District Court Recruitment 2026: ಜಿಲ್ಲಾ ನ್ಯಾಯಾಲಯದ ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಹತೆ, ವಯೋಮಿತಿ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ…
ಸರ್ಕಾರಿ ಉದ್ಯೋಗ (Government Job) ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇದು ಒಳ್ಳೆಯ ಅವಕಾಶ. ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಶೇಷವಾಗಿ ಎಸ್ಎಸ್ಎಲ್ಸಿ ಪಾಸಾದವರಿಗೆ ಇದು ಒಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿ ಪ್ರಕ್ರಿಯೆ ‘ನೇರ ನೇಮಕಾತಿ’ (Direct Recruitment) ಆಧಾರದ ಮೇಲೆ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Rain Forecast March: ರಾಜ್ಯದಲ್ಲಿ ಮಾರ್ಚ್ 27ರ ವರೆಗೆ ಮಳೆ ಮುನ್ಸೂಚನೆ | 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್
ಹುದ್ದೆಗಳ ವಿವರ (Post Details)
ಈ ನೇಮಕಾತಿಯಲ್ಲಿ ಎರಡು ಪ್ರಮುಖ ಹುದ್ದೆಗಳು ಒಳಗೊಂಡಿವೆ:
- ಆದೇಶ ಜಾರಿಕಾರ (Process Server): ಒಟ್ಟು 09 ಹುದ್ದೆಗಳು ಖಾಲಿ ಇದ್ದು; ನ್ಯಾಯಾಲಯದ ಆದೇಶಗಳನ್ನು ಸಂಬAಧಿಸಿದ ವ್ಯಕ್ತಿಗಳಿಗೆ ತಲುಪಿಸುವ ಜವಾಬ್ದಾರಿ ಈ ಹುದ್ದೆಗೆ ನೇಮಕವಾದವರು ಹೊಂದಿರುತ್ತಾರೆ.
- ಜವಾನ (Peon): ಒಟ್ಟು 05 ಹುದ್ದೆಗಳಿದ್ದು; ಕಚೇರಿ ಸಹಾಯಕ ಕಾರ್ಯಗಳು, ದಾಖಲೆಗಳನ್ನು ಸಾಗಿಸುವುದು ಮತ್ತು ದಿನನಿತ್ಯದ ಕಾರ್ಯಗಳಿಗೆ ಸಹಕರಿಸುವುದು ಈ ಹುದ್ದೆಯ ಮುಖ್ಯ ಕೆಲಸ.
ವಿದ್ಯಾರ್ಹತೆ (Educational Qualification)
- ಅಭ್ಯರ್ಥಿಗಳು ಕನಿಷ್ಠ ಎಸ್ಎಸ್ಎಲ್ಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಆದೇಶ ಜಾರಿಕಾರ ಹುದ್ದೆಗೆ ಲಘು ವಾಹನ ಚಾಲನಾ ಪರವಾನಿಗೆ (Driving License)ಇದ್ದರೆ ಹೆಚ್ಚುವರಿ ಆದ್ಯತೆ ದೊರೆಯುತ್ತದೆ.
- ಜವಾನ ಹುದ್ದೆಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
ವೇತನ ಶ್ರೇಣಿ (Salary Details)
- ಆದೇಶ ಜಾರಿಕಾರ ಹುದ್ದೆಗೆ: ₹31,775 ರಿಂದ ₹61,300
- ಜವಾನ ಹುದ್ದೆಗೆ: ₹27,000 ರಿಂದ ₹46,675
ಜೊತೆಗೆ ಸರ್ಕಾರದ ನಿಯಮಾನುಸಾರ ಇತರ ಭತ್ಯೆಗಳು (Allowances) ಕೂಡ ಅನ್ವಯವಾಗಲಿವೆ.
ಇದನ್ನೂ ಓದಿ: Karnataka March Pension Delay: ಕರ್ನಾಟಕ ಪಿಂಚಣಿ ಹಣ ತಡ | ಕಾರಣ ಏನು? ಯಾವಾಗ ಜಮಾ ಆಗುತ್ತದೆ? ಸಂಪೂರ್ಣ ಮಾಹಿತಿ
ವಯೋಮಿತಿ (Age Limit)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಹೊಂದಿರಬೇಕು. ಗರಿಷ್ಠ ವಯಸ್ಸು ಸಾಮಾನ್ಯ ವರ್ಗ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪ.ಜಾ / ಪ.ಪಂ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.
ಎಲ್ಲಾ ವರ್ಗಗಳಿಗೆ ಹೆಚ್ಚುವರಿಯಾಗಿ 5 ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಮಾಜಿ ಸೈನಿಕರಿಗೆ ಸೇವಾ ವರ್ಷ + 3 ವರ್ಷ, ಅಂಗವಿಕಲರು, ವಿಧವೆಯರು, ಜೀತ ಕಾರ್ಮಿಕರಿಗೆ 10 ವರ್ಷಗಳ ವಯೋ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ (Application Fee)
- ಸಾಮಾನ್ಯ ವರ್ಗ: ₹200
- ಪ್ರವರ್ಗ 2ಎ, 2ಬಿ, 3ಎ, 3ಬಿ: ₹100
- ಪ.ಜಾ / ಪ.ಪಂ / ಅಂಗವಿಕಲರು: ₹100
ಶುಲ್ಕವನ್ನು ಆನ್ಲೈನ್ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸಬಹುದು.

ಪ್ರಮುಖ ದಿನಾಂಕಗಳು (Important Dates)
- ಅರ್ಜಿಯ ಆರಂಭ ದಿನಾಂಕ: 13-03-2026
- ಕೊನೆಯ ದಿನಾಂಕ: 12-04-2026 (ರಾತ್ರಿ 11:59)
- ಶುಲ್ಕ ಪಾವತಿ ಕೊನೆಯ ದಿನಾಂಕ: 13-04-2026
ಆಯ್ಕೆ ಪ್ರಕ್ರಿಯೆ (Selection Process)
ಅಭ್ಯರ್ಥಿಗಳ ಆಯ್ಕೆ ಸಾಮಾನ್ಯವಾಗಿ ದಾಖಲೆ ಪರಿಶೀಲನೆ (Document Verification), ಸಂದರ್ಶನ (Interview) ಅಥವಾ ಮೆರಿಟ್ (Merit List) ಆಧಾರಿತ ಆಯ್ಕೆ ನಡೆಯಲಿದೆ. ಹುದ್ದೆಯ ಪ್ರಕಾರ ಆಯ್ಕೆ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.
ಇದನ್ನೂ ಓದಿ: Uchita Thotagarike Tarabeti: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ | ರೈತ ಮಕ್ಕಳಿಗೆ ಅವಕಾಶ
ಅರ್ಜಿ ಸಲ್ಲಿಸುವ ವಿಧಾನ (How to Apply)
- ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ನೇಮಕಾತಿ ವಿಭಾಗ ತೆರೆದುಕೊಳ್ಳಿ.
- ಸಂಬಂಧಿಸಿದ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಮುಖ್ಯ ಸೂಚನೆ (Important Note)
- ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆ (Official Notification) ಸಂಪೂರ್ಣವಾಗಿ ಓದುವುದು ಅಗತ್ಯ.
- ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
- ತಪ್ಪಾದ ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗಬಹುದು.
ಎಸ್ಎಸ್ಎಲ್ಸಿ ಪಾಸಾದವರಿಗೆ ಕಡಿಮೆ ವಿದ್ಯಾರ್ಹತೆಯಲ್ಲಿ ಉತ್ತಮ ಸರ್ಕಾರಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ವಿಶೇಷವಾಗಿ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಗೆ ಈ ನೇಮಕಾತಿ ಇನ್ನಷ್ಟು ಅನುಕೂಲಕರವಾಗಿದೆ. ಆದ್ದರಿಂದ, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?
ಪ್ರಮುಖ ಲಿಂಕುಗಳು
ಆದೇಶ ಜಾರಿಕಾರ ಹುದ್ದೆ
- ಅಧಿಸೂಚನೆ: Download
- ಅರ್ಜಿ ಲಿಂಕ್ : Apply ಮಾಡಿ
ಜವಾನ ಹುದ್ದೆ
- ಅಧಿಸೂಚನೆ : Download
- ಅರ್ಜಿ ಲಿಂಕ್ : Apply ಮಾಡಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.