2025ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶ (CBSE 10th-12th Results 2025) ಪ್ರಕಟಣೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಈ ವಾರ 10ನೇ ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷಾ ಫಲಿತಾಂಶಗಳನ್ನು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಫಲಿತಾಂಶ ಪ್ರಕಟಣೆಗೆ ದಿನಗಣನೆ ಶುರುವಾಗಿದೆ.
ಕಳೆದ ವರ್ಷ 2024ರಲ್ಲಿ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಮೇ 13ರಂದು ಪ್ರಕಟಿಸಲಾಗಿತ್ತು. ಈ ವರ್ಷ ಕೂಡ ಹೆಚ್ಚೂ ಕಮ್ಮಿ ಅದೇ ದಿನದ ಹಿಂದಿನ ಅಥವಾ ಮುಂದಿನ ದಿನ ಫಲಿತಾಂಶ ಪ್ರಕಟವಾಗುವ ಸಂಭವವಿದೆ.
ಮೇ ತಿಂಗಳಲ್ಲೇ ಫಲಿತಾಂಶ ಪ್ರಕಟ
ಇತ್ತೀಚಿನ ವರ್ಷಗಳಲ್ಲಿ, ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಕಟಿಸುತ್ತ ಬರಲಾಗುತ್ತಿದೆ. 2024ರಲ್ಲಿ ಮೇ 13, 2023ರಲ್ಲಿ ಮೇ 12 ಮತ್ತು 2019ರಲ್ಲಿ ಮೇ 6ರಂದು ಫಲಿತಾಂಶ ಪ್ರಕಟವಾಗಿತ್ತು.
ಆದರೆ, ಅದಕ್ಕೂ ಮುನ್ನ 2022, 2021, 2020ರಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಿಬಿಎಸ್‌ಇ ಮಂಡಳಿಯ ಫಲಿತಾಂಶಗಳನ್ನು ಜುಲೈ 22, ಆಗಸ್ಟ್ 3 ಮತ್ತು ಜುಲೈ 13ರಂದು ಘೋಷಿಸಲಾಗಿತ್ತು.
ಹಿಂದಿನ ವರ್ಷಗಳ ಶೇಖಡಾವಾರು ಫಲಿತಾಂಶಗಳು
ಹಿAದಿನ ವರ್ಷಗಳಲ್ಲಿ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿ ಉತ್ತೀರ್ಣತೆಯ ಫಲಿತಾಂಶಗಳ ಶೇಕಡಾವಾರು ವಿವರ ಈ ಕೆಳಗಿನಂತಿದೆ:
10ನೇ ತರಗತಿ ಶೇ. ಫಲಿತಾಂಶ:
- 2024: ಶೇ. 93.60
- 2023: ಶೇ. 93.12
- 2022: ಶೇ. 94.40
- 2021: ಶೇ. 99.04
- 2020: ಶೇ. 91.46
UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ

12ನೇ ತರಗತಿ ಶೇ. ಫಲಿತಾಂಶ:
- 2024: ಶೇ. 87.98
- 2023: ಶೇ. 87.33
- 2022: ಶೇ. 92.71
- 2021: ಶೇ. 99.37
- 2020: ಶೇ. 88.78
ಈ ವರ್ಷದಿಂದ ಡಿಜಿಲಾಕರ್ ವ್ಯವಸ್ಥೆ
ವಿಶೇಷವೆಂದರೆ ಈ ವರ್ಷದಿಂದ ಸಿಬಿಎಸ್‌ಇ ಒಂದು ನವೀನ ಮಾರ್ಗವನ್ನು ಅನುಸರಿಸಿದೆ. ಅದೇನಂದರೆ ಎಲ್ಲ ವಿದ್ಯಾರ್ಥಿಗಳ ಡಿಜಿಟಲ್ ಶೈಕ್ಷಣಿಕ ದಾಖಲೆಗಳು ಡಿಜಿಲಾಕರ್ (DigiLocker) ಖಾತೆಯಲ್ಲಿ ಲಭ್ಯವಾಗುತ್ತವೆ.
ವಿದ್ಯಾರ್ಥಿಗಳಿಗೆ ಆರು ಅಂಕಿಯ ಪ್ರವೇಶ ಕೋಡ್ (Access Code) ಅನ್ನು ಶಾಲೆಗಳ ಮೂಲಕ ಒದಗಿಸಲಾಗುವುದು. ಈ ಕೋಡ್‌ನಿಂದ ಡಿಜಿಲಾಕರ್ ಖಾತೆ ಸಕ್ರಿಯಗೊಳಿಸಿ ಅಲ್ಲಿ ಅಂಕಪಟ್ಟಿ, ಪ್ರಮಾಣಪತ್ರ, ವರ್ಗ ಪರಿಷ್ಕರಣೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಬಹುದು.
ಇದಕ್ಕಾಗಿ ವಿದ್ಯಾರ್ಥಿಗಳು ಅಥವಾ ಪೋಷಕರು digilocker.gov.in ಅಥವಾ ಡಿಜಿಲಾಕರ್ ಮೊಬೈಲ್ ಆಪ್ ಬಳಸಬಹುದು.
ಮರು ಮೌಲ್ಯಮಾಪನ ನಿಯಮ ಬದಲು
ಈ ವರ್ಷ 10 ಮತ್ತು 12 ನೇ ತರಗತಿಯ ಫಲಿತಾಂಶಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ಸಿಬಿಎಸ್‌ಇ ವಿಧಾನವನ್ನು ಪರಿಷ್ಕರಿಸಿದೆ.
ಈ ಮೊದಲು ವಿದ್ಯಾರ್ಥಿಗಳು ಮೊದಲು ಅಂಕ ಪರಿಶೀಲನೆಗೆ ಅರ್ಜಿ ಸಲ್ಲಿಸುತ್ತಿದ್ದರು. ನಂತರ ಉತ್ತರ ಪತ್ರಿಕೆಯನ್ನು ಪಡೆದು ಬಳಿಕ ಮರು ಮೌಲ್ಯಮಾಪನಕ್ಕೆ ವಿನಂತಿಸುತ್ತಿದ್ದರು.
ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿಗಳು ಅಂಕ ಪರಿಶೀಲನೆ ಅಥವಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮೊದಲು ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪ್ರತಿಗಳ ನಕಲು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಫಲಿತಾಂಶ ವೀಕ್ಷಣೆ ಅಧಿಕೃತ ಲಿಂಕುಗಳು
ಫಲಿತಾAಶ ಪ್ರಕಟವಾದ ನಂತರ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ರೋಲ್ ನಂಬರ್, ಶಾಲಾ ಕೋಡ್ ಹಾಗೂ ಜನ್ಮ ದಿನಾಂಕ ಬಳಸಿಕೊಂಡು ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು:
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ, 12ನೇ ತರಗತಿ ಅಂಕಪಟ್ಟಿಗಳು, ಮೌಲ್ಯಮಾಪನ ಮತ್ತು ಮರುಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಿದ್ಯಾರ್ಥಿಗಳು mahitimane.com ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.