ಸಿಬಿಎಸ್‌ಸಿ (CBSE) 10ನೇ ಮತ್ತ 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಗೆ ಅಧಿಕೃತ ಸಿದ್ಧತೆ ನಡೆದಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
2025ನೇ ಸಾಲಿನ ಸಿಬಿಎಸ್‌ಇ (CBSE) ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಗಾಗಿ ಅಂತಿಮ ಸಿದ್ಧತೆ ನಡೆದಿದೆ. 10ನೇ ಮತ್ತು 12ನೇ ತರಗತಿಗಳ ಪರೀಕ್ಷೆಗೆ ಹಾಜರಾದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಕಳೆದ ವರ್ಷ 2024ರಲ್ಲಿ ಸಿಬಿಎಸ್‌ಇ ಫಲಿತಾಂಶವನ್ನು ಮೇ 13ರಂದು ಪ್ರಕಟಿಸಲಾಗಿತ್ತು. ಈ ಬಾರಿ ಆ ದಿನಾಂಕ ಮೀರಿದ ಕಾರಣ ವಿದ್ಯಾರ್ಥಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಫಲಿತಾಂಶ ಮೇ 15ರೊಳಗೆ ಪ್ರಕಟವಾಗುವ ನಿರೀಕ್ಷೆ
ಸಿಬಿಎಸ್‌ಇ ಮಂಡಳಿ ಇನ್ನೂ ಯಾವುದೇ ನಿಖರ ದಿನಾಂಕವನ್ನು ಅಧಿಕೃತವಾಗಿ ಘೋಷಿಸದಿದ್ದರೂ, ವಿಶ್ವಾಸಾರ್ಹ ಮೂಲಗಳ ಪ್ರಕಾರ ಫಲಿತಾಂಶವನ್ನು ಈ ವಾರದೊಳಗೆ, ಬಹುಶಃ ಮೇ 15ರ ಒಳಗೆ ಪ್ರಕಟಿಸಲಾಗುವುದು. ಫಲಿತಾಂಶ ಪ್ರಕಟಣೆಯಾದ ನಂತರ, ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮಗೆ ತಕ್ಕಂತೆ ಅಂಕಗಳ ಪರಿಶೀಲನೆ ಮಾಡಬಹುದು.
ಉತ್ತೀರ್ಣತಾ ಮಾನದಂಡ ಮತ್ತು ಗ್ರೇಸ್ ಮಾರ್ಕ್ಸ್
ವಿದ್ಯಾರ್ಥಿಗಳು ಶೇಕಡಾ 33% ಅಂಕಗಳನ್ನು ಗಳಿಸಿದ್ದರೆ ಅವರನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ. ಆದರೆ, ಈ ಮಾನದಂಡವನ್ನು ಪೂರೈಸಲು 1 ಅಥವಾ 2 ಅಂಕಗಳ ಕೊರತೆಯಿದ್ದರೆ, ವಿದ್ಯಾರ್ಥಿಗೆ ಗ್ರೇಸ್ ಮಾರ್ಕ್ಸ್ (Grace Marks) ನೀಡುವ ಮೂಲಕ ಉತ್ತೀರ್ಣಗೊಳಿಸುವ ಸಾಧ್ಯತೆ ಇದೆ. ಇದು ಸಿಬಿಎಸ್‌ಇಯ ನಿಗದಿತ ಮಾರ್ಗಸೂಚಿ ಆಧಾರಿತ ತೀರ್ಮಾನವಾಗಿರುತ್ತದೆ.

ಬದಲಾವಣೆಯಾದ ಗ್ರೇಡಿಂಗ್ ಪದ್ಧತಿ
2024-25ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಅತಿದೊಡ್ಡ ಸ್ಪರ್ಧಾತ್ಮಕತೆಯಿಂದ ದೂರವಿರಿಸುವ ಉದ್ದೇಶದಿಂದ ಶ್ರೇಣೀಕರಣ ವಿಧಾನದಲ್ಲಿ ಬದಲಾವಣೆ ತರಲಾಗಿದೆ.
ಇದುವರೆಗೆ ಬಳಸುತ್ತಿದ್ದ ಸ್ಥಿರ ಶ್ರೇಣೀಕರಣ (Fixed Grading) ಪದ್ಧತಿಯ ಬದಲು ಈಗ ಸಾಪೇಕ್ಷ ಶ್ರೇಣೀಕರಣ (Relative Grading) ವಿಧಾನವನ್ನು ಅನುಸರಿಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಅಂಕಗಳ ಹಂಚಿಕೆ ಆಧರಿಸಿ ಶ್ರೇಣಿಗಳು ನಿಗದಿಯಾಗುತ್ತವೆ. ಉದಾಹರಣೆಗೆ ಈ ಕೆಳಗಿನಂತೆ ಗ್ರೇಡ್ ಮುಂದುವರೆಯುತ್ತದೆ:
- A1: 91-100%
- A2: 81-90%
- B1: 71-80%
- B2: 61-70%
- C1: 51-60%
- C2: 41-50%
- D: 33-40%
- E1/ಇ2: 33ಕ್ಕಿಂತ ಕಡಿಮೆ (ಅನುತ್ತೀರ್ಣ)
ಫಲಿತಾಂಶ ವೀಕ್ಷಿಸಲು ಉಪಯುಕ್ತ ಜಾಲತಾಣಗಳು
ಸಿಬಿಎಸ್‌ಇ ಫಲಿತಾಂಶಗಳನ್ನು ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ಜಾಲತಾಣಗಳಲ್ಲಿ ಪರಿಶೀಲಿಸಬಹುದು:
- cbse.gov.in
- cbseresults.nic.in
- results.cbse.nic.in
- digilocker.gov.in
- results.gov.in
- umang.gov.in
ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ ಡೌನ್‌ಲೋಡ್
ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಿಬಿಎಸ್‌ಇಯಿಂದ ಲಭಿಸುವ SMS ಮೂಲಕ ಡಿಜಿಲಾಕರ್ ಲಾಗಿನ್ ವಿವರಗಳನ್ನು ಪಡೆಯುತ್ತಾರೆ. ಈ ಮಾಹಿತಿಯೊಂದಿಗೆ, ವಿದ್ಯಾರ್ಥಿಗಳು ಡಿಜಿಲಾಕರ್‌ನ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಲಾಗಿನ್ ಆಗಿ ತಮ್ಮ ಅಂಕಪಟ್ಟಿ (Marksheet) ಮತ್ತು ಪ್ರಮಾಣಪತ್ರ (Certificate) ಡಿಜಿಟಲ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದು.
ಸಿಬಿಎಸ್‌ಇಯಿಂದ ವಿದ್ಯಾರ್ಥಿಗಳಿಗೆ ಎಚ್ಚರಿಕೆ
ಫಲಿತಾಂಶ ಕುರಿತಾಗಿ ಗೊಂದಲಕಾರಿ ಸುದ್ದಿಗಳು ಮತ್ತು ಉಹಾಪೋಹಗಳನ್ನು ನಂಬದೆ, ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮಾಹಿತಿಗೆ ಮಾತ್ರ ಮೊರೆ ಹೋಗಬೇಕು ಎಂದು ಸಿಬಿಎಸ್‌ಇ ಮಂಡಳಿ ಎಚ್ಚರಿಸಿದೆ.
ಫಲಿತಾಂಶ ಪ್ರಕಟಣೆಯ ನಿಖರ ದಿನಾಂಕ ಹಾಗೂ ಸಮಯವನ್ನು ಸಿಬಿಎಸ್‌ಇ ಮಂಡಳಿ ಘೋಷಿಸಿದಾಗಲೇ ವೆಬ್‌ಸೈಟ್‌ಗಳಲ್ಲಿ ಲಿಂಕುಗಳು ಸಕ್ರಿಯವಾಗುತ್ತವೆ.ಅಂತಿಮವಾಗಿ, ವಿದ್ಯಾರ್ಥಿಗಳು ಶಾಂತ ಮನಸ್ಥಿತಿಯಲ್ಲಿ ಅಧಿಕೃತ ಫಲಿತಾಂಶ ಪ್ರಕಟಣೆಗೆ ಕಾಯುವುದು ಅಗತ್ಯ.