Anganwadi Montessori Recruitment 2024 : ದೇಶದಲ್ಲಿಯೇ ಮೊದಲ ಬಾರಿಗೆ ಅಂಗನವಾಡಿಯಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಿದ ಕೀರ್ತಿಗೆ ಕರ್ನಾಟಕ ಭಾಜನವಾಗಿದೆ. ಇದೀಗ ಅಂಗನವಾಡಿಗಳನ್ನು ಸಂಪೂರ್ಣ ಸರ್ಕಾರಿ ಮಾಂಟೆಸ್ಸರಿಯನ್ನಾಗಿ (Government Montessori) ಬದಲಾಯಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ.
ಈಗಾಗಲೇ ಸಾಂಕೇತಿಕವಾಗಿ ಕಳೆದ ಜುಲೈ 22ರಂದು 250 ಅಂಗನವಾಡಿಗಳಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಲಾಗಿದೆ. ಆರಂಭದಲ್ಲಿ ಸದ್ಯಕ್ಕೆ ರಾಜ್ಯಾದ್ಯಂತ 5,000 ಅಂಗನವಾಡಿಗಳಲ್ಲಿ ಮಂಟೆಸ್ಸರಿ ಆರಂಭಿಸುವ ಗುರಿ ಹೊಂದಲಾಗಿತ್ತು. ಇದೀಗ ಈ ಗುರಿ 18,000 ಅಂಗನವಾಡಿಗಳಿಗೆ ವಿಸ್ತರಿಸಿಸಲಾಗಿದೆ.
18,000 ಅಂಗನವಾಡಿ ಮಾಂಟೆಸ್ಸರಿ ಆರಂಭ
ಇ೦ದಿನ ಆಧುನಿಕ ಕಾಲದಲ್ಲಿ ಮಾರ್ಡನ್ ಶಿಕ್ಷಣ ನೀಡುವುದು ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಒಟ್ಟು 18,000 ಅಂಗನವಾಡಿಯಲ್ಲಿ ಮಾಂಟೆಸ್ಸರಿ ತರಗತಿಗಳನ್ನು ಅಂದರೆ, LKG ಮತ್ತು UKG ತರಗತಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಹಾಗಾದರೆ ಅಂಗನವಾಡಿಗಳಲ್ಲಿ ಆರಂಭವಾಗಲಿರುವ ಸರ್ಕಾರಿ ಮಾಂಟೆಸ್ಸರಿ ಟೀಚರ್ ಹುದ್ದೆಗಳ ನೇಮಕಾತಿ ಹೇಗೆ ನಡೆಯಲಿದೆ? ಇದಕ್ಕಾಗಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳೇನು? ಶೈಕ್ಷಣಿಕ ಅರ್ಹತೆಗಳೇನು? ನೇಮಕ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಇದನ್ನೂ ಓದಿ: ಅಂಗನವಾಡಿ ನೇಮಕಾತಿ ಜಿಲ್ಲಾವಾರು ಖಾಲಿ ಹುದ್ದೆಗಳು | ಈ ಜಿಲ್ಲೆಗಳಿಂದ ಅರ್ಜಿ ಆಹ್ವಾನ… Karnataka Anganwadi Vacancies
ಅಂಗನವಾಡಿ ಯೋಜನೆಗೆ ಕರ್ನಾಟವೇ ಮೂಲ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿದ ಮಾಹಿತಿ ಪ್ರಕಾರ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಅಂಗನವಾಡಿ ಯೋಜನೆಯನ್ನು ಆರಂಭಿಸಿದ್ದು; ನಮ್ಮ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಮೊದಲ ಅಂಗನವಾಡಿ ಆರಂಭವಾಯಿತು. ರಾಜ್ಯದಲ್ಲಿ ಮೊದಲು 100 ಇದ್ದ ಅಂಗನವಾಡಿಗಳು ಇದೀಗ ಬರೋಬ್ಬರಿ 61,876 ಅಂಗನವಾಡಿ ಕೇಂದ್ರಗಳಾಗಿವೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿ೦ದ ಕರ್ನಾಟಕದಲ್ಲಿ ಮೊದಲು ಆರಂಭವಾದ ಅಂಗನವಾಡಿ ಯೋಜನೆಗೆ ಈಗ ‘ಸರಕಾರಿ ಮಾಂಟೆಸ್ಸರಿ’ ಎಂದು ನಾಮಕರಣ ಮಾಡಿ ಉನ್ನತೀಕರಿಸುವ ಐತಿಹಾಸಿಕ ಕೆಲಸ ಆರಂಭವಾಗಿದೆ. ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ ಹೆಗ್ಗಳಿಕೆಗೆ ಕರ್ನಾಟಕಕ್ಕೆ ಸಲ್ಲುತ್ತದೆ.
ಇದನ್ನೂ ಓದಿ: ಅಂಗನವಾಡಿ ಸರ್ಕಾರಿ ಮಾಂಟೆಸ್ಸರಿ ಟೀಚರ್ ನೇಮಕಾತಿ: ಯಾರಿಗೆಲ್ಲ ಸಿಗಲಿದೆ ಅವಕಾಶ? Govt Montessori Teacher Recruitment 2024

ಅಂಗನವಾಡಿ ಸರ್ಕಾರಿ ಮಾಂಟೆಸ್ಸರಿ ಹುದ್ದೆಗಳೆಷ್ಟು?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 18,000 ಮಾಂಟೆಸ್ಸರಿ ಆರಂಭವಾಗಲಿವೆ. ಈ ಮಾಂಟೆಸ್ಸರಿಗಳಿಗೆ ಟೀಚರ್ ನೇಮಕ ನಡೆಯಲಿದ್ದು; ಇದರಲ್ಲಿ ಈಗಾಗಲೇ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಜೊತೆಗೆ ಅಗತ್ಯ ತರಬೇತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರನ್ನೇ ಮಾಂಟೆಸ್ಸರಿ ಭೋದನೆ ನೇಮಕ ಮಾಡಿಕೊಳ್ಳಲಾಗುತ್ತದೆ. ಬಾಕಿ ಉಳಿದ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯಲಿದೆ.
ರಾಜ್ಯದಲ್ಲಿರುವ ಎಲ್ಲಾ 61,876 ಅಂಗನವಾಡಿ ಕೇಂದ್ರಗಳ ಪೈಕಿ ಉನ್ನತ ಶಿಕ್ಷಣ ಹಾಗೂ ಪದವಿ ಶಿಕ್ಷಣ ಪಡೆದವರು 8,045 ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಕಿ ಉಳಿದ ಸುಮಾರು 10,000 ಅಂಗನವಾಡಿಗಳಿಗೆ ಹೊಸ ನೇಮಕಾತಿ ನಡೆಯಬೇಕಿದೆ. ಇದಲ್ಲಿ ಪಿಯುಸಿ ವಿದ್ಯಾರ್ಹತೆ ಹೊಂದಿ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ಮಾಡುವವರಿಗೂ ಅವಕಾಶ ಸಿಗಲಿದೆ.
ಮಾಂಟೆಸ್ಸರಿ ಟೀಚರ್ ಹುದ್ದೆಗೆ ಅರ್ಹತೆಗಳೇನು?
ಇದಕ್ಕೂ ಮೊದಲು ರಾಜ್ಯದ ಸರ್ಕಾರಿ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಯೋಜನೆ ಸಿದ್ಧವಾಗಿತ್ತು. ಆಗ, ಸರ್ಕಾರಿ ಎಲ್‌ಕೆಜಿ, ಯುಕೆಜಿ ತರಗತಿ ಟೀಚರ್ ನೇಮಕಾತಿಗೆ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿತ್ತು. ಇದೀಗ ಆರಂಭವಾಗಲಿರುವ ‘ಸರ್ಕಾರಿ ಮಾಂಟೆಸ್ಸರಿ’ ಟೀಚರ್ ಹುದ್ದೆಗಳಿಗೆ ಅವೇ ಮಾನದಂಡಗಳು ಅನ್ವಯವಾಗುವ ಸಂಭವವಿದೆ.
- ಸರಕಾರಿ ಎಲ್‌ಕೆಜಿ ಹಾಗೂ ಯುಕೆಜಿ ಶಾಲಾ ಶಿಕ್ಷಕಿಯರಾಗಲು ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
- NCTE ಮಾನ್ಯತೆ ಪಡೆದ ಸಂಸ್ಥೆಯಿ೦ದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೊಮಾ ಇನ್ ನರ್ಸರಿ ಟೀಚರ್ಸ್ ಎಜ್ಯುಕೇಶನ್/ ಪ್ರೀ- ಸ್ಕೂಲ್ ಎಜ್ಯುಕೇಶನ್/ ಅರ್ಲಿ ಚೈಲ್ಡ್ಹುಡ್ ಎಜುಕೇಶನ್ ಪ್ರೊಗ್ರಾಂ (ಡಿ.ಇ.ಸಿ.ಇಡಿ) ಅಥವಾ ಬಿ.ಇಡಿ (ನರ್ಸರಿ) ಅರ್ಹತೆ ಹೊಂದಿರಬೇಕು.
- ಒಂದು ವೇಳೆ ಈ ಮೇಲಿನ ಅರ್ಹತೆಯುಳ್ಳ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆಯುವುದರ ಜತೆಗೆ NCTE ಮಾನ್ಯತೆ ಪಡೆದ ಸಂಸ್ಥೆಯಿ೦ದ ಡಿ.ಎಡ್ ತರಬೇತಿ ಹೊಂದಿದವರು ನೇಮಕಾತಿ ಮಾಡಲು ಸೂಚಿಸಲಾಗಿತ್ತು.
ಇದೀಗ ಹೊಸದಾಗಿ ಆರಂಭವಾಗಲಿರುವ ಅಂಗನವಾಡಿ ಮಾಂಟೆಸ್ಸರಿ ಟೀಚರ್ ಹುದ್ದೆಗಳಿಗೆ ಏನೆಲ್ಲ ಅರ್ಹತಾ ಮಾನದಂಡಗಳು ನಿಗದಿಯಾಗಲಿವೆ ಎಂಬುವುದನ್ನು ಕಾದು ನೋಡಬೇಕಿದೆ. ಇಷ್ಟರಲ್ಲೇ ರಾಜ್ಯಾದ್ಯಂತ ಸರ್ಕಾರಿ ಮಾಂಟೆಸ್ಸರಿ ಟೀಚರ್ ಹುದ್ದೆಗಳ ನೇಮಕಾತಿ ನಡೆಯುವ ಸಂಭವಿದೆ.
ಇದನ್ನೂ ಓದಿ: ಅಂಗನವಾಡಿ ನೇಮಕಾತಿ ಜಿಲ್ಲಾವಾರು ಖಾಲಿ ಹುದ್ದೆಗಳು | ಈ ಜಿಲ್ಲೆಗಳಿಂದ ಅರ್ಜಿ ಆಹ್ವಾನ… Karnataka Anganwadi Vacancies