Auto Taxi Loan Subsidy- ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಸರ್ಕಾರದ ಸಬ್ಸಿಡಿ | ಈಗಲೇ ಅರ್ಜಿ ಹಾಕಿ

Spread the love

WhatsApp Group Join Now
Telegram Group Join Now

ಆಟೋ ಹಾಗೂ ಟಾಕ್ಸಿ ಖರೀದಿಸಿ ಸಾರಿಗೆ ಸೇವೆ ಆರಂಭಿಸಲು ಸಹಾಯಧನ (Auto Taxi Loan Subsidy ) ನೀಡಿಕೆಗಾಗಿ ಸರ್ಕಾರ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಆಟೋ ಹಾಗೂ ಟಾಕ್ಸಿ ಸೇವೆ ಆರಂಭಿಸಲು ಬಯಸುವ ಯುವಕರು, ನಿರುದ್ಯೋಗಿ ಮಹಿಳೆಯರು ಈಗ ಸರ್ಕಾರದ ಸಹಾಯದಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು. ‘ಇ-ಸಾರಥಿ ಯೋಜನೆ’ (e-Sarathi Scheme) ಅಡಿಯಲ್ಲಿ ಆಟೋ ಮತ್ತು ಕಾರು ಖರೀದಿಸಲು ಸರಕಾರದಿಂದ ಸಬ್ಸಿಡಿ ಪಡೆಯಬಹುದಾಗಿದೆ.

ಇ-ಸಾರಥಿ ಯೋಜನೆ ಸಹಾಯಧನ

ಆಟೋ ಮತ್ತು ಕಾರುಗಳ ಮೂಲಕ ಸ್ವಯಂ ಉದ್ಯೋಗ ಆರಂಭಿಸಲು ಬಯಸುವವರಿಗೆ ಹಣಕಾಸಿನ ಸಹಾಯ ನೀಡುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ‘ಇ-ಸಾರಥಿ ಯೋಜನೆ’ಯನ್ನು ರೂಪಿಸಿದೆ.

ಈ ಯೋಜನೆಯಡಿ ವಾಹನ ಖರೀದಿಗೆ ಬೇಕಾಗುವ ಮೊತ್ತವನ್ನು ಅರ್ಜಿದಾರರು ಬ್ಯಾಂಕ್ ಸಾಲದ ಮೂಲಕ ಪೂರೈಸಿಕೊಳ್ಳಬಹುದಾಗಿದ್ದು; ಶೇ.50ರಷ್ಟು ಹಣವನ್ನು ಸರ್ಕಾರವೇ ಸಬ್ಸಿಡಿಯಾಗಿ ಒದಗಿಸುತ್ತದೆ.

Women Loan Subsidy- ಮಹಿಳೆಯರಿಗಾಗಿಯೇ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು

ಯಾರು ಅರ್ಜಿ ಸಲ್ಲಿಸಬಹುದು?
  • ಅರ್ಜಿದಾರರು ಕನಿಷ್ಠ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವಾಗಿರಬೇಕು
  • ಅರ್ಜಿದಾರರ ಹೆಸರು ಆಧಾರ್ ಕಾರ್ಡ್ನಲ್ಲಿ ಬಿಬಿಎಂಪಿ ವ್ಯಾಪ್ತಿಯ ವಿಳಾಸದೊಂದಿಗೆ ಹೊಂದಿರಬೇಕು.
  • ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
  • ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಒಂದು ಕುಟುಂಬದಿಂದ ಕೇವಲ ಒಬ್ಬ ಅಭ್ಯರ್ಥಿಗೆ ಮಾತ್ರ ಈ ಯೋಜನೆಯ ಲಾಭ ದೊರೆಯುತ್ತದೆ.
ಸಹಾಯಧನ ಎಷ್ಟು ಸಿಗುತ್ತದೆ?

‘ಇ-ಸಾರಥಿ’ ಯೋಜನೆಯಡಿ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಖರೀದಿಸಬಯಸುವ ಅರ್ಹ ಅರ್ಜಿದಾರರು ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆಯಬೇಕಿದ್ದು; ಇದರಲ್ಲಿ ಈ ಕೆಳಕಂಡAತೆ ನಿಗದಿತ ಸಹಾಯಧನವನ್ನು ಬಿಬಿಎಂಪಿ ನೀಡುತ್ತದೆ.

  • ಇ-ಆಟೋ ರಿಕ್ಷಾ: ಶೇ.50 ಅಥವಾ ಗರಿಷ್ಠ ₹80,000/-
  • ಟಾಕ್ಸಿ (ಕಾರು): ಶೇ.50 ಅಥವಾ ಗರಿಷ್ಠ ₹1,50,000/-

ಈ ಸಹಾಯಧನವನ್ನು ನೇರವಾಗಿ ವಾಹನ ಖರೀದಿಗೆ ಬಳಸಬಹುದಾಗಿದೆ. ವಾಹನ ಖರೀದಿಗೆ ಸರ್ಕಾರದಿಂದ ಮಾನ್ಯಗೊಂಡ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಈ ಸಾಲದ ಸೌಲಭ್ಯಕ್ಕೂ ಕೂಡ ಬಿಬಿಎಂಪಿಯಿಂದ ಸಹಾಯ ದೊರೆಯುತ್ತದೆ.

ಆಟೋ ಹಾಗೂ ಟಾಕ್ಸಿ ಖರೀದಿಸಿ ಸಾರಿಗೆ ಸೇವೆ ಆರಂಭಿಸಲು ಸಹಾಯಧನ ನೀಡಿಕೆಗಾಗಿ ಸರ್ಕಾರ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Auto Taxi Loan Subsidy

SSLC Result 2025- ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊಸ ಅಪ್ಡೇಟ್ | 10th ಪಾಸಾಗಲು ಶೇ.35ರಷ್ಟು ಅಂಕ ಕಡ್ಡಾಯ

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು
  • ಆಧಾರ್ ಕಾರ್ಡ್ (ವಿಳಾಸದೊಂದಿಗೆ)
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಪಾಸ್ ಬುಕ್‌ನ ಪ್ರತಿ
  • ವಾಸದ ದೃಢೀಕರಣ ಪತ್ರ (ಪಡಿತರ ಚೀಟಿ ಅಥವಾ ವಿದ್ಯುತ್ ಬಿಲ್)
  • ಜನ್ಮದಿನಾಂಕ ದೃಢೀಕರಣ ಪತ್ರ
  • ಪಡಿತರ ಚೀಟಿ/ರೇಶನ್ ಕಾರ್ಡ್
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
  • ₹20 ಮೌಲ್ಯದ ಬಾಂಡ್ ಪೇಪರ್ ಮೇಲೆ ಖುದ್ದು ಸಹಿ ಹಾಕಿರುವ ಘೋಷಣೆ ಪತ್ರ

Low Interest Home Loan- ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸರಳ ವಿಧಾನ | ಪ್ರಮುಖ ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಂತಿಮ ದಿನಾಂಕ

ಮೇಲ್ಕಂಡ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕೆಳಗಿನ ಲಿಂಕ್‌ನಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ. ನಂತರ ಎಲ್ಲಾ ದಾಖಲಾತಿಗಳ ಸ್ವ-ದೃಢೀಕರಿತ ಪ್ರತಿಗಳನ್ನು ಹೊಂದಿಸಿ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ ವಿಭಾಗ) ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-05-2025

ಇ-ಸಾರಥಿ ಯೋಜನೆ ಎಂಬುದು ಕೇವಲ ಹಣಕಾಸಿನ ಸಹಾಯವಷ್ಟೇ ಅಲ್ಲ, ಅದು ಜೀವನದ ಹೊಸ ಅಧ್ಯಾಯಕ್ಕೆ ಪ್ರವೇಶದ ಬಾಗಿಲು. ಬಿಬಿಎಂಪಿಯ ಈ ಹೆಜ್ಜೆ, ನಿರುದ್ಯೋಗಿ ಯುವಕರಿಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಆಧಾರವಾಗಲಿದೆ. ಸರ್ಕಾರದ ಈ ಸೌಲಭ್ಯವನ್ನು ಬಳಸಿಕೊಳ್ಳಿ…

ಅರ್ಜಿ ನಮೂನೆಯನ್ನು ಇಲ್ಲಿ Download ಮಾಡಿ

Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…


Spread the love
error: Content is protected !!