ನಾಳೆ ಏಪ್ರಿಲ್ 29ರಿಂದ ಬ್ಯಾಂಕುಗಳಿಗೆ ಸಾಲು ಸಾಲು (Bank Holidays ) ರಜೆಗಳಿದ್ದು; ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ರಜೆ ಕುರಿತು ಮಾಹಿತಿಯನ್ನು ನೀಡಿದೆ. ಈ ಕುರಿತ ವಿವರ ಇಲ್ಲಿದೆ…
ಆರ್‌ಬಿಐ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ನಾಳೆಯಿಂದ ಅಂದರೆ ಏಪ್ರಿಲ್ 29ರಿಂದ ಮುಂದಿನ ಮೂರು ದಿನಗಳ ಕಾಲ ದೇಶದ ಹಲವು ಭಾಗಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ಸಮಯದಲ್ಲಿ ಗ್ರಾಹಕರು ನೇರವಾಗಿ ಶಾಖೆಗೆ ಹೋಗಿ ಮಾಡುವ ವ್ಯವಹಾರಗಳನ್ನು ಮುಂದೂಡಬೇಕಾಗುತ್ತದೆ.
ಮೂರು ದಿನಗಳ ಕಾಲ ಸತತ ರಜೆ
ಈ ಬಾರಿ, ಹಲವು ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ದಿನಾಚರಣೆಗಳ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯದಿಂದ ಮೇ ಪ್ರಾರಂಭದ ವರೆಗೆ ಮೂರು ದಿನಗಳ ಸರಣಿ ರಜೆಗಳು ಬಂದಿವೆ.
ಏಪ್ರಿಲ್ 29: ಈ ದಿನ ಭಾರತದ ಕೆಲ ರಾಜ್ಯಗಳಲ್ಲಿ ಭಗವಾನ್ ಪರಶುರಾಮ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಶಿಮ್ಲಾ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಬ್ಯಾಂಕುಗಳು ಮುಚ್ಚಿರುತ್ತವೆ.
ಏಪ್ರಿಲ್ 30: ಇಂದು ಕರ್ನಾಟಕದಲ್ಲಿ ಬಸವೇಶ್ವರರ ಜಯಂತಿಯನ್ನು ಮತ್ತು ದೇಶದ ಹಲವು ಭಾಗಗಳಲ್ಲಿ ಅಕ್ಷಯ ತೃತೀಯವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ದಿನ ಬೆಂಗಳೂರು ಸೇರಿದಂತೆ ಅನೇಕ ನಗರಗಳ ಬ್ಯಾಂಕುಗಳು ಮುಚ್ಚಿರುತ್ತವೆ.
ಮೇ 1: ಈ ದಿನ ಮಹಾರಾಷ್ಟ್ರ ರಾಜ್ಯದ ಸ್ಥಾಪನೆಯ ದಿನ ಹಾಗೂ ಕಾರ್ಮಿಕರ ಹಕ್ಕುಗಳ ನಿಮಿತ್ತ ಆಚರಿಸುವ ‘ಕಾರ್ಮಿಕ ದಿನಾಚರಣೆ’ಯಿಂದಾಗಿ ಬೆಂಗಳೂರು, ಮುಂಬೈ, ಚೆನ್ನೈ, ಪಟ್ನಾ, ಗುವಾಹಟಿ, ತಿರುವನಂತಪುರA ಮುಂತಾದ ಅನೇಕ ನಗರಗಳಲ್ಲಿ ಬ್ಯಾಂಕುಗಳು ರಜೆ ಪಡೆಯುತ್ತವೆ.
Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ
ರಜೆ ದಿನಗಳಲ್ಲಿ ಬ್ಯಾಂಕಿಂಗ್ ಸೇವೆ ಹೇಗೆ?
ಬ್ಯಾಂಕು ಶಾಖೆಗಳು ಮುಚ್ಚಿದ್ದರೂ ಗ್ರಾಹಕರು ಎಟಿಎಂ, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ತಮ್ಮ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಬಹುದು.
ಚಿಲ್ಲರೆ ವಹಿವಾಟುಗಳು, ಹಣ ವರ್ಗಾವಣೆ, ಬಿಲ್ ಪಾವತಿಗಳು ಮೊದಲಾದವುಗಳಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ಬಹುತೇಕ ಆನ್‌ಲೈನ್ ಪ್ಲಾಟ್‌ಫಾರ್ಮ್ಗಳು ಕಾರ್ಯ ನಿರ್ವಹಿಸುವುದರಿಂದ ತುರ್ತು ಹಣಕಾಸಿನ ಅಗತ್ಯಗಳನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು.
ಆದರೆ, ಬ್ಯಾಂಕ್ ಶಾಖೆಯಲ್ಲಿ ನೇರವಾಗಿ ನಡೆಯುವ ಕಾರ್ಯಗಳಾದ ಚೆಕ್ ಠೇವಣಿ, ಹೊಸ ಖಾತೆ ತೆರೆಯುವುದು, ಸಾಲ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕಾರ್ಯಗಳಿಗೆ ಗ್ರಾಹಕರು ಮೇ 2ರ ತನಕ ಕಾಯಬೇಕಾಗುತ್ತದೆ.
ಯಾವ್ಯಾವ ದಿನ ಎಲ್ಲೆಲ್ಲಿ ಬ್ಯಾಂಕದ ರಜೆ?
ಗಮನಾರ್ಹವೆಂದರೆ ಮೇಲ್ಕಾಣಿಸಿದ ಬ್ಯಾಂಕ್ ರಜೆಗಳು ಎಲ್ಲಾ ರಾಜ್ಯಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಆಯಾ ರಾಜ್ಯಗಳ ಹಬ್ಬ ಅಥವಾ ಪ್ರಾಂತೀಯ ದಿನಾಚರಣೆ ನಿಮಿತ್ತ ಆ ರಾಜ್ಯದಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಿರುತ್ತವೆ.
- ಭಗವಾನ್ ಪರಶುರಾಮ ಜಯಂತಿಗೆ ಶಿಮ್ಲಾ, ಉತ್ತರಾಖಂಡ್ ಪ್ರದೇಶಗಳಲ್ಲಿ ಬ್ಯಾಂಕುಗಳು ರಜೆ ಇರುತ್ತವೆ.
- ಬಸವ ಜಯಂತಿ, ಅಕ್ಷಯ ತೃತೀಯ ನಿಮಿತ್ತ ಕರ್ನಾಟಕ ರಾಜ್ಯದಲ್ಲಿ ಬಹುತೇಕ ಸಕಾರಿ ರಜೆ ಘೋಷಣೆಯಾಗಿರುತ್ತದೆ. ಇದು ಬ್ಯಾಂಕುಗಳಿಗೂ ಅನ್ವಯವಾಗುತ್ತದೆ.
- ಮಹಾರಾಷ್ಟ್ರ ದಿನ ಮುಖ್ಯವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸೀಮಿತವಾಗಿದೆ, ಆದರೆ ಕಾರ್ಮಿಕ ದಿನಾಚರಣೆ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದ್ದು; ಅಂದು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.
ಮೇ ತಿಂಗಳ ಪ್ರಮುಖ ಬ್ಯಾಂಕ್ ರಜಾದಿನಗಳ ಪಟ್ಟಿ
ಮೇ ತಿಂಗಳಲ್ಲಿ ವಿವಿಧ ಹಬ್ಬಗಳು ಮತ್ತು ಶನಿವಾರ, ಭಾನುವಾರದ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಮೇ ತಿಂಗಳು ಕೆಲವು ವಿಶೇಷ ದಿನಗಳಲ್ಲಿ ರಜೆ ಇದೆ. ಆರ್‌ಬಿಐ ಪ್ರಕಟಿಸಿದ ಮೇ ತಿಂಗಳ ರಜಾ ಪಟ್ಟಿ ಹೀಗಿದೆ:
- ಮೇ 1: ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನ
- ಮೇ 9: ರವೀಂದ್ರನಾಥ ಟ್ಯಾಗೋರ್ ಜಯಂತಿ
- ಮೇ 12: ಭಾನುವಾರ, 2ನೇ ಶನಿವಾರ (ವಾರಾಂತ್ಯ ರಜೆ)
- ಮೇ 16: ಬುದ್ಧ ಪೂರ್ಣಿಮೆ
- ಮೇ 26: ಭಾನುವಾರ-4ನೇ ಶನಿವಾರ (ವಾರಾಂತ್ಯ ರಜೆ)
- ಮೇ 29: ಕಾಜಿ ನಜ್ರುಲ್ ಇಸ್ಲಾಂ ಜಯಂತಿ
ನಾಳೆಯಿಂದ ಮೂರು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ನಿರ್ದಿಷ್ಟ ಮಟ್ಟಿಗೆ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ತಮ್ಮ ಹಣಕಾಸು ವ್ಯವಹಾರಗಳ ಪ್ಲಾನಿಂಗ್‌ನ್ನು ಸೂಕ್ತವಾಗಿ ಮಾಡಿ ತೊಂದರೆ ತಪ್ಪಿಸಿಕೊಳ್ಳಿ. ಆಧುನಿಕ ಡಿಜಿಟಲ್ ಬ್ಯಾಂಕಿಂಗ್ ಪರಿಹಾರಗಳು ಈ ಸಂದರ್ಭದಲ್ಲಿ ಬಹಳ ನೆರವಾಗಲಿವೆ.