ಬಹುದಿನಗಳಿಂದ ಕಾಯುತ್ತಿದ್ದ ಸಿಬಿಎಸ್‌ಸಿ (CBSE) 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗಿದೆ. ರಿಸೆಲ್ಟ್ ವೀಕ್ಷಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ರ ಸಿಬಿಎಸ್‌ಇ 12ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ಈಗ ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರವೇಶಿಸಬಹುದು.
ಫೆಬ್ರವರಿ 15ರಿಂದ ಏಪ್ರಿಲ್ 4ರ ವರೆಗೆ ಭಾರತದಾದ್ಯಂತ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸುಮಾರು 44 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಳೆದ ವರ್ಷದ ಫಲಿತಾಂಶಗಳನ್ನು ಮೇ 13 ರಂದು ಘೋಷಿಸಲಾಯಿತ್ತ. ಈ ವರ್ಷ ಕೂಡ ಅದೇ ದಿನ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ.
ನಿಮ್ಮ ಫಲಿತಾಂಶವನ್ನು ಹೇಗೆ ಪರಿಶೀಲಿಸಿ…
2025ರ ಸಿಬಿಎಸ್‌ಇ ಬೋರ್ಡ್ ಕ್ಲಾಸ್ 12ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಲು, ಅಭ್ಯರ್ಥಿಗಳು ಈ ಸರಳ ಹಂತಗಳನ್ನು ಅನುಸರಿಸಬಹುದು:
- ಅಧಿಕೃತ ವೆಬ್‌ಸೈಟ್ results.cbse.gov.in, results.cbse.nic.in, ಅಥವಾ cbseresults.nic.inಗೆ ಭೇಟಿ ನೀಡಿ.
- ಮುಖಪುಟದಲ್ಲಿ ಲಭ್ಯವಿರುವ ‘ಸಿಬಿಎಸ್‌ಇ ಬೋರ್ಡ್ ಕ್ಲಾಸ್ 12 ಫಲಿತಾಂಶ 2025’ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ಸೇರಿದಂತೆ ನಿಮ್ಮ ವಿವರಗಳನ್ನು ನಮೂದಿಸಿ.
- ನಿಮ್ಮ ಸಿಬಿಎಸ್‌ಇ ಬೋರ್ಡ್ 12ನೇ ತರಗತಿಯ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಪ್ರತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟೌಟ್ ತೆಗೆದುಕೊಳ್ಳಿ.
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯಲ್ಲಿರುವ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಮತ್ತು ಯಾವುದೇ ವ್ಯತ್ಯಾಸಗಳಿದ್ದಲ್ಲಿ ಸಿಬಿಎಸ್‌ಇ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಹೆಚ್ಚಿನ ಟ್ರಾಫಿಕ್‌ನಿಂದಾಗಿ ಸಿಬಿಎಸ್‌ಇ ಫಲಿತಾಂಶ ವೆಬ್‌ಸೈಟ್‌ಗೆ ಪ್ರವೇಶಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ತಮ್ಮ ಅಂತಿಮ ಅಂಕಪಟ್ಟಿಯನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು DigiLocker ಅನ್ನು ಬಳಸಬಹುದು. ಸರ್ಕಾರವು ಸಿಬಿಎಸ್‌ಇ 2025 ರ ಫಲಿತಾಂಶಗಳನ್ನು UMANG ಅಪ್ಲಿಕೇಶನ್‌ನಲ್ಲಿಯೂ ಲಭ್ಯವಾಗುವಂತೆ ಮಾಡಿದೆ.
ಉತ್ತೀರ್ಣತಾ ಮಾನದಂಡ ಮತ್ತು ಗ್ರೇಸ್ ಮಾರ್ಕ್ಸ್
ವಿದ್ಯಾರ್ಥಿಗಳು ಶೇಕಡಾ 33% ಅಂಕಗಳನ್ನು ಗಳಿಸಿದ್ದರೆ ಅವರನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ. ಆದರೆ, ಈ ಮಾನದಂಡವನ್ನು ಪೂರೈಸಲು 1 ಅಥವಾ 2 ಅಂಕಗಳ ಕೊರತೆಯಿದ್ದರೆ, ವಿದ್ಯಾರ್ಥಿಗೆ ಗ್ರೇಸ್ ಮಾರ್ಕ್ಸ್ (Grace Marks) ನೀಡುವ ಮೂಲಕ ಉತ್ತೀರ್ಣಗೊಳಿಸುವ ಸಾಧ್ಯತೆ ಇದೆ. ಇದು ಸಿಬಿಎಸ್‌ಇಯ ನಿಗದಿತ ಮಾರ್ಗಸೂಚಿ ಆಧಾರಿತ ತೀರ್ಮಾನವಾಗಿರುತ್ತದೆ.
ಬದಲಾವಣೆಯಾದ ಗ್ರೇಡಿಂಗ್ ಪದ್ಧತಿ
2024-25ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಅತಿದೊಡ್ಡ ಸ್ಪರ್ಧಾತ್ಮಕತೆಯಿಂದ ದೂರವಿರಿಸುವ ಉದ್ದೇಶದಿಂದ ಶ್ರೇಣೀಕರಣ ವಿಧಾನದಲ್ಲಿ ಬದಲಾವಣೆ ತರಲಾಗಿದೆ.
ಇದುವರೆಗೆ ಬಳಸುತ್ತಿದ್ದ ಸ್ಥಿರ ಶ್ರೇಣೀಕರಣ (Fixed Grading) ಪದ್ಧತಿಯ ಬದಲು ಈಗ ಸಾಪೇಕ್ಷ ಶ್ರೇಣೀಕರಣ (Relative Grading) ವಿಧಾನವನ್ನು ಅನುಸರಿಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಅಂಕಗಳ ಹಂಚಿಕೆ ಆಧರಿಸಿ ಶ್ರೇಣಿಗಳು ನಿಗದಿಯಾಗುತ್ತವೆ. ಉದಾಹರಣೆಗೆ ಈ ಕೆಳಗಿನಂತೆ ಗ್ರೇಡ್ ಮುಂದುವರೆಯುತ್ತದೆ:
- A1: 91-100%
- A2: 81-90%
- B1: 71-80%
- B2: 61-70%
- C1: 51-60%
- C2: 41-50%
- D: 33-40%
- E1/ಇ2: 33ಕ್ಕಿಂತ ಕಡಿಮೆ (ಅನುತ್ತೀರ್ಣ)
ಫಲಿತಾಂಶ ವೀಕ್ಷಿಸಲು ಉಪಯುಕ್ತ ಜಾಲತಾಣಗಳು
ಸಿಬಿಎಸ್‌ಇ ಫಲಿತಾಂಶಗಳನ್ನು ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ಜಾಲತಾಣಗಳಲ್ಲಿ ಪರಿಶೀಲಿಸಬಹುದು:
DigiLocker ಮೂಲಕ ಅಂಕಪಟ್ಟಿ ಡೌನ್‌ಲೋಡ್
ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಿಬಿಎಸ್‌ಇಯಿಂದ ಲಭಿಸುವ SMS ಮೂಲಕ ಡಿಜಿಲಾಕರ್ ಲಾಗಿನ್ ವಿವರಗಳನ್ನು ಪಡೆಯುತ್ತಾರೆ. ಈ ಮಾಹಿತಿಯೊಂದಿಗೆ, ವಿದ್ಯಾರ್ಥಿಗಳು ಡಿಜಿಲಾಕರ್‌ನ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಲಾಗಿನ್ ಆಗಿ ತಮ್ಮ ಅಂಕಪಟ್ಟಿ (Marksheet) ಮತ್ತು ಪ್ರಮಾಣಪತ್ರ (Certificate) ಡಿಜಿಟಲ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.