Officials will come to doorsteps of ration card applicants : ಪ್ರತಿ ತಿಂಗಳ ಅಂತ್ಯದೊಳಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿಯ ಹಣ DBT ಮೂಲಕ ಫಲಾನುಭವಿಗಳ ಖಾತೆಗೆ ಸಂದಾಯವಾಗುವ೦ತೆ ಕ್ರಮ ತೆಗೆದು ಕೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ (K H Muniyappa) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜೂನ್ 24ರಂದು ಆಹಾರ ನಿಗಮದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಇಲಾಖೆಯ ಪ್ರಗತಿ ಪರಿಶೀಲಿಸಿ ಇಲಾಖೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ. ಇದೀಗ ಆಹಾರ ಇಲಾಖೆಯ ಅಧಿಕಾರಿಗಳು ಅಲರ್ಟ್ ಆಗಿದ್ದು; ರೇಷನ್ ಕಾರ್ಡ್ ಅರ್ಜಿದಾರರ (Ration Card Applicants) ಮನೆ ಬಾಗಿಲಿಗೇ ತೆರಳಿ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು
ಹೌದು, ಈಗಾಗಲೇ ಹೊಸ ರೇಷನ್ ಕಾರ್ಡ್’ಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ನೈಜ ದಾಖಲೆಗಳನ್ನು ಪರಿಶೀಲಿಸಲು ಮನೆ ಮನೆಗೆ ಖುದ್ದು ಭೇಟಿ ನೀಡಲು ಆಹಾರ ಇಲಾಖೆ (Food and Civil Supplies Department) ಸನ್ನದ್ಧವಾಗಿದೆ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ದಾಖಲೆಗಳಲ್ಲಿ ತಪ್ಪು ಮಾಹಿತಿ ಕಂಡು ಬಂದಲ್ಲಿ ಅಂತಹ ಅರ್ಜಿಗಳನ್ನು ರದ್ದುಪಡಿಸಲಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಆಹಾರ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿಗೆ ಈ ಜವಾಬ್ದಾರಿ ನೀಡಿದ್ದು; ಸಾಧ್ಯವಾದಷ್ಟೂ ಬೇಗ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಸೂಚಿಸಲಾಗಿದೆ. ವರದಿಯನ್ನು ಆಧರಿಸಿ ‘ಅರ್ಹರು’ ಎಂದು ಖಚಿತವಾದ ಅರ್ಜಿದಾರರಿಗೆ ಮಾತ್ರ ಹಂತ ಹಂತವಾಗಿ ಅರ್ಜಿ ವಿಲೇವಾರಿ ಮಾಡಿ ಹೊಸ ರೇಷನ್ ಕಾರ್ಡ್ ವಿತರಿಸಲಿದೆ.
ಸಲ್ಲಿಕೆಯಾದ ಅರ್ಜಿಗಳ ವಿವರ
ರಾಜ್ಯಾದ್ಯಂತ 2017ರಿಂದ 2021ರ ವರೆಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಕೋರಿಕೆ ಸೇರಿದಂತೆ ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ ಸಂಬ೦ಧಪಟ್ಟ೦ತೆ ಸಲ್ಲಿಕೆಯಾದ ಅರ್ಜಿಗಳು, ತಿರಸ್ಕೃತಗೊಂಡ ಅರ್ಜಿಗಳು, ವಿಲೇವಾರಿಯಾದ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಅರ್ಜಿಗಳ ವಿವರ ಈ ಕೆಳಗಿನಂತಿದೆ:
- ಸಲ್ಲಿಕೆಯಾದ ಅರ್ಜಿಗಳು : 39,04,798
- ತಿರಸ್ಕೃತಗೊಂಡ ಅರ್ಜಿಗಳು : 9,60,641
- ವಿಲೇವಾರಿಯಾದ ಅರ್ಜಿಗಳು : 36,08,812
- ಬಾಕಿ ಉಳಿದ ಅರ್ಜಿಗಳು : 2,95,986
ಸರಿಯಾದ ದಾಖಲೆ ತೋರಿಸಿ ಹೊಸ ರೇಷನ್ ಕಾರ್ಡ್ ಪಡೆಯಿರಿ
ಕಳೆದ ವರ್ಷ (2023) ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಿಂದಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ಹೊಸ ರೇಷನ್ ಕಾರ್ಡ್ ಮಂಜೂರಾತಿ, ಸೇರ್ಪಡೆ ಹಾಗೂ ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅಂದಿನಿAದ ಇಂದಿನ ವರೆಗೂ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಗೆ ಸರ್ಕಾರ ಅನುಮತಿ ನೀಡಿಲ್ಲ.
ಇದೀಗ ಬಾಕಿ ಉಳಿದಿರುವ 2,95,986 ಅರ್ಜಿಗಳ ವಿಲೇವಾರಿಗೆ ಆಹಾರ ಇಲಾಖೆ ಭರದ ಸಿದ್ಧತೆ ನಡೆಸಿದ್ದು; ಇವುಗಳಲ್ಲಿ ಅರ್ಹ ಅರ್ಜಿದಾರರೆಷ್ಟು? ಅನರ್ಹ ಅರ್ಜಿದಾರರೆಷ್ಟು? ಎಂಬುವುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೇ ಬರಲಿದ್ದು; ಈ ಸಂದರ್ಭದಲ್ಲಿ ಸರಿಯಾದ ದಾಖಲೆ ಒದಗಿಸಿ ಅರ್ಹರು ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಪಡೆಯಬಹುದಾಗಿದೆ.
ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver
3 thoughts on “ಹೊಸ ರೇಷನ್ ಕಾರ್ಡ್ ನೀಡಲು ಮನೆ ಬಾಗಿಲಿಗೆ ಬರ‍್ತಾರೆ ಅಧಿಕಾರಿಗಳು | ಅಸಲಿ ದಾಖಲೆ ನೀಡಿದರೆ ಮಾತ್ರ ಹೊಸ ರೇಷನ್ ಕಾರ್ಡ್ Officials will come to doorsteps of ration card applicants”