BRBNMPL Recruitment 2025- ಮೈಸೂರು ನೋಟು ಮುದ್ರಣಾಲಯ ಕೇಂದ್ರದ ಹುದ್ದೆಗಳಿಗೆ ಅರ್ಜಿ ಆಹ್ವಾನ | 88 ಹುದ್ದೆಗಳ ನೇಮಕಾತಿ

Spread the love

RBI ಅಧೀನದ ಮೈಸೂರು ನೋಟು ಮುದ್ರಣಾಲಯ ಕೇಂದ್ರದ (BRBNMPL Recruitment 2025) ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಒಡೆತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ (Bharatiya Reserve Bank Note Mudran Private Limited- BRBNMPL) ಪಶ್ಚಿಮ ಬಂಗಾಳದ ಸಾಲೋನಿ ಹಾಗೂ ಕರ್ನಾಟಕದ ಮೈಸೂರಿನಲ್ಲಿ ನೋಟು ಮುದ್ರಣ ಕೇಂದ್ರಗಳನ್ನು ಹೊಂದಿದೆ.

ಪ್ರಸ್ತುತ ಮೈಸೂರಿನ ನೋಟು ಮುದ್ರಣ ಕೇಂದ್ರದಲ್ಲಿ ಖಾಲಿಯಿರುವ 88 ಡೆಪ್ಯೂಟಿ ಮ್ಯಾನೇಜರ್ ಹಾಗೂ ಪ್ರೊಸೆಸ್ ಅಸಿಸ್ಟೆಂಟ್ಸ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಗಸ್ಟ್ 31ರೊಳಗಾಗಿ ಅರ್ಜಿ ಸಲ್ಲಿಸಬಹುದು.

BPL to APL- ಅನರ್ಹ ಬಿಪಿಎಲ್ ಕಾರ್ಡು ಎಪಿಎಲ್‌ಗೆ ಸೇರ್ಪಡೆ | ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನಕ್ಕೆ ಆಹಾರ ಸಚಿವರ ಸೂಚನೆ

ವಿದ್ಯಾರ್ಹತೆ ವಿವರ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಪದವಿ, ಬಿಇ, ಬಿ.ಟೆಕ್, ಡಿಪ್ಲೊಮಾ, ಐಟಿಐ ಅರ್ಹತೆ ಪಡೆದಿರಬೇಕು. ಬಾಹ್ಯ ಹಾಗೂ ಆಂತರಿಕ ಅಭ್ಯರ್ಥಿಗಳಿಗೆ (ಕಂಪನಿಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವವರು) ಅರ್ಹತಾ ಮಾನದಂಡಗಳು ಪ್ರತ್ಯೇಕವಾಗಿವೆ.

ವಯೋಮಿತಿ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 31 ವಯಸ್ಸಿನೊಳಗೆ ಇರಬೇಕು. ಸಂಸ್ಥೆಯ ನಿಯಮಾನುಸಾರ ಮೀಸಲು ವರ್ಗಗಳಿಗೆ ಮೀಸಲಾತಿ ನೀಡಲಾಗುತ್ತದೆ.

RBI ಅಧೀನದ ಮೈಸೂರು ನೋಟು ಮುದ್ರಣಾಲಯ ಕೇಂದ್ರದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
BRBNMPL Recruitment 2025
ಮಾಸಿಕ ವೇತನವೆಷ್ಟು?

ಮೈಸೂರಿನ ನೋಟು ಮುದ್ರಣ ಕೇಂದ್ರದ ಹುದ್ದೆಗಳಿಗೆ ಆಯ್ಕೆಯಾದ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ 56,100 ರಿಂದ 88,638 ವೇತನ ಶ್ರೇಣಿ ನೀಡಲಾಗುತ್ತದೆ. ಪ್ರೊಸೆಸ್ ಅಸಿಸ್ಟೆಂಟ್ ಗ್ರೇಡ್-1ಗೆ (ಟ್ರೇನಿ) ಆರಂಭದಲ್ಲಿ ಒಂದು ವರ್ಷದ ತರಬೇತಿ ನೀಡಲಾಗುತ್ತದೆ.

ಈ ಅವಧಿಯಲ್ಲಿ ಅವರಿಗೆ ಮಾಸಿಕ 24,000 ರೂ., ಸ್ಟೆಪೆಂಡ್ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಉದ್ಯೋಗಿಗಳನ್ನು ತಿಂಗಳಿಗೆ 24,500/- ಮೂಲ ವೇತನ ನಿಗದಿ ಮಾಡಲಾಗುತ್ತದೆ.

Deen Dayal SPARSH Yojana 2025- 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಪ್ರತೀ ವಿದ್ಯಾರ್ಥಿಗೆ 6,000 ರೂ. ನೆರವು | ದೀನ್ ದಯಾಳ್ ಸ್ಪರ್ಶ್ ಯೋಜನೆ

ಆಯ್ಕೆ ಪ್ರಕ್ರಿಯೆ ಹೇಗೆ?

ಡೆಪ್ಯೂಟಿ ಮ್ಯಾನೇಜರ್ ಹಾಗೂ ಪ್ರೋಸೆಸ್ ಅಸಿಸ್ಟೆಂಟ್ ಹುದ್ದೆಗೆ ಪ್ರತ್ಯೇಕವಾಗಿ ನೇಮಕಾತಿ ನಡೆಯಲಿದೆ. ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇನ್ನು ಪ್ರೊಸೆಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಹಾಗೂ ಕೌಶಲ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿರಲಿದೆ. ಅಭ್ಯರ್ಥಿಗಳು ಒಂದು ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

Dairy Farming Subsidy- ಹಸು-ಎಮ್ಮೆ ಖರೀದಿಗೆ ₹1.25 ಲಕ್ಷ ಸಹಾಯಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ

ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ibpsonline.ibps.in ಭೇಟಿ ನೀಡಿ ಆನ್‌ಲೈನ್ ಮೂಲಕ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ 600 ಹಾಗೂ ಪ್ರೊಸೆಸ್ ಅಸಿಸ್ಟೆಂಟ್ ಹುದ್ದೆಗೆ 400 ರೂ., ಗಳ ಅರ್ಜಿ ಶುಲ್ಕವಿದೆ. ಮಹಿಳಾ ಅಭ್ಯರ್ಥಿಗಳು, ಪ.ಜಾತಿ-ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

  • ಅರ್ಜಿ ಸಲ್ಲಿಸಲು ಕೊನೇ ದಿನ: 31-08-2025
  • ಆನ್‌ಲೈನ್ ಪರೀಕ್ಷೆ ದಿನಾಂಕ: ಸೆಪ್ಟೆಂಬರ್/ಅಕ್ಟೋಬರ್, 2025
  • ಹೆಚ್ಚಿನ ಮಾಹಿತಿಗೆ: brbnmpl.co.in
  • ಅಧಿಸೂಚನೆ: Download

IBPS Bank Jobs- ಕರ್ನಾಟಕದ 11 ಪ್ರಮುಖ ಬ್ಯಾಂಕ್‌ಗಳಲ್ಲಿ 1,170 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ


Spread the love
WhatsApp Group Join Now
Telegram Group Join Now
error: Content is protected !!