Best Low Interest Home Loans- ಅತೀ ಕಡಿಮೆ ಬಡ್ಡಿದರದ ಗೃಹ ಸಾಲ | SBI, HDFC, ICICI ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ…

Spread the love

WhatsApp Group Join Now
Telegram Group Join Now

ಆರ್‌ಬಿಐ ರೆಪೋ ದರವನ್ನು (RBI Repo Rate) ಇಳಿಸಿದ ನಂತರ ಬ್ಯಾಂಕುಗಳು ಸಾಲದ ಬಡ್ಡಿದರಗಳನ್ನು (Loan interest rate) ಕಡಿಮೆ ಮಾಡಿವೆ. ಪ್ರಮುಖ ಬ್ಯಾಂಕುಗಳ ಬಡ್ಡಿದರ ವಿವರ ಇಲ್ಲಿದೆ…

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೋ ದರವನ್ನು ಇಳಿಸಿದ ಹಿನ್ನೆಲೆಯಲ್ಲಿ, ದೇಶದ ಹಲವಾರು ಪ್ರಮುಖ ಬ್ಯಾಂಕುಗಳು ತಮ್ಮ ಹೋಮ್ ಲೋನ್ ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಇದರಿಂದಾಗಿ ಈಗ ಸ್ವಂತ ಮನೆ ಖರೀದಿ ಮಾಡಲು ಇದು ಅತ್ಯುತ್ತಮ ಕಾಲವಾಗಿದೆ.

ಸ್ವಂತ ಮನೆ ನಿರ್ಮಿಸುವುದು ಅಥವಾ ಖರೀದಿಸುವುದು ಹಲವರ ಜೀವಮಾನದ ಬಹುದೊಡ್ಡ ಕನಸು. ಇಂತಹ ಕನಸುಗಳನ್ನು ಸಾಕಾರಗೊಳಿಸಲು ಗೃಹ ಸಾಲಗಳು ಪ್ರಮುಖ ಪಾತ್ರವಹಿಸುತ್ತವೆ. ಇದೀಗ ಗೃಹಸಾಲಗಳು ಅಗ್ಗವಾಗಿದ್ದು; ವಿವಿಧ ಪ್ರಮುಖ ಬ್ಯಾಂಕುಗಳ ಬಡ್ಡಿದರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

New Ration Card- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್’ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ಗೃಹಸಾಲ ಅಗ್ಗವಾಗಿಸಿದ ರೆಪೋ ದರ ಇಳಿಕೆ

ರೆಪೋ ದರ ಎಂದರೆ ಬ್ಯಾಂಕುಗಳು ಆರ್‌ಬಿಐಯಿಂದ ಸಾಲ ಪಡೆಯುವ ವೇಳೆ ನೀಡುವ ಬಡ್ಡಿದರ. ಈ ದರ ಕಡಿಮೆಯಾದರೆ, ಬ್ಯಾಂಕುಗಳ ಹಣದ ವೆಚ್ಚವೂ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಗೃಹ ಸಾಲಗಳ ಬಡ್ಡಿದರ ಕಡಿಮೆಯಾಗುತ್ತದೆ.

ರೆಪೋ ದರ ಕಡಿಮೆ ಆಗುವುದರಿಂದ ಹೊಸ ಸಾಲ ಪಡೆಯುವವರಿಗೆ ಮತ್ತಷ್ಟು ಸುಲಭ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಇದೀಗ ರೆಪೋ ದರ ಇಳಿದಿದ್ದು ಮನೆ ಖರೀದಿ ಅಥವಾ ನಿರ್ಮಾಣ ಮಾಡಬಯಸುವವರಿಗೆ ಇದು ಒಳ್ಳೆಯ ಸಮಯವಾಗಿದೆ.

ಆರ್‌ಬಿಐ ರೆಪೋ ದರವನ್ನು ಇಳಿಸಿದ ನಂತರ ಬ್ಯಾಂಕುಗಳು ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಪ್ರಮುಖ ಬ್ಯಾಂಕುಗಳ ಬಡ್ಡಿದರ ವಿವರ ಇಲ್ಲಿದೆ...
Best Low Interest Home Loans
ಯಾವ್ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಬಡ್ಡಿದರ?

ರೆಪೋ ದರ ಇಳಿಕೆಯ ನಂತರ ವಿವಿಧ ಬ್ಯಾಂಕುಗಳು ಗೃಹಸಾಲದ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡುತ್ತಿವೆ. ಮೇ 2025ರ ಅನ್ವಯ ಪ್ರಮುಖ ಬ್ಯಾಂಕುಗಳ ಬಡ್ಡಿದರಗಳ ವಿವರ ಈ ಕೆಳಗಿನಂತಿದೆ:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): 8.00% – 9.15%
  • ಎಚ್‌ಡಿಎಫ್‌ಸಿ ಬ್ಯಾಂಕ್ (HDFC): 8.70% ರಿಂದ ಪ್ರಾರಂಭ
  • ಐಸಿಐಸಿಐ ಬ್ಯಾಂಕ್ (ICICI): 8.75% ರಿಂದ ಪ್ರಾರಂಭ
  • ಆಕ್ಸಿಸ್ ಬ್ಯಾಂಕ್ (AAxis Bank): 8.75% – 12.80%
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): 8.00% – 9.85%
  • ಬ್ಯಾಂಕ್ ಆಫ್ ಮಹಾರಾಷ್ಟ್ರ: 7.85% – 10.65%
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 7.85% – 10.40%
  • ಎಲ್‌ಐಸಿ ಹೌಸಿಂಗ್ ಫೈನಾನ್ಸ್: 8.25% ರಿಂದ ಪ್ರಾರಂಭ
  • ಬಜಾಜ್ ಹೌಸಿಂಗ್ ಫೈನಾನ್ಸ್: 8.25% ರಿಂದ ಪ್ರಾರಂಭ

ಗಮನಿಸುವ ಅಂಶವೆಂದರೆ, ಈ ಬಡ್ಡಿದರಗಳು ನಿಮ್ಮ ಕ್ರೆಡಿಟ್ ಸ್ಕೋರ್, ಉದ್ಯೋಗ ಸ್ಥಿರತೆ, ತಿಂಗಳ ಆದಾಯ, ವಯಸ್ಸು ಮತ್ತು ಸಾಲದ ಅವಧಿ ಆಧಾರಿತವಾಗಿವೆ. ಜೊತೆಗೆ, ಕೆಲ ಬ್ಯಾಂಕುಗಳು ಸಂಸ್ಕರಣಾ ಶುಲ್ಕ (Processing Fee), ಲೋನ್ ಇನ್ಷೂರೆನ್ಸ್ ಮತ್ತು ಇತರ ಶುಲ್ಕಗಳನ್ನು ವಿಧಿಸುತ್ತವೆ.

CBSE 10th 12th Result 2025- ಸಿಬಿಎಸ್‌ಇ SSLC-PUC ಫಲಿತಾಂಶ ಈ ದಿನ ಪ್ರಕಟ | ಮಹತ್ವದ ಮಾಹಿತಿ ಇಲ್ಲಿದೆ…

ಬಡ್ಡಿದರ ವ್ಯತ್ಯಾಸದ ಪರಿಣಾಮ

ಉದಾಹರಣೆಗೆ ಒಬ್ಬ ವ್ಯಕ್ತಿ ₹30 ಲಕ್ಷ ರೂ. ಹೋಮ್ ಲೋನ್ 20 ವರ್ಷಕ್ಕೆ ತೆಗೆದುಕೊಂಡಿದ್ದಾರೆ ಎಂದು ಕಲ್ಪಿಸೋಣ:

ಬಡ್ಡಿದರ 8.00% ಇದ್ದರೆ: ಮಾಸಿಕ ಇಎಂಐ ~ ₹25,093
ಬಡ್ಡಿದರ 9.50% ಇದ್ದರೆ: ಮಾಸಿಕ ಇಎಂಐ ~ ₹27,964

ಅಂದರೆ, ಕೇವಲ 1.5% ಬಡ್ಡಿದರ ವ್ಯತ್ಯಾಸವೂ 20 ವರ್ಷದಲ್ಲಿ ₹7 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಪಾವತಿಗೆ ಕಾರಣವಾಗಬಹುದು.

Low Interest Home Loan- ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸರಳ ವಿಧಾನ 

ಹೋಮ್ ಲೋನ್ ಅರ್ಜಿ ಸಲ್ಲಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಕ್ರೆಡಿಟ್ ಸ್ಕೋರ್ (Credit Score): ಉತ್ತಮ ಬಡ್ಡಿದರ ಪಡೆಯಲು ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಮೇಲಿರಬೇಕು. ಹಾಗಿದ್ದರೆ ಮಾತ್ರ ಅರ್ಜಿ ಹಾಕಿ.

WhatsApp Group Join Now
Telegram Group Join Now

ಆದಾಯ ದಾಖಲೆಗಳು: ನಿಮ್ಮ ಮಾಸಿಕ ಆದಾಯವನ್ನು ನಿಖರವಾಗಿ ದಾಖಲೆ ಮಾಡಲು ವೇತನ ಸ್ಲಿಪ್, ಐಟಿಆರ್, ಬ್ಯಾಂಕ್ ಸ್ಟೇಟ್ಮೆಂಟ್ ತಯಾರಿಟ್ಟುಕೊಳ್ಳಿ.

ಪ್ರೊಸೆಸಿಂಗ್ ಫೀ ಮತ್ತು ಇನ್ಶೂರೆನ್ಸ್: ಕೆಲ ಬ್ಯಾಂಕುಗಳು ಸಾಲದ ಮೊತ್ತದ 0.25% – 1% ವರೆಗೆ ಸಂಸ್ಕರಣಾ ಶುಲ್ಕ ವಿಧಿಸುತ್ತವೆ.

ಇಎಂಐ ಲೆಕ್ಕಹಾಕಿ: ಹಲವಾರು ಬ್ಯಾಂಕುಗಳು ಇಎಂಐ ಕ್ಯಾಲ್ಕುಲೇಟರ್ ಹೊಂದಿದ್ದು, ಅದರ ಮೂಲಕ ನಿಮ್ಮ ತಿಂಗಳ ಹಣಕಾಸು ಯೋಜನೆ ಮಾಡಬಹುದು.

ಪ್ರೀಪೇಮೆಂಟ್ ನಿಯಮಗಳು: ಕೆಲವು ಬ್ಯಾಂಕುಗಳು ಪೂರ್ವ ಪಾವತಿಯ ಮೇಲೆ ದಂಡ ವಿಧಿಸುತ್ತವೆ. ಈ ನಿಯಮಗಳು ನಿಮಗೆ ಲಾಭವಾಗಬಹುದೇ ಅಥವಾ ನಷ್ಟವಾಗಬಹುದೇ ನೋಡಿಕೊಳ್ಳಿ.

ಆರ್‌ಬಿಐನಿಂದ ಸತತವಾಗಿ ಬಡ್ಡಿದರ ಇಳಿಕೆ ಆಗುತ್ತಿರುವುದರಿಂದ ಗೃಹಸಾಲ ಪಡೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದೆ. ನೀವು ನಿಮ್ಮ ಕನಸಿನ ಮನೆಗೆ ಮೊದಲ ಹೆಜ್ಜೆ ಇಡಲು ಸಿದ್ಧವಾಗಿದ್ದರೆ, ಬಡ್ಡಿದರಗಳನ್ನು ಸರಿಯಾಗಿ ಹೋಲಿಸಿ, ಎಲ್ಲಾ ಷರತ್ತುಗಳನ್ನು ಚೆಕ್ ಮಾಡಿ ಮತ್ತು ನಂತರ ನಿಮ್ಮ ಹಣಕಾಸು ಸ್ಥಿತಿಗೆ ಅನುಗುಣವಾಗಿ ಗೃಹ ಸಾಲ ಆಯ್ಕೆ ಮಾಡಿ.

SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…


Spread the love
error: Content is protected !!