PM Micro Food Processing Scheme PMFME : ಪಿಎಮ್ಎಫ್ಇ ಯೋಜನೆಯು (PM Micro Food Processing Scheme- PM FME) ರೈತರು, ಮಹಿಳೆಯರಿಗೆ ವರದಾನವಾಗಿದ್ದು; ರಾಜ್ಯದಲ್ಲಿ ಸಾವಿರಾರು ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಕಿರು ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಶೇ.50ರಷ್ಟು ಸಬ್ಸಿಡಿ ಸೌಲಭ್ಯ ದೊರೆಯುವ ಈ ಯೋಜನೆಯ ಪ್ರಯೋಜ ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಏನಿದು ಪಿಎಮ್ಎಫ್ಇ ಯೋಜನೆ?
ಹೆಸರೇ ಹೇಳುವಂತೆ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PM Micro Food Processing Scheme- PM FME) ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಆರ್ಥಿಕ ನೆರವು, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲವನ್ನು ಒದಗಿಸುವ ವಿಶೇಷ ಯೋಜನೆಯಾಗಿದೆ.
ಕೇಂದ್ರ ಪ್ರಾಯೋಜಿತ ಈ ಯೋಜನೆಯನ್ನು ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯವು (ಎಂಒಎಫ್ಪಿಐ) ನಿರ್ವಹಿಸುತ್ತದೆ.
ರೈತರು, ಮಹಿಳೆಯರಿಗೆ ವರದಾನ
ಕರ್ನಾಟಕ ರಾಜ್ಯ ಕೃಷಿ ಇಲಾಖೆ ವತಿಯಿಂದ ಪಿಎಮ್ಎಫ್ಇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರೈತರು ತಾವು ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಆದಾಯ ದ್ವಿಗುಣಗೊಳಿಸಿಕೊಳ್ಳಲು ಪ್ರೇರಕವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ.
ಸ್ವಉದ್ಯೋಗ ಮೂಲಕ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಅನುಕೂಲವಾಗಿದೆ. ಸಾಂಪ್ರದಾಯಿಕ ಉದ್ಯಮ ನಡೆಸುವವರು ಈಗ ಯಂತ್ರಗಳನ್ನು ಖರೀದಿಸಿ ಉದ್ದಿಮೆಯನ್ನು ಅತ್ಯಾಧುನಿಕವಾಗಿ ಮುನ್ನಡೆಸಬಹುದಾಗಿದೆ.
ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?
ಈ ಯೋಜನೆಯನ್ನು ಬಳಸಿಕೊಂಡು ಹೊಸದಾಗಿ ಆಹಾರ ಸಂಸ್ಕರಣಾ ಉದ್ದಿಮೆ ಶುರು ಮಾಡಬಹುದು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲೂ ಕೂಡ ಇದರಲ್ಲಿ ಅವಕಾಶವಿದೆ. ವೈಯಕ್ತಿಕ ಉದ್ದಿಮೆಗಳಿಗೆ, ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಮತ್ತು ಸ್ವಸಹಾಯ ಸಂಘಗಳಿಗೆ ಶೇ.50 ಸಹಾಯಧನದಲ್ಲಿ ಉದ್ಯಮದ ಅಂದಾಜು ವೆಚ್ಚಕ್ಕೆ ಅನುಗುಣವಾಗಿ ಪಡೆಯಬಹುದಾಗಿದೆ.
ಸಹಾಯಧನ ಎಷ್ಟು ಸಿಗಲಿದೆ?
ಈ ಯೋಜನೆಯಡಿ ಸ್ಥಾಪಿಸಲು ಇಚ್ಛಿಸುವ ಉದ್ಯಮದ ಅಂದಾಜು ವೆಚ್ಚಕ್ಕೆ ಪೂರಕವಾಗಿ ಸಾಲ ಪಡೆಯಬಹುದು. ಇದಕ್ಕೆ ಶೇ.35ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ.15ರಷ್ಟು ರಾಜ್ಯ ಸರ್ಕಾರ ಸಬ್ಸಿಡಿ ಸಿಗುತ್ತದೆ.
30 ಲಕ್ಷ ರೂಪಾಯಿ ವರೆಗಿನ ಸಾಲಕ್ಕೆ 7.5 ಲಕ್ಷ ರೂಪಾಯಿ ವರೆಗೂ ಸಬ್ಸಿಡಿ ಸಿಗುತ್ತದೆ. 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲಕ್ಕೆ ಒಟ್ಟಾರೆ 15 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗುತ್ತದೆ.
ಯಾವೆಲ್ಲ ಉದ್ಯಮಕ್ಕೆ ಸಿಗಲಿದೆ ಸೌಲಭ್ಯ?
ರೊಟ್ಟಿ / ಚಪಾತಿ ತಯಾರಿಕೆ, ಶಾವಿಗೆ ತಯಾರಿಕೆ, ಹಪ್ಪಳ ತಯಾರಿಕೆ, ಬೇಕರಿ ಪದಾರ್ಥಗಳು, ಚಕ್ಕಲಿ ತಯಾರಿಕೆ, ಸಿರಿಧಾನ್ಯ ಸಂಸ್ಕರಣೆ, ಹಿಟ್ಟು/ರವಾ ತಯಾರಿಕೆ, ಶೇಂಗಾ ಪದಾರ್ಥಗಳು, ಅಡಿಗೆ ಎಣ್ಣೆ ತಯಾರಿಕೆ, ಖಾರಾ ಪುಡಿ ತಯಾರಿಕೆ, ಮಸಾಲೆ ಖಾರ ತಯಾರಿಕೆ, ಹುಣಸೆ ಹಣ್ಣಿನ ಉದ್ಯಮ, ಅರಿಷಿಣ ಪುಡಿ ಉದ್ಯಮ, ಬೆಲ್ಲ ತಯಾರಿಕೆ ಉದ್ಯಮ…
…ಸಾವಯವ ಉದ್ಯಮ, ವಿವಿಧ ಚಟ್ನಿ ಪುಡಿಗಳು, ಕುರುಕಲು ತಿಂಡಿ ತಯಾರಿಕೆ, ಉಪ್ಪಿನ ಕಾಯಿ ತಯಾರಿಕೆ. ಲಿಂಬೆ ಜಾಮ್/ಗುಳಂ, ಹಣ್ಣು/ತರಕಾರಿ ಸಂಸ್ಕರಣೆ, ಅರಿಶಿನ ಪೌಡರ್, ಚುರುಮರಿ (ಮಂಡಕ್ಕಿ) / ಅವಲಕ್ಕಿ ತಯಾರಿಕೆ, ಬೆಳ್ಳುಳ್ಳಿ / ಈರುಳ್ಳಿ ಸಂಸ್ಕರಣೆ, ಹಾಲಿನ ಉತ್ಪನ್ನಗಳ ತಯಾರಿಕೆ ಸೇರಿದಂತೆ ಅನೇಕ ಕಿರು ಉದ್ಯಮಗಳ ಸ್ಥಾಪನೆಗೆ ಈ ಯೋಜನೆಯಿಂದ ತುಂಬ ಸುಲಭವಾಗಿ ಸಾಲ ಮತ್ತು ಸಬ್ಸಿಡಿ ಪಡೆಯಬಹುದಾಗಿದೆ.
ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ
- ಪಾನ್ಕಾರ್ಡ
- ಬ್ಯಾಂಕ್ ಪಾಸ್ ಬುಕ್
- ಕರೆಂಟ್ ಬಿಲ್
- ಉದ್ಯೋಗ ಸ್ಥಳದ ಉತಾರ (RTC)
- ಬಾಡಿಗೆ ಕರಾರು ಪತ್ರ
- MSME ಲೈಸೆನ್ಸ್ (ಉದ್ಯಮ)
- ಸೈಟಿನ ಬಳಿ ನಿಂತಿರುವ ಅರ್ಜಿದಾರರ ಭಾವಚಿತ್ರ
ಬ್ಯಾಂಕ್ ಅಧಿಕಾರಿಗಳು ಒಪ್ಪಿದ ನಂತರ ನೀಡಬೇಕಾದ ದಾಖಲೆಗಳು
- ಪಂಚಾಯ್ತಿ ಅಥವಾ ಮುನ್ಸಿಪಾಲಿಟಿ ಲೈಸೆನ್ಸ್ ಮತ್ತು ಎನ್ಓಸಿ,
- ಬ್ಯಾಂಕ್ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು
- ಉದ್ಯಮಶೀಲತಾ ತರಬೇತಿ ಪ್ರಮಾಣ ಪತ್ರ
ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ : Apply Now
ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ಲಿಂಕ್ : https://pmfme.mofpi.gov.in/
1 thought on “ಸಣ್ಣ ಉದ್ಯಮ ಸ್ಥಾಪನೆಗೆ 15 ಲಕ್ಷ ರೂಪಾಯಿ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… PM Micro Food Processing Scheme PMFME”