Karnataka Voter List: ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಔಟ್! ನಿಮ್ಮ ಹೆಸರು ಪಟ್ಟಿಯಿಂದ ಔಟ್ ಆಗಿದೆಯೇ? ಈಗಲೇ ಚೆಕ್ ಮಾಡಿ

Spread the love

WhatsApp Group Join Now
Telegram Group Join Now

Karnataka Voter List: ಕರ್ನಾಟಕದಲ್ಲಿ SIR ಪ್ರಕ್ರಿಯೆ ವೇಳೆ 84.31 ಲಕ್ಷ ಮತದಾರರ ಹೆಸರು ಮೊದಲ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ಕಾರಣವೇನು? ನಿಮ್ಮ ಹೆಸರು ಇದೆಯೇ? ಸಂಪೂರ್ಣ ಮಾಹಿತಿ ಇಲ್ಲಿದೆ…

ಪರಿಷ್ಕೃತ ಮತದಾರರ ಪಟ್ಟಿ (Special Intensive Revision – SIR) ಪ್ರಕ್ರಿಯೆ ಕರ್ನಾಟಕದಲ್ಲಿ ವೇಗವಾಗಿ ನಡೆಯುತ್ತಿದ್ದು, ಈ ಬಾರಿ ಮೊದಲ ಕರಡು (Draft Electoral Roll) ಪಟ್ಟಿಯಿಂದ ಬರೋಬ್ಬರಿ 84.31 ಲಕ್ಷ ಮತದಾರರನ್ನು ಹೊರಗಿಡಲು ಚುನಾವಣಾ ಆಯೋಗ ಗುರುತಿಸಿರುವುದು ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮನೆ ಮನೆಗೆ ತೆರಳಿ ನಡೆಸಿದ ಪರಿಶೀಲನೆ, ಸ್ಥಳ ಮಹಜರು, ದಾಖಲೆಗಳ ಪರಿಶೀಲನೆ ಹಾಗೂ ಮತದಾರರ ಮಾಹಿತಿ ಸಂಗ್ರಹದ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Rain Alert: 18 ಜಿಲ್ಲೆಗಳಲ್ಲಿ ಭಾರೀ ಮಳೆ | ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಮೊದಲ ಕರಡು ಪಟ್ಟಿಯಿಂದ 84.31 ಲಕ್ಷ ಮತದಾರರು ಹೊರಗೆ

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ, ಚುನಾವಣಾ ಆಯೋಗವು ಮೊದಲ ಕರಡು ಮತದಾರರ ಪಟ್ಟಿಯಿಂದ ಒಟ್ಟು 84,31,612 ಮತದಾರರನ್ನು ಕೈಬಿಡಲು ಗುರುತಿಸಿದೆ. ಇದು ಅಂತಿಮ ಪಟ್ಟಿ ಅಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸುವವರಿಗೆ ಮತ್ತೊಮ್ಮೆ ಅವಕಾಶವೂ ಲಭ್ಯವಿದೆ.

ಮುಖ್ಯ ಚುನಾವಣಾಧಿಕಾರಿಗಳ ಮಾಹಿತಿ ಪ್ರಕಾರ, ಪ್ರತಿ ಮತದಾರರ ಮನೆಗೆ ಬಿಎಲ್‌ಒ (Booth Level Officer – BLO) ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಕುರಿತು ಮರಣ ಪ್ರಮಾಣಪತ್ರ (Death Certificate) ಸಂಗ್ರಹಿಸಲಾಗಿದ್ದು, ಸಂಬAಧಿಕರಿAದ ಸಹಿ ಪಡೆಯುವ ಪ್ರಕ್ರಿಯೆಯನ್ನೂ ಅನುಸರಿಸಲಾಗಿದೆ. ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮೊದಲ ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: Coconut Farming Subsidy: ಹೊಸದಾಗಿ ತೆಂಗಿನ ತೋಟ ಮಾಡ್ತಿದ್ದೀರಾ? ಸರ್ಕಾರದಿಂದ ಸಿಗುತ್ತೆ ₹56,000 ಸಹಾಯ!

ಯಾವ ಕಾರಣಕ್ಕೆ ಹೆಸರುಗಳನ್ನು ಕೈಬಿಡಲಾಗಿದೆ?

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕರಡು ಪಟ್ಟಿಯಿಂದ ಹೊರಗಿಡಲಾಗುತ್ತಿರುವ 84.31 ಲಕ್ಷ ಮತದಾರರ ಪೈಕಿ ಅತಿ ಹೆಚ್ಚು ಮಂದಿ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವವರು. ವರ್ಗೀಕರಣ ಹೀಗಿದೆ:

  • ಶಾಶ್ವತವಾಗಿ ಸ್ಥಳಾಂತರಗೊಂಡವರು – 51,74,968
  • ಮೃತಪಟ್ಟವರು – 14,99,799
  • ಮಾಹಿತಿ ಸಿಗದವರು (Not Traceable) – 11,61,231
  • ನಕಲಿ ಅಥವಾ ಎರಡು ಕಡೆ ಮತದಾರರಾಗಿ ಹೆಸರು ಹೊಂದಿರುವವರು (Duplicate Voters) – 5,62,572
  • ಸಹಿ ಮಾಡಲು ನಿರಾಕರಿಸಿದ ಇತರೆ ಪ್ರಕರಣಗಳು – 33,042

ಈ ಪಟ್ಟಿ ಕೇವಲ ಪರಿಶೀಲನೆಯ ಆಧಾರದ ಮೇಲೆ ಸಿದ್ಧವಾಗಿದ್ದು, ಅರ್ಹರು ತಮ್ಮ ದಾಖಲೆಗಳನ್ನು ಸಲ್ಲಿಸಿ ಹೆಸರು ಉಳಿಸಿಕೊಳ್ಳುವ ಅವಕಾಶವಿದೆ.

ಇದನ್ನೂ ಓದಿ: 221 Crore Crop Insurance: 221 ಕೋಟಿ ರೂ. ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ | ರೈತರ ಖಾತೆಗೆ ಹಣ ಜಮಾ | ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡಿ

Karnataka Voter List
Karnataka Voter List

ಗ್ರೇಟರ್ ಬೆಂಗಳೂರಿನಲ್ಲಿ ಆತಂಕಕಾರಿ ಸ್ಥಿತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ವ್ಯಾಪ್ತಿಯಲ್ಲಿ ಪರಿಸ್ಥಿತಿ ಇನ್ನಷ್ಟು ಗಮನ ಸೆಳೆಯುವಂತಿದೆ.

ಈ ಪ್ರದೇಶದಲ್ಲಿ ಒಟ್ಟು ಸುಮಾರು 1.30 ಕೋಟಿ ಮತದಾರರು ಇದ್ದರೂ, ಇದುವರೆಗೆ ಕೇವಲ 47.97 ಲಕ್ಷ ಜನರು ಮಾತ್ರ ತಮ್ಮ ಎನ್ಯೂಮರೇಷನ್ (Enumeration) ಫಾರ್ಮ್ಗಳನ್ನು ಹಿಂದಿರುಗಿಸಿದ್ದಾರೆ.

ಇದನ್ನೂ ಓದಿ: KFD Forest Watcher Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇನ್ನೊAದೆಡೆ ಸುಮಾರು 39.38 ಲಕ್ಷ ಮತದಾರರ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಒಟ್ಟು ಮತದಾರರಲ್ಲಿ ಸುಮಾರು 40 ಶೇಕಡಾ ಆಗುತ್ತದೆ. ಇನ್ನೂ 16.57 ಲಕ್ಷ ಮತದಾರರು ತಮ್ಮ ಫಾರ್ಮ್’ಗಳನ್ನು ಸಲ್ಲಿಸಬೇಕಿದೆ.

WhatsApp Group Join Now
Telegram Group Join Now

ಈ ಅಂಕಿ-ಅಂಶಗಳು ಚುನಾವಣಾ ಆಯೋಗಕ್ಕೂ ಆತಂಕ ಉಂಟುಮಾಡಿದ್ದು, ಬಾಕಿ ಉಳಿದ ಮತದಾರರು ಕೂಡಲೇ ಪ್ರತಿಕ್ರಿಯಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: Manipal Health Card 2026: ಈ ಕಾರ್ಡ್ ಇದ್ದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ | ಆರೋಗ್ಯ ಕಾರ್ಡ್-2026ಗೆ ಮೊಬೈಲ್‌ನಲ್ಲೇ ಅರ್ಜಿ ಹಾಕಿ

ರಾಜ್ಯದ ಎಸ್‌ಐಆರ್ ಪ್ರಕ್ರಿಯೆ ಎಷ್ಟು ಮುನ್ನಡೆದಿದೆ?

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ರಾಜ್ಯಾದ್ಯಂತ ಎಸ್‌ಐಆರ್ (Special Intensive Revision) ಪ್ರಕ್ರಿಯೆ ಈಗಾಗಲೇ ಉತ್ತಮ ಪ್ರಗತಿ ಸಾಧಿಸಿದೆ.

ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ 4,26,75,861 ಫಾರ್ಮ್’ಗಳನ್ನು ಮರಳಿ ಸ್ವೀಕರಿಸಿ ಡಿಜಿಟೈಸೇಷನ್ (Digitisation) ಪೂರ್ಣಗೊಳಿಸಲಾಗಿದೆ.

ಇದನ್ನೂ ಓದಿ: Karnataka Old Pension Scheme: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಹಳೇ ಪಿಂಚಣಿ ಜಾರಿಗೆ ಸರ್ಕಾರದ ಹೆಜ್ಜೆ | ಸಿಎಂ ಡಿಕೆಶಿ ಸೂಚನೆ

ಪ್ರಸ್ತುತ ಪ್ರಗತಿ ಪ್ರಮಾಣ 76.99 ಶೇಕಡಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 43,24,841 ಮತದಾರರ ಮಾಹಿತಿ ಸಂಗ್ರಹಿಸಬೇಕಿದ್ದು, ಆಗಸ್ಟ್ 8ರ ಬಳಿಕ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.

ಇದರ ಜೊತೆಗೆ, 3.22 ಲಕ್ಷ ಆನ್‌ಲೈನ್ ಅರ್ಜಿಗಳು, 2,283 ಫಾರ್ಮ್-6ಎ ಅರ್ಜಿಗಳು ಹಾಗೂ 7.73 ಲಕ್ಷ ಫಾರ್ಮ್-7 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಇದನ್ನೂ ಓದಿ: Indira Kit Distribution: ಮೂರು ತಿಂಗಳಲ್ಲಿ ‘ಇಂದಿರಾ ಕಿಟ್’ ವಿತರಣೆ: ಬಿಪಿಎಲ್ ಕಾರ್ಡ್’ದಾರರಿಗೆ ಸಿಹಿಸುದ್ದಿ, ಆಹಾರ ಸಚಿವರಿಂದ ಹಲವು ಮಹತ್ವದ ಘೋಷಣೆ

ಆಗಸ್ಟ್ 8ರೊಳಗೆ ಅರ್ಜಿ ಸಲ್ಲಿಸುವುದು ಯಾಕೆ ಮುಖ್ಯ?

ಚುನಾವಣಾ ಆಯೋಗದ ಪ್ರಕಾರ, ಇದುವರೆಗೆ ಫಾರ್ಮ್ ಸಲ್ಲಿಸದ ಮತದಾರರಿಗೆ ಇನ್ನೂ ಅವಕಾಶ ಇದೆ. ಆಗಸ್ಟ್ 8ರೊಳಗೆ ಬಿಎಲ್‌ಒ (BLO) ಸಹಾಯ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ, ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಪರಿಗಣಿಸುವ ಸಾಧ್ಯತೆ ಇರುತ್ತದೆ.

ಸುಮಾರು 29 ಲಕ್ಷ ಮತದಾರರು ‘2002ರ ಮಾಹಿತಿ ಲಭ್ಯವಿಲ್ಲ’ ಎಂಬ ಕಾರಣ ನೀಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮಾಹಿತಿ ಅಪೂರ್ಣವಾಗಿದ್ದರೂ, ಬಿಎಲ್‌ಒಗಳ ಸಹಾಯದಿಂದ ದಾಖಲೆಗಳನ್ನು ಪೂರ್ಣಗೊಳಿಸಿ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: SIR Status Check By SMS: ಎಸ್‌ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಜಸ್ಟ್ ಒಂದು ಎಸ್‌ಎಂಎಸ್ ಮೂಲಕ ಚೆಕ್ ಮಾಡಿ!

ಸ್ಥಳಾಂತರಗೊಂಡ ಮತದಾರರು ಏನು ಮಾಡಬೇಕು?

ಚುನಾವಣಾ ಆಯೋಗದ ಸ್ಪಷ್ಟನೆ ಪ್ರಕಾರ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿದ್ದರೆ ಹಾಗೂ ದೇಶದ ಬೇರೆ ಯಾವುದೇ ಸ್ಥಳದಲ್ಲಿ ಮತದಾರರಾಗಿ ಹೆಸರು ಹೊಂದಿಲ್ಲದಿದ್ದರೆ, ಅವರು ಫಾರ್ಮ್-6 (Form-6) ಮೂಲಕ ಹೊಸ ವಿಳಾಸದ ದಾಖಲೆ ಸಲ್ಲಿಸಿ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.

ಸರಿಯಾದ ವಿಳಾಸದ ದಾಖಲೆಗಳನ್ನು ನೀಡಿದರೆ ಅವರ ಹೆಸರನ್ನು ಹೊಸ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಆದರೆ ಸೂಕ್ತ ದಾಖಲೆಗಳನ್ನು ಸಲ್ಲಿಸದಿದ್ದರೆ ಅಂತಿಮ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇದೆ.

ಇದನ್ನೂ ಓದಿ: Crop Insurance Compensation: ರೈತರಿಗೆ ಸಿಹಿ ಸುದ್ದಿ: 55,326 ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ | ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿ…

ನಿಗದಿತ ಅವಧಿಯೊಳಗೆ ತಿದ್ದುಪಡಿ ಮಾಡಿಸಿ…

ಈಗ ಪ್ರಕಟವಾಗಿರುವುದು ಮೊದಲ ಕರಡು ಮತದಾರರ ಪಟ್ಟಿ (Draft Electoral Roll) ಮಾತ್ರ. ಆದ್ದರಿಂದ ಹೆಸರು ಕೈಬಿಟ್ಟಿರುವ ಎಲ್ಲರೂ ಆತಂಕಪಡುವ ಅಗತ್ಯವಿಲ್ಲ. ಚುನಾವಣಾ ಆಯೋಗ ನೀಡಿರುವ ಗಡುವಿನೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಪರಿಶೀಲನೆ ನಡೆಸಿ ಅರ್ಹರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಮೂಲ ಹಕ್ಕಾಗಿರುವುದರಿಂದ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿ, ಯಾವುದೇ ತಿದ್ದುಪಡಿ ಅಗತ್ಯವಿದ್ದರೆ ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.

18 Lakh Pension Stopped: ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ಬಂದ್ | ಫಲಾನುಭವಿಗಳಿಗೆ ಮಹತ್ವದ ಮಾಹಿತಿ


Spread the love
error: Content is protected !!