Karnataka 7th Pay Commission : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಬಳ ಮತ್ತು ಇತರ ಸವಲತ್ತು ಹೆಚ್ಚಳ ಕುರಿತ 7ನೇ ವೇತನ ಆಯೋಗ ಜಾರಿಗೆ ಮುಖ್ಯಮಂತ್ರ್ರಿ ಸಿದ್ದರಾಮಯ್ಯ ಅವರು ಖಚಿತ ಭರವಸೆ ನೀಡಿದ್ದು; ಶೀಘ್ರದಲ್ಲಿಯೇ ನೌಕರರ ಬಹುದಿನದ ಬೇಡಿಕೆ ಮತ್ತು ನಿರೀಕ್ಷೆಗಳು ಕೈಗೂಡಲಿವೆ.
ಹೌದು, ಕಳೆದ ಜೂನ್ 20ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬ೦ಧ ಕೆಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಆನಂತರ ರಾಜ್ಯ ಸರಕಾರಿ ನೌಕರರ ಸಂಘಗಳ ನಿಯೋಗವು ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದೆ. ಈ ಬಗ್ಗೆ ಖಚಿತ ಭರವಸೆ ನೀಡಿರುವ ಸಿಎಂ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸೂಚನೆ ನೀಡಿದ್ದಾರೆ.
ವರದಿ ಜಾರಿಗೆ ಸಂಪುಟ ಸಭೆಯಲ್ಲಿ ಅಪಸ್ವರ
ರಾಜ್ಯದಲ್ಲಿ ಹಲವು ವರ್ಷಗಳಿಂದ ಸರಕಾರಿ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಯಾಗಿಲ್ಲ. ಈಚೆಗೆ ಮೂರು ವರ್ಷಗಳಿಂದ ಈ ಬೇಡಿಕೆಗಳನ್ನು ಪ್ರತಿನಿಧಿಸುವ 7ನೇ ವೇತನ ಆಯೋಗ (Karnataka 7th Pay Commission) ಜಾರಿ ಮಾಡುವಂತೆ ನೌಕರರು ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.
ಈ ಹಿನ್ನಲೆಯಲ್ಲಿ ಕಳೆದ ವಾರ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳಾಗಿದ್ದು; ನೌಕರರ ವೇತನ ಹೆಚ್ಚಳಕ್ಕೆ ಕೆಲವು ಶಾಸಕರಿಂದ ಅಪಸ್ವರ ಕೇಳಿ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಈಗ ಹೊಸ ವೇತನ ಅನುಷ್ಠಾನ ಮಾಡಿದರೆ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

7ನೇ ವೇತನ ಆಯೋಗದ ವರದಿ ಜಾರಿ ಯಾವಾಗ?
ಜುಲೈ 2022ಕ್ಕೆ 6ನೇ ವೇತನ ಆಯೋಗದ ಅಧಿಕಾರಾವಧಿ ಕೊನೆಗೊಂಡ ನಂತರ, ಮಾರ್ಚ್ 16, 2023ರಂದು ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅವರ ನೇತೃತ್ವದ 7ನೇ ವೇತನ ಆಯೋಗ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಬಗ್ಗೆ ನೌಕರರ ಸಂಘಗಳು ಸಾಕಷ್ಟು ಬಾರಿ ಸರಕಾರವನ್ನು ಒತ್ತಾಯಿಸಿವೆ.
ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ನೇತೃತ್ವದಲ್ಲಿ ನಿಯೋಗ ಮುಖ್ಯಮಂತ್ರಯವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡಿದೆ. ಮುಂದಿನ ತಿಂಗಳ ಮೊದಲ ವಾರ ಜುಲೈ 4ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು; ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಂಭವವಿದೆ.
ಇದಕ್ಕೆ ಪೂರಕವೆಂಬ೦ತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಈಚೆಗೆ ‘7ನೇ ವೇತನ ಆಯೋಗದ ಜಾರಿಗಾಗಿ ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗಿದ್ದು, ಜುಲೈನಲ್ಲಿ ಜಾರಿಯಾಗುವ ವಿಶ್ವಾಸವಿದೆ. ನೌಕರರ ಸಂಘಟಿತ ಹೋರಾಟದಿಂದ ಯಾವುದೇ ಗುರಿ ಮುಟ್ಟಲು ಸಾಧ್ಯ’ ಎಂದಿದ್ದಾರೆ.
ಸರಕಾರಿ ನೌಕರರಿಗೆ ಜೂನ್ 24ರಿಂದ ಹೊಸ ರೂಲ್ಸ್ | ಕೇಂದ್ರ ಸರಕಾರದ ಖಡಕ್ ಎಚ್ಚರಿಕೆ Govt employees new rules