
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಪ್ರಕಟವಾಗಿದ್ದು; ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ (Karnataka SSLC Half Yearly Exam) ಬಿಡುಗಡೆಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಹತ್ತನೇ ತರಗತಿ (SSLC) ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ಈ ತಿಂಗಳ ಸೆಪ್ಟೆಂಬರ್ 12 ರಿಂದ ಆರಂಭವಾಗಿ ಸೆಪ್ಟೆಂಬರ್ 19ರ ವರೆಗೆ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯಲಿವೆ.
ವಿಷಯವಾರು ದಿನಾಂಕಗಳ ವೇಳಾಪಟ್ಟಿ
ರಾಜ್ಯಾದ್ಯಂತ ನಡೆಯಲಿರುವ ಈ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು KSEAB ತಯಾರಿಸಿದ್ದು, ಶಾಲೆಗಳ ಮಟ್ಟದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಮೌಲ್ಯಮಾಪನ ಮಾಡಲು ಈ ಪರೀಕ್ಷೆ ಬಹಳ ಪ್ರಮುಖವಾಗಿದೆ. ಪರೀಕ್ಷೆ ನಡೆಯಲಿರುವ ವಿಷಯವಾರು ದಿನಾಂಕಗಳ ವೇಳಾಪಟ್ಟಿ ಈ ಕೆಳಗಿನಂತಿದೆ:
- ಸೆಪ್ಟೆಂಬರ್ 12: ಪ್ರಥಮ ಭಾಷೆ
- ಸೆಪ್ಟೆಂಬರ್ 13: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
- ಸೆಪ್ಟೆಂಬರ್ 15: ದ್ವಿತೀಯ ಭಾಷೆ
- ಸೆಪ್ಟೆಂಬರ್ 16: ಗಣಿತ, ಸಮಾಜಶಾಸ್ತ್ರ
- ಸೆಪ್ಟೆಂಬರ್ 17: ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ವಿಷಯಗಳು
- ಸೆಪ್ಟೆಂಬರ್ 18: ಸಮಾಜ ವಿಜ್ಞಾನ
- ಸೆಪ್ಟೆಂಬರ್ 19: ಜೆಟಿಎಸ್ ಪರೀಕ್ಷೆ

ಪರೀಕ್ಷೆಯ ಸಮಯ
ಸಂಗೀತ ಪರೀಕ್ಷೆ ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ನಿಗದಿಪಡಿಸಿದ ದಿನಾಂಕದಂದು ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗುತ್ತವೆ. ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಗಳು ಮಾತ್ರ ಮಧ್ಯಾಹ್ನ 2:00ಕ್ಕೆ ನಡೆಯಲಿವೆ.
ಇದನ್ನೂ ಓದಿ: Khagras Chandragrahana 2025- ಖಗ್ರಾಸ ಚಂದ್ರಗ್ರಹಣ | ಯಾರಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ಮಾಹಿತಿ ಇಲ್ಲಿದೆ…
ಮೌಲ್ಯಮಾಪನ ಮತ್ತು ಫಲಿತಾಂಶ
ಅರ್ಧ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಯೇ ಮೌಲ್ಯಮಾಪನ ನಡೆಸಲಿದ್ದು, ಅದರ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಗುತ್ತದೆ. ಈ ಅಂಕಪಟ್ಟಿ ಆಧರಿಸಿ ಶಾಲೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ವಿಶ್ಲೇಷಿಸಿ, ಮುಂದಿನ ವಾರ್ಷಿಕ ಪರೀಕ್ಷೆಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಿವೆ.
ಸೆಪ್ಟೆಂಬರ್ 12ರಿಂದ ಪ್ರಾರಂಭವಾಗುವ ಈ ಅರ್ಧ ವಾರ್ಷಿಕ ಪರೀಕ್ಷೆಗಳು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಅತ್ಯಂತ ಮಹತ್ವದ ಹಂತವಾಗಿದೆ. ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಈಗಾಗಲೇ ತಯಾರಿ ಪ್ರಾರಂಭಿಸಿರುವುದು ಉತ್ತಮ. ಪಠ್ಯಕ್ರಮದ ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿ, ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ.