JobsNews

JMUCB Recruitment 2025- ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೆ ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಪ್ರತಿಷ್ಟಿತ ಕೋ-ಅಪರೇಟಿವ್ ಬ್ಯಾಂಕ್ (JMUCB Recruitment 2025) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಆಸಕ್ತ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಬಾಗಲಕೋಟೆಯ ದಿ ಜಮಖಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನಲ್ಲಿ (The Jamkhandi Urban Cooperative Bank Ltd) ಖಾಲಿ ಇರುವ 45 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ
  • ಕಿರಿಯ ಸಹಾಯಕರು: 14
  • ಗಣಕಯಂತ್ರ ನಿರ್ವಾಹಕರು: 04
  • ಸಿಪಾಯಿ: 16
  • ರಾತ್ರಿ ಕಾವಲುಗಾರರು: 08
  • ವಾಹನ ಚಾಲಕರು: 02
  • ಗನ್‌ಮ್ಯಾನ್: 01
  • ಒಟ್ಟು ಹುದ್ದೆಗಳು: 45

ಇದನ್ನೂ ಓದಿ: IB Security Assistant Recruitment 2025- ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಪ್ತಚರ ಇಲಾಖೆ 455 ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಾಸಿಕ ವೇತನ ಎಷ್ಟು?

ದಿ ಜಮಖಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ಕಿರಿಯ ಸಹಾಯಕರು ಹಾಗೂ ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ 33,450 ರೂ. ರಿಂದ 62,600 ರೂ. ವರೆಗೆ ಮಾಸಿಕ ಸಂಬಳ ನಿಗದಿಪಡಿಸಲಾಗಿದೆ.

ಇನ್ನುಳಿದ ಸಿಪಾಯಿ, ರಾತ್ರಿ ಕಾವಲುಗಾರರು, ವಾಹನ ಚಾಲಕರು ಹಾಗೂ ಗನ್‌ಮ್ಯಾನ್ ನಾಲ್ಕೂ ಹುದ್ದೆಗಳಿಗೆ 21,400 ರೂ. ರಿಂದ 42,000 ರೂ. ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಆಸಕ್ತ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಕೆಯ ಮಾಹಿತಿ ಇಲ್ಲಿದೆ...
JMUCB Recruitment 2025
ಅರ್ಹತೆಗಳೇನು?

ಕಿರಿಯ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರು ಎರಡೂ ಹುದ್ದೆಗಳಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹದಾಗಿದೆ. ಅನುಭವಿಗಳಿಗೆ ಆದ್ಯತೆ ನೀಡಲಾಗಿದೆ.

ಗಣಕಯಂತ್ರ ನಿರ್ವಾಹಕರ ಹುದ್ದೆಗಳಿಗೆ ಪಿಯುಸಿ ಅಲ್ಲದೆ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ (ಮೂರು ವರ್ಷ) ಅರ್ಹತೆ ಇದ್ದರೂ ಅರ್ಜಿ ಸಲ್ಲಿಸಬಹುದಾಗಿದೆ. ಇದರೊಂದಿಗೆ ಸೀನಿಯರ್ ಟೈಪ್ ರೈಟಿಂಗ್ ಪರೀಕ್ಷೆ ತೇರ್ಗಡೆಯಾಗಿರಬೇಕು.

ಇನ್ನುಳಿದಂತೆ ಸಿಪಾಯಿ, ಕಾವಲುಗಾರ ಮತ್ತು ಗನ್ ಮ್ಯಾನ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಚಾಲಕ ಹುದ್ದೆಗೆ ಲಘು ಮತ್ತು ಭಾರಿ ವಾಹನಾ ಚಾಲನಾ ಪರವಾನಗಿ ಮತ್ತು ಐದು ವರ್ಷಗಳ ಸೇವಾನುಭವ ಕಡ್ಡಾಯ. ನಿವೃತ್ತ ಸೈನಿಕರು ಗನ್ ಮ್ಯಾನ್ ಹುದ್ದೆಗೆ ಪ್ರಯತ್ನಿಸಬಹುದು.

ಇದನ್ನೂ ಓದಿ: Karnataka Police Recruitment 2025- ಪೊಲೀಸ್ ಕಾನ್‌ಸ್ಟೇಬಲ್ ಕರ್ನಾಟಕ ಪೊಲೀಸ್ ಇಲಾಖೆ 4,656 ಹುದ್ದೆಗಳ ನೇಮಕಾತಿ | ರಾಜ್ಯ ಸರ್ಕಾರದಿಂದ ಚಾಲನೆ

ವಯೋಮಿತಿ ವಿವರ

ಅಭ್ಯರ್ಥಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳಾಗಿರಬೇಕು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಗರಿಷ್ಠ ವಯೋಮಿತಿಯು ಎಸ್‌ಸಿ/ಎಸ್‌ಟಿ, ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ವರ್ಗದವರಿಗೆ 35 ವರ್ಷ ಹಾಗೂ ಕನಿಷ್ಠ 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರು 45 ವರ್ಷ ಗರಿಷ್ಟ ವಯೋಮಿತಿ ಹೊಂದಿರಬೇಕು.

ಅರ್ಜಿ ಶುಲ್ಕವೆಷ್ಟು?

ಕಿರಿಯ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ 2,000 ರೂ. ಶುಲ್ಕ ಹಾಗೂ ಇತರ ವರ್ಗದವರಿಗೆ 1000 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಉಳಿದ ಹುದ್ದೆಗಳಿಗೆ

ಎಸ್‌ಸಿ/ಎಸ್‌ಟಿ, ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ 500 ರೂ. ಹಾಗೂ ಇತರೆ ವರ್ಗದವರು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳಿಗೂ 18% ಜಿಎಸ್‌ಟಿ ಪ್ರತ್ಯೇಕವಾಗಿರುತ್ತದೆ.

ಇದನ್ನೂ ಓದಿ: AAI Recruitment 2025- ಕೇಂದ್ರ ಸರ್ಕಾರದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ

ಅರ್ಜಿ ಸಲ್ಲಿಕೆ ಹೇಗೆ?

ದಿ ಜಮಖಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ಖಾಲಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28-08-2025
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 27-09-2025

Karnataka Gramin Bank Recruitment 2025- ಕರ್ನಾಟಕ ಗ್ರಾಮೀಣ ಬ್ಯಾಂಕ್ 1,425 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಲ್ಲಾ ಹಂತದ ವಿದ್ಯಾರ್ಹತೆಗೂ ಅವಕಾಶ


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!