ಕಡಿಮೆ ಬೆಲೆ ಹೆಚ್ಚು ವ್ಯಾಲಿಡಿಟಿಯ BSNL ಹೊಸ ರೀಚಾರ್ಜ್ ಯೋಜನೆಗಳು BSNL low price high validity new recharge plans

Spread the love

BSNL low price high validity new recharge plans : ಸರ್ಕಾರಿ ಸ್ವಾಮ್ಯದ BSNL (Bharat Sanchar Nigam Limited) ಕಳೆದುಕೊಂಡ ತನ್ನ ಗತವೈಭವವನ್ನು ಮರಳಿ ಸ್ಥಾಪಿಸಲು ಗ್ರಾಹಕರ ಕೈಗೆಟುಕುವ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು (New recharge plans) ಲೋಕಾರ್ಪಣೆ ಮಾಡುತ್ತಿದೆ.

ಎರಡು ಹೊಸ ರೀಚಾರ್ಜ್ ಯೋಜನೆಗಳು ಲಾಂಚ್
WhatsApp Group Join Now
Telegram Group Join Now

ಈಗಾಗಲೇ BSNL ಗ್ರಾಹಕರನ್ನು ಸೆಳೆಯಲು 4G, 5G ನೆಟ್‌ವರ್ಕ್ ಸೇವೆ ಆರಂಭಿಸುತ್ತಿದ್ದು; ಇದೀಗ ಕಡಿಮೆ ಬೆಲೆಯ, ಹೆಚ್ಚು ಪ್ರಯೋಜನ ಹಾಗೂ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಯೋಜನೆಗಳನ್ನು ಲಾಂಚ್ ಮಾಡುತ್ತಿದೆ.

ಬಿಎಸ್‌ಎನ್‌ಎಲ್ ಈಚೆಗೆ ಎರಡು ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದ್ದು; ಈ ಯೋಜನೆಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿವೆ. ಗ್ರಾಹಕರಿಗೆ ಭರಪೂರ ಡೇಟಾ, ಉಚಿತ ವಾಯ್ಸ್ ಕರೆಗಳು, ಎಸ್ಸೆಮ್ಮೆಸ್ ಜೊತೆಗೆ ಹೆಚ್ಚು ದಿನಗಳ ವ್ಯಾಲಿಡಿಟಿ, ಹೆಚ್ಚುವರಿ ಪ್ರಯೋಜನಗಳನ್ನು ಕೂಡ ಈ ಕೆಳಗಿನ ಹೊಸ ಯೋಜನೆಗಳು ಹೊಂದಿವೆ:

  • 347 ರೂಪಾಯಿ ಪ್ರಿಪೇಯ್ಡ್ ಯೋಜನೆ
  • 599 ರೂಪಾಯಿ ಪ್ರಿಪೇಯ್ಡ್ ಯೋಜನೆ

ಇದನ್ನೂ ಓದಿ: ದೇಶಾದ್ಯಂತ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಆರಂಭ ಸ್ಟಾರ್ಟ್ | ಕಮ್ಮಿ ಬೆಲೆಗೆ ಸೂಪರ್ ಸ್ಪೀಡ್ ನೆಟ್‌ವರ್ಕ್ BSNL 4G Network Start

BSNL low price high validity new recharge plans
347 ರೂಪಾಯಿ ಪ್ರಿಪೇಯ್ಡ್ ಯೋಜನೆಯ ವಿವರ

ಕಡಿಮೆ ಇಂಟರ್ನೆಟ್ ಬ್ರೌಸಿಂಗ್ ಅಗತ್ಯವಿರುವ ಹಾಗೂ ಕೇವಲ ವಾಯ್ಸ್ ಕರೆಗಳನ್ನು ಬಳಸುವ ಬಳಕೆದಾರರಿಗೆ 347 ರೂಪಾಯಿ ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:

  • 56 ದಿನಗಳ ವ್ಯಾಲಡಿಟಿ
  • ಅನಿಯಮಿತ ವಾಯ್ಸ್ ಕರೆಗಳು
  • ನಿತ್ಯ 100 SMS ಉಚಿತ
  • ಪ್ರತಿದಿನ 2GB ಡೇಟಾ
  • ದಿನದ ನಿಗದಿತ ಡೇಟಾ ಮುಗಿದ ಬಳಿಕ 40kpbs ಸ್ಪೀಡ್

ಇವುಗಳ ಜೊತೆಗೆ ಹೆಚ್ಚುವರಿಯಾಗಿ ಪ್ಯಾಕ್ ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಮೊಬೈಲ್ ಗೇಮ್ಸ್, ಗೇಮನ್ ಮತ್ತು ಆಸ್ಟ್ರೋಟೆಲ್, ಗೇಮಿಯಂ, ಜಿಂಗ್ ಮ್ಯೂಸಿಕ್, ವಾವ್ ಎಂಟರ್‌ಟೈನ್‌ಮೆ೦ಟ್, ಬಿಎಸ್‌ಎನ್‌ಎಲ್ ಟ್ಯೂನ್ಸ್, ಲಿಸ್ಟ್ನ್ ಪಾಡ್‌ಕ್ಯಾಸ್ಟ್ ನೀಡುತ್ತದೆ.

ಇದನ್ನೂ ಓದಿ: 30 ದಿನ ವ್ಯಾಲಿಡಿಟಿ, ಕಮ್ಮಿ ಬೆಲೆಯ ಹೊಸ ರಿಚಾರ್ಜ್ ಪ್ಲಾನ್‌ಗಳು 30 days validity Recharge Plans

599 ರೂಪಾಯಿ ಪ್ರಿಪೇಯ್ಡ್ ಯೋಜನೆಯ ವಿವರಗಳು

ಹೆಚ್ಚು ಇಂಟರ್ನೆಟ್ ಅಥವಾ ವೀಡಿಯೊ ಕರೆ ಮಾಡುವವರಿಗೆ 599 ರೂಪಾಯಿಯ ಈ ಯೋಜನೆಯು ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ. ಈ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:

  • 84 ದಿನಗಳ ವ್ಯಾಲಡಿಟಿ
  • ಸ್ಥಳೀಯ ಮತ್ತು ರಾಷ್ಟ್ರೀಯ ರೋಮಿಂಗ್‌ನಲ್ಲಿ ಅನಿಯಮಿತ ವಾಯ್ಸ್ ಕರೆಗಳು
  • ನಿತ್ಯ 100 SMS ಉಚಿತ
  • ಪ್ರತಿದಿನ 3GB ಡೇಟಾ
  • ದಿನದ ನಿಗದಿತ ಡೇಟಾ ಮುಗಿದ ಬಳಿಕ 40kpbs ಸ್ಪೀಡ್
  • ಪ್ಯಾಕ್ 00:00 ಗಂಟೆಗಳಿ೦ದ 05:00ರ ವರೆಗೆ ಅನಿಯಮಿತ ಉಚಿತ ರಾತ್ರಿ ಡೇಟಾ

ಇವುಗಳ ಜೊತೆಗೆ ಉಚಿತ ಜಿಂಗ್, ಪಿಆರ್‌ಬಿಟಿ, ಆಸ್ಟ್ರೋಟೆಲ್ ಮತ್ತು ಗೇಮ್‌ಆನ್ ಸೇವೆಗಳು, ಹೆಚ್ಚುವರಿಯಾಗಿ ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಮೊಬೈಲ್ ಗೇಮ್ಸ್, ಗೇಮನ್ ಮತ್ತು ಆಸ್ಟ್ರೋಟೆಲ್, ಗೇಮಿಯಂ, ಜಿಂಗ್ ಮ್ಯೂಸಿಕ್, ವಾವ್ ಎಂಟರ್‌ಟೈನ್‌ಮೆAಟ್, ಬಿಎಸ್‌ಎನ್‌ಎಲ್ ಟ್ಯೂನ್ಸ್, ಲಿಸ್ಟ್ನ್ ಪಾಡ್‌ಕ್ಯಾಸ್ಟ್ ಅನ್ನು ಕೂಡ ಈ ಪ್ಯಾಕ್ ನೀಡುತ್ತದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees


Spread the love
WhatsApp Group Join Now
Telegram Group Join Now

Leave a Comment

error: Content is protected !!