ಎಟಿಎಂ ಶುಲ್ಕಕ್ಕೆ (ATM Transaction Fee) ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಷ್ಕತ ಮಾರ್ಗಸೂಚಿ ಹೊರಡಿಸಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಬ್ಯಾಂಕ್ ಎಟಿಎಂ ವಹಿವಾಟಿಗೆ ಸಂಬಂಧಿಸಿದಂತೆ ಮೇ 1ರಿಂದ ಬದಲಾವಣೆಯಾಗಲಿದೆ. ಗ್ರಾಹಕರಿಗೆ ಉಚಿತವಾಗಿ ದೊರೆಯುವ ಎಟಿಎಂ ವಹಿವಾಟುಗಳ ಮಿತಿ ಹಾಗೂ ಮಿತಿ ಮೀರಿದ ವಹಿವಾಟುಗಳ ಮೇಲೆ ವಿಧಿಸಲ್ಪಡುವ ಶುಲ್ಕಗಳಲ್ಲಿ ಪರಿಷ್ಕರಣೆ ಆಗಲಿದೆ.
ಎಟಿಎಂ ಸೇವೆಗಳಲ್ಲಿ ಪಾರದರ್ಶಕತೆ, ಸಮರ್ಥ ನಿರ್ವಹಣೆಯ ಉದ್ದೇಶದಿಂದ ಈ ನವೀನ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಮಾರ್ಚ್ 2025ರಲ್ಲಿ ಆರ್‌ಬಿಐ ಈ ಕುರಿತಂತೆ ಸೂಚನೆ ನೀಡಿತ್ತು. ಆದರೆ ಈ ನಿಯಮಗಳು ಸಾಮಾನ್ಯ ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.
Post office Savings Schemes- 100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು | ಸಂಪೂರ್ಣ ಮಾಹಿತಿ ಇಲ್ಲಿದೆ…
ಎಟಿಎಂ ವಹಿವಾಟು ಹೊಸ ನಿಯಮಗಳೇನು?
ಮೇ 1ರಿಂದ ಉಚಿತ ಎಟಿಎಂ ವಹಿವಾಟುಗಳ ಮಿತಿಯು ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಮುಂತಾದ ಮೆಟ್ರೋ ನಗರಗಳಲ್ಲಿ ತಿಂಗಳಿಗೆ 3 ವಹಿವಾಟುಗಳು ಮಾತ್ರ ಉಚಿತವಾಗಿರುತ್ತವೆ.
ಇತರ ನಗರಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳಿಗೆ ಅವಕಾಶವಿದೆ. ಈ ಮಿತಿಗಳು ಹಣಕಾಸು (Cash withdrawal) ಹಾಗೂ ಹಣಕಾಸೇತರ (Non-Financial) ವಹಿವಾಟುಗಳಿಗೆ ಒಟ್ಟಾರೆಯಾಗಿ ಅನ್ವಯವಾಗುತ್ತವೆ.
ಈ ಮಿತಿಯನ್ನು ಮೀರುವ ಪ್ರತಿ ಹೆಚ್ಚುವರಿ ವಹಿವಾಟಿಗೆ ₹23 + ಜಿಎಸ್‌ಟಿ (GST) ಅನ್ನು ಬ್ಯಾಂಕುಗಳು ವಿಧಿಸಬಹುದು. ಈ ಶುಲ್ಕವು ಎಲ್ಲ ಬ್ಯಾಂಕುಗಳಿಗೆ ಉಲ್ಲೇಖಿತ ಗರಿಷ್ಠ ಮಿತಿ ಆಗಿದ್ದು, ಬ್ಯಾಂಕುಗಳು ತಮ್ಮ ನಿಲುವಿನ ಆಧಾರದಲ್ಲಿ ಇದು ಕಡಿಮೆ ಆಗಿರಬಹುದು.

ಕೆಲವು ಬ್ಯಾಂಕುಗಳ ಪರಿಷ್ಕೃತ ಶುಲ್ಕದ ವಿವರ
ಎಸ್‌ಬಿಐ (SBI): ಮಾಸಿಕ ನಿಗದಿತ ಮಿತಿಯನ್ನು ಮೀರಿದಾಗ ₹21 + ಜಿಎಸ್‌ಟಿ ನಿಂದ ₹23 + ಜಿಎಸ್‌ಟಿ ಹೆಚ್ಚಳವಾಗುತ್ತದೆ. ನಗದು ಹಿಂಪಡೆಯುವಿಕೆಗಳಿಗೆ ಮಾತ್ರ ಶುಲ್ಕವಿದ್ದು; ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್, ಪಿನ್ ಬದಲಾವಣೆ ಮುಂತಾದ ಸೇವೆಗಳು ಉಚಿತ.
ಪಿಎನ್‌ಬಿ (PNB): ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮಿತಿಯಿಂದ ಮೀರಿದ ಹಣಕಾಸು ವಹಿವಾಟಿಗೆ ₹23, ಹಣಕಾಸೇತರ ವಹಿವಾಟಿಗೆ ₹11 (ಜಿಎಸ್‌ಟಿ ಹೊರತುಪಡಿಸಿ) ಶುಲ್ಕವಿರಲಿದೆ.
ಇಂಡಸ್‌ಇಂಡ್ ಬ್ಯಾಂಕ್ (IndusInd Bank): ₹23 ಪ್ರತಿ ವಹಿವಾಟಿಗೆ ಎಲ್ಲಾ ಉಳಿತಾಯ ಮತ್ತು ಸಂಬಳ ಖಾತೆ ಗ್ರಾಹಕರಿಗೆ ವಿಧಿಸಲಾಗುವುದು.
ಇತರ ಪ್ರಮುಖ ಬ್ಯಾಂಕುಗಳಾದ ಹೆಚ್‌ಡಿಎಫ್‌ಸಿ (HDFC), ಕೋಟಕ್ ಮಹೀಂದ್ರಾ (Kotak Mahindra), ಆಕ್ಸಿಸ್ ಬ್ಯಾಂಕ್ (Axis Bank) ಸೇರಿದಂತೆ ಮುಂತಾದ ಬ್ಯಾಂಕುಗಳ ಎಟಿಎಂ ವಹಿವಾಟಿಗೂ ಕೂಡ ಆರ್‌ಬಿಐ ನಿಯಮದಂತೆ ಪರಿಷ್ಕೃತ ದರಗಳು ಅನ್ವಯಿಸುತ್ತವೆ.
Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ
ಗ್ರಾಹಕರು ಹೆಚ್ಚುವರಿ ಶುಲ್ಕದಿಂದ ಪಾರಾಗುವುದು ಹೇಗೆ?
- ಇನ್ಮುಂದೆ ಗ್ರಾಹಕರು ಮಾಸಿಕ ಉಚಿತ ವಹಿವಾಟು ಮಿತಿಯನ್ನು ಗಮನದಲ್ಲಿಟ್ಟುಕೊಂಡು ಎಟಿಎಂ ಬಳಕೆ ಮಾಡಲು ಯೋಜನೆ ರೂಪಿಸಿಕೊಳ್ಳಬೇಕು.
- UPI, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಸೇವೆಗಳ ಬಳಕೆಯಿಂದ ಎಟಿಎಂ ಅವಲಂಬನೆ ಕಡಿಮೆ ಮಾಡಬಹುದು.
- ಇತರ ಬ್ಯಾಂಕುಗಳ ಎಟಿಎಂಗಳಿಗೆ ಹೋಲಿಸಿದರೆ, ಸ್ವಂತ ಬ್ಯಾಂಕಿನ ಎಟಿಎಂ’ನಲ್ಲಿ ಹೆಚ್ಚು ಉಚಿತ ವಹಿವಾಟುಗಳು ಲಭ್ಯತೆ ಇರುತ್ತದೆ.
2025ರ ಮೇ 1ರಿಂದ ಜಾರಿಗೆ ಬರುವ ಎಟಿಎಂ ವಹಿವಾಟು ಶುಲ್ಕದ ಹೊಸ ನಿಯಮಗಳು, ಗ್ರಾಹಕರು ತಮ್ಮ ಹಣಕಾಸು ವ್ಯವಹಾರಗಳನ್ನು ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಲು ಉತ್ತೇಜಿಸುತ್ತವೆ. ಬ್ಯಾಂಕುಗಳೊಂದಿಗೆ ಸಕ್ರಿಯ ಸಂಪರ್ಕದಲ್ಲಿದ್ದು, ನಿಯಮಾವಳಿಗಳನ್ನು ತಿಳಿದುಕೊಂಡು ಆಧುನಿಕ ಡಿಜಿಟಲ್ ಸಾಧನಗಳನ್ನು ಹೆಚ್ಚು ಬಳಸುವುದು ಉತ್ತಮ.
Bank Holidays Detail- ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆ: ಸಂಪೂರ್ಣ ವಿವರ ಇಲ್ಲಿದೆ…