ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ (PM KISAN 21st Installment) 2,000 ರೂಪಾಯಿ ಫಲಾನುಭವಿ ಸಣ್ಣ ರೈತರ ಬ್ಯಾಂಕ್ ಖಾತೆ ಜಮೆಯಾಗಿದೆ. ನಿಮ್ಮ ಖಾತೆಗೆ ಹಣ ಬರುತ್ತಾ? ಈಗಲೇ ಚೆಕ್ ಮಾಡಿ…
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗೆ ಜಮೆಯಾಗಿದೆ. ನಿನ್ನೆ (ನವೆಂಬರ್ 19) ತಮಿಳುನಾಡಿನ ಕೋಯಮತ್ತೂರಿನಲ್ಲಿ ನಡೆದ ‘ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಘಸಭೆ’ಯಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕ ಸೇರಿದಂತೆ ದೇಶಾದ್ಯಂತ ಬರೋಬ್ಬರಿ 9 ಕೋಟಿ ರೈತರ ಖಾತೆಗಳಿಗೆ ತಲಾ 2,000 ರೂಪಾಯಿ ಜಮೆ ಮಾಡಲಾಗಿದೆ.
ಇಕೆವೈಸಿ (eKYC) ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Link to Bank Account) ಮಾಡಿರುವ ಎಲ್ಲಾ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೂ ಹಣ ಜಮಾ ಆಗಿದೆ.
ಕೋಟ್ಯಾಂತರ ರೈತರಿಗೆ ಆರ್ಥಿಕ ನೆರವು
2019ರ ಫೆಬ್ರವರಿ 24ರಂದು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದು; ಅಲ್ಲಿಂದ ಇಲ್ಲಿಯ ತನಕ ಫಲಾನುಭವಿ ರೈತರಿಗೆ ಒಟ್ಟು 21 ಕಂತುಗಳಲ್ಲಿ ಹಣ ಪಾವತಿಸಲಾಗಿದೆ. ದೇಶದ 9 ಕೋಟಿಗೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಯೋಜನೆಯಡಿ ಸರ್ಕಾರವು ಪ್ರತಿ ವರ್ಷ ರೈತರಿಗೆ 6,000 ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

ಕಠಿಣ ನಿಯಮಗಳು ಜಾರಿ
ಅನರ್ಹರ ಹಾವಳಿಯಿಂದಾಗಿ ಈ ಇಡೀ ಯೋಜನೆಯ ನಿಯಮಗಳು ಈಗ ಬಹಳಷ್ಟು ಕಠಿಣವಾಗಿವೆ. ಈ ಯೋಜನೆ ದುರ್ಬಳಕೆ ತಪ್ಪಿಸಿ ನಿಜವಾದ ರೈತರಿಗೆ ಯೋಜನೆಯ ಲಾಭ ಸಿಗಲು ಸರ್ಕಾರ ಹಲವು ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ಪೈಕಿ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಇಕೆವೈಸಿ (eKYC) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಡ್ಡಾವಾಗಿ ಇಕೆವೈಸಿ ಮಾಡಲು ಈಗಾಗಲೇ ಹಲವು ಬಾರಿ ಗಡುವು ನೀಡಲಾಗಿದೆ. ಇದನ್ನು ಸಮರ್ಪಕವಾಗಿ ಮಾಡಿದ ರೈತರಿಗೆ ಮಾತ್ರ 21ನೇ ಕಂತು ಹಣ ಜಮೆಯಾಗಲಿದೆ. ಇಕೆವೈಸಿ ಕಾರಣಕ್ಕೆ 21ನೇ ಕಂತಿನ ಹಣ ಬಾರದಿದ್ದರೆ ಅಂತಹ ರೈತರಗೆ ಈಗಲೂ ಇಕೆವೈಸಿ ಮಾಡಿಸುವ ಅವಕಾಶ ನೀಡಲಾಗಿದೆ.
ರೈತರು ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ಅಂಚೆ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳ ಮೂಲಕ ಕಿಸಾನ್ ಸಮ್ಮಾನ್‌ಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ಇಕೆವೈಸಿ ಮಾಡಬಹುದಾಗಿದೆ.
ನಿಮ್ಮ ಹಣ ಜಮಾ ಚೆಕ್ ಮಾಡಿ…
ನಿಮ್ಮೂರಿನ ಎಷ್ಟು ಜನರಿಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಬರುವುದಿಲ್ಲ ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ನಿಮಗೆ ಪಿಎಂ ಕಿಸಾನ್ ತಂತ್ರಾಶದ BENIFICIARY LIST (ಫಲಾನುಭವಿಗಳ ಪಟ್ಟಿ) ಡ್ಯಾಶ್‌ಬೋರ್ಡ್ ತೆರೆದುಕೊಳ್ಳುತ್ತದೆ.
ಅಲ್ಲಿ ರಾಜ್ಯ, ಜಿಲ್ಲೆ, ಸಬ್ ಜಿಲ್ಲೆ (ತಾಲ್ಲೂಕು), ವಿಲೇಜ್ ಸೆಲೆಕ್ಟ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮೂರಿನ ಅಷ್ಟೂ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ 21ನೇ ಕಂತಿನ 2,000 ರೂಪಾಯಿ ಸಂದಾಯವಾಗಿದೆ ಎಂದರ್ಥ.
ಪಿಎಂ ಕಿಸಾನ್ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಪಡೆಯಲು ಉಚಿತ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ 011-23381092 ಅನ್ನು ಸಂಪರ್ಕಿಸಬಹುದು.
ಇ-ಮೇಲ್ ಮೂಲಕವೂ ನೀವು ದೂರು ನೀಡಬಹುದಾಗಿದ್ದು; ಇದಕ್ಕಾಗಿ pmkisan-ict@gov.inಗೆ ಮೇಲ್ ಮಾಡಬಹುದು. ಎಲ್ಲ ರೈತ ಬಾಂಧವರು ಇಕೆವೈಸಿ (eKYC) ಮಾಡಿಸುವ ಮೂಲಕ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ.