ಕಾರ್ಮಿಕರ ಮಕ್ಕಳಿಗೆ 20,000 ರೂ.ವರೆಗೆ ವಿದ್ಯಾರ್ಥಿವೇತನ (Karnataka Labour Welfare Scholarship) ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 2025-26ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಹೈಸ್ಕೂಲ್‌ನಲ್ಲಿ ಓದುತ್ತಿರುವ ಮಕ್ಕಳಿಂದ ಹಿಡಿದು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್’ಗಳನ್ನು ಮಾಡುತ್ತಿರುವ ವರೆಗೂ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ 6,000 ರೂ.ರಿಂದ 20,000 ರೂ.ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಆರ್ಥಿಕ ತೊಂದರೆಯು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು; ಪ್ರತಿ ವರ್ಷಯೂ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಬಾರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.
ಇದನ್ನೂ ಓದು: KMF Maize Direct Purchase- ಕೆಎಂಎಫ್‌ನಿಂದ ಮೆಕ್ಕೆಜೋಳ ನೇರ ಖರೀದಿ ಆರಂಭ | ಕ್ವಿಂಟಾಲ್‌ಗೆ ₹2,400 ಬೆಲೆ ನಿಗದಿ
ಯಾರೆಲ್ಲ ಅರ್ಹರು?
- ಪ್ರಮುಖವಾಗಿ ಈ ವಿದ್ಯಾರ್ಥಿವೇತನವು ಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ.
- ವಿದ್ಯಾರ್ಥಿಯ ತಾಯಿ ಅಥವಾ ತಂದೆ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ನಿಯಮಿತವಾಗಿ ವಂತಿಕೆ ನೀಡುವ ಸಂಘಟಿತ ವಲಯದ ಕಾರ್ಮಿಕರಾಗಿರಬೇಕು.
- ಪೋಷಮಕರ ಮಾಸಿಕ ಆದಾಯ ಮಿತಿ ₹35,000 ಮೀರಿರಬಾರದು.
- ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇ.50ರಷ್ಟು ಅಂಕ ಹಾಗೂ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಕನಿಷ್ಠ ಶೇ.45ರಷ್ಟು ಅಂಕ ಪಡೆದಿರಬೇಕು.
- ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ವಿದ್ಯಾರ್ಥಿಗಳಿಗೆ ಸಿಗುವ ನೆರವು
ವಿದ್ಯಾರ್ಥಿಗಳ ಶಿಕ್ಷಣದ ಮಟ್ಟದ ಮೇಲೆ ಅವಲಂಬಿಸಿ ಈ ಕೆಳಗಿನಂತೆ ಪ್ರೋತ್ಸಾಹಧನ ನೀಡಲಾಗುತ್ತದೆ:
- 8ನೇ ತರಗತಿ – 10ನೇ ತರಗತಿ: ₹6,000
- ಪಿಯುಸಿ / ಐಟಿಐ / ಡಿಪ್ಲೋಮಾ / TCH: ₹8,000
- ಪದವಿ ವಿದ್ಯಾರ್ಥಿಗಳು: ₹10,000
- ಸ್ನಾತಕೋತ್ತರ (PG) ವಿದ್ಯಾರ್ಥಿಗಳು: ₹12,000
- ಇಂಜಿನಿಯರಿಂಗ್ / ಮೆಡಿಕಲ್ ವಿದ್ಯಾರ್ಥಿಗಳು: ₹20,000
ಕಾರ್ಮಿಕರ ಮಕ್ಕಳಿಗೆ ಇದು ದೊಡ್ಡ ಸಹಾಯವಾಗಿದ್ದು, ಅನೇಕರು ಈ ಸಹಾಯಧನದ ಮೂಲಕ ತಮ್ಮ ಶಿಕ್ಷಣವನ್ನು ಸುಲಭವಾಗಿ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದು: Karnataka Rain Forecast- ಮತ್ತೆ ಚಂಡಮಾರುತದ ಅಬ್ಬರ | ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಅರ್ಹ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಕಡ್ಡಾಯವಾಗಿ ಕೆಳಗಿನ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ:
- ಎಸ್‌ಎಸ್‌ಎಲ್‌ಸಿ / ಪಿಯುಸಿ ಅಂಕಪಟ್ಟಿ
- ವಿದ್ಯಾರ್ಥಿ, ತಂದೆ ಮತ್ತು ತಾಯಿ ಮೂವರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿ
- ಪದವಿ / ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಿಂದಿನ ಎರಡು ಸೆಮಿಸ್ಟರ್‌ಗಳ ಅಂಕಪಟ್ಟಿ
- ತಂದೆ ಅಥವಾ ತಾಯಿ ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ
ದಾಖಲೆಗಳನ್ನು ಸರಿಯಾಗಿ ಸಂಗ್ರಹಿಸಿ, ಯಾವುದೇ ತಪ್ಪಿಲ್ಲದೆ ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕ ಮತ್ತು ಸಂಪರ್ಕ ವಿವರ
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2025 ಕೊನೆಯ ದಿನವಾಗಿದೆ. ಆದ್ದರಿಂದ ಸಂಭವನೀಯ ವೈಫಲ್ಯ ತಪ್ಪಿಸಲು ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
ಹೆಚ್ಚಿನ ಮಾಹಿತಿ ಅಥವಾ ತಾಂತ್ರಿಕ ಸಮಸ್ಯೆಗಳಿದ್ದರೆ 080-23475188, 8277291175 ಹಾಗೂ 9141602562 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
- ಆನ್‌ಲೈನ್ ಅರ್ಜಿ ಲಿಂಕ್: Apply Now
- ಅಧಿಕೃತ ವೆಬ್‌ಸೈಟ್: klwbapps.karnataka.gov.in, klwb.karnataka.gov.in