ಕರ್ನಾಟಕದ ಗ್ರಾಮೀಣ ಭಾಗದ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆಗೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮ ಪಂಚಾಯತಿ (Gram Panchayat) ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಖಾತಾ (e-Khata) ನೀಡುವ ಬಗ್ಗೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕಳೆದ 2025ರ ಮಾರ್ಚ್ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993’ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ತಿದ್ದುಪಡಿಯ ಮೂಲಕ ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳಿಗೆ ಇ-ಖಾತೆ (e-Khata) ನೀಡುವ ಪ್ರಕ್ರಿಯೆ ಆರಂಭವಾಗಲಿದೆ.
ಇ-ಖಾತೆ ಎಂದರೇನು?
ಇ-ಖಾತೆ ಎಂದರೆ ಡಿಜಿಟಲ್ ಆಸ್ತಿ ದಾಖಲೆ ಪದ್ದತಿ. ಇದನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿನ ಮನೆ, ಭೂಮಿ ಮತ್ತು ಕಟ್ಟಡಗಳ ಮಾಲಿಕತ್ವ, ವಿಸ್ತೀರ್ಣ, ಬಾಕಿ ತೆರಿಗೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸರ್ಕಾರ ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗುತ್ತದೆ.
Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…
ತಿದ್ದುಪಡಿ ನಿಯಮದಿಂದ ಆಗುವ ಪ್ರಯೋಜನಗಳು
199-ಬಿ ಮತ್ತು 199-ಸಿ ಸೆಕ್ಷನ್‌ಗಳ ಸೇರ್ಪಡೆ: ಗ್ರಾಮೀಣ ಪ್ರದೇಶದ ಎಲ್ಲಾ ಖಾಸಗಿ ಆಸ್ತಿಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಈ ಎರಡು ಹೊಸ ಸೆಕ್ಷನ್‌ಗಳನ್ನು ಸೇರ್ಪಡಿಸಲಾಗುತ್ತಿದೆ. ತಿದ್ದುಪಡಿಯು ಪ್ರಸ್ತುತ 1993ರ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಸ್ತಿತ್ವದಲ್ಲಿರುವ ಶ್ರೇಣಿಗಳಿಗೆ ಪೂರಕವಾಗಲಿದೆ.
96 ಲಕ್ಷ ಅನಧಿಕೃತ ಆಸ್ತಿಗಳ ನಿಯಂತ್ರಣ: ಈವರೆಗೆ ಕೇವಲ 44 ಲಕ್ಷ ಆಸ್ತಿಗಳೇ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲಾಗಿದ್ದು, ಉಳಿದ 96 ಲಕ್ಷ ಆಸ್ತಿಗಳು ಸಿಸ್ಟಮ್‌ನ ಹೊರಗಿದ್ದವು. ಇವುಗಳ ಮೇಲೆ ಸೂಕ್ತ ಶುಲ್ಕ ಅಥವಾ ದಂಡ ವಿಧಿಸಿ, ಸರಕಾರವು ಇವುಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಯೋಜಿಸುತ್ತಿದೆ.
ನೋಂದಣಿಯಾದ ಹಾಗೂ ಕ್ರಮಬದ್ಧವಲ್ಲದ ಆಸ್ತಿಗಳ ದಾಖಲೆ: 2013ರ ನಂತರ ಅಥವಾ ಮೊದಲು ನೋಂದಣಿಯಾದ ಎಲ್ಲಾ ನಿವೇಶನಗಳು ಹಾಗೂ ಕಟ್ಟಡಗಳು ಇ-ಖಾತೆಗೆ ಒಳಪಡುತ್ತವೆ. ಇದರಿಂದ ಆಸ್ತಿ ಮಾರಾಟ ಅಥವಾ ಖರೀದಿಯ ಸಮಯದಲ್ಲಿ ಯಾವುದೇ ಕಾನೂನು ತೊಂದರೆಗಳಿಲ್ಲದೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.
ತೆರಿಗೆ ಆಧಾರದ ಮೇಲೆ ಸ್ಥಳೀಯ ಆದಾಯ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ನಿಖರವಾದ ಆಸ್ತಿ ತೆರಿಗೆ ಸಂಗ್ರಹಿಸುವ ಅವಕಾಶ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಸಂಪತ್ತು ಒದಗುತ್ತದೆ.

Rover Land Survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ | ರಾಜ್ಯಾದ್ಯಂತ ರೋವರ್ ಸರ್ವೇ ಕಾರ್ಯ
ಇ-ಸ್ವತ್ತು ತಂತ್ರಾಂಶದ ಕುರಿತು
2013ರ ಜೂನ್ 15ರಂದು ಕರ್ನಾಟಕದಲ್ಲಿ ಇ-ಸ್ವತ್ತು ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭವಾಯಿತು. ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಆಸ್ತಿಗಳ ಸಮಗ್ರ ದಾಖಲೆ ಇಂಟರ್‌ನೆಟ್ ಆಧಾರಿತ ವ್ಯವಸ್ಥೆಯಲ್ಲಿ ನಿರ್ವಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ನಕಲಿ ದಾಖಲೆ, ವಿವಾದಾತ್ಮಕ ಆಸ್ತಿ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ.
ಈ ತಿದ್ದುಪಡಿಯ ಮೂಲಕ ಸರ್ಕಾರ ಪಾರದರ್ಶಕ ಆಸ್ತಿ ನಿರ್ವಹಣೆ, ಗ್ರಾಮ ಪಂಚಾಯತಿ ಆದಾಯದಲ್ಲಿ ಏರಿಕೆ ಹಾಗೂ ಆಸ್ತಿ ಖರೀದಿ/ಮಾರಾಟಕ್ಕೆ ಅನುಕೂಲತೆ ಕಲ್ಪಿಸುವಂತಹ ಮೂರು ಪ್ರಮುಖ ಗುರಿಗಳನ್ನು ಹೊಂದಿದೆ. ಆ ಮೂಲಕ ಇನ್ಮುಂದೆ ಇ-ಖಾತೆ ಇದ್ದರೆ ಆಸ್ತಿಯನ್ನು ಖರೀದಿಸಲು ಅಥವಾ ಮಾರಲು ಯಾವುದೇ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗಿಲ್ಲ.
Karnataka Pre Monsoon- ರಾಜ್ಯಾದ್ಯಂತ ‘ಪೂರ್ವ ಮುಂಗಾರು’ ಅಬ್ಬರ | ಈ ವರ್ಷ ಭರ್ಜರಿ ಮುಂಗಾರು ಮಳೆ ಮುನ್ಸೂಚನೆ
ಯಾವೆಲ್ಲ ಆಸ್ತಿಗಳಿಗೆ ಈ ತಿದ್ದುಪಡಿ ಅನ್ವಯವಾಗುತ್ತದೆ?
‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993’ ತಿದ್ದುಪಡಿಯು ಎಲ್ಲ ಖಾಸಗಿ ಆಸ್ತಿಗಳಿಗೆ ಅನ್ವಯವಾಗುತ್ತದೆ. ಸರ್ಕಾರಿ ಭೂಮಿ, ಅರಣ್ಯ ಭೂಮಿ, ಶಾಸನಬದ್ಧ ಸಂಸ್ಥೆಗಳ ಆಸ್ತಿಗಳು ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಹೊರತುಪಡಿಸಿಈ ಕೆಳಗಿನ ಆಸ್ತಿಗಳಿಗೆ ಅನ್ವಯವಾಗಲಿದೆ:
- ಕ್ರಮಬದ್ಧವಲ್ಲದ ನಿವೇಶನಗಳು
- ಗುತ್ತಿಗೆದಾರರಿಂದ ನಿರ್ಮಿಸಲಾದ ಮನೆಗಳು
- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ ಕಟ್ಟಡಗಳು
- 2013ರ ನಂತರ ಮತ್ತು ಮುಂಚಿತವಾಗಿ ನೋಂದಣಿಯಾದ ಆಸ್ತಿಗಳು
ಇ-ಖಾತೆ ವ್ಯವಸ್ಥೆ ಅನ್ವಯವಾಗುವ ಮೂಲಕ ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಬಹುಪಾಲು ಲಾಭವಾಗಲಿದೆ. ಇದಿಂದ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುವುದು ಮಾತ್ರವಲ್ಲದೆ, ಗ್ರಾಮೀಣ ಅಭಿವೃದ್ಧಿಗೆ ಅವಶ್ಯಕವಾದ ಆರ್ಥಿಕ ಮೂಲಗಳನ್ನು ಸೃಷ್ಟಿಸಲು ಇದು ಸಹಕಾರಿಯಾಗಲಿದೆ. ಸರ್ಕಾರದ ಈ ತೀರ್ಮಾನ ಗ್ರಾಮೀಣ ಭಾಗದ ಆಸ್ತಿ ಮಾಲೀಕತ್ವದ ದೃಷ್ಟಿಕೋಣದಲ್ಲಿ ಕ್ರಾಂತಿಕಾರಿಯಾಗಿ ಪರಿಗಣಿಸಬಹುದು.