ಮೀನುಗಾರಿಕೆ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಮತ್ಸ್ಯ ಸಂಪದ ಯೋಜನೆಯಡಿ ಇಂದೇ ಅರ್ಜಿ ಸಲ್ಲಿಸಿ PM Matsya Sampada Yojana PMMSY

Spread the love

PM Matsya Sampada Yojana PMMSY : 2024-25ನೇ ಸಾಲಿನ ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ (Pradhan Mantri Matsya Sampada Yojana – PMMSY) ಅಡಿಯಲ್ಲಿ ವಿವಿಧ ಮೀನು ಕೃಷಿ ಚಟುವಟಿಗಳಿಗೆ ಸಹಾಯಧನ (Fish Farming Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಎಷ್ಟು ಸಹಾಯಧನ? ಯಾವ್ಯಾವ ಜಲಕೃಷಿ ಚಟುವಟಿಕೆಗಳಿಗೆ ಎಷ್ಟೆಷ್ಟು ಸಬ್ಸಿಡಿ ಸಿಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…

ಏನಿದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ?
WhatsApp Group Join Now
Telegram Group Join Now

ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯ ಮೂಲಕ ‘ನೀಲಿಕ್ರಾಂತಿ’ಯನ್ನು (Blue Revolution) ತರುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

2020-21 ಆರ್ಥಿಕ ವರ್ಷದಿಂದ ಒಟ್ಟು 20,050 ಕೋಟಿ ರೂಪಾಯಿ ಹೂಡಿಕೆಯಲ್ಲಿ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ’ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ. ಇದು 2024-25ರ ವರೆಗೆ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸುವ ಗುರಿ ಹೊಂದಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಉಚಿತ ಚಿಕಿತ್ಸೆ? Karnataka Arogya Sanjeevini Scheme 

ಯಾರು ಫಲಾನುಭವಿಗಳು?

PMMSY ಯೋಜನೆಯಡಿಯಲ್ಲಿ ಮೀನುಗಾರಿಕೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ಒದಗಿಸಲಾಗುತ್ತದೆ. ಈ ಕೆಳಕಂಡ ವರ್ಗದ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ:

  • ಮೀನು ಕೃಷಿಕರು
  • ಮೀನುಗಾರರು
  • ಮೀನು ಕಾರ್ಮಿಕರು
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ
  • ಮಹಿಳೆಯರು
  • ವಿಕಲ ಚೇತನರು
  • ಮೀನುಗಾರಿಕೆ ಕ್ಷೇತ್ರದಲ್ಲಿನ ಸ್ವಸಹಾಯ ಗುಂಪುಗಳು (SHGs)
  • ಜಂಟಿ ಹೊಣೆಗಾರಿಕೆ ಗುಂಪುಗಳು (JLGs)
  • ಮೀನುಗಾರಿಕೆ ಸಹಕಾರ ಸಂಘಗಳು
  • ರೈತ ಮೀನುಗಾರರ ಉತ್ಪಾದಕ ಸಂಸ್ಥೆ
  • ಮೀನುಗಾರಿಕೆ ಒಕ್ಕೂಟಗಳು
  • ಉದ್ಯಮಿಗಳು ಮತ್ತು ಖಾಸಗಿ ಸಂಸ್ಥೆಗಳು

ಇದನ್ನೂ ಓದಿ: ಮನೆ ಮನೆಗೂ ಸೂರ್ಯ ಘರ್ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ… Free Solar Rooftop Yojana 2024

PM Matsya Sampada Yojana PMMSY
ಯಾವೆಲ್ಲ ಚಟುವಟಿಕೆಗಳಿಗೆ ಸಹಾಯಧನ ಸಿಗಲಿದೆ?

ರಾಜ್ಯದ ವಿವಿಧ ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆ ಅಡಿಯಲ್ಲಿ ವಿವಿಧ ಮೀನು ಕೃಷಿ ಚಟುವಟಿಕೆಗಳಿಗೆ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ವಲಯ ಯೋಜನೆಯಡಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಸಲಕರಣೆ ಕಿಟ್ಟುಗಳ ವಿತರಣೆ ಸಹಾಯಧನ ಒದಗಿಸಲಾಗುವದು. ಅದೇ ರೀತಿ ಮತ್ಸ್ಯ  ವಾಹಿನಿ ಯೋಜನೆಯಡಿ ಮೀನು ಮಾರಾಟಕ್ಕಾಗಿ ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿಸುವುದಕ್ಕೆ ಸಹಾಯಧನ ಒದಗಿಸಲಾಗುವುದು.

ರಾಜ್ಯವಲಯ ಯೋಜನೆ ಕಾರ್ಯಕ್ರಮದಡಿ ಮೀನುಗಾರರಿಗೆ ಉಚಿತವಾಗಿ ಸಲಕರಣೆ ಕಿಟ್ಟುಗಳು, ಮೀನು ಮರಿ ಖರೀದಿ, ಕೆರೆ/ ಜಲಾಶಯಗಳ ಅಂಚಿನಲ್ಲಿ ನಿರ್ಮಿಸಿರುವ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನುಮರಿ ಪಾಲನೆ ಮಾಡಲು ಸಹಾಯಧನ ಒದಗಿಸಲಾಗುವುದು.

ಇದನ್ನೂ ಓದಿ: 1,29,465 ಮಹಿಳೆಯರಿಗಿಲ್ಲ ಗೃಹಲಕ್ಷ್ಮಿ ಹಣ | 10 ದಿನಗಳಲ್ಲಿ ಜೂನ್-ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಜಮಾ Gruha Lakshmi Scheme Karnataka

ಎಷ್ಟೆಷ್ಟು ಸಹಾಯಧನ ಸಿಗಲಿದೆ?

ಸಾಮಾನ್ಯ ಫಲಾನುಭವಿಗಳಿಗೆ ಶೇ.40ರಷ್ಟು, ಪರಿಶಿಷ್ಟ ಜಾತಿ ಹಾಗೂ ಪಂಗಡ ಅಥವಾ ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಬಹುದು ಎಂದು ಮೀನುಗಾರಿಕೆ ಇಲಾಖೆಯ ವಿವಿಧ ಜಿಲ್ಲಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹ ಆಸಕ್ತ ಫಲಾನುಭವಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್’ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬAದಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.

ರಾಜ್ಯದ ವಿವಿಧ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಸಂಪರ್ಕ ವಿವರಕ್ಕೆ ಇಲ್ಲಿ ಒತ್ತಿ

ಮೀನುಗಾರಿಕೆ ಇಲಾಖೆ ಜಾಲತಾಣ : https://fisheries.karnataka.gov.in

ಇದನ್ನೂ ಓದಿ: ದನದ ಕೊಟ್ಟಿಗೆ ನಿರ್ಮಾಣಕ್ಕೆ 57,000 ಸಹಾಯಧನ | ಹೀಗೆ ಅರ್ಜಿ ಸಲ್ಲಿಸಿ… Cattle Shed Mgnrega Subsidy


Spread the love
WhatsApp Group Join Now
Telegram Group Join Now

Leave a Comment

error: Content is protected !!