‘ಆಳ್ವಾಸ್ ಪ್ರಗತಿ 2025’ ಉದ್ಯೋಗ ಮೇಳವು (Alvas Pragati 2025 Job Fair) ಇದೇ ಆಗಸ್ಟ್ 1-2 ರಂದು ನಡೆಯಲಿದೆ. 15,900ಕ್ಕೂ ಅಧಿಕ ಹುದ್ದೆಗಳ ನೇಮಕವಾಗುವ ನಿರೀಕ್ಷೆ ಇದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಗ್ರಾಮೀಣ ಮತ್ತು ನಗರ ಪ್ರದೇಶದ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ, ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರಸಿದ್ಧ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಈ ವರ್ಷವೂ ಭರ್ಜರಿಯಾಗಿ ನಡೆಯಲಿದೆ. 2025ರ ಆಗಸ್ಟ್ 1 ಮತ್ತು 2ರಂದು, ಮೂಡಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ 15ನೇ ಆವೃತ್ತಿಯ ಮೇಳವನ್ನು ಆಯೋಜಿಸಲಾಗಿದೆ.
ಉದ್ಯೋಗ ಮೇಳದ ವೈಶಿಷ್ಟ್ಯಗಳು
ಸದರಿ ಉದ್ಯೋಗ ಮೇಳದಲ್ಲಿ 150ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದ್ದು; 15,900ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯುವ ನಿರೀಕ್ಷೆಯಿದೆ. ಈ ಕೆಳಕಂಡ ಎಲ್ಲಾ ಹಂತದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ ಈ ಮೇಳದಲ್ಲಿ ಭಾಗಿಯಾಗಲು ಅವಕಾಶವಿದೆ.
SSLC, PUC, ITI, Diploma, Graduation, Post Graduation, Nursing, Paramedical, Engineering, Pharmacy, Arts, Commerce, Management, Basic Sciences…
ನೇಮಕಾತಿಗೆ ಭಾಗವಹಿಸುವ ಪ್ರಮುಖ ಕ್ಷೇತ್ರಗಳು
- ಐಟಿ ಮತ್ತು ಐಟಿಇಎಸ್: 8 ಕಂಪನಿಗಳಿಂದ IT ಕ್ಷೇತ್ರದಲ್ಲಿ 125 ಹುದ್ದೆಗಳು. 24 ಕಂಪನಿಗಳಿಂದ ITES (BPO/KPO) ವಿಭಾಗದಲ್ಲಿ 4,000ಕ್ಕೂ ಹೆಚ್ಚು ಹುದ್ದೆಗಳು, ನಾನ್-ಕೋರ್ ಐಟಿ ಕ್ಷೇತ್ರದಲ್ಲಿ 1,000+ ಹುದ್ದೆಗಳು ಹಾಗೂ HR ಹುದ್ದೆಗಳಿಗೆ 20 ಉದ್ಯೋಗಾವಕಾಶಗಳು.
- ಬ್ಯಾಂಕಿಂಗ್ ಮತ್ತು ಹಣಕಾಸು: 27ಕ್ಕೂ ಅಧಿಕ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕಂಪನಿಗಳಿಂದ 2,300+ ಉದ್ಯೋಗಾವಕಾಶಗಳು
- ಹೆಲ್ತ್ ಕೇರ್ ಮತ್ತು ಫಾರ್ಮಾ: 25ಕ್ಕೂ ಹೆಚ್ಚು ಆಸ್ಪತ್ರೆಗಳು, 2,000+ ಹುದ್ದೆಗಳು ಮತ್ತು ಫಾರ್ಮಾ ಕ್ಷೇತ್ರದಲ್ಲಿ 5 ಪ್ರಮುಖ ಕಂಪನಿಗಳಿಂದ 250+ ಉದ್ಯೋಗಗಳು.
- ಮಾಧ್ಯಮ ಮತ್ತು ಟೆಲಿಕಾಂ: 10ಕ್ಕೂ ಹೆಚ್ಚು ಮೀಡಿಯಾ ಕಂಪನಿಗಳು, 180+ ಉದ್ಯೋಗಗಳು. ಟೆಲಿಕಾಂ, ಮಾರ್ಕೆಟಿಂಗ್, ಸೆಲ್ಸ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳಿಂದವೂ ಹೆಚ್ಚುವರಿ ಉದ್ಯೋಗಾವಕಾಶಗಳು ಲಭ್ಯವಿವೆ.
- ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು: ಶಾಲಾ ಮತ್ತು ಕಾಲೇಜು ಕ್ಷೇತ್ರದ ಹಲವಾರು ಸಂಸ್ಥೆಗಳು ಶಿಕ್ಷಕ ಹುದ್ದೆಗಳ ನೇಮಕಾತಿಗೆ ಪ್ರಸ್ತುತವಾಗಿವೆ.

ಯಾರೆಲ್ಲ ಮೇಳದಲ್ಲಿ ಪಾಲ್ಗೊಳ್ಳಬಹುದು?
ವಿವಿಧ ವಿದ್ಯಾರ್ಹತೆ ಹೊಂದಿರುವವರು ಭಾಗವಹಿಸಬಹುದು. 2025ರ ಶೈಕ್ಷಣಿಕ ವರ್ಷದೊಳಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಅನುಭವ ಇರುವವರಿಗೂ, ಹೊಸದಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೂ ಸಮಾನ ಅವಕಾಶ.
ಉಚಿತ ವಸತಿ ಸೌಲಭ್ಯ
ಹೊರ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಜುಲೈ 31ರಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಿಗದಿತ ದಿನಾಂಕದ ಹಿಂದೆಯೇ ಆಗಮಿಸುವವರು ಈ ಸೌಲಭ್ಯ ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಸ್ವಯಂ ನೋಂದಣಿ ಮಾಡಬಹುದು. ಯಾವುದೇ ನೋಂದಣಿಶುಲ್ಕ ಇಲ್ಲ. ಎಲ್ಲರಿಗೂ ಮುಕ್ತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9741440490 / 7975223865/ 9611750531
ಈ ಮೇಳವು ನೂರಾರು ಉದ್ಯೋಗಾಕಾಂಕ್ಷಿಗಳ ಭವಿಷ್ಯ ನಿರ್ಮಿಸುವ ವೇದಿಕೆಯಾಗಿದ್ದು, ಈ ಅಪರೂಪದ ಅವಕಾಶವನ್ನು ಕೈಚೆಲ್ಲದಿರಿ. ನಿಮ್ಮ ರೆಜ್ಯೂಮ್, ಗುರುತು ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳ ನಕಲು, ಪಾಸ್‌ಪೋರ್ಟ್ ಫೋಟೋ ಜೊತೆಗೆ ತಪ್ಪದೇ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಿ.
- ಉದ್ಯೋಗಮೇಳ ನಡೆಯುವ ದಿನಾಂಕ: ಆಗಸ್ಟ್ 1-2, 2025
- ಮೇಳ ನಡೆಯುವ ಸ್ಥಳ: ಆಳ್ವಾಸ್ ಕ್ಯಾಂಪಸ್, ಮೂಡಬಿದಿರೆ
- ನೋಂದಣಿ ಲಿಂಕ್: Apply Now