PM Mudra Loan : ಹಣಕಾಸಿನ ಕೊರತೆಯಿಂದಾಗಿ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಸಾಧ್ಯವಾಗದಿರುವ ಉತ್ಸಾಹಿಗಳಿಗೆ ಧನಸಹಾಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhan Mantri Mudra Yojana-PMMY) ಹೆಸರಿನ ಈ ಸಾಲ ಯೋಜನೆಯನ್ನು ಆರಂಭಿಸಿದೆ.
ಏಪ್ರಿಲ್ 8, 2015ರಂದು ಅನುಷ್ಠಾನಗೊಂಡಿರುವ ಸದರಿ ಯೋಜನೆಯು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ 10 ಲಕ್ಷದ ವರೆಗೆ ಸಾಲವನ್ನು ಒದಗಿಸುವ ಯೋಜನೆಯಾಗಿದೆ. 2015ರಿಂದ ಕೊಟ್ಯಾಂತರ ಜನ ಇದರ ಪ್ರಯೋಜನ ಪಡೆದಿದ್ದಾರೆ.
2024-25ರಲ್ಲಿ ಮಂಜೂರಾದ ಸಾಲ
ಮುದ್ರಾ ಯೋಜನೆ ವೆಬ್‌ಸೈಟ್ ಮಾಹಿತಿ ಪ್ರಕಾರ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 6721452 ಅರ್ಜಿದಾರರಿಗೆ 134124.60 ಕೋಟಿ ರೂಪಾಯಿ Pಒಒಙ ಸಾಲಗ ಮಂಜೂರಾಗಿದೆ. ಇದರಲ್ಲಿ 128915.60 ಕೋಟಿ ರೂಪಾಯಿ ಸಾಲ ವಿತರಣೆಯಾಗಿದೆ.
ಸಣ್ಣ ವ್ಯಾಪಾರವನ್ನು ಪ್ರಾರಂಭಿಸುವ ಅಥವಾ ಅಸ್ತಿತ್ವದಲ್ಲಿರುವ ಉದ್ಯಮವನ್ನು ವಿಸ್ತರಿಸಲು ಬಯಸುವ ವ್ಯಕ್ತಿಗಳು ಸದರಿ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಡಿ 2024-25ನೇ ಸಾಲಿನ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಸಾಲ ಪಡೆಯಲು ಬೇಕಾಗುವ ದಾಖಲೆಗಳೇನು? ಯಾವ್ಯಾವ ಉದ್ಯೋಗಕ್ಕೆ ಸಾಲ ಸಿಗಲಿದೆ? ಯಾವ್ಯಾವ ಬ್ಯಾಂಕುಗಳು ಸಾಲ ನೀಡುತ್ತವೆ? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…
8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs
ಯಾರೆಲ್ಲ ಸಾಲ ಪಡೆಯಬಹುದು?
ಆಹಾರ ಉತ್ಪನ್ನಗಳ ತಯಾರಿ, ಜವಳಿ (ಬಟ್ಟೆ ವ್ಯಾಪಾರ) ಕ್ಷೇತ್ರ, ಸಮುದಾಯ, ಸಾಮಾಜಿಕ, ಸಾರಿಗೆ ವಲಯ ಮತ್ತು ವೈಯಕ್ತಿಕ ಸೇವಾ ಚಟುವಟಿಕೆಗಳಿಗೆ ಸಾಲ ದೊರೆಯುತ್ತದೆ. ಈ ಕೆಳಗಿನ ಉದ್ಯಮ/ ಉದ್ಯೋಗ ಶುರು ಮಾಡಲು ಮುದ್ರಾ ಸಾಲ ಪಡೆಯಬಹುದಾಗಿದೆ:
- ಆಟೋ ರಿಕ್ಷಾ
- ಸಣ್ಣ ಸರಕುಗಳ ಸಾಗಾಟ ವಾಹನ
- ತ್ರಿಚಕ್ರ ವಾಹನ, ಇ-ರಿಕ್ಷಾ
- ಕಾರು, ಟ್ಯಾಕ್ಸಿ ಖರೀದಿ
- ಸೆಲೂನ್, ಬ್ಯೂಟಿಪಾರ್ಲರ್
- ವ್ಯಾಯಾಮ ಶಾಲೆ (ಜಿಮ್)
- ದಿನಸಿ ಅಂಗಡಿ, ಹೊಲಿಗೆ ಅಂಗಡಿ
- ಡಿ.ಟಿ.ಪಿ., ಝರಾಕ್ಸ್
- ಕೊರಿಯರ್ ಏಜೆಂಟ್ಸ್
- ಆಹಾರ ಮಳಿಗೆಗಳು
- ಕೈಮಗ್ಗ, ಉಡುಪು ತಯಾರಿ ಘಟಕ ನಿರ್ಮಾಣ…
ಕನಿಷ್ಠ 18 ವರ್ಷ ತುಂಬಿರುವ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಖಾಯಂ ವಿಳಾಸ, ವ್ಯಾಪಾರದ ವಿಳಾಸ ಮತ್ತು ಮಾಲೀಕತ್ವದ ಪುರಾವೆ, ಮೂರು ವರ್ಷಗಳ ಬ್ಯಾಲೆನ್ಸ್ ಶೀಟ್, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಸ್ವಯಂ ಮೌಲ್ಯಮಾಪನ ರಿಟರ್ನ್ಸ್, ಪಾಸ್‌ಪೋರ್ಟ್ ಗಾತ್ರದ ಫೋಟೋಗಳೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಮುದ್ರಾ ಯೋಜನೆಯ ವಿಧಗಳು
- ಶಿಶು ಸಾಲ: ಮುದ್ರಾ ಯೋಜನೆ ಸ್ವೀಕರಿಸುವವರು ಈ ಕಾರ್ಯಕ್ರಮದ ಅಡಿಯಲ್ಲಿ 50,000 ರೂಪಾಯಿ ವರೆಗೆ ಸಾಲವನ್ನು ಪಡೆಯಬಹುದು.
- ಕಿಶೋರ ಸಾಲ: ಈ ಮುದ್ರಾ ಯೋಜನೆಯಲ್ಲಿ ಭಾಗವಹಿಸುವವರು 50,000 ದಿಂದ 5 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಪಡೆಯಬಹುದು.
- ತರುಣ್ ಸಾಲ: ಈ ಮುದ್ರಾ ಯೋಜನೆಯು ಸ್ವೀಕರಿಸುವವರಿಗೆ 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಒದಗಿಸುತ್ತದೆ.
ಯಾವ್ಯಾವ ಬ್ಯಾಂಕುಗಳಲ್ಲಿ ಸಾಲ ಸಿಗಲಿದೆ?
ಸಾರ್ವಜನಿಕ ವಲಯದ ಬ್ಯಾಂಕುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಹಾಗೂ ಆಫ್ ಇಂಡಿಯಾ.
ಖಾಸಗಿ ವಲಯದ ಬ್ಯಾಂಕ್‌ಗಳು
ಆಕ್ಸಿಸ್ ಬ್ಯಾಂಕ್ ಲಿಮಿಟೆಡ್., ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಲಿಮಿಟೆಡ್., ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್., ಡಿಸಿಬಿ ಬ್ಯಾಂಕ್ ಲಿಮಿಟೆಡ್., ಫೆಡರಲ್ ಬ್ಯಾಂಕ್ ಲಿಮಿಟೆಡ್., ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
ಆ೦ಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಡೆಕ್ಕನ್ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್, ಬಿಹಾರ ಗ್ರಾಮೀಣ ಬ್ಯಾಂಕ್, ಮಧ್ಯ ಬಿಹಾರ ಗ್ರಾಮೀಣ ಬ್ಯಾಂಕ್
ಸಹಕಾರಿ ಬ್ಯಾಂಕುಗಳು
ಗುಜರಾತ್ ಸ್ಟೇಟ್ ಕೋ-ಆಪ್ ಬ್ಯಾಂಕ್, ಲಿಮಿಟೆಡ್ ಮೆಹ್ಸಾನಾ ಅರ್ಬನ್ ಕೋ-ಆಪ್ ಬ್ಯಾಂಕ್, ರಾಜ್ಕೋಟ್ ನಾಗರೀಕ್ ಸಹಕಾರಿ ಬ್ಯಾಂಕ್, ಕಲುಪುರ್ ಕಮರ್ಷಿಯಲ್ ಸಹಕಾರ ಬ್ಯಾಂಕ್.
ಯೋಜನೆಯ ವಿಶೇಷತೆ
ಒಬ್ಬರಿಗೆ ಒಂದು ಸಾಲ ಮಾತ್ರ ದೊರೆಯುತ್ತದೆ. ಶಿಶು ಮತ್ತು ಕಿಶೋರ್ ಸಾಲಗಳಿಗೆ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕಗಳಿಲ್ಲ. ತರುಣ್ ಸಾಲಕ್ಕೆ ಸಾಲದ ಮೊತ್ತದ ಶೇ.0.50 ಬಡ್ಡಿ ವಿಧಿಸಲಾಗುತ್ತದೆ. ಈ ಮುದ್ರಾ ಯೋಜನೆಯಡಿ ನೀಡಿದ ಸಾಲಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ.
ಮುದ್ರಾ ಯೋಜನೆ ಜಾಮೀನು ರಹಿತ ಸಾಲ, ಈ ಸಾಲಗಳಿಗೆ ಯಾವುದೇ ಮೇಲಾಧಾರ ಇರುವುದಿಲ್ಲ. ಆದರೆ ನೆನಪಿಡಿ ಇದು ಬಡ್ಡಿರಹಿತ ಸಾಲವಲ್ಲ. ಸಾಲದ ಬಡ್ಡಿ ದರವು ಈ ಯೋಜನೆಯ ಮಾರ್ಗಸೂಚಿ ಮತ್ತು ಖಾತೆದಾರನ ಬ್ಯಾಂಕ್ ವ್ಯವಹಾರ, ಕ್ರೆಡಿಟ್ ಸ್ಕೋರ್‌ಗಳ ಮೇಲೆ ಅವಲಂಬಿಸಿರುತ್ತದೆ. ಮುದ್ರಾ ಯೋಜನೆ ಕುರಿತು ಹೆಚ್ಚಿನ ಮಾಹಿತಿಗೆ ಮೇಲ್ಕಾಣಿಸಿದ ಸ್ಥಳೀಯ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು.
ಮುದ್ರಾ ಯೋಜನೆಯ ವೆಬ್‌ಸೈಟ್ : ಇಲ್ಲಿ ಒತ್ತಿ
ಅರ್ಜಿ ಸಲ್ಲಿಕೆಗೆ : ಇಲ್ಲಿ ಒತ್ತಿ