Term Insurance Complete Guide: ಟರ್ಮ್ ಇನ್ಶೂರೆನ್ಸ್ ಎಂದರೇನು? ಕಡಿಮೆ ಪ್ರೀಮಿಯಂನಲ್ಲಿ ಕೋಟಿಗಟ್ಟಲೆ ಕವರೇಜ್ ಪಡೆಯುವುದು ಹೇಗೆ? ಟರ್ಮ್ ಲೈಫ್ ಇನ್ಶೂರೆನ್ಸ್ನ ನಿಯಮಗಳು, ಲಾಭಗಳು ಹಾಗೂ ರೈಡರ್ಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ಈ ಕನ್ನಡ ಗೈಡ್ ಓದಿ…
ಬದುಕಿನಲ್ಲಿ ನಾಳೆ ಏನಾಗುತ್ತದೆ ಎಂದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ನಾವು ಇರುವವರೆಗೂ ನಮ್ಮ ಕುಟುಂಬವನ್ನು ಕಷ್ಟವಿಲ್ಲದೆ ಚೆನ್ನಾಗಿ ನೋಡಿಕೊಳ್ಳುತ್ತೇವೆ.
ಆದರೆ, ನಾವು ಇಲ್ಲದಿದ್ದಾಗ ಅವರ ಗತಿಯೇನು ಎಂಬ ಪ್ರಶ್ನೆ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ಕಾಡಲೇಬೇಕು. ಹಗಲಿರುಳು ದುಡಿದು, ಕೋಟಿಗಟ್ಟಲೆ ಹಣ ಕೂಡಿಡುವುದು ಮಧ್ಯಮ ವರ್ಗದ ಜನರಿಗೆ (Middle class families) ಸುಲಭದ ಮಾತಲ್ಲ.
ಭಾರಿ ಬ್ಯಾಂಕ್ ಬ್ಯಾಲೆನ್ಸ್ ಮಾಡಲು 20-30 ವರ್ಷಗಳ ಸುದೀರ್ಘ ಶ್ರಮವೇ ಬೇಕಾಗುತ್ತದೆ. ಆದರೆ, ಅಷ್ಟೊಂದು ಹಣ ಕೂಡಿಡುವ ಮುನ್ನವೇ ನಿಮ್ಮ ಕುಟುಂಬಕ್ಕೆ ಭಾರಿ ಆರ್ಥಿಕ ಭದ್ರತೆ ಒದಗಿಸುವ ಅದ್ಭುತ ಆಯ್ಕೆಯೊಂದಿದೆ. ಅದೇ ಟರ್ಮ್ ಇನ್ಶೂರೆನ್ಸ್ (Term Insurance).
ಟರ್ಮ್ ಇನ್ಶೂರೆನ್ಸ್ ಅಂದರೆ ಏನು?
ಇದು ನಿಮ್ಮ ಇಡೀ ಕುಟುಂಬದ ಆರ್ಥಿಕ ರಕ್ಷಣೆಗೆ ಇರುವ ಅತ್ಯುತ್ತಮ ಇನ್ಕಮ್ ರಿಪ್ಲೇಸ್ಮೆಂಟ್ ಪ್ಲಾನ್ (Income replacement plan). ಇದರ ನಿಯಮಗಳು ಬಹಳ ಸರಳ. ನೀವು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಇಂತಿಷ್ಟು ಎಂದು ಒಂದು ಸಣ್ಣ ನಿಗದಿತ ಪ್ರೀಮಿಯಂ (Fixed Premium) ಕಟ್ಟುತ್ತಾ ಹೋಗುತ್ತೀರಿ.
ಇದನ್ನೂ ಓದಿ: Lowest Personal Loan: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಬೇಕೇ? ಇಲ್ಲಿದೆ ಬ್ಯಾಂಕ್ಗಳ ಪೂರ್ಣ ಮಾಹಿತಿ…
ಪಾಲಿಸಿ ಇರುವ ಅವಧಿಯಲ್ಲಿ ಮನೆಯ ಯಜಮಾನ ದುರದೃಷ್ಟವಶಾತ್ ಮೃತಪಟ್ಟರೆ, ಇನ್ಶೂರೆನ್ಸ್ ಕಂಪನಿಯು ಅವರ ಕುಟುಂಬಕ್ಕೆ ಪೂರ್ತಿ ವಿಮಾ ಮೊತ್ತವನ್ನು ನೀಡುತ್ತದೆ. ಒಂದು ಕೋಟಿ ಅಥವಾ ಎರಡು ಕೋಟಿ ರೂಪಾಯಿಗಳ ಕವರೇಜ್ (Insurance Coverage) ಮೊತ್ತವನ್ನು ಕುಟುಂಬದವರು ಒಂದೇ ಬಾರಿಗೆ ಪಡೆಯಬಹುದು.
ಈ ಹಣವನ್ನು ಬ್ಯಾಂಕ್ನಲ್ಲಿ ಎಫ್ಡಿ (Fixed Deposit) ಇಟ್ಟುಕೊಂಡು, ಅದರಿಂದ ಬರುವ ಬಡ್ಡಿ ಹಣದಲ್ಲಿ ಕುಟುಂಬದವರು ಯಾವುದೇ ಆರ್ಥಿಕ ತೊಂದರೆ ಇಲ್ಲದೆ ಬದುಕಬಹುದು. ಮನೆಯ ಇಎಂಐ (EMI), ಕಾರಿನ ಸಾಲ, ಮಕ್ಕಳ ಶಾಲಾ ಶುಲ್ಕಗಳನ್ನು ಆರಾಮಾಗಿ ನಿಭಾಯಿಸಬಹುದು. ಒಂದು ಕೋಟಿ ರೂಪಾಯಿ ಕವರೇಜ್ ಕೊಡುವ ಪ್ಲಾನ್ಗಳು ತಿಂಗಳಿಗೆ ಕೇವಲ 400 ರಿಂದ 500 ರೂಪಾಯಿಯಿಂದ ಶುರುವಾಗುತ್ತವೆ.
ಇದನ್ನೂ ಓದಿ: District Court Jobs: 10ನೇ ತರಗತಿ ಪಾಸಾದವರಿಗೆ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ | ಅರ್ಜಿ ಆಹ್ವಾನ
ಯಾರು ಮಾಡಿಸಬಹುದು? ಪ್ರೀಮಿಯಂ ಕಟ್ಟುವ ಆಯ್ಕೆಗಳೇನು?
ಈ ಇನ್ಶೂರೆನ್ಸ್ ಯೋಜನೆಯನ್ನು 18 ರಿಂದ 65 ವರ್ಷದ ಒಳಗಿರುವ ಯಾರು ಬೇಕಾದರೂ ಮಾಡಿಸಿಕೊಳ್ಳಬಹುದು. ಸಾಮಾನ್ಯವಾಗಿ 65 ರಿಂದ 85 ವರ್ಷದವರೆಗೂ ಇದು ಕವರೇಜ್ ನೀಡುತ್ತದೆ. ಈಗ 100 ವರ್ಷದವರೆಗೂ ರಕ್ಷಣೆ ಕೊಡುವ ಹೋಲ್ ಲೈಫ್ ಪ್ಲಾನ್ಗಳು (Whole life plans) ಸಹ ಲಭ್ಯವಿವೆ.
ನಿಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ, ಅಥವಾ ವರ್ಷಕ್ಕೊಮ್ಮೆ ಪ್ರೀಮಿಯಂ ಕಟ್ಟಬಹುದು. ಪಾಲಿಸಿ ಇರುವವರೆಗೂ ಹಣ ಕಟ್ಟುತ್ತಾ ಹೋಗುವ ರೆಗ್ಯುಲರ್ ಪೇ (Regular Pay), ಒಂದೇ ಸಲ ಒಟ್ಟಾಗಿ ಕಟ್ಟಿ ಮುಗಿಸುವ ಸಿಂಗಲ್ ಪೇ (Single Pay) ಮತ್ತು ಕೇವಲ 10-15 ವರ್ಷಗಳು ಮಾತ್ರ ಕಟ್ಟಿ ಜೀವಮಾನವಿಡೀ ರಕ್ಷಣೆ ಪಡೆಯುವ ಲಿಮಿಟೆಡ್ ಪೇ (Limited Pay) ಆಯ್ಕೆಗಳು ಇದರಲ್ಲಿವೆ.
ಚಿಕ್ಕ ವಯಸ್ಸಿನಲ್ಲೇ ಟರ್ಮ್ ಪ್ಲಾನ್ ಮಾಡಿಸಿದರೆ ಆಗುವ ಲಾಭಗಳೇನು?
ಟರ್ಮ್ ಇನ್ಶೂರೆನ್ಸ್ ಅನ್ನು ಎಷ್ಟು ಬೇಗ ಮಾಡಿಸುತ್ತೀರೋ ಅಷ್ಟು ಒಳ್ಳೆಯದು. ಚಿಕ್ಕ ವಯಸ್ಸಿನಲ್ಲಿ (Young age) ಪಾಲಿಸಿ ತೆಗೆದುಕೊಂಡರೆ ಪ್ರೀಮಿಯಂ ಮೊತ್ತ ಬಹಳ ಕಡಿಮೆ ಇರುತ್ತದೆ. ನೀವು 22-25ನೇ ವಯಸ್ಸಿನಲ್ಲಿಯೇ ಪ್ರೀಮಿಯಂ ಲಾಕ್ (Premium lock) ಮಾಡಿಕೊಂಡರೆ, ಮುಂದೆ ನಿಮ್ಮ ವಯಸ್ಸಾದಂತೆ ಆ ಮೊತ್ತ ಹೆಚ್ಚಾಗುವುದಿಲ್ಲ.
ಈಗ 400 ರೂಪಾಯಿ ಕಟ್ಟಲು ಶುರು ಮಾಡಿದರೆ, ನಿಮ್ಮ 60ನೇ ವಯಸ್ಸಿನವರೆಗೂ ಅದೇ ಮೊತ್ತ ಫಿಕ್ಸ್ ಆಗಿರುತ್ತದೆ. ಅದೇ ವಯಸ್ಸಾದ ಮೇಲೆ ಬಿಪಿ, ಶುಗರ್ ಶುರುವಾದರೆ ಕಂಪನಿಯವರು ಪ್ರೀಮಿಯಂ ರೇಟ್ ದುಬಾರಿ ಮಾಡುತ್ತಾರೆ.
ಇದನ್ನೂ ಓದಿ: Digital Personal Loan- ನಿಮಿಷಗಳಲ್ಲಿ ಸಾಲ ಬೇಕೆ? ಆಪ್ಗಳಲ್ಲಿ ಅಪ್ಲೈ ಮಾಡುವ ಮುನ್ನ RBI ನಿಯಮ ತಿಳಿಯಿರಿ

ಪ್ರೀಮಿಯಂ ಕಟ್ಟಲು ಮರೆತರೆ ಪಾಲಿಸಿ ಕ್ಯಾನ್ಸಲ್ ಆಗುತ್ತಾ?
ಕೆಲಸದ ಒತ್ತಡದಲ್ಲಿ ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಕಟ್ಟಲು ಮರೆತರೆ ತಕ್ಷಣ ಪಾಲಿಸಿ ರದ್ದಾಗುವುದಿಲ್ಲ. ತಿಂಗಳ ಪ್ರೀಮಿಯಂ ಕಟ್ಟುವವರಾಗಿದ್ದರೆ 15 ದಿನಗಳ ಗ್ರೇಸ್ ಪಿರಿಯಡ್ (Grace period) ಸಿಗುತ್ತದೆ. ವಾರ್ಷಿಕ ಪ್ಲಾನ್ ಆಗಿದ್ದರೆ 30 ದಿನಗಳ ಕಾಲಾವಕಾಶ ಇರುತ್ತದೆ.
ಈ ಗ್ರೇಸ್ ಪಿರಿಯಡ್ ಸಮಯದಲ್ಲಿ ದುರದೃಷ್ಟವಶಾತ್ ಏನಾದರೂ ಅನಾಹುತ ನಡೆದರೂ, ಕಂಪನಿಯು ಬಾಕಿ ಇರುವ ಪ್ರೀಮಿಯಂ ಕಡಿತಗೊಳಿಸಿಕೊಂಡು ಉಳಿದ ಪೂರ್ತಿ ವಿಮಾ ಮೊತ್ತವನ್ನು ಕುಟುಂಬಕ್ಕೆ ನೀಡಲೇಬೇಕು. ಆದರೆ, ಈ ಗಡುವು ಮುಗಿದ ಮೇಲೂ ಹಣ ಕಟ್ಟದಿದ್ದರೆ ಪಾಲಿಸಿ ಲ್ಯಾಪ್ಸ್ (Policy lapse) ಆಗುತ್ತದೆ.
ಯಾವ ಸಂದರ್ಭಗಳಲ್ಲಿ ವಿಮಾ ಹಣ ಸಿಗುವುದಿಲ್ಲ?
ಬಹುತೇಕ ಎಲ್ಲಾ ರೀತಿಯ ಸಹಜ ಸಾವು ಹಾಗೂ ಅಪಘಾತದ ಸಾವುಗಳಿಗೆ ಟರ್ಮ್ ಇನ್ಶೂರೆನ್ಸ್ ಪರಿಹಾರ ನೀಡುತ್ತದೆ. ಆದರೆ ಪಾಲಿಸಿ ತೆಗೆದುಕೊಂಡ ಮೊದಲ 12 ತಿಂಗಳೊಳಗೆ ಪಾಲಿಸಿದಾರರು ಆತ್ಮಹತ್ಯೆ ಮಾಡಿಕೊಂಡರೆ ಪೂರ್ತಿ ಮೊತ್ತ ಸಿಗುವುದಿಲ್ಲ. ಕಟ್ಟಿದ ಪ್ರೀಮಿಯಂನ ಶೇಕಡಾ 80ರಷ್ಟು ಹಣವನ್ನು ಮಾತ್ರ ನಾಮಿನಿಗೆ (Nominee) ವಾಪಸ್ ಕೊಡಲಾಗುತ್ತದೆ.
ಅತಿಯಾದ ಕುಡಿತ, ಮಾದಕ ವಸ್ತು ಸೇವನೆಯಿಂದ ಸಾವು ಸಂಭವಿಸಿದರೆ ವಿಮಾ ಪರಿಹಾರ ಸಿಗುವುದಿಲ್ಲ. ಧೂಮಪಾನದ ಅಭ್ಯಾಸ ಅಥವಾ ಮೊದಲೇ ಇದ್ದ ಕಾಯಿಲೆಗಳನ್ನು ಮುಚ್ಚಿಟ್ಟರೆ ಕ್ಲೈಮ್ ರಿಜೆಕ್ಟ್ (Claim rejection) ಆಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: KFD Recruitment 2026- ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಕರ್ನಾಟಕ ಅರಣ್ಯ ಇಲಾಖೆ ಉದ್ಯೋಗ | 750 ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಾಲಿಸಿಯ ಮೌಲ್ಯ ಹೆಚ್ಚಿಸುವ ರೈಡರ್ಗಳು (Riders)
ಟರ್ಮ್ ಇನ್ಶೂರೆನ್ಸ್ ಜೊತೆಗೆ ಕೆಲವು ಉಪಯುಕ್ತ ಹೆಚ್ಚುವರಿ ರೈಡರ್ಗಳನ್ನು ಸೇರಿಸಿಕೊಳ್ಳಬಹುದು:
-
ಕ್ರಿಟಿಕಲ್ ಇಲ್ನೆಸ್ ರೈಡರ್ (Critical illness rider): ಕ್ಯಾನ್ಸರ್ ಅಥವಾ ಹೃದಯ ಸಂಬಂಧಿ ಗಂಭೀರ ಕಾಯಿಲೆಗಳು ಬಂದರೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಇದು ನೆರವಾಗುತ್ತದೆ.
ಇದನ್ನೂ ಓದಿ: Karnataka ZP TP Elections- ಜನವರಿಗೆ ಪಂಚಾಯಿತಿ ಚುನಾವಣೆ ಫಿಕ್ಸ್ | ಮಹತ್ವದ ಅಪ್ಡೇಟ್ ಇಲ್ಲಿದೆ
-
ವೈವರ್ ಆಫ್ ಪ್ರೀಮಿಯಂ (Waiver of premium): ಗಂಭೀರ ಕಾಯಿಲೆ ಅಥವಾ ಶಾಶ್ವತ ಅಂಗವೈಕಲ್ಯದಿಂದ ದುಡಿಯಲು ಸಾಧ್ಯವಾಗದಿದ್ದರೆ, ಮುಂದಿನ ಎಲ್ಲಾ ಪ್ರೀಮಿಯಂಗಳನ್ನು ಕಂಪನಿಯೇ ಮನ್ನಾ ಮಾಡುತ್ತದೆ.
-
ಆಕ್ಸಿಡೆಂಟಲ್ ಡೆತ್ ಬೆನಿಫಿಟ್ (Accidental death benefit): ಅಪಘಾತದಲ್ಲಿ ಮೃತಪಟ್ಟರೆ ಮೂಲ ಮೊತ್ತದ ಜೊತೆಗೆ ಹೆಚ್ಚುವರಿ ಹಣ ಸಿಗುತ್ತದೆ.
-
ಸ್ಪೌಸ್ ಕವರ್ (Spouse cover): ಒಂದೇ ಪಾಲಿಸಿಯಲ್ಲಿ ಗಂಡ-ಹೆಂಡತಿ ಇಬ್ಬರಿಗೂ ರಕ್ಷಣೆ ಸಿಗುತ್ತದೆ.
ಇದನ್ನೂ ಓದಿ: LPG, PNG New Rules- LPG, PNG ಗ್ರಾಹಕರಿಗೆ ಹೊಸ ನಿಯಮ? ಸಿಲಿಂಡರ್ ಬುಕ್ಕಿಂಗ್ ಮುನ್ನ ಈ ಮಾಹಿತಿ ತಿಳಿಯಿರಿ
ಪಾಲಿಸಿ ಖರೀದಿಸುವ ಮುನ್ನ ತಜ್ಞರ ಸಲಹೆ ಯಾಕೆ ಮುಖ್ಯ?
ಇನ್ಶೂರೆನ್ಸ್ ನಿಯಮಗಳು ಸ್ವಲ್ಪ ಗೊಂದಲಮಯವಾಗಿರುತ್ತವೆ. ಹೀಗಾಗಿ ನುರಿತ ತಜ್ಞರ ಸಲಹೆ ಪಡೆಯುವುದು ಉತ್ತಮ. ಜೀರೋದಾ (Zerodha) ಸಂಸ್ಥೆಯ ಬೆಂಬಲಿತ ‘ಡಿಟೋ ಇನ್ಶೂರೆನ್ಸ್’ (Ditto Insurance) 100% ಉಚಿತ ಕನ್ಸಲ್ಟೇಶನ್ (Free consultation) ನೀಡುತ್ತದೆ.
ಇವರಲ್ಲಿರುವ ಐಆರ್ಡಿಎಐ (IRDAI) ಪ್ರಮಾಣೀಕೃತ ಸಲಹೆಗಾರರು ನಿಮಗೆ ಬೇಕಾದ ಭಾಷೆಯಲ್ಲಿ (ಉದಾಹರಣೆಗೆ ಕನ್ನಡದಲ್ಲೇ – Kannada advisor) ಮಾತನಾಡಿ, ನಿಮ್ಮ ಆದಾಯಕ್ಕೆ ತಕ್ಕಂತಹ ಬೆಸ್ಟ್ ಪ್ಲಾನ್ ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ.
ಇಲ್ಲಿ ಯಾವುದೇ ಸ್ಪ್ಯಾಮ್ ಕಾಲ್ಗಳ ಕಾಟ ಇರುವುದಿಲ್ಲ. ನಾಳೆ ಕ್ಲೈಮ್ ಮಾಡುವ ಕಷ್ಟದ ಸಮಯ ಬಂದಾಗಲೂ ಇವರ ಡೆಡಿಕೇಟೆಡ್ ಟೀಮ್ (Claim support team) ನಿಮ್ಮ ಕುಟುಂಬದ ಜೊತೆಯಾಗಿ ನಿಂತು ಕೆಲಸ ಮಾಡುತ್ತದೆ.
Lowest Personal Loan: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಬೇಕೇ? ಇಲ್ಲಿದೆ ಬ್ಯಾಂಕ್ಗಳ ಪೂರ್ಣ ಮಾಹಿತಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.