Karnataka Drought Relief: ಡಿಸೆಂಬರ್ 1 ರೊಳಗೆ ರೈತರ ಖಾತೆಗೆ ಎರಡು ಕಂತುಗಳಲ್ಲಿ ಒಟ್ಟು 5,000 ರೂಪಾಯಿ ಬರ ಪರಿಹಾರ ಜಮೆಯಾಗಲಿದೆ. ಮೊಬೈಲ್‌ನಲ್ಲಿ ಪರಿಹಾರ ಸ್ಟೇಟಸ್ (Parihara Status) ಚೆಕ್ ಮಾಡುವ ವಿಧಾನ ಇಲ್ಲಿದೆ…
ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ರಾಜ್ಯ ಸರ್ಕಾರವು ದೊಡ್ಡ ಸಿಹಿಸುದ್ದಿ ನೀಡಿದೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬ್ಯಾಂಕ್ ಖಾತೆಗೆ ಡಿಸೆಂಬರ್ 1 ರೊಳಗಾಗಿ ತಲಾ 5,000 ರೂಪಾಯಿ ಬರ ಪರಿಹಾರ (Drought Relief) ಹಣವನ್ನು ವರ್ಗಾಯಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ನಿನ್ನೆ ಶುಕ್ರವಾರ (ನವೆಂಬರ್ 20) ನಡೆದ ಕಂದಾಯ ಇಲಾಖೆಯ (Revenue Department) ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು (DDLR), ಉಪ ವಿಭಾಗಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಎರಡು ಕಂತುಗಳಲ್ಲಿ ಒಟ್ಟು 5,000 ರೂಪಾಯಿ ಪರಿಹಾರ
ರೈತರಿಗೆ ಬರ ಪರಿಹಾರದ ಹಣವನ್ನು ಎರಡು ಕಂತುಗಳಲ್ಲಿ (Installments) ನೀಡಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ 1 ರೊಳಗೆ ಎರಡೂ ಕಂತಿನ ಹಣ ಸೇರಿ ಒಟ್ಟು 5,000 ರೂಪಾಯಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ (Bank Account) ಜಮೆಯಾಗಲಿದೆ.
ಅಧಿಕಾರಿಗಳ ಗೊಂದಲಕ್ಕೆ ತೆರೆ ಎಳೆದ ಡಿಸಿಎಂ
ಬರ ಪರಿಹಾರ ವಿತರಣೆಯ ವಿಚಾರದಲ್ಲಿ ಅಧಿಕಾರಿಗಳು ಸೃಷ್ಟಿಸಿದ್ದ ಗೊಂದಲಗಳಿಗೆ ಉಪ ಮುಖ್ಯಮಂತ್ರಿಗಳು ತೆರೆ ಎಳೆದಿದ್ದಾರೆ. ಈ ಪರಿಹಾರ ಹಣವನ್ನು ಪ್ರತಿ ಎಕರೆಗೆ (Per Acre) ನೀಡುವುದಲ್ಲ, ಬದಲಾಗಿ ಪ್ರತಿ ರೈತ ಕುಟುಂಬಕ್ಕೆ (Per Family) ತಲಾ 5,000 ರೂಪಾಯಿ ನೀಡಲಾಗುತ್ತದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯದಿಂದಲೇ ಪರಿಹಾರ
ರಾಜ್ಯದಲ್ಲಿ ಸುಮಾರು 57.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ (Crop Loss) ಸಂಭವಿಸಿದೆ. ಇದರಿಂದ ಅಂದಾಜು 62,481 ಕೋಟಿ ರೂಪಾಯಿಗಳಷ್ಟು ಭಾರೀ ನಷ್ಟವಾಗಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ 22,400 ಕೋಟಿ ರೂಪಾಯಿ ಅನುದಾನ (Grant) ಕೇಳಿತ್ತು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರ ಭೇಟಿಗೆ ಸಮಯ ಕೋರಿ ಪತ್ರ ಬರೆದಿದ್ದರೂ ಕೇಂದ್ರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ಒಕ್ಕೂಟ ವ್ಯವಸ್ಥೆಗೆ (Federal System) ಭೂಷಣವಲ್ಲ.
ಆದರೂ ರಾಜ್ಯ ಸರ್ಕಾರ ಅನುದಾನ ತರುವ ಪ್ರಯತ್ನವನ್ನು ನಿಲ್ಲಿಸಿಲ್ಲ. ಕೇಂದ್ರದ ನೆರವು ಬರದಿದ್ದರೂ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವೇ ಈ ಪರಿಹಾರವನ್ನು ಪಾವತಿಸುತ್ತಿದೆ ಎಂದು ಅವರು ವಿವರಿಸಿದರು.
ಕಡಿಮೆ ಹಣ ಬಂದ ರೈತರಿಗೂ ಪೂರ್ತಿ ಹಣ
ಕಳೆದ ಎರಡು ವಾರಗಳ ಹಿಂದೆ ಯಾದಗಿರಿ ಜಿಲ್ಲೆಯ ರೈತರಿಗೆ ಮೊದಲ ಹಂತದ ಪರಿಹಾರವಾಗಿ 2,500 ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ 2,000 ರೂಪಾಯಿ ಹಾಗೂ ಇನ್ನೂ ಕೆಲವರಿಗೆ 1,500 ರೂಪಾಯಿ ಮಾತ್ರ ಜಮೆಯಾಗಿತ್ತು.
ಈ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಿದೆ. ಯಾರ ಖಾತೆಗೆ ಕಡಿಮೆ ಹಣ ಜಮೆಯಾಗಿದೆಯೋ, ಅಂತಹ ರೈತರಿಗೂ ಎರಡೂ ಕಂತು ಸೇರಿ ಒಟ್ಟು 5,000 ರೂಪಾಯಿ ಪೂರ್ತಿಯಾಗಿ ಜಮೆಯಾಗಲಿದೆ.

ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to Check Drought Relief Status)
ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ಪರಿಶೀಲಿಸಬಹುದು (Payment Status). ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:
-
ಮೊದಲಿಗೆ ಕರ್ನಾಟಕ ಸರ್ಕಾರದ ಅಧಿಕೃತ ಪರಿಹಾರ ವೆಬ್‌ಸೈಟ್‌ಗೆ (Parihara Portal) ಈ ಕೇಳಗಿಬ ಲಿಂಕ್ ಬಳಸಿ ಭೇಟಿ ನೀಡಿ:
https://parihara.karnataka.gov.in/service92/ -
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ‘ಭೂಮಿ ಆನ್‌ಲೈನ್ ಪರಿಹಾರ ಇನ್‌ಪುಟ್ ಸಬ್ಸಿಡಿ ಪೇಮೆಂಟ್ ಡೀಟೇಲ್ಸ್’ (Bhoomi Online Parihara Input Subsidy Payment Details) ಪುಟ ತೆರೆದುಕೊಳ್ಳುತ್ತದೆ.
-
ಅಲ್ಲಿ ‘ವರ್ಷ ಆಯ್ಕೆ ಮಾಡಿ’ ಎಂಬಲ್ಲಿ 2026-27 ಅನ್ನು ಆಯ್ಕೆ ಮಾಡಿ.
-
ನಂತರ ‘ಋತು’ (Season) ಎಂಬಲ್ಲಿ ಮುಂಗಾರು (Kharif) ಆಯ್ಕೆ ಮಾಡಿಕೊಳ್ಳಿ.
-
ಮುಂದೆ ‘ವಿಪತ್ತು’ (Calamity) ಆಯ್ಕೆಯಲ್ಲಿ ಬರ (Drought) ಎಂಬುದನ್ನು ಒತ್ತಿರಿ.
-
ಬಳಿಕ ‘ಹುಡುಕು’ (Get Data) ಬಟನ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: Kuri Meke Shed: ಕುರಿ, ಮೇಕೆ ಶೆಡ್ ನಿರ್ಮಾಣಕ್ಕೆ ₹83,000 ಉಚಿತ ಹಣ | ಗ್ರಾಮೀಣ ಜನರಿಗೆ ಬಂಪರ್ ಆಫರ್!
-
ಈಗ ನಿಮಗೆ ಆಧಾರ್ ಸಂಖ್ಯೆ (Aadhaar Number), ರೈತರ ಗುರುತಿನ ಸಂಖ್ಯೆ (FID), ಮೊಬೈಲ್ ಸಂಖ್ಯೆ (Mobile Number) ಮತ್ತು ಸರ್ವೆ ನಂಬರ್ (Survey Number) ಆಯ್ಕೆಗಳು ಕಾಣಿಸುತ್ತವೆ.
-
ಇದರಲ್ಲಿ ಮೊಬೈಲ್ ಸಂಖ್ಯೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-
ತೆರೆದುಕೊಳ್ಳುವ ಹೊಸ ಪುಟದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ‘ಪಡೆಯಿರಿ’ (Fetch) ಬಟನ್ ಒತ್ತಿರಿ.
ಪರದೆಯ ಮೇಲೆ ನಿಮಗೆ ಕಾಣಿಸುವ ಮಾಹಿತಿಗಳು
ನಿಮ್ಮ ವಿವರಗಳನ್ನು ಸಲ್ಲಿಸಿದ ನಂತರ ಎರಡು ವಿಭಾಗಗಳಲ್ಲಿ ಮಾಹಿತಿ ತೆರೆದುಕೊಳ್ಳುತ್ತದೆ:
-
ಹಣ ಸಂದಾಯದ ವಿವರಗಳು (Payment Details): ಇದರಲ್ಲಿ ಕ್ರಮ ಸಂಖ್ಯೆ, ಜಿಲ್ಲೆ, ಬ್ಯಾಂಕ್ ಹೆಸರು, ಖಾತೆದಾರರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಜಮೆಯಾದ ಮೊತ್ತ, ಹಣ ಸಂದಾಯವಾದ ದಿನಾಂಕ ಮತ್ತು ಸ್ಥಿತಿಯ ಮಾಹಿತಿ ಇರುತ್ತದೆ. ಒಂದು ವೇಳೆ ಇನ್ನೂ ಹಣ ಜಮೆಯಾಗಿಲ್ಲದಿದ್ದರೆ ‘No Data Found’ ಎಂದು ತೋರಿಸುತ್ತದೆ.
-
ಪರಿಹಾರ ನಮೂದಿಸಿದ ವಿವರಗಳು: ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು, ಜಿಲ್ಲೆ, ತಾಲೂಕು, ನಿಮ್ಮ ಊರು, ಜಮೀನಿನ ಸರ್ವೆ ನಂಬರ್, ನೀವು ಬೆಳೆದಿರುವ ಬೆಳೆ ಹಾಗೂ ಒಟ್ಟು ಎಷ್ಟು ಎಕರೆ ಜಮೀನಿದೆ ಎಂಬ ಸಂಪೂರ್ಣ ವಿವರ ಲಭ್ಯವಿರುತ್ತದೆ.
ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಡಿಸೆಂಬರ್ 1 ರೊಳಗೆ ಅರ್ಹ ಎಲ್ಲಾ ರೈತರ ಖಾತೆಗೂ 5,000 ರೂಪಾಯಿ ಪರಿಹಾರ ತಲುಪಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.