Mudra Loan Limit Raised : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಜುಲೈ 23) ಮಂಡಿಸಿರುವ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್’ನಲ್ಲಿ (Union Budget 2024) ಹಲವು ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಈ ಪೈಕಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ (Pradhan Mantri Mudra Yojana- PMMY) ಸಾಲದ ಮಿತಿಯನ್ನು ದುಪ್ಪಟ್ಟು ಮಾಡಿದ್ದು; ಸಣ್ಣ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.
ಆಸಕ್ತರು 2024-25ನೇ ಸಾಲಿನ ಸಾಲಕ್ಕಾಗಿ ಪ್ರಧಾನ ಮಂತ್ರಿ ಮುದ್ರಾ ತುರಣ್ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಾಲ ಪಡೆಯಲು ಬೇಕಾಗುವ ದಾಖಲೆಗಳೇನು? ಯಾವ್ಯಾವ ಉದ್ಯೋಗಕ್ಕೆ ಸಾಲ ಸಿಗಲಿದೆ? ಯಾವ್ಯಾವ ಬ್ಯಾಂಕುಗಳು ಸಾಲ ನೀಡುತ್ತವೆ? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಏನಿದು ಮುದ್ರಾ ಲೋನ್?
ವ್ಯಾಪಾರ ಹಾಗೂ ಸಣ್ಣ ಉದ್ಯಮ ಸ್ಥಾಪಿಸಲ ಬಯಸುವವರಿಗೆ ಆರ್ಥಿಕ ಸಹಕಾರ ನೀಡಿ ಉತ್ತೇಜಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಏಪ್ರಿಲ್ 8, 2015ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಆರಂಭಿಸಿದೆ. ಸದರಿ ಯೋಜನೆಯು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ 50,000 ದಿಂದ 10 ಲಕ್ಷ ರೂಪಾಯಿ ವರೆಗೆ ಸಾಲವನ್ನು ಒದಗಿಸಲಾಗುತ್ತದೆ.
ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ಕಳೆದ ಮಾರ್ಚ್ 24, 2023ರ ವರೆಗೆ ಮುದ್ರಾ ಯೋಜನೆಯಡಿ 40.82 ಕೋಟಿ ಸಾಲ ಖಾತೆಗಳಿಗೆ ಸುಮಾರು 23.2 ಲಕ್ಷ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಯೋಜನೆಯಡಿಯಲ್ಲಿ ಶೇ.68ರಷ್ಟು ಮಹಿಳಾ ಉದ್ಯಮಿಗಳಿಗೆ ಮತ್ತು ಶೇ.51ರಷ್ಟು ಎಸ್‌ಸಿ/ ಎಸ್‌ಟಿ ಮತ್ತು ಒಬಿಸಿ ವರ್ಗಗಳ ಉದ್ಯಮಿಗಳಿಗೆ ಸೇರಿದೆ.
ಮುದ್ರಾ ತರುಣ್ ಲೋನ್ ಮಿತಿ ಹೆಚ್ಚಳ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಶಿಶು ಸಾಲ, ಕಿಶೋರ ಸಾಲ ಹಾಗೂ ತರುಣ್ ಸಾಲ ಎಂದು ಮೂರು ವಿಭಾಗಗಳಿದ್ದು; ಈ ಪೈಕಿ ತರುಣ್ ಸಾಲದ ಮಿತಿಯನ್ನು ಇಂದು ಮಂಡನೆಯಾದ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್’ನಲ್ಲಿ ದುಪ್ಪಟ್ಟು ಮಾಡಲಾಗಿದೆ.
ಶಿಶು ಸಾಲದ ಮಿತಿ 50,000 ರೂಪಾಯಿ, ಕಿಶೋರ ಸಾಲದ ಮಿತಿ 50,000 ದಿಂದ 5 ಲಕ್ಷ ರೂಪಾಯಿ ವರೆಗೆ ಇದೆ. ಇಲ್ಲಿಯ ವರೆಗೆ ತರುಣ್ ಸಾಲದ ಮಿತಿಯು 5 ಲಕ್ಷ ದಿಂದ 10 ಲಕ್ಷ ರೂಪಾಯಿ ವರೆಗೆ ಇತ್ತು. ಇದೀಗ ಈ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಉದ್ಯಮ, ಉದ್ಯೋಗಕ್ಕೆ ಸಿಗುತ್ತೆ ಮುದ್ರಾ ಸಾಲ
- ಆಹಾರ ಉತ್ಪನ್ನಗಳ ತಯಾರಿ
- ಕೈಮಗ್ಗ, ಬಟ್ಟೆ ತಯಾರಿಕೆ
- ಆಟೋ ರಿಕ್ಷಾ
- ಸಣ್ಣ ಸರಕುಗಳ ಸಾಗಾಟ ವಾಹನ
- ತ್ರಿಚಕ್ರ ವಾಹನ, ಇ-ರಿಕ್ಷಾ
- ಕಾರು, ಟ್ಯಾಕ್ಸಿ ಖರೀದಿ
- ಸೆಲೂನ್, ಬ್ಯೂಟಿಪಾರ್ಲರ್
- ವ್ಯಾಯಾಮ ಶಾಲೆ (ಜಿಮ್)
- ದಿನಸಿ ಅಂಗಡಿ, ಹೊಲಿಗೆ ಅಂಗಡಿ
- ಡಿ.ಟಿ.ಪಿ., ಝರಾಕ್ಸ್
- ಕೊರಿಯರ್ ಏಜೆಂಟ್ಸ್
- ಆಹಾರ ಮಳಿಗೆಗಳು
ಯಾವ್ಯಾವ ಬ್ಯಾಂಕುಗಳಲ್ಲಿ ಸಾಲ ಸಿಗಲಿದೆ?
ಸಾರ್ವಜನಿಕ ವಲಯದ ಬ್ಯಾಂಕುಗಳು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟç, ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಹಾಗೂ ಆಫ್ ಇಂಡಿಯಾ.
ಖಾಸಗಿ ವಲಯದ ಬ್ಯಾಂಕ್‌ಗಳು : ಆಕ್ಸಿಸ್ ಬ್ಯಾಂಕ್ ಲಿಮಿಟೆಡ್., ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಲಿಮಿಟೆಡ್., ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್., ಡಿಸಿಬಿ ಬ್ಯಾಂಕ್ ಲಿಮಿಟೆಡ್., ಫೆಡರಲ್ ಬ್ಯಾಂಕ್ ಲಿಮಿಟೆಡ್., ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು : ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಡೆಕ್ಕನ್ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್, ಬಿಹಾರ ಗ್ರಾಮೀಣ ಬ್ಯಾಂಕ್, ಮಧ್ಯ ಬಿಹಾರ ಗ್ರಾಮೀಣ ಬ್ಯಾಂಕ್
ಸಹಕಾರಿ ಬ್ಯಾಂಕುಗಳು : ಗುಜರಾತ್ ಸ್ಟೇಟ್ ಕೋ-ಆಪ್ ಬ್ಯಾಂಕ್, ಲಿಮಿಟೆಡ್ ಮೆಹ್ಸಾನಾ ಅರ್ಬನ್ ಕೋ-ಆಪ್ ಬ್ಯಾಂಕ್, ರಾಜ್ಕೋಟ್ ನಾಗರೀಕ್ ಸಹಕಾರಿ ಬ್ಯಾಂಕ್, ಕಲುಪುರ್ ಕಮರ್ಷಿಯಲ್ ಸಹಕಾರ ಬ್ಯಾಂಕ್
ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳೇನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಖಾಯಂ ವಿಳಾಸ ಪುರಾವೆ
- ವ್ಯಾಪಾರ ಸ್ಥಳ ವಿಳಾಸ
- ಮಾಲೀಕತ್ವದ ಪುರಾವೆ
- 3 ವರ್ಷದ ಬ್ಯಾಂಕ್ ಬ್ಯಾಲೆನ್ಸ್ ಶೀಟ್
- ಆದಾಯ ತೆರಿಗೆ ರಿಟರ್ನ್ಸ್
- ಸ್ವಯಂ ಮೌಲ್ಯಮಾಪನ ರಿಟರ್ನ್ಸ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
ಯಾವುದೇ ಮೇಲಾಧಾರವಿಲ್ಲದೇ ಸಿಗುತ್ತೆ ಸಾಲ
ಮುದ್ರಾ ಶಿಶು ಮತ್ತು ಕಿಶೋರ್ ಸಾಲಗಳಿಗೆ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕಗಳಿಲ್ಲ. ಆದರೆ ಮುದ್ರಾ ಸಾಲಗಳಲ್ಲಿಯೇ ಅತೀ ಹೆಚ್ಚು ಮೊತ್ತದ ತರುಣ್ ಸಾಲ ಪಡೆಯಲು ಪ್ರೊಸೆಸಿಂಗ್ ಶುಲ್ಕವಾಗಿ ಸಾಲದ ಮೊತ್ತದ ಶೇ.0.50 ಬಡ್ಡಿ ವಿಧಿಸಲಾಗುತ್ತದೆ. ಈ ಸಾಲಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ.
ಮುದ್ರಾ ಯೋಜನೆ ಜಾಮೀನು ರಹಿತ ಸಾಲ, ಈ ಸಾಲಗಳಿಗೆ ಯಾವುದೇ ಮೇಲಾಧಾರ ಇರುವುದಿಲ್ಲ. ಆದರೆ ನೆನಪಿಡಿ ಇದು ಬಡ್ಡಿರಹಿತ ಸಾಲವಲ್ಲ. ಸಾಲದ ಬಡ್ಡಿ ದರವು ಈ ಯೋಜನೆಯ ಮಾರ್ಗಸೂಚಿ ಮತ್ತು ಖಾತೆದಾರನ ಬ್ಯಾಂಕ್ ವ್ಯವಹಾರ, ಕ್ರೆಡಿಟ್ ಸ್ಕೋರ್‌ಗಳ ಮೇಲೆ ಅವಲಂಬಿಸಿರುತ್ತದೆ. ಮುದ್ರಾ ಯೋಜನೆ ಕುರಿತು ಹೆಚ್ಚಿನ ಮಾಹಿತಿಗೆ ಮೇಲ್ಕಾಣಿಸಿದ ಸ್ಥಳೀಯ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು.
ಮುದ್ರಾ ಯೋಜನೆಯ ಕುರಿತ ಹೆಚ್ಚಿನ ಮಾಹಿತಿಗೆ https://www.mudra.org.in/ ವೆಬ್‌ಸೈಟ್’ಗೆ ಭೇಟಿ ಒಡಿ…
ಅರ್ಜಿ ಸಲ್ಲಿಕೆ ಲಿಂಕ್ : Apply Now
ಇದನ್ನೂ ಓದಿ: ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ Types of Home Loan
ಮುದ್ರಾ ಲೋನ್:- ಮುದುಕರಿಗೆ ಮಾತ್ರ ಏಕೆ?
ಹಾಗಾದರೆ ಯುವಕರು ಯಾರೂ ಮರಣ ಹೊಂದುವುದಿಲ್ಲವೇ?
ವಯಸ್ಕರಿಗೆ ಏಕೆ ಸಾಲ ಕೊಡುವುದಿಲ್ಲ?
ಕೂಡಲೇ ಕಾರಣ ನೀಡಿ.