಳು, ಫೀಸ್ ಮತ್ತು ರಿವಾರ್ಡ್ ಪಾಯಿಂಟ್ ತಿದ್ದುಪಡಿ ಕುರಿತು ಬ್ಯಾಂಕ್‌ನಿಂದ ಮಾಹಿತಿ ಪಡೆದು ಮುಂಚಿತವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಇದೇ ಜೂನ್ 1ರಿಂದ ಪ್ರಮುಖ ಹಣಕಾಸು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು; ಯಾವೆಲ್ಲ ನಿಯಮ ಬದಲಾಗಲಿವೆ? ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ...
Financial Rule Changes June 1 2025
3. ಎಟಿಎಂನಿಂದ ಹಣ ಡ್ರಾ ದುಬಾರಿ

ಹಾಗೇನೇ ಎಟಿಎಂ ಬಳಕೆ ಎಲ್ಲೆಲ್ಲೂ ಸಾಮಾನ್ಯವಾಗಿದೆ. ಆದರೆ ಜೂನ್ 1 ರಿಂದ ಪ್ರತಿದಿನ ಅಥವಾ ಪ್ರತಿ ತಿಂಗಳಿಗೆ ನಿಗದಿಪಡಿಸಿರುವ ಉಚಿತ ಎಟಿಎಂ ವಹಿವಾಟುಗಳ (Free ATM Transactions) ಮಿತಿಯ ನಂತರ, ಹೆಚ್ಚಿದ ಪ್ರಮಾಣದ ಶುಲ್ಕ ವಿಧಿಸಲಾಗಬಹುದು.

ಈಗಾಗಲೇ ಕೆಲವು ಬ್ಯಾಂಕುಗಳು ಪ್ರತಿ ಹೆಚ್ಚುವರಿ ವಹಿವಾಟಿಗೆ ₹20-₹25 ವರೆಗಿನ ಶುಲ್ಕ ವಿಧಿಸುತ್ತಿವೆ. ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಡಿಜಿಟಲ್ ಪಾವತಿ ವಿಧಾನಗಳ ಬಳಕೆ ಹೆಚ್ಚಿಸಿ, ಎಟಿಎಂ ಬಳಕೆಯ ಅವಶ್ಯಕತೆಯನ್ನು ತಗ್ಗಿಸಿಕೊಳ್ಳಿ.

e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ

4. LPG ಸಿಲಿಂಡರ್ ದರ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸಮೀಕ್ಷೆ ಆಧಾರಿತವಾಗಿ ನಿಗದಿಯಾಗುತ್ತವೆ. ಜೂನ್ 1ರಂದು ಗ್ಯಾಸ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರದ ಮೇಲೆ ಆಧಾರವಿರುತ್ತದೆ.

ಕಳೆದ ಕೆಲವು ತಿಂಗಳಿನಿಂದ ಸಬ್ಸಿಡಿಯ ಶ್ರೇಣಿಯಲ್ಲಿಯೇ ಸಿಲಿಂಡರ್‌ಗಳ ಬೆಲೆ ನಿಯಂತ್ರಿತವಾಗಿತ್ತು, ಆದರೆ ಕ್ರೂಡ್ ಆಯಿಲ್ ಬೆಲೆ ಏರಿಕೆ ಕಾರಣ ಇಂದಿನ ಬೆಲೆ ಏರಿಕೆ ಸಾಧ್ಯ. ಸಬ್ಸಿಡಿ ಸಿಲಿಂಡರ್‌ಗಳನ್ನು ಬಳಸುವ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ಈ ಬದಲಾವಣೆ ಹೆಚ್ಚು ಪರಿಣಾಮ ಬೀರುತ್ತದೆ.

5. Fixed Deposit (FD) ಬಡ್ಡಿದರ ಇಳಿಕೆ

ಜೂನ್ 6 ರಂದು ಆರ್‌ಬಿಐ ಮಾನಿಟರಿ ಪಾಲಿಸಿ ಸಮಿತಿ (MPC) ಸಭೆ ನಡೆಯಲಿದೆ. ಈ ಸಭೆಯಲ್ಲಿ ರೆಪೊ ದರ ಕಡಿತ ಮಾಡುವ ನಿರೀಕ್ಷೆ ಇದೆ. ರೆಪೊ ದರ ಕಡಿತವಾದರೆ ಬ್ಯಾಂಕುಗಳು ಈಆ ಬಡ್ಡಿದರವನ್ನು ಕಡಿಮೆ ಮಾಡುತ್ತವೆ.

ಈಗಾಗಲೇ SBI, HDFC, ICICI, Axis ಬ್ಯಾಂಕುಗಳು ಬಡ್ಡಿದರ ಕಡಿತ ಆರಂಭಿಸಿದ್ದು, ಮುಂದುವರೆಯುವ ಸಾಧ್ಯತೆ. ಹೊಸ ಎಫ್‌ಡಿ ತೆರೆಯುವ ಮುನ್ನ ಹೊಸ ಬಡ್ಡಿದರಗಳನ್ನು ಪರಿಶೀಲಿಸಿ. ಬಡ್ಡಿದರ ಲಾಕಿಂಗ್ ಕಲ್ಪನೆಯೊಂದಿಗೆ ಹೆಚ್ಚಿನ ಬಡ್ಡಿ ನೀಡುವ ಯೋಜನೆಗಳತ್ತ ಗಮನ ಹರಿಸಿ.

Sub Registrar Weekend Property Registration- ಜೂನ್ 1ರಿಂದ ಸಬ್ ರಿಜಿಸ್ಟ್ರಾರ್ ಕಚೇರಿ ನಿಯಮ ಬದಲು | ಇನ್ಮುಂದೆ ರಜಾ ದಿನಗಳಲ್ಲೂ ಆಸ್ತಿ ನೋಂದಣಿ

6. GST ಇನ್‌ವಾಯ್ಸ್ ನಿಯಮ ಬದಲಾವಣೆ

ಜಿಎಸ್‌ಟಿ ನೆಟ್‌ವರ್ಕ್ (GSTN) ಜೂನ್ 1ರಿಂದ ಇನ್‌ವಾಯ್ಸ್ ಸಂಖ್ಯೆಗಳ ನಿಯಮದಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಇನ್‌ವಾಯ್ಸ್ ಸಂಖ್ಯೆ ಕೇಸ್-ಇನ್‌ಸೆನ್ಸಿಟಿವ್ ಆಗಿದೆ. ಅಂದರೆ, ‘ABC123’ ಮತ್ತು ‘abc123’ ಒಂದೇ ಎಂದು ಪರಿಗಣಿಸಲಾಗುವುದು.

ಇದು ನಕಲಿ ಇನ್‌ವಾಯ್ಸ್ ಸಂಖ್ಯೆಗಳ ತಯಾರಿಕೆಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ಇನ್ಮುಂದೆ ಇನ್‌ವಾಯ್ಸ್ ಸಂಖ್ಯೆಗಳು ಸ್ವಯಂಚಾಲಿತವಾಗಿ ಅಪ್ಪರ್ ಕೇಸ್ (Capital Letters) ಆಗಿ ಪರಿವರ್ತನೆಗೊಳ್ಳುತ್ತವೆ. ಇದರಿಂದ ಲೆಕ್ಕಪತ್ರದ ಲೆಕ್ಕಾಚಾರ ಸ್ಪಷ್ಟವಾಗಿ ಸಾಗುತ್ತದೆ ಮತ್ತು ಟ್ಯಾಕ್ಸ್ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ.

ಜೂನ್ 1, 2025ರಿಂದ ಜಾರಿಗೆ ಬರುವ ಈ 6 ಪ್ರಮುಖ ಬದಲಾವಣೆಗಳು ನಿಮ್ಮ ದೈನಂದಿನ ಹಣಕಾಸು ನಿರ್ವಹಣೆ, ಸೇವೆಗಳ ಬಳಕೆ ಹಾಗೂ ಹೂಡಿಕೆಗಳಿಗೆ ನೇರ ಸಂಬಂಧ ಹೊಂದಿವೆ. ಆದ್ದರಿಂದ ನಿಮ್ಮ ಬಜೆಟ್ ಮತ್ತು ಹೂಡಿಕೆ ಯೋಜನೆಗಳನ್ನು ಈ ಬೆಳವಣಿಗೆಯ ಪ್ರಕಾರ ಪರಿಷ್ಕರಿಸಿಕೊಳ್ಳಿ. ಅವಶ್ಯಕ ಸೇವೆಗಳು ಅಥವಾ ಖರ್ಚುಗಳು ಇರುವಂತಾದರೆ, ಜೂನ್ 1ರ ಮೊದಲು ಮುಕ್ತಾಯಗೊಳಿಸಿ.

Bank Holidays June 2025- ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ | ದಿನಾಂಕವಾರು ಮಾಹಿತಿ ಮತ್ತು ಉಪಯುಕ್ತ ಸಲಹೆ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!