Assistant Loco Pilot Recruitment 2024 : ಭಾರತೀಯ ರೈಲ್ವೆ ಇಲಾಖೆಯಲ್ಲಿ (Indian Railway) ಸೇವೆ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಹೊರಬಿದ್ದಿದೆ. ಎಸ್ಸೆಸ್ಸೆಲ್ಸಿ, ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಒಟ್ಟು 18,799 ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot) ಹುದ್ದೆಗಳ ನೇಮಕಾತಿಗೆ ರೈಲ್ವೆ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.
ನಿನ್ನೆ ಜೂನ್ 20ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆಯು ಈಗಾಗಲೇ ಅಧಿಸೂಚಿಸಿರುವ 5,696 ಹುದ್ದೆಗಳ ಸಂಖ್ಯೆಯನ್ನು 18,799ಕ್ಕೆ ಏರಿಸಿದೆ. ಜೊತೆಗೆ ಜೂನ್ 25ರ ತನಕ ಆನ್‌ಲೈನ್ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿದೆ.
ಕಳೆದ ಜನವರಿಯಲ್ಲಿ 5,696 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದ ಇಲಾಖೆಯು ಜನವರಿ 20 ರಿಂದ ಫೆಬ್ರವರಿ 19ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಈಗಾಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಕರ್ನಾಟಕದಲ್ಲಿ 1576 ಹುದ್ದೆಗಳು
ವಲಯವಾರು ಲಭ್ಯವಿರುವ ಹುದ್ದೆಗಳ ಸಂಖ್ಯೆಯನ್ನು ಆಯಾ ವಲಯಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ. ವಿಶೇಷ ಸಂಗತಿ ಎಂದರೆ ರಾಜ್ಯದ ನೈಋತ್ಯ ರೈಲ್ವೆಗೆ ಮೀಸಲಿಟ್ಟ 473 ಹುದ್ದೆಗಳ ಸಂಖ್ಯೆಯನ್ನು 1576ಕ್ಕೆ ಏರಿಸಲಾಗಿದೆ. ಅಂದರೆ ಕರ್ನಾಟಕದಲ್ಲಿ 1576 ಹುದ್ದೆಗಳು ಮೀಸಲಿವೆ.
ವಿದ್ಯಾರ್ಹತೆಗಳೇನು?
ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಇದರೊಂದಿಗೆ ಎನ್‌ಸಿವಿಟಿ / ಎಸಿವಿಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿ೦ದ ಐಟಿಐ ಪೂರ್ಣಗೊಳಿಸಿರಬೇಕು.
ಫಿಟ್ಟರ್, ಎಲೆಕ್ನಿಷಿಯನ್, ಇನ್‌ಸ್ಟ್ರುಮೆಂಟ್ ಮೆಕಾನಿಕ್, ಮಿಲ್ ರೈಟ್ / ಮೆಂಟೇನೆನ್ಸ್ ಮೆಕಾನಿಕ್, ಮೆಕಾನಿಕ್ (ರೇಡಿಯೋ/ ಟಿವಿ), ಎಲೆಕ್ಟ್ರಾನಿಕ್ಸ್ ಮೆಕಾನಿಕ್, ಮೋಟಾರ್ ವೆಹಿಕಲ್ ಮೆಕಾನಿಕ್, ವೈರ್‌ಮನ್, ಟ್ರ‍್ಯಾಕ್ಟರ್ ಮೆಕಾನಿಕ್, ಅರ್ಮೆಚೂರ್ ಆಂಡ್ ಕಾಯಿಲ್ ವೈಂಡರ್, ಡೀಸೆಲ್ ಮೆಕಾನಿಕ್, ಹೀಟ್ ಎಂಜಿನ್, ಟರ್ನರ್, ಮಷಿನಿಸ್ಟ್ ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡೀಷನಿAಗ್ ಟ್ರೇಡ್ ಗಳಲ್ಲಿ ಐಟಿಐ ಮಾಡಿದವರು ಅರ್ಜಿ ಸಲ್ಲಿಸಬಹುದು.
ಎಸ್ಸೆಸ್ಸೆಲ್ಸಿ ಮತ್ತು ಐಟಿಐ ಹೊರತಾಗಿ ಆ್ಯಕ್ಟ್ ಅಪ್ರೆಂಟಿಸ್ ಷಿಪ್ / 3 ವರ್ಷಗಳ ಡಿಪ್ಲೊಮಾ (ಮೆಕಾನಿಕಲ್, ಎಲೆಕ್ಟಿಕಲ್, ಎಲೆಕ್ಟ್ರಾನಿಕ್ಸ್/ಆಟೊಮೊಬೈಲ್ ಎಂಜಿನಿಯರಿ೦ಗ್) ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಹೊರತಾಗಿ ಎಂಜಿನಿಯರಿ೦ಗ್ ವಿಷಯದಲ್ಲಿ ಪದವಿ ತೇರ್ಗಡೆಯಾಗಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ ಎಷ್ಟಿರಬೇಕು?
- ಕನಿಷ್ಠ ವಯೋಮಿತಿ : 18 ವರ್ಷ
- ಗರಿಷ್ಠ ವಯೋಮಿತಿ : 30 ವರ್ಷ
ವರ್ಗವಾರು ವಯೋಮಿತಿ ಸಡಿಲಿಕೆ
- ಎಸ್‌ಸಿ/ ಎಸ್‌ಟಿ : 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ : 3 ವರ್ಷ
- ಮಾಜಿ ಸೈನಿಕರು, ವಿಚ್ಛೇದಿತ ಮಹಿಳೆಯರು, ವಿಧವೆಯರು ಮೊದಲಾದ ಮಹಿಳಾ ಅಭ್ಯರ್ಥಿಗಳಿಗೆ : 35-40 ವರ್ಷ
ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ
ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು 3ನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಅಪ್ಟಿಟ್ಯೂಡ್ ಟೆಸ್ಟ್ ಎಂದು ನಡೆಸಲಾಗುತ್ತದೆ. ಇವುಗಳಲ್ಲಿ ಮೊದಲ ಎರಡು ಹಂತದ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ.
ಅಂದರೆ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು. ಆದರೆ, 3ನೇ ಹಂತದ ಅಪ್ಟಿಟ್ಯೂಡ್ ಟೆಸ್ಟ್ ಅನ್ನು ಹಿಂದಿ ಅಥವಾ ಇಂಗ್ಲಿಷ್’ನಲ್ಲಿ ಮಾತ್ರ ಬರೆಯಬಹುದಾಗಿದೆ. ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಆಯಾ ಪರೀಕ್ಷಾ ಮಾಧ್ಯಮವನ್ನು ಸ್ಪಷ್ಟವಾಗಿ ನಮೂದಿಸಬೇಕು.
ಅರ್ಜಿ ಶುಲ್ಕದ ವಿವರ
ಎಸ್‌ಸಿ/ಎಸ್‌ಟಿ/ ಮಾಜಿ ಸೈನಿಕರು, ಮಹಿಳೆಯರು, ತೃತೀಯ ಲಿಂಗಿ ಅಭ್ಯರ್ಥಿಗಳು ಮತ್ತು ಆರ್ಥಿಕ ಹಿಂದುಳಿದ ವರ್ಗದವರಿಗೆ 250 ರೂಪಾಯಿ ನಿಗದಿಪಡಿಸಲಾಗಿದೆ. ಸದರಿ 250 ರೂಪಾಯಿ ಅರ್ಜಿ ಶುಲ್ಕವನ್ನು ಮೊದಲನೇ ಹಂತದ ಕಂಪ್ಯೂಟರ್ ಆಧರಿತ ಪರೀಕ್ಷೆಗೆ (ಸಿಬಿಟಿ) ಹಾಜರಾದ ನಂತರ ಅಭ್ಯರ್ಥಿಗಳಿಗೆ ಹಿಂತಿರುಗಿಸಲಾಗುತ್ತದೆ.
ಮೇಲ್ಕಾಣಿಸಿ ಅಭ್ಯರ್ಥಿಗಳ ಹೊರತಾಗಿ ಉಳಿದೆಲ್ಲ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ 500 ರೂಪಾಯಿ ಶುಲ್ಕದಲ್ಲಿ 400 ರೂಪಾಯಿ ಅನ್ನು ಸಿಬಿಟಿಗೆ ಹಾಜರಾದ ಬಳಿಕ ಆಯಾ ಅಭ್ಯರ್ಥಿಗಳಿಗೆ ಹಿಂತಿರುಗಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿವರ
ಜೂನ್ 25, 2024 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು; ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಂಡೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವಾಗ ಗೊಂದಲಗಳಿದ್ದಲ್ಲಿ ಸಹಾಯ ಇಮೇಲ್ : rrbhelp@csc.gov.in/ ದೂರವಾಣಿ: 9592001188 ಸಂಪರ್ಕಿಸಬಹುದು.
- ಅಧಿಸೂಚನನೆ : Download
- ಭಾರತೀಯ ರೈಲ್ವೆ ಇಲಾಖೆ ವೆಬ್ಸೈಟ್ : ಇಲ್ಲಿ ಒತ್ತಿ
- ಬೆಂಗಳೂರು ಆರ್ಆರ್ಬಿ ವೆಬ್ಸೈಟ್ : ಇಲ್ಲಿ ಒತ್ತಿ