PM Surya Ghar Solar Yojana- ನಿಮ್ಮ ಮನೆಗೆ ಉಚಿತ ಸೋಲಾರ್ ಕರೆಂಟ್‌ಗಾಗಿ ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್…

Spread the love

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆಯಡಿ (PM Surya Ghar Muft Bijli Yojana) ನಿಮ್ಮ ಮನೆಗೆ ಸೋಲಾರ್ ವಿದ್ಯುತ್ (Solar Rooftop System) ಪಡೆಯಲು ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

WhatsApp Group Join Now
Telegram Group Join Now

ಮೊದಲೆಲ್ಲ ಸೂರ್ಯ ಘರ್ ಯೋಜನೆಯಡಿ ನೋಂದಣಿಗಾಗಿ ಹಲವು ದಾಖಲೆಗಳೊಂದಿಗೆ ಅರ್ಜಿದಾರರು ಡಿಸ್ಕಾಂ ಕಚೇರಿಗಳಿಗೆ ಅಲೆಯಬೇಕಿತ್ತು. ಈಗ ಅಂತಹ ತಾಪತ್ರಯವಿಲ್ಲ. ಎಲ್ಲವನ್ನೂ ಡಿಜಿಟಲೀಕರಣಗೊಳಿಸಿದ್ದು; ಯೋಜನೆಯ ವೆಬ್‌ಸೈಟ್‌ನಲ್ಲಿ ಕೇವಲ ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸೂರ್ಯ ಘರ್ ಯೋಜನೆ ಪ್ರಾರಂಭವಾದ ಬಳಿಕ ಸೋಲಾರ್ ಘಟಕ ಸ್ಥಾಪನೆ ಪ್ರತೀ ತಿಂಗಳೂ ಹತ್ತು ಪಟ್ಟು ಹೆಚ್ಚಾಗುತ್ತಿದ್ದು; 2025ರ ಮಾರ್ಚ್ ವೇಳೆಗೆ 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆಗೆ ಗುರಿ ಹೊಂದಿದ್ದು, 2027ರ ವೇಳೆಗೆ ಒಂದು ಕೋಟಿ ಘಟಕಗಳ ಸ್ಥಾಪನೆ ಪೂರೈಸಲು ಮುಂದಾಗಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ವಿವರಣೆ ನೀಡಿದೆ.

MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ

ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆಯಡಿ ನಿಮ್ಮ ಮನೆಗೆ ಸೋಲಾರ್ ವಿದ್ಯುತ್ (Solar Rooftop System) ಪಡೆಯಲು ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ...
PM Surya Ghar Solar Yojana
ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್

ದೇಶಾದ್ಯಂತ ಲಕ್ಷಾಂತರ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದೆ. ಈಗಾಗಲೇ 3,100 ಕೋಟಿ ರೂಪಾಯಿಗೂ ಹೆಚ್ಚು ಸಬ್ಸಿಡಿ ಹಣವನ್ನು ವಿತರಿಸಲಾಗಿದೆ. ಯೋಜನೆ ಅಳವಡಿಸಿಕೊಂಡ ಮನೆಗಳಿಗೆ 15 ದಿನಗಳಲ್ಲೇ ಸಬ್ಸಿಡಿ ಸಿಗುತ್ತಿರುವುದರಿಂದ ಗಣನೀಯ ಪ್ರಮಾಣದಲ್ಲಿ ಅರ್ಜಿಗಳು ಹರಿದು ಬರುತ್ತಿವೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ಮಾಹಿತಿ ನೀಡಿದೆ.

ನಿಮ್ಮ ಮನೆಗೆ ಸೋಲಾರ್ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳಲು ಸಹಾಯಧನ ಮತ್ತು ಸಾಲ ಸಹ ಸಿಗುತ್ತದೆ. ಇದರಿಂದ ಫಲಾನುಭವಿಗಳಿಗೆ ಯಾವುದೇ ರೀತಿಯ ವಿದ್ಯುತ್ ಬಿಲ್ ಬರುವುದಿಲ್ಲ. ಒಂದು ತಿಂಗಳಿಗೆ 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗುತ್ತದೆ. ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಮಾರಾಟ ಕೂಡ ಮಾಡಬಹುದು.

Electric Scooter Zelio- ₹50,000ಕ್ಕಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ | ಝೆಲಿಯೋ ಲಿಟಲ್ ಗ್ರೇಸಿ ಹೊಸ ಸ್ಕೂಟರ್

ಸಹಾಯಧನ (ಸಬ್ಸಿಡಿ) ವಿವರಗಳು

ಸೂರ್ಯ ಘರ್ ಯೋಜನೆಯಡಿಯಲ್ಲಿ ಸರ್ಕಾರವು ವಿವಿಧ ಸಾಮರ್ಥ್ಯದ ಘಟಕಗಳಿಗೆ ನಿಗದಿತ ಮೊತ್ತದ ಈ ಕೆಳಗಿನಂತೆ ಸಬ್ಸಿಡಿಯನ್ನು ಒದಗಿಸುತ್ತಿದೆ:

  • 1 ಕಿಲೋ ವ್ಯಾಟ್- ₹30,000
  • 2 ಕಿಲೋ ವ್ಯಾಟ್- ₹60,000
  • 3 ಕಿಲೋ ವ್ಯಾಟ್- ₹78,000
ಸೂರ್ಯ ಘರ್ ಯೋಜನೆಯಡಿ ಅರ್ಜಿ ಸಲ್ಲಿಕೆ ಹೇಗೆ?

ತಮ್ಮ ಮನೆಗೆ ಸೋಲಾರ್ ಘಟಕ ಅಳವಡಿಸಿಕೊಳ್ಳಲು ಆಸಕ್ತಿ ಇರುವವರು ‘ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜಿ’್ಲ ಯೋಜನೆ ವೆಬ್‌ಸೈಟ್’ನಲ್ಲಿ ನೇರವಾಗಿ ಮತ್ತು ಅಷ್ಟೇ ತ್ವರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲೇ ಹೇಳಿದಂತೆ pmsuryaghar.gov.inನಲ್ಲಿ ಈಗ ಐದೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದಕ್ಕಾಗಿ ಮೊದಲಿಗೆ  https://www.pmsuryaghar.gov.in/ ವೆಬ್‌ಸೈಟ್‌ಗೆ ಭೆಟಿ ನೀಡಿ. ನಂತರ ಅಲ್ಲಿ ‘Apply for Rooftop Solar’ ಕ್ಲಿಕ್ ಮಾಡಿ. ನಿಮ್ಮ ಡಿಸ್ಕಾಂ ಆಯ್ಕೆಮಾಡಿ. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಣಿ ಮಾಡಿ. ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್: Apply ಮಾಡಿ

Welfare Schemes- ಉಚಿತ ಮನೆ, ಕಾರು, ಆಟೋ, ಬೈಕ್ ಸಬ್ಸಿಡಿ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!