ಜೀವನದಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಮನೆಯ ಕನಸು (Dream of home) ಕಾಣುತ್ತಾರೆ. ಆದರೆ ಆ ಕನಸು ನನಸಾಗಿಸಲು ಅಗತ್ಯವಾಗಿ ಆರ್ಥಿಕ ನೆರವು (Financial assistance) ಬೇಕು. ಆದರೆ ಹಣಕಾಸು ಸಮಸ್ಯೆಯಿಂದ ದೇಶದಲ್ಲಿ ಇನ್ನೂ ಕೋಟ್ಯಾಂತರ ಜನಕ್ಕೆ ಸ್ವಂತ ಮನೆ ಇಲ್ಲ.
ಇಂಥ ಜನರ ಮನೆಯ ಕನಸು ನನಸು ಮಾಡಲು ಕೇಂದ್ರ ಸರ್ಕಾರ 2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana- PMAY) ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಸಹಾಯಧನ (ಸಬ್ಸಿಡಿ) ಮತ್ತು ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವುದರಿಂದ ಮನೆ ನಿರ್ಮಾಣ ಕನಸು ನನಸು ಮಾಡಿಕೊಳ್ಳಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಯನ್ನು PMAY-Gramin (ಗ್ರಾಮೀಣ) ಮತ್ತು PMAY-Urban (ನಗರ) ಎಂಬ ಎರಡು ವಿಧವನ್ನಾಗಿ ವಿಂಗಡಿಸಲಾಗಿದೆ. ಅಂದರೆ ಗ್ರಾಮೀಣ ಮತ್ತು ನಗರ ಪ್ರದೇಶದ ವಸತಿ ರಹಿತ ಫಲಾನುಭವಿಗಳು ಸರ್ಕಾರದ ಸಬ್ಸಿಡಿ ಅಥವಾ ಹಣಕಾಸು ನೆರವು ಪಡೆದು ಮನೆ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.
Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…
ಯಾರಿಗೆ ಎಷ್ಟಷ್ಟು ಸಬ್ಸಿಡಿ ಮತ್ತು ಸಾಲ ಸೌಲಭ್ಯ ಸಿಗುತ್ತದೆ?
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈ ಕೆಳಗಿನಂತೆ ವಿವಿಧ ಆರ್ಥಿಕ ಹಿನ್ನಲೆಗೆ ಅನುಗುಣವಾಗಿ ಸಬ್ಸಿಡಿ ಮತ್ತು ಸಾಲದ ನೆರವುಗಳನ್ನು ಒದಗಿಸುತ್ತದೆ.
1. EWS (ಆರ್ಥಿಕವಾಗಿ ಹಿಂದುಳಿದ ವರ್ಗ): ಈ ವರ್ಗದ ಆದಾಯ ಮಿತ ವರ್ಷಕ್ಕೆ ₹6 ಲಕ್ಷದ ವರೆಗೆ ನಿಗದಿಪಡಿಸಲಾಗಿದ್ದು; ಗರಿಷ್ಠ 30 ಚದರ ಮೀಟರ್ ಗಾತ್ರದ ಮನೆ ನಿರ್ಮಾಣಕ್ಕೆ ನೆರವು ಪಡೆಯಬಹುದು. ಸದರಿ ಆಸ್ತಿಯು ಕಡ್ಡಾಯವಾಗಿ ಮಹಿಳೆಯ ಹೆಸರಿನಲ್ಲಿ ಇರಬೇಕು. ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ₹6 ಲಕ್ಷದ ವರೆಗೆ ಸಾಲ ಸೌಲಭ್ಯ ಸಿಗಲಿದೆ. ಇದರಲ್ಲಿ ₹2.67 ಲಕ್ಷದ ವರೆಗೆ ಸಹಾಯಧನ (ಸಬ್ಸಿಡಿ) ಸಿಗುತ್ತದೆ.
2. LIG (ಕಡಿಮೆ ಆದಾಯದ ವರ್ಗ): ಕಡಿಮೆ ಆದಾಯದ ವರ್ಗದ ಫಲಾನುಭವಿಗಳಿಗೆ ₹6 ಲಕ್ಷ ದಿಂದ ₹12 ಲಕ್ಷದ ವರೆಗೆ ವಾರ್ಷಿಕ ಆದಾಯ ಮಿತ ನಿಗದಿಪಡಿಸಲಾಗಿದೆ. ಮನೆಯ ಗಾತ್ರ ಗರಿಷ್ಠ 60 ಚದರ ಮೀಟರ್ ಇರಲಿದ್ದು; ಇಲ್ಲೂ ಕೂಡ ಕಡ್ಡಾಯವಾಗಿ ಮಹಿಳೆಯ ಹೆಸರಿನಲ್ಲಿ ಆಸ್ತಿ ಇರಬೇಕು. ಇವರಿಗೆ ₹9 ಲಕ್ಷದ ವರೆಗೆ ಸಾಲ ಸೌಲಭ್ಯ ಸಿಗಲಿದ್ದು; ಇದರಲ್ಲಿ ₹2.35 ಲಕ್ಷದ ವರೆಗೆ ಉಚಿತ ಸಬ್ಸಿಡಿ ಸಿಗಲಿದೆ.
ಈ ಜಿಲ್ಲೆಗಳ 917 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ

3. MIG-I (ಮಧ್ಯಮ ಆದಾಯ ವರ್ಗ- ಹಂತ 1): ಮಧ್ಯಮ ಆದಾಯ ವರ್ಗ- ಹಂತ 1ರ ಫಲಾನುಭವಿಗಳಿಗೆ ₹12 ಲಕ್ಷ ದಿಂದ ₹18 ಲಕ್ಷದ ವರೆಗೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಲಾಗಿದ್ದು; ಕಡ್ಡಾಯವಾಗಿ ಮಹಿಳೆ ಹೆಸರಿನಲ್ಲಿ ಆಸ್ತಿ ನೋಂದಣಿಯಾಗಿದ್ದರೆ 160 ಚದರ ಮೀಟರ್ ವರೆಗೆ ಮನೆ ನಿರ್ಮಾಣ ಮಾಡಿಕೊಳ್ಳು ಅವಕಾಶವಿದೆ. ಇವರಿಗೆ ₹12 ಲಕ್ಷದ ವರೆಗೆ ಸಾಲ ಸೌಲಭ್ಯ ಮತ್ತು ₹2.30 ಲಕ್ಷದ ವರೆಗೆ ಸಬ್ಸಿಡಿ ಸಿಗುತ್ತದೆ.
4. MIG-II (ಮಧ್ಯಮ ಆದಾಯ ವರ್ಗ- ಹಂತ 2): ಇನ್ನು ಮಧ್ಯಮ ಆದಾಯ ವರ್ಗ- ಹಂತ 2ರ ಫಲಾನುಭವಿಗಳಿಗೆ ವಾರ್ಷಿಕ ಆದಾಯವು ₹18 ಲಕ್ಷದ ಮಿತಿಯಲ್ಲಿರಬೇಕು. ಇವರಿಗೆ ಮನೆಯ ಮಹಿಳೆಯ ಹೆಸರಿನಲ್ಲಿ ಆಸ್ತಿ ಕಡ್ಡಾಯವಿಲ್ಲ. ಗರಿಷ್ಠ 200 ಚದರ ಮೀಟರ್ ಮನೆ ನಿರ್ಮಾಣಕ್ಕೆ ₹12 ಲಕ್ಷದ ವರೆಗೆ ಸಾಲ ಸಿಗಲಿದ್ದು; ₹2.30 ಲಕ್ಷದ ವರೆಗೆ ಉಚಿತ ಸಬ್ಸಿಡಿ ಲಭ್ಯವಾಗುತ್ತದೆ.
MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಪ್ರಧಾನ ಮಂತ್ರಿ ಆವಾಸ್ (PMAY) ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಾಲ ಮತ್ತು ಸಬ್ಸಿಡಿ ಸೌಲಭ್ಯ ಪಡೆಯಲು ಈ ಕೆಳಗಿನ ಅಗತ್ಯ ದಾಖಲಾತಿಗಳು ಬೇಕಾಗುತ್ತವೆ:
- ಆಧಾರ್ ಕಾರ್ಡ್
- ವಿಳಾಸ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಪಾಸ್‌ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಅವಕಾಶವಿದ್ದು; ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಜಾಲತಾಣದಲ್ಲಿ (https://pmaymis.gov.in/) ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ವೇಳೆ Citizen Assessment ವಿಭಾಗದಲ್ಲಿ ನಿಮ್ಮ ವಿವರಗಳನ್ನು ನಮೂದಿಸಬಹುದು.
ಮೊಬೈಲ್ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದಲ್ಲಿ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಎಂಬ ಆಧಾರ ಬಲವನ್ನು ಎಲ್ಲರಿಗೂ ಒದಗಿಸಲು ಒಂದು ದಿಟ್ಟ ಹೆಜ್ಜೆಯಾಗಿದೆ. ಈ ಯೋಜನೆಯ ಸದುಪಯೋಗ ಪಡೆದು ನಿಮ್ಮ ಕನಸಿನ ಮನೆ ನಿರ್ಮಿಸಲು ಆರಂಭಿಸಬಹುದು. ನಿಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ, ಅರ್ಹತೆ ಇದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ.
ಅರ್ಜಿ ಲಿಂಕ್ : Apply Now
ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ Types of Home Loan

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.