Gruha Lakshmi money release : ಕಳೆದ ಎರಡು ತಿಂಗಳುಗಳಿ೦ದ ಗೃಹಲಕ್ಷ್ಮೀ ಯೋಜನೆಯ (Karnataka Gruha Lakshmi Scheme) 2,000 ರೂಪಾಯಿ ಹಣಕ್ಕಾಗಿ ಹಂಬಲಿಸುತ್ತಿದ್ದ ಫಲಾನುಭವಿ ಮಹಿಳೆಯರಿಗೆ ನಾಗರ ಪಂಚಮಿ ಹಾಗೂ ವರಮಹಾಲಕ್ಷ್ಮೀ ಹಬ್ಬದ ಸಮಯಕ್ಕೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ನಾಳೆ ಆಗಸ್ಟ್ 7ರಿಂದ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ ಎನ್ನಲಾಗುತ್ತಿದೆ.
ಈಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಜಮಾ ಕುರಿತು ಮಾಧ್ಯಮಗಳು ತೀವ್ರತರವಾಗಿ ಪ್ರಶ್ನೆ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸದ್ಯದಲ್ಲೇ 2,000 ಹಣ ಜಮಾ ಆಗಲಿದೆ ಎಂಬ ಮಾಹಿತಿ ನೀಡಿದ್ದರು. ಆ ಪ್ರಕಾರ ಇದೀಗ ಹಣ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಬಾಕಿ ಉಳಿದ ಗೃಹಲಕ್ಷ್ಮೀ ಯೋಜನೆ ಕಂತುಗಳೆಷ್ಟು?
ರಾಜ್ಯದಲ್ಲಿ ಕಳೆದ 2023ರ ಆಗಸ್ಟ್’ನಿಂದ ಗೃಹಲಕ್ಷ್ಮಿ ಯೋಜನೆ ಚಾಲ್ತಿಯಲ್ಲಿದೆ. ಸುಮಾರು 1.18 ಕೋಟಿ ಮಹಿಳೆಯರು ಈ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 10 ತಿಂಗಳು ಈ ಯೋಜನೆಯ ಹಣ ಅರ್ಹ ಮಹಿಳೆಯರನ್ನು ತಲುಪಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್-ಮೇ ತಿಂಗಳ ಹಣವನ್ನು ಮೇ ತಿಂಗಳ ಮೊದಲ ವಾರದಲ್ಲೇ ಜಮಾ ಮಾಡಲಾಗಿತ್ತು. ಬಳಿಕ ಲೋಕಸಭಾ ಚುನಾವಣೆ ಸಮಯದಲ್ಲೂ ಹಣ ಜಮಾ ಮಾಡಲಾಗಿತ್ತು. ಅದಾದ ನಂತರ ಜೂನ್ ಹಾಗೂ ಜುಲೈ ತಿಂಗಳ ಹಣ ಬಾರದೇ ಲಕ್ಷಾಂತರ ಮಹಿಳೆಯರು ಕಂಗಾಲಾಗಿದ್ದಾರೆ.
ಮೊದಲ ಹಂತದಲ್ಲಿ ಈ ಜಿಲ್ಲೆಯ ಮಹಿಳೆಯರಿಗೆ ಹಣ ಜಮಾ
ಇದೀಗ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಶುರುವಾಗಿದ್ದು; ನಾಳೆಯಿಂದ ಅರ್ಹ ಮಹಿಳೆಯರ ಖಾತೆಗೆ 2,000 ರೂಪಾಯಿ ಹಣ ಜಮಾ ಆಗಲಿದೆ. ಅದರ ಬೆನ್ನಲ್ಲೇ ಜುಲೈ, ಆಗಸ್ಟ್ ತಿಂಗಳ ಹಣ ಬಿಡುಗಡೆಯಾಗುವ ಸಂಭವವಿದೆ.
ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆ ಆಗಿದ್ದು, ಮೊದಲ ಹಂತದಲ್ಲಿ 533 ಕೋಟಿ ರೂಪಾಯಿ ಹಣ ಪಾವತಿ ಪ್ರಕ್ರಿಯೆ ಆರಂಭವಾಗಿದೆ. ಮೂಲಗಳ ಪ್ರಕಾರ ಮೊದಲ ಹಂತದಲ್ಲಿ ಹಣ ಬಿಡುಗಡೆಯಾಗಲಿರುವ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ:
- ಬೆಳಗಾವಿ
- ಕಲಬುರ್ಗಿ
- ಬೀದರ್
- ವಿಜಯಪುರ
- ಬಳ್ಳಾರಿ
- ರಾಯಚೂರು
- ಗದಗ
- ಬಾಗಲಕೋಟೆ
- ಹಾವೇರಿ
- ಕೊಪ್ಪಳ
- ಯಾದಗಿರಿ
- ಚಿತ್ರದುರ್ಗ
- ಬೆ೦ಗಳೂರು ಗ್ರಾಮಾಂತರ
- ಕೋಲಾರ
ಉಳಿದ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗೆ ಯಥಾಪ್ರಕಾರ ಹಣ ಜಮಾ ಆಗಲಿದೆ ಎನ್ನಲಾಗುತ್ತಿದೆ.
1 thought on “ಕಡೆಗೂ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಹಣ ಬಿಡುಗಡೆ | ಈ ಜಿಲ್ಲೆಯ ಮಹಿಳೆಯರಿಗೆ ಮೊದಲು ಹಣ ಜಮಾ Gruha Lakshmi money release”