Agniveer Vayu Recruitment 2026- ಪಿಯುಸಿ, ಡಿಪ್ಲೊಮಾ ಅಭ್ಯರ್ಥಿಗಳಿಗೆ ವಾಯುಪಡೆ ಅಗ್ನಿವೀರರ್ ಹುದ್ದೆಗಳು

Spread the love

WhatsApp Group Join Now
Telegram Group Join Now

ಪಿಯುಸಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ ವಾಯು (Agniveer Vayu Recruitment 2026) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶಸೇವೆಯ ಕನಸು ಸಾಕಾರಗೊಳಿಸಿಕೊಳ್ಳಲು ಇದೀಗ ಭಾರತೀಯ ವಾಯುಪಡೆ (Indian Air Force) ಪಿಯುಸಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಅಗ್ನಿವೀರ ವಾಯು (Agniveer Vayu) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಈ ಅಧಿಸೂಚನೆಯಂತೆ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಫೆಬ್ರವರಿ 1, 2026 ಕೊನೆಯ ದಿನಾಂಕವಾಗಿದೆ. ನೇಮಕಾತಿ ಪ್ರಕ್ರಿಯೆಗಳು ಮಾರ್ಚ್ 30, 2026ರಿಂದ ಆರಂಭವಾಗಲಿವೆ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Azim Premji Scholarship- ಅಜೀಂ ಪ್ರೇಮ್‌ಜಿ ವತಿಯಿಂದ ವಿದ್ಯಾರ್ಥಿಗಳಿಗೆ ₹30,000 ಸ್ಕಾಲರ್‌ಶಿಪ್ | ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ

Agniveer Vayu ಎಂದರೇನು?

ಅಗ್ನಿಪಥ ಯೋಜನೆಯಡಿ (Agnipath Scheme) ನಾಲ್ಕು ವರ್ಷಗಳ ಕಾಲ ಭಾರತೀಯ ವಾಯುಪಡೆಯ ವಿವಿಧ ತಾಂತ್ರಿಕ ಮತ್ತು ನಾನ್-ತಾಂತ್ರಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಯುವಕರನ್ನು ಅಗ್ನಿವೀರ ವಾಯು ಎಂದು ಕರೆಯಲಾಗುತ್ತದೆ.

ಈ ಅವಧಿಯಲ್ಲಿ ಉತ್ತಮ ಸಂಬಳ, ತರಬೇತಿ, ಶಿಸ್ತು ಮತ್ತು ಸೇವಾ ಅನುಭವ ದೊರೆಯುತ್ತದೆ. ನಾಲ್ಕು ವರ್ಷಗಳ ಬಳಿಕ ಆಯ್ದ ಅಗ್ನಿವೀರರಿಗೆ ಶಾಶ್ವತ ಸೇವೆಯ ಅವಕಾಶವೂ ಸಿಗುತ್ತದೆ.

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

ಯಾರು ಅರ್ಜಿ ಸಲ್ಲಿಸಬಹುದು? (ವಿದ್ಯಾರ್ಹತೆ)

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಯಾವುದೇ ಒಂದು ವಿದ್ಯಾರ್ಹತೆ ಹೊಂದಿದ್ದರೆ ಸಾಕು:

ಪಿಯುಸಿ (ವಿಜ್ಞಾನ): ಪಿಯುಸಿಯಲ್ಲಿ ವಿಜ್ಞಾನ ವಿಷಯ (Physics, Maths) ಓದಿರಬೇಕು. ಕನಿಷ್ಠ 50% ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು. ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50% ಅಂಕ ಕಡ್ಡಾಯ.

ಎಂಜಿನಿಯರಿಂಗ್ ಡಿಪ್ಲೊಮಾ: ಸರ್ಕಾರದಿಂದ ಅಂಗೀಕಾರಗೊಂಡ ಪಾಲಿಟೆಕ್ನಿಕ್ ಕಾಲೇಜಿನಿಂದ 3 ವರ್ಷಗಳ ಡಿಪ್ಲೊಮಾ ಓದಿರಬೇಕು. ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಕಂಪ್ಯೂಟರ್, ಇನ್‌ಸ್ಟ್ರುಮೆಂಟೇಶನ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ಯಾವುದಾದರ ಒಂದು ವಿಭಾಗದಲ್ಲಿ ಡಿಪ್ಲೊಮಾ ಪೂರೈಸಿರಬೇಕು.

ವೊಕೇಷನಲ್ ಕೋರ್ಸ್: 2 ವರ್ಷಗಳ ವೊಕೇಷನಲ್ + ನಾನ್ ವೊಕೇಷನಲ್ ಕೋರ್ಸ್ ಮಾಡಿರಬೇಕು. ನಾನ್ ವೊಕೇಷನಲ್‌ನಲ್ಲಿ Physics ಮತ್ತು Maths ಓದಿರಬೇಕು. ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50% ಅಂಕ ಪಡೆದಿರಬೇಕು.

ಗಮನಿಸಿ: ವಿಜ್ಞಾನ ವಿಷಯ ಓದಿಲ್ಲದಿದ್ದರೂ, ಮೇಲ್ಕಂಡ ವೊಕೇಷನಲ್ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: KSCCF Recruitment 2026- ಪಿಯುಸಿ, ಪದವಿಧರರಿಗೆ ಸಹಕಾರ ಮಹಾ ಮಂಡಳಿಯಲ್ಲಿ ಉದ್ಯೋಗಾವಕಾಶ | ಅರ್ಜಿ ಆಹ್ವಾನ

ವಯೋಮಿತಿ ಮತ್ತು ದೈಹಿಕ ಅರ್ಹತೆ

ವಯೋಮಿತಿ: ಜನವರಿ 1, 2006 ರಿಂದ ಜುಲೈ 1, 2009ರ ನಡುವೆ ಜನಿಸಿದವರು ಮಾತ್ರ ಈ ಹುದ್ದೆಗಳಿಗೆ ಅರ್ಹರು. ಗರಿಷ್ಠ ವಯಸ್ಸು 21 ವರ್ಷ ಮೀರಬಾರದು.

WhatsApp Group Join Now
Telegram Group Join Now

ದೈಹಿಕ ಮಾನದಂಡಗಳು: ಕನಿಷ್ಠ ಎತ್ತರವು 152.5 ಸೆಂ.ಮೀ ಹಾಗೂ ಎದೆಯ ಸುತ್ತಳತೆ 77 ಸೆಂ.ಮೀ ಹೊಂದಿರಬೇಕು.

Agniveer Vayu Recruitment 2026
Agniveer Vayu Recruitment 2026

ಆನ್‌ಲೈನ್ ಅರ್ಜಿಗೆ ಬೇಕಾದ ದಾಖಲೆಗಳು

ಅಭ್ಯರ್ಥಿಯ ವಿದ್ಯಾರ್ಹತೆಗೆ ಅನುಗುಣವಾಗಿ ಮಾತ್ರ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು:

  • SSLC ತೇರ್ಗಡೆ ಪ್ರಮಾಣಪತ್ರ
  • SSLC ಅಂಕಪಟ್ಟಿ
  • ಪಿಯುಸಿ / ಡಿಪ್ಲೊಮಾ / ವೊಕೇಷನಲ್ ಕೋರ್ಸ್ ಅಂಕಪಟ್ಟಿಗಳು (ಡಿಪ್ಲೊಮಾದಲ್ಲಿ ಇಂಗ್ಲಿಷ್ ಇಲ್ಲದಿದ್ದರೆ SSLC ಇಂಗ್ಲಿಷ್ ಅಂಕಪಟ್ಟಿ ಕಡ್ಡಾಯ)
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಇತರೆ ಅಗತ್ಯ ದಾಖಲೆಗಳು

ಇದನ್ನೂ ಓದಿ: LIC Bima Sakhi Yojana- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಎಲ್‌ಐಸಿ ಉದ್ಯೋಗ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡುವ ಸುವರ್ಣಾವಕಾಶ

ನೇಮಕ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತವಾಗಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಆನ್‌ಲೈನ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇರುತ್ತದೆ. ವಸ್ತುನಿಷ್ಠ ಮಾದರಿ (MCQ) ಪ್ರಶ್ನೆಗಳು ಇರಲಿದ್ದು; ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ದ್ವಿತೀಯ ಪಿಯುಸಿ (CBSE) ಪಠ್ಯಕ್ರಮ ಇರುತ್ತದೆ. ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಅಂಕಗಳು ಇರಲಿವೆ. ಪರೀಕ್ಷೆಯ ದಿನಾಂಕ, ಸಮಯ ಮತ್ತು ಕೇಂದ್ರದ ವಿವರಗಳನ್ನು ಅಭ್ಯರ್ಥಿಗಳ ಇ-ಮೇಲ್ ಐಡಿಗೆ ಪ್ರವೇಶಪತ್ರದ ಮೂಲಕ ತಿಳಿಸಲಾಗುತ್ತದೆ.

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

ಮುಖ್ಯ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 1, 2026
  • ನೇಮಕಾತಿ ಪ್ರಕ್ರಿಯೆ ಆರಂಭ: ಮಾರ್ಚ್ 30, 2026ರಿಂದ

ಹೆಚ್ಚಿನ ಹಾಗೂ ಅಧಿಕೃತ ಮಾಹಿತಿಗಾಗಿ ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್‌ agnipathvayu.cdac.inಗೆ ಭೇಟಿ ನೀಡಿ.

ಪಿಯುಸಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ ಯುವಕರಿಗೆ ಇದು ಜೀವನ ಬದಲಾಯಿಸಬಹುದಾದ ಅವಕಾಶ. ಉತ್ತಮ ಸಂಬಳ, ಶಿಸ್ತುಬದ್ಧ ಜೀವನ, ದೇಶಸೇವೆ ಮತ್ತು ಭವಿಷ್ಯದ ಭದ್ರತೆ ಎಲ್ಲವೂ ಒಂದೇ ವೇದಿಕೆಯಲ್ಲಿ ದೊರೆಯುತ್ತದೆ. ಅರ್ಹರಾಗಿರುವವರು ಸಮಯ ಕಳೆಯದೆ ಇಂದೇ ಅರ್ಜಿ ಸಲ್ಲಿಸಿ, ನಿಮ್ಮ ವಾಯುಪಡೆಯ ಕನಸಿಗೆ ಹಾರಾಟ ಕೊಡಿ…

SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!