ಸರ್ಕಾರಿ ನೌಕರರಿಗೆ (Government employees) ವಯಸ್ಸಿಗೆ ಅನುಗುಣವಾಗಿ ಹೆಚ್ಚುವರಿ ಪಿಂಚಣಿ (Additional Pension) ಒದಗಿಸಲು ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಪಿಂಚಣಿದಾರರಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ವಯೋವೃದ್ಧರಾಗಿರುವ ಸರ್ಕಾರಿ ನಿವೃತ್ತ ನೌಕರರಿಗೆ ಗೌರವಾರ್ಥವಾಗಿ ಕೇಂದ್ರ ಸರ್ಕಾರ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ಅಧಿಸೂಚನೆಯಡಿ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ನೀಡಲು ನಿರ್ಧರಿಸಲಾಗಿದೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಇತ್ತೀಚಿನ ಪ್ರಕಟಣೆಯ ಪ್ರಕಾರ, ಕೇಂದ್ರ ಸರ್ಕಾರವು 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿಗಳಿಗೆ ‘ಅನುಕಂಪದ ಭತ್ಯೆ’ (Compassionate Allowance) ಹೆಸರಿನಲ್ಲಿ ಹೆಚ್ಚುವರಿ ಪಿಂಚಣಿಯನ್ನು ನೀಡುತ್ತದೆ.
Karnataka Weather Yellow Alert- ಭರ್ಜರಿ ಮಳೆ | ರಾಜ್ಯದ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಯಾರಿಗಾಗಿ ಈ ಹೊಸ ಯೋಜನೆ?
ಈ ಹೆಚ್ಚುವರಿ ಪಿಂಚಣಿ ಯೋಜನೆ ಮೂಲತಃ ಕೇಂದ್ರ ಸರ್ಕಾರದ ನಿವೃತ್ತ ನಾಗರಿಕ ಸೇವೆಯ ಉದ್ಯೋಗಿಗಳು, ಅಂದರೆ Central Civil Pensioners ಗಾಗಿ ಜಾರಿಗೆ ಬಂದಿದೆ. 80 ವರ್ಷ ಅಥವಾ ಹೆಚ್ಚು ವಯಸ್ಸು ತಲುಪಿದ ವಯೋವೃದ್ಧರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸಲು ಅನುಕಂಪದ ಭತ್ಯೆ (Compassionate Allowance) ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಿವಿಲ್ ಸೇವಾ ಸಂಹಿತೆ (CCS) ನಿಯಮಗಳು, 2021ರ ನಿಯಮ 44 ಉಪ-ನಿಯಮ (6) ಪ್ರಕಾರ, ನಿವೃತ್ತ ಸರ್ಕಾರಿ ನೌಕರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ಮೇಲೆ, ಅವರಿಗೆ ಹೆಚ್ಚುವರಿ ಪಿಂಚಣಿ ಹಾಗೂ ಅನುಕಂಪದ ಭತ್ಯೆ (Additional Pension and Dearness Relief) ನೀಡಲಾಗುತ್ತದೆ.

ಹೆಚ್ಚುವರಿ ಪಿಂಚಣಿಯ ಪ್ರಮಾಣ
ಒಬ್ಬ ನಿವೃತ್ತರು ಮಾಸಿಕ ₹20,000 ಪಿಂಚಣಿ ಪಡೆಯುತ್ತಿದ್ದರೆ, ಅವರು 90 ವರ್ಷಕ್ಕೆ ತಲುಪಿದ ಮೇಲೆ 40% ಹೆಚ್ಚುವರಿಯಾಗಿ ₹8,000 ಅನುಕಂಪದ ಭತ್ಯೆ ಸೇರಿ, ಒಟ್ಟು ₹28,000 ಪಿಂಚಣಿಗೆ ಅರ್ಹರಾಗುತ್ತಾರೆ. ವಯಸ್ಸಿಗೆ ಅನುಗುಣವಾಗಿ ಹೆಚ್ಚುವರಿ ಪಿಂಚಣಿ ಶೇಕಡಾವಾರು ಪ್ರಮಾಣ ಈ ಕೆಳಗಿನಂತಿದೆ:
- 80 ರಿಂದ 85 ವರ್ಷ: ಮೂಲ ಪಿಂಚಣಿಯ 20%
- 85 ರಿಂದ 90 ವರ್ಷ: ಮೂಲ ಪಿಂಚಣಿಯ 30%
- 90 ರಿಂದ 95 ವರ್ಷ: ಮೂಲ ಪಿಂಚಣಿಯ 40%
- 95 ರಿಂದ 100 ವರ್ಷ: ಮೂಲ ಪಿಂಚಣಿಯ 50%
- 100 ವರ್ಷ ಮತ್ತು ಹೆಚ್ಚಿನವರು: ಮೂಲ ಪಿಂಚಣಿಯ 100%
CBSE 10th 12th Result 2025- ಸಿಬಿಎಸ್‌ಇ SSLC-PUC ಫಲಿತಾಂಶ ಈ ದಿನ ಪ್ರಕಟ | ಮಹತ್ವದ ಮಾಹಿತಿ ಇಲ್ಲಿದೆ…
ಅನುಕಂಪದ ಭತ್ಯೆ ಎಷ್ಟು ದಿನದಿಂದ ಜಾರಿಯಾಗುತ್ತದೆ?
ಪಿಂಚಣಿದಾರರು ನಿಗದಿತ ವಯಸ್ಸಿಗೆ ತಲುಪಿದ ಮೊದಲ ದಿನದಿಂದಲೇ ಈ ಹೆಚ್ಚುವರಿ ಪಿಂಚಣಿ ಜಾರಿಗೆ ಬರುತ್ತದೆ. ಪಿಂಚಣಿ ವಿತರಣಾ ಇಲಾಖೆಯು ಅಥವಾ ಬ್ಯಾಂಕುಗಳು ಸ್ವಯಂಚಾಲಿತವಾಗಿ ಈ ಬದಲಾವಣೆಯನ್ನು ಅಳವಡಿಸುತ್ತವೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಪ್ರಕಟಣೆಯ ಪ್ರಕಾರ, ಎಲ್ಲ ಸರ್ಕಾರಿ ಪಿಂಚಣಿ ವಿತರಕರಿಗೆ ಹಾಗೂ ಬ್ಯಾಂಕುಗಳಿಗೆ ಈ ನವೀನ ಮಾರ್ಗಸೂಚಿಗಳ ಕುರಿತು ಸೂಕ್ತ ಮಾಹಿತಿ ನೀಡಲಾಗಿದೆ.
ಯಾವುದೇ ವಿಳಂಬವಿಲ್ಲದೆ ಪಿಂಚಣಿದಾರರು ಹೆಚ್ಚುವರಿ ಹಣವನ್ನು ಪಡೆಯಲು ಆಟೋಮೇಟೆಡ್ ವ್ಯವಸ್ಥೆ ರೂಪಿಸಲಾಗಿದೆ. ಪಿಂಚಣಿದಾರರು ತಮ್ಮ ಪೇನ್‌ಶನ್ ಪೇ ಸ್ಲಿಪ್‌ಗಳನ್ನು ಪರಿಶೀಲಿಸಿ ಈ ಹೆಚ್ಚುವರಿ ಹಣವು ಜಮೆಯಾಗಿತ್ತೇ ಎಂದು ಖಚಿತಪಡಿಸಿಕೊಳ್ಳಬೇಕು.
ಪಿಂಚಣಿದಾರರ ಗಮನಕ್ಕೆ…
ಈ ಹೆಚ್ಚುವರಿ ಪಿಂಚಣಿಯ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅಥವಾ ನಿಮ್ಮ ಬ್ಯಾಂಕು ಪಾವತಿ ಮಾಡದಿದ್ದರೆ, CPAO (Central Pension Accounting Office) ಅಥವಾ ಸಂಬಂಧಿತ ಬ್ಯಾಂಕ್‌ಗಳ ಪಿಂಚಣಿ ವಿಭಾಗಕ್ಕೆ ದೂರು ನೀಡಬಹುದು.
ಇದರ ಜೊತೆಗೆ, ಪಿಂಚಣಿದಾರರು ತಮ್ಮ ವಯೋ ಪ್ರಮಾಣಪತ್ರಗಳು ಅಥವಾ ಬಯೋಮೆಟ್ರಿಕ್ ವಿವರಗಳು ಅಪ್‌ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.