ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಕಾರ್ಯ ಚುರುಕುಗೊಳಿಸಿದ್ದು; ಸರ್ಕಾರ ಸುಮಾರು 2.93 ಲಕ್ಷ ಹೊಸ ಕಾರ್ಡು (Karnataka New BPL Card List) ವಿತರಿಸುವ ಗುರಿ ಹೊಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡುಗಳ ಶುದ್ಧೀಕರಣ ಕಾರ್ಯ ವೇಗ ಪಡೆದುಕೊಂಡಿದೆ. ಹಲವು ವರ್ಷಗಳಿಂದ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಅನರ್ಹ ಕಾರ್ಡುಗಳನ್ನು ಇದೀಗ ಸರ್ಕಾರ ರದ್ದುಗೊಳಿಸುತ್ತಿದೆ. ಇದರಿಂದ ಕಾದು ಕುಳಿತಿದ್ದ ನಿಜವಾದ ಬಡ ಕುಟುಂಬಗಳಿಗೆ ಹೊಸ ಬಿಪಿಎಲ್ ಕಾರ್ಡ್ ಪಡೆಯುವ ಅವಕಾಶ ದೊಡ್ಡ ಮಟ್ಟದಲ್ಲಿ ಸಿಗುತ್ತಿದೆ.
ಇದನ್ನೂ ಓದಿ: E-Svattu 2.0- ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆ…
ಅನರ್ಹ ಕಾರ್ಡುಗಳಿಗೆ ಬ್ರೇಕ್
ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 2.93 ಲಕ್ಷ ಅನರ್ಹ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ಗೆ ಪರಿವರ್ತನೆ ಮಾಡುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ.
ಈ ಪರಿವರ್ತನೆಯಿಂದ ಖಾಲಿಯಾಗುವ ಸ್ಥಾನಗಳನ್ನು ಅಷ್ಟೇ ಸಂಖ್ಯೆಯ ಹೊಸ ಬಿಪಿಎಲ್ ಕಾರ್ಡುಗಳನ್ನು ವಿತರಿಸುವ ಮೂಲಕ ತುಂಬಲಾಗುತ್ತದೆ ಎಂದು ಆಹಾರ ಇಲಾಖೆಯ ಉನ್ನತ ಮೂಲಗಳು ಹೇಳುತ್ತಿವೆ.

ರಾಜ್ಯದಲ್ಲಿ ಬಿಪಿಎಲ್ ಸ್ಥಿತಿ
ಸದ್ಯ ಕರ್ನಾಟಕದಲ್ಲಿ ಒಟ್ಟು 1.13 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿದ್ದು; 3.99 ಕೋಟಿ ಫಲಾನುಭವಿಗಳಿದ್ದಾರೆ. ಅಂತ್ಯೋದಯ (AAY) ಯೋಜನೆಗೆ ಸೇರಿದ 10.51 ಲಕ್ಷ ಕುಟುಂಬಗಳಿದ್ದು; 43 ಲಕ್ಷ ಫಲಾನುಭವಿಗಳು AAY ಮೂಲಕ ಲಾಭ ಪಡೆಯುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ದೊಡ್ಡ ಪ್ರಮಾಣದ ವ್ಯವಸ್ಥೆಯಲ್ಲಿ ಅನರ್ಹರ ನುಸುಳಿಕೆ ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಸರ್ಕಾರ ಇದೀಗ ಗಂಭೀರ ಶುದ್ಧೀಕರಣ ಕಾರ್ಯ ಆರಂಭಿಸಿದೆ.
ಇದನ್ನೂ ಓದಿ: Constable GD Recruitment- ಎಸ್ಎಸ್ಎಲ್ಸಿ ಪಾಸಾದವರಿಗೆ ಕಾನ್ಸ್ಟೆಬಲ್ ಹುದ್ದೆಗಳು | 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸ ಕಾರ್ಡ್ ವಿತರಣೆಗೆ ಸೆಲ್ಫಿ ಮಹಜರು
ಇನ್ಮುಂದೆ ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸುವವರ ಮನೆಯನ್ನು ಖುದ್ದು ಮಹಜರು ಮಾಡಲು ಹೋಗುವ ಆಹಾರ ನಿರ್ದೇಶಕರಿಗೆ ಈಗ ‘ಸೆಲ್ಫಿ ಟಾಸ್ಕ್’ ಕಡ್ಡಾಯಗೊಳಿಸಲಾಗುತ್ತಿದೆ.
ಈತನ ಕೇವಲ ವರದಿ-ಸಹಿ ಸಾಕಾಗುತ್ತಿತ್ತು. ಆದರೆ ಅನೇಕ ತಪ್ಪು ಮಹಜರು ಹಾಗೂ ಸುಳ್ಳು ಮಾಹಿತಿಗಳು ಬೆಳಕಿಗೆ ಬಂದ ಕಾರಣ, ಸರ್ಕಾರ ಇದೀಗ ಪೂರ್ತಿ ಡಿಜಿಟಲ್ ಸಾಕ್ಷ್ಯಾಧಾರ ತರಲು ನಿರ್ಧರಿಸಿದೆ.
ಅನರ್ಹರು ನುಸುಳದಂತೆ ತಡೆಯಲು, ಮನೆಯ ನಿಜಸ್ಥಿತಿ ದೃಢಪಡಿಸಲು, ಅರ್ಜಿದಾರರ ಕುಟುಂಬದವರ ಹಾಜರಿ ಖಚಿತಪಡಿಸಲು ಸದರಿ ಸೆಲ್ಫಿ ಟಾಸ್ಕ್ ನೀಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ದಾಖಲೆ ಪರಿಶೀಲನೆ ಸುಲಭವಾಗಲಿದೆ.
ಇದನ್ನೂ ಓದಿ: How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್ನಲ್ಲೇ ಚೆಕ್ ಮಾಡಿ
ಸೆಲ್ಫಿ ಮಹಜರು ಹೇಗೆ ಮಾಡಲಾಗುತ್ತದೆ?
ಹೊಸ ಮಾರ್ಗಸೂಚಿಗಳ ಪ್ರಕಾರ, ಆಹಾರ ನಿರೀಕ್ಷಕರು ಅರ್ಜಿದಾರರ ಮನೆಯಲ್ಲಿ ನೇರವಾಗಿ ಭೇಟಿ ಕೊಡಬೇಕು. ಮನೆಯ ಮುಂದಿನಿಂದ ಹಾಗೂ ಒಳಗಿನಿಂದ 2 ದಿಕ್ಕಿನಲ್ಲಿ (ವರ್ಟಿಕಲ್ ಮತ್ತು ಹಾರಿಜಂಟಲ್) ಫೋಟೋ ತೆಗೆಯಬೇಕು.
ಫೋಟೋದಲ್ಲಿ ಕುಟುಂಬದ ಯಜಮಾನ/ಯಜಮಾನಿ ಮತ್ತು ಇತರ ಸದಸ್ಯರು ಇರಬೇಕು. ಈ ಚಿತ್ರಗಳನ್ನು ಆಹಾರ ನಿರೀಕ್ಷಕರು ತಮಗೆ ನೀಡಿದ ಸರ್ಕಾರಿ ಲಾಗಿನ್ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕು
ಈ ವಿಧಾನ ಈಗಾಗಲೇ ತುರ್ತು ಆರೋಗ್ಯ ಸೇವೆಗಳಿಗಾಗಿ ನೀಡುವ ವಿಶೇಷ ಬಿಪಿಎಲ್ ಕಾರ್ಡುಗಳಲ್ಲಿ ಪ್ರಯೋಗಾತ್ಮಕವಾಗಿ ನಡೆಯುತ್ತಿದೆ. ಉತ್ತಮ ಫಲಿತಾಂಶ ಬಂದಿರುವುದರಿಂದ, ಅದನ್ನು ಸಾಮಾನ್ಯ ಬಿಪಿಎಲ್ ಕಾರ್ಡ್ ವಿತರಣೆಯಲ್ಲೂ ಜಾರಿಗೆ ತರಲಾಗುತ್ತಿದೆ.
ಇದನ್ನೂ ಓದಿ: BPL Card Cancellation Check- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ಮೊಬೈಲ್’ನಲ್ಲೇ ಚೆಕ್ ಮಾಡಿ…
ಹೊಸ ಕಾರ್ಡ್ ವಿತರಣೆ ಪ್ರಕ್ರಿಯೆ ಯಾವಾಗ?
ಅನರ್ಹ ಕಾರ್ಡ್ಗಳನ್ನು ಎಪಿಎಲ್ಗೆ ಪರಿವರ್ತಿಸುವ ಪ್ರಕ್ರಿಯೆ ಬಹುತೇಕ ಮುಗಿದಿದೆ. ಮುಂದಿನ ಹಂತದಲ್ಲಿ 2.93 ಲಕ್ಷ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಸೆಲ್ಫಿ ಮಹಜರಿನೊಂದಿಗೆ ಮನೆಮನೆ ಪರಿಶೀಲನೆ, ಅರ್ಹ-ಅನರ್ಹರ ಗುರುತುಪಡಿಸಿಕೆ, ಪಾರದರ್ಶಕತೆ ಮತ್ತು ಡಿಜಿಟಲ್ ದಾಖಲೆಗಲೊಂದಿಗೆ ಹೊಸ ಕಾರ್ಡ್ ವಿತರಣೆ ನಡೆಯಲಿದೆ. ಶೀಘ್ರದಲ್ಲಿಯೇ ಹೊಸ ಕಾರ್ಡ್ ಪಡೆಯುವವರ ಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸುವ ಸಾಧ್ಯತೆ ಇದೆ.
ನಿಮ್ಮ ಹೆಸರು ಹೊಸ ಪಟ್ಟಿಯಲ್ಲಿ ಇದೆಯಾ?
ಅನರ್ಹ ಕಾರ್ಡ್ಗಳನ್ನು ತೆಗೆದುಹಾಕಿದ ಬಳಿಕ ಖಾಲಿಯಾಗುವ ಸ್ಥಾನಗಳಿಗೆ ಹೊಸ ಕಾರ್ಡುಗಳನ್ನು ವಿತರಿಸಲಾಗುವುದರಿಂದ, ಈ ಬಾರಿ ಕಾರ್ಡ್ ಪಡೆಯುವ ಅವಕಾಶ ಅತ್ಯಂತ ಜಾಸ್ತಿ ಇದೆ.
ಹೀಗಾಗಿ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಹೊಸ ಕಾರ್ಡು ಪಡೆಯುವ ಅವಕಾಶವಿದೆ. ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಬಯಸುತ್ತಿದ್ದರೆ ಈ ಬಾರಿಗೆ ನಿಮ್ಮ ಹೆಸರು ಪಟ್ಟಿಯಲ್ಲಿ ಕಾಣುವ ಸಾಧ್ಯತೆ ಬಹಳ ಹೆಚ್ಚಿದೆ.
Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ