Egg Cancer Rumors Fact Check- ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? | ವಾಸ್ತವ ಏನು, ವದಂತಿ ಏನು?

Spread the love

WhatsApp Group Join Now
Telegram Group Join Now

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿ, ‘ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ’ (Egg Cancer Rumors Fact Check) ಎಂಬ ವದಂತಿ ಭಾರೀ ಚರ್ಚೆಗೆ ಕಾರಣವಾಗಿದೆ.

‘ಜಿನೋಟಾಕ್ಸಿಕ್’ (Genotoxic) ಎಂಬ ಅಂಶ ಮೊಟ್ಟೆಯಲ್ಲಿ ಪತ್ತೆಯಾಗಿದೆಯಂತೆ ಎಂಬ ಹೇಳಿಕೆಗಳು ಜನರ ಮನಸ್ಸಿನಲ್ಲಿ ಆತಂಕ ಹುಟ್ಟಿಸಿವೆ. ಆದರೆ ನಿಜವಾಗಿ ಇದರ ಹಿಂದೆ ಏನಿದೆ? ವಾಸ್ತವವೇನು? ಎಂಬ ಗೊಂದಲ ಸಹಜವಾಗಿಯೇ ಉದ್ಭವವಾಗಿದೆ.

ಇದನ್ನೂ ಓದಿ: Karnataka Heavy Cold Wave – ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಶೀತಗಾಳಿ ಎಚ್ಚರಿಕೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯ ಆರೋಗ್ಯ ಇಲಾಖೆ ಕಣ್ಗಾವಲು

ಈ ವಿಷಯ ಗಂಭೀರವಾಗಿ ಹರಡುತ್ತಿದ್ದಂತೆಯೇ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಸ್ಪಷ್ಟನೆ ಹೊರಬಂದಿದೆ. ಅವರು ಹೇಳುವಂತೆ, ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ಸುದ್ದಿ ವದಂತಿಯಷ್ಟೇ. ಯಾವುದೇ ಪ್ರಾಮಾಣಿಕ ವೈಜ್ಞಾನಿಕ ದೃಢೀಕರಣ ಇದಕ್ಕೆ ಲಭ್ಯವಿಲ್ಲ.

ಆಹಾರ ಮತ್ತು ಗುಣಮಟ್ಟ ಇಲಾಖೆ ಆಯುಕ್ತರನ್ನು ಸಂಪರ್ಕಿಸಿ, ಅಗತ್ಯವಿದ್ದರೆ ಮೊಟ್ಟೆಗಳ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ. ಈ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Tata AIA PARAS Scholarship 2025-26- ಟಾಟಾ ಎಐಎ ಲೈಫ್ ಇನ್ಶುರೆನ್ಸ್ ಸ್ಕಾಲರ್‌ಶಿಪ್ | ಈ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 15,000 ರೂ. ಆರ್ಥಿಕ ನೆರವು

Egg Cancer Rumors Fact Check
Egg Cancer Rumors Fact Check
‘ಜಿನೋಟಾಕ್ಸಿಕ್’ ಅಂಶ ಎಂದರೆ ಏನು?

ಜಿನೋಟಾಕ್ಸಿಕ್ (Genotoxic) ಅಂಶವು ಡಿಎನ್‌ಎಗೆ ಹಾನಿ ಮಾಡುವ ರಾಸಾಯನಿಕಗಳು ಅಥವಾ ಕಣಗಳಾಗಿವೆ. ಕೆಲವು ಸಂದರ್ಭಗಳಲ್ಲಿ ಇತರ ಆಹಾರಗಳಲ್ಲಿ ಅಥವಾ ಮಾಲಿನ್ಯದಿಂದ ಇಂತಹ ಅಂಶಗಳು ಕಾಣಬಹುದು.

ಆದರೆ ಅವುಗಳ ಪ್ರಮಾಣ ಮತ್ತು ಪರಿಣಾಮ ವೈಜ್ಞಾನಿಕವಾಗಿ ದೃಢೀಕರಿಸಬೇಕಾಗುತ್ತದೆ. ಮೊಟ್ಟೆಗಳ ವಿಷಯದಲ್ಲಿ ಈ ತನಕ ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಸಂಸ್ಥೆ ಇಂತಹ ಪತ್ತೆ ವರದಿಯನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: Karnataka PDO Recruitment 2026- 994 ಪಿಡಿಒ ಹುದ್ದೆಗಳ ನೇಮಕಾತಿ | ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ…

ಸಾಮಾಜಿಕ ಜಾಲತಾಣದ ‘ಗಾಳಿ ಸುದ್ದಿ’ಗಳ ಎಚ್ಚರಿಕೆ

ಅಂತರ್ಜಾಲದಲ್ಲಿ ಹರಡುವ ಪ್ರತಿಯೊಂದು ಸುದ್ದಿಯೂ ನಿಖರವಾಗಿರುತ್ತದೆ ಎಂದು ನಂಬುವಂತಿಲ್ಲ. ಕೆಲವು ಬಾರಿ ಅಪೂರ್ಣ ಮಾಹಿತಿ ಅಥವಾ ತಪ್ಪು ಅರ್ಥಗಳ ಆಧಾರದಲ್ಲಿ ಗಾಳಿ ಸುದ್ದಿ ಸೃಷ್ಟಿಯಾಗುತ್ತದೆ.

ಹೀಗಾಗಿ ಅಂತರ್ಜಾಲ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಆಹಾರ ಅಥವಾ ಆರೋಗ್ಯ ಸಂಬಂಧಿತ ವಿಷಯ ಕೇಳಿದಾಗ ಅಧಿಕೃತ ಮೂಲಗಳನ್ನು ಪರಿಶೀಲಿಸುವುದು ಅತಿ ಮುಖ್ಯ.

ಇದನ್ನೂ ಓದಿ: Karnataka ZP-TP Election 2026- ಜಿ.ಪಂ, ತಾ. ಪಂ. ಚುನಾವಣೆ ಫಿಕ್ಸ್ | ಇನ್ನು ನಾಲ್ಕು ತಿಂಗಳೂಳಗೇ ಎಲೆಕ್ಷನ್ | ಸಚಿವ ಸಂಪುಟ ನಿರ್ಧಾರ

ಮೊಟ್ಟೆ ಸುರಕ್ಷಿತವಾದ ಆಹಾರವೇ?

ಆರೋಗ್ಯ ತಜ್ಞರ ಪ್ರಕಾರ, ಮೊಟ್ಟೆ ಸಂಪೂರ್ಣ ಪೋಷಕಾಂಶಗಳಿಂದ ತುಂಬಿರುವ ಆಹಾರ. ಪ್ರೋಟೀನ್, ವಿಟಮಿನ್‌ಗಳು, ಖನಿಜಗಳು ಹಾಗೂ ‘ಗುಡ್ ಫ್ಯಾಟ್’ಗಳ ಉತ್ತಮ ಮೂಲವಾದ ಮೊಟ್ಟೆ ಸಾಮಾನ್ಯವಾಗಿ ಸುರಕ್ಷಿತ ಆಹಾರವಾಗಿದೆ.

ಮೊಟ್ಟೆ ಇನ್ನೂ ಸುರಕ್ಷಿತ ಆಹಾರವಾಗಬೇಕಿಂದರೆ ವಿಶ್ವಾಸಾರ್ಹ ಬ್ರ‍್ಯಾಂಡ್ ಅಥವಾ ವಿಶ್ವಾಸಾರ್ಹ ಅಂಗಡಿಯಿAದಲೇ ಮೊಟ್ಟೆಯನ್ನು ಖರೀದಿಸಿ. ಮೊಟ್ಟೆಗಳನ್ನು ತಣ್ಣಗೆ, ಒಣ ಸ್ಥಳದಲ್ಲಿ ಸಂಗ್ರಹಿಸಿ. ಮೊಟ್ಟೆಯನ್ನು ಸಂಪೂರ್ಣ ಬೇಯಿಸಿ ತಿನ್ನಿ. ಹಸಿ ಅಥವಾ ಅರ್ಧ ಬೇಯಿಸಿದ ಮೊಟ್ಟೆಯನ್ನು ತಿನ್ನಬೇಡಿ.

WhatsApp Group Join Now
Telegram Group Join Now

ಈಗಿನ ತನಕ ಯಾವುದೇ ವೈಜ್ಞಾನಿಕ ಅಥವಾ ಸರ್ಕಾರಿ ಸಂಸ್ಥೆ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಇದೆ ಎಂದು ದೃಢಪಡಿಸಿರುವುದಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯು ಈ ವಿಷಯ ಪರಿಶೀಲನೆಗೆ ಮುಂದಾಗಿದೆ, ಅದು ಪೂರ್ಣಗೊಂಡ ಬಳಿಕ ಮಾತ್ರ ವಾಸ್ತವ ಚಿತ್ರ ಹೊರಬೀಳಲಿದೆ.

Alvas Free Education Admission- ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ವಸತಿ, ಊಟೋಪಚಾರ ಸಂಪೂರ್ಣ ಉಚಿತ | ಅರ್ಜಿ ಲಿಂಕ್ ಇಲ್ಲಿದೆ


Spread the love
error: Content is protected !!